ಹೆಚ್ಚುತ್ತಿದೆ ಬಾಯಿ ಕ್ಯಾನ್ಸರ್‌ ರೋಗಿಗಳ ಸಂಖ್ಯೆ

ವಿಶ್ವ ತಂಬಾಕು ರಹಿತ ದಿನಾಚರಣೆ | ಹಿರಿಯ ವೈದ್ಯ ಡಾ.ಗಿರೀಶ್‌ ಶೆಟ್ಕರ್‌ ಆತಂಕ

Team Udayavani, Jun 2, 2019, 1:11 PM IST

ದೊಡ್ಡಬಳ್ಳಾಪುರ: ಭಾರತವು ವಿಶ್ವದ ಬಾಯಿ ಕ್ಯಾನ್ಸರ್‌ ರಾಜಧಾನಿಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಗೊಬ್ಲಿಲ್ ಕ್ಯಾನ್ಸರ್‌ ಅಬ್ಸರ್ವೇಟರಿ ಸಂಸ್ಥೆ ಪ್ರಕಾರ 2018ರಲ್ಲಿ 1ಲಕ್ಷ ಕ್ಯಾನ್ಸರ್‌ ರೋಗಿಗಳ ಪ್ರಕರಣ ಭಾರತದಲ್ಲಿ ದಾಖಲಾಗಿದೆ. ಬಾಯಿ ಕ್ಯಾನ್ಸರ್‌ನಲ್ಲಿ ಮೂರನೇ ಸ್ಥಾನವನ್ನು ಹೊಂದಿದೆ ಎಂದು ಬೆಂಗಳೂರಿನ ಸಿಟಿಕೇರ್‌ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಗಿರೀಶ್‌ ಶೆಟ್ಕರ್‌ ಹೇಳಿದರು

ಅವರು ನಗರದ ಪುರಭವನದಲ್ಲಿ ಸಿಟಿಕೇರ್‌ ಆಸ್ಪತ್ರೆ ವತಿಯಿಂದ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಆಶಾ ಕಾರ್ಯಕರ್ತೆಯರಿಗಾಗಿ ನಡೆದ ಕ್ಯಾನ್ಸರ್‌ ರೋಗ ತಡೆಗಟ್ಟುವಿಕೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಕೆಲಸ ನಿರ್ವಹಿಸುವ ಆಶಾ ಕಾರ್ಯಕರ್ತೆಯರು ಕ್ಯಾನ್ಸರ್‌ ರೋಗ ತಡೆಗಟ್ಟಲು ಇರುವ ಮಾರ್ಗ ಹಾಗೂ ರೋಗದ ಅಪಾಯ ಕುರಿತು ಜಾಗೃತಿ ಮೂಡಿಸುವ ದೊಡ್ಡ ಜವಾಬ್ದಾರಿ ಇದೆ. ಈ ನಿಟ್ಟಿನಲ್ಲಿಯೇ ಇಂದು ಮುಖ್ಯವಾಗಿ ಆಶಾ ಕಾರ್ಯಕರ್ತೆಯರಿಗೆ ಕಾರ್ಯಾಗಾರ ನಡೆಸಲಾಗುತ್ತಿದೆ. ತಂಬಾಕು, ಸಿಗರೇಟ್ ಸೇವನೆಯಿಂದಲೇ ಕ್ಯಾನ್ಸರ್‌ ರೋಗ ಬರುÊ‌ುದು ಎನ್ನುವ ಸತ್ಯದ ಅರಿವಿದ್ದರು ಸಹ ಇಂದಿಗೂ ತಂಬಾಕು ಚಟಕ್ಕೆ ಬಲಿಯಾಗುವವರನ್ನು ತಡೆಯುವುದು ದೊಡ್ಡ ಸಾಹಸದ ಕೆಲಸವಾಗಿದೆ ಎಂದರು.

ದೇಶದಲ್ಲಿ ವರದಿ ಮಾಡಲಾದ ಕ್ಯಾನ್ಸರ್‌ಗಳಲ್ಲಿ ಶೇ.30ರಷ್ಟು ಬಾಯಿಯ ಕ್ಯಾನ್ಸರ್‌ ಆಗಿದೆ. ನಿಯಂತ್ರಣ ಮಾಡುವುದು ಗ್ಲೋಬಲ್ ಹೆಲ್ತ್ ನ ಮುಖ್ಯ ಆದ್ಯತೆಯಾಗಿದೆ. ರೋಗವನ್ನು ಮೊದಲೇ ಪತ್ತೆ ಹಚ್ಚಿ ರೋಗಿಯು ಹೆಚ್ಚು ಕಾಲ ಬದುಕಿ ಉಳಿಯುವಂತೆ ಮಾಡವುದು. ಚಿಕಿತ್ಸೆಯನ್ನು ಕೈಗೆಟುಕುವಂತೆ ಮಾಡಲಾಗುತ್ತದೆ. ಭಾರತದಲ್ಲಿ ಆರ್ಥಿಕ, ಸಾಮಾಜಿಕವಾಗಿ ಕೆಳಮಟ್ಟದಲ್ಲಿರುವ ರೋಗಿಗಳಲ್ಲಿ ಕ್ಯಾನ್ಸರ್‌ ರೋಗ ಪರಿಣಾಮ ಬೀರುತ್ತಿದೆ. ಮೊದಲ ಹಂತದಲ್ಲಿಯೇ ಬಾಯಿ ಕ್ಯಾನ್ಸರ್‌ ನ ಪತ್ತೆಹಚ್ಚಲು ಆಶಾ ಕಾರ್ಯಕರ್ತರನ್ನು ಸಶಕ್ತಗೊಳಿಸುವ ಪ್ರಾಮುಖ್ಯತೆಯನ್ನು ಅರಿತುಕೊಳ್ಳಲಾಗಿದೆ. ಬೆಂಗಳೂರಿನ ಉತ್ತರದ ಎಲ್ಲಾ ತಾಲೂ ಕುಗಳನ್ನು ತಲುಪುವ ಗುರಿ ಹೊಂದಲಾಗಿದೆ ಎಂದರು.

ಸಿಟಿಕೇರ್‌ ಆಸ್ಪತ್ರೆಯ ಸಿಇಓ ಡಾ.ಸುರೇಶ್ರಾಮು ಮಾತನಾಡಿ, ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಭಾಗವಾಗಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್‌ ಸ್ಥಾಪಿಸಲ್ಪಟ್ಟಿದೆ. ಆಶಾ ಕಾರ್ಯಕರ್ತರು ಪ್ರತಿ ತಿಂಗಳು ಸುಮಾರು 300ಕ್ಕೂ ಹೆಚ್ಚು ಕುಟುಂಬವನ್ನು ಭೇಟಿ ಮಾಡುತ್ತಾರೆ. ತರಬೇತಿ ಕಾರ್ಯಕ್ರಮದಲ್ಲಿ ತಂಬಾಕು ಸೇವನೆಯಿಂದ ಆಗುವ ಆರೋಗ್ಯ ಸಂಬಂಧಿ ಅಪಾಯಗಳು ಹಾಗೂ ಬಾಯಿಯ ಕ್ಯಾನ್ಸರ್‌ ಆರಂಭಿಕ ಪತ್ತೆಗೆ ಸಹಾಯ ಮಾಡುವ ಕ್ರಮಗಳ ಕುರಿತು ಗಮನ ಹರಿಸಬೇಕು ಎಂದರು. ಬಾಯಿ ಕ್ಯಾನ್ಸರ್‌ ತುಟಿ, ನಾಲಿಗೆ, ಗಲ್ಲ, ಬಾಯಿಯ ಮೇಲ್ಮೈಗಳಲ್ಲಿ ಇದು ಕಂಡು ಬರುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಮಾಡದಿದ್ದರೆ ಜೀವಕ್ಕೆ ಕುತ್ತ ತರಲಿದೆ ಎಂದರು.

ಕಾರ್ಯಾಗಾರದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಶರ್ಮಿಳಾ ಹೆಡೆ, ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಾಲೂಕಿನ ಸುಮಾರು 300 ಜನ ಆಶಾ ಕಾರ್ಯಕರ್ತೆಯರು ಭಾಗ ವಹಿಸಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ