Udayavni Special

ಸೋಂಕಿತ ಯುವಕ ಸಾವು: ನಿರ್ಲಕ್ಷ್ಯ ಆರೋಪ


Team Udayavani, Apr 25, 2021, 1:10 PM IST

ಸೋಂಕಿತ ಯುವಕ ಸಾವು: ನಿರ್ಲಕ್ಷ್ಯ ಆರೋಪ

ಆನೇಕಲ್‌: ತಾಲೂಕಿನ ಆಕ್ಸ್‌ಫ‌ರ್ಡ್‌ ಆಸ್ಪತ್ರೆಯಲ್ಲಿ ಯುವಕನೊಬ್ಬ ಮೃತಪಟ್ಟಿದ್ದು, ಇದಕ್ಕೆ ಆಸ್ಪತ್ರೆಯ ನಿರ್ಲಕ್ಷ್ಯ ಕಾರಣ ಎಂದು ಸಂಬಂಧಿಕರು ಆರೋಪ ಮಾಡಿದ್ದಾರೆ.

ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಶುಕ್ರವಾರ ಮಹಿಳೆಯೊಬ್ಬರು ತನ್ನ ಮಗನನ್ನು ಆಕ್ಸ್‌ಫ‌ರ್ಡ್‌ ಆಸ್ಪತ್ರೆಯಲ್ಲಿ ದಾಖಲು ಮಾಡಿದ ಬಳಿಕ ಆತನ ಚಿಕಿತ್ಸೆ, ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಇಡೀ ದಿನ ಆಸ್ಪತ್ರೆ ಮುಂದೆ ಕೂತು ಅಳುತ್ತಿದ್ದರು. ಇದು ಮಾಧ್ಯಮಗಳಲ್ಲಿ ಸುದ್ದಿ ಸಹ ಆಗಿತ್ತು. ಆದರೆ, ಅದೇ ತಾಯಿಯ ಮಗ ಈಗ ಮೃತಪಟ್ಟಿದ್ದಾನೆ ಎಂಬ ಸುದ್ದಿ ತಿಳಿದು ಕುಸಿದುಹೋದರು.

ಬನ್ನೇರುಘಟ್ಟ ಸಮೀಪದ ವಾಸಿ ಅಲೋಕ್‌ (28) ಮೃತಪಟ್ಟ ಯುವಕ. 8 ದಿನಗಳ ಹಿಂದೆ ಕೋವಿಡ್‌ ಸೋಕು ತಗುಲಿದೆ ಎಂದು ಆಕ್ಸ್‌ಫ‌ರ್ಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನಡೆದುಬಂದೇ ದಾಖಲಾಗಿದ್ದರು. ಅಂದಿನಿಂದಲೂ ಮಗನ ಚಿಕಿತ್ಸೆ ಹೇಗಿದೆ, ಆರೋಗ್ಯದ ಸ್ಥಿತಿ ಬಗ್ಗೆ ಯಾವುದೇ ಮಾಹಿತಿ ನೀಡದೆ ಆಸ್ಪತ್ರೆಯವರು ಸತಾಯಿಸಿದ್ದಲ್ಲದೆ, ಮಗ ಮೃತಪಟ್ಟಿದ್ದಾನೆ ಎಂದು ಹೇಳುತ್ತಿದ್ದಾರೆ. ಆರೋಗ್ಯವಾಗಿದ್ದ ನನ್ನ ಮಗನ ಸಾವಿಗೆ ಆಸ್ಪತ್ರೆಯವರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.

ಆಕ್ಸ್‌ಫ‌ರ್ಡ್‌ ಆಸ್ಪತ್ರೆಗೆ ದಾಖಲಾದ ಮಗ ಎರಡು ದಿನಗಳ ಹಿಂದೆ ಕಳುಹಿಸಿದ ವಿಡಿಯೋನಲ್ಲಿ ಮಾತನಾಡುತ್ತ, ನನಗೆ ಇಲ್ಲಿ ಯಾವುದೇ ಚಿಕಿತ್ಸೆ ನೀಡುತ್ತಿಲ್ಲ, ಬದಲಾಗಿ ಹಿಂಸೆ ನೀಡುತ್ತಿದ್ದಾರೆ. ನನ್ನನ್ನು ಕರೆದುಕೊಂಡು ಹೋಗಿ ಎಂದು ಮನವಿ ಮಾಡಿಕೊಂಡಿದ್ದ. ಇದರಿಂದ ಆತಂಕಕ್ಕೆ ಒಳಗಾಗಿ ಆಸ್ಪತ್ರೆಯ ಬಳಿ ಬಂದು ಮಗನ ಆರೋಗ್ಯದ ಬಗ್ಗೆ ಮಾಹಿತಿ ಕೇಳಿದರೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹಾರಿಕೆಯ ಉತ್ತರವನ್ನು ಆಸ್ಪತ್ರೆಯವರು ನೀಡಿದ್ದರು. ಇದರಿಂದ ದಿಕ್ಕು ತೋಚದೆ ರಾತ್ರಿಯವರೆಗೂ ಆಸ್ಪತ್ರೆಯ ಎದುರು ಕಾಯ್ದು ಕುಳಿತಿದ್ದೆ. ಈಗ ಮಗನ ಸಾವಿನ ಸುದ್ದಿ ತಿಳಿದಿದೆ. ಇದಕ್ಕೆಆಸ್ಪತ್ರೆಯವರೇ ಹೊಣೆ ಎಂದು ದೂರಿದ್ದಾರೆ. ಬನ್ನೇರುಘಟ್ಟ ಸಮೀಪದ ಗೊಟ್ಟಿಗೆರೆ ವಾಸಿ ಜಯಶ್ರೀ ಮತ್ತು ದಿವಾಕರ್‌ ಎಂಬುವರ ಪುತ್ರ. ಅಲೋಕ್‌ ಬಿಇಪದವೀಧರ. ಮನೆಯ ಆಧಾರ ಸ್ತಂಭವಾಗಿದ್ದ ಈತನನ್ನುನಾವು ಕಳೆದುಕೊಂಡೆವು. ಇನ್ನು ನಮಗೆ ದಿಕ್ಕು ಯಾರು ಎಂದು ಅವರು ಗೋಳಾಡಿದರು.

 

ಟಾಪ್ ನ್ಯೂಸ್

‘ತೌಖ್ತೆ’ ಚಂಡಮಾರುತ ಪರಿಣಾಮ: ಕರಾವಳಿ ಜಿಲ್ಲೆಯಲ್ಲಿ ಉತ್ತಮ ಮಳೆ

‘ತೌಖ್ತೆ’ ಚಂಡಮಾರುತ ಪರಿಣಾಮ: ಕರಾವಳಿ ಜಿಲ್ಲೆಯಲ್ಲಿ ಉತ್ತಮ ಮಳೆ

ಸೋಂಕು ನಿಯಂತ್ರಣಕ್ಕೆ ಹೆರಂಜಾಲು ಗ್ರಾಮಸ್ಥರೇ ಮುಂದಾದರು!

ಸೋಂಕು ನಿಯಂತ್ರಣಕ್ಕೆ ಹೆರಂಜಾಲು ಗ್ರಾಮಸ್ಥರೇ ಮುಂದಾದರು!

horoscope

ಈ ರಾಶಿಯವರಿಂದು ಅಚ್ಚರಿಯ ರೀತಿಯಲ್ಲಿ ಅಧಿಕಾರಿಗಳ ವಕ್ರದೃಷ್ಟಿಯಿಂದ ಪಾರಾಗುವಿರಿ!

ration

ಬಿಪಿಎಲ್‌ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೂ 10 ಕೆ.ಜಿ. ಅಕ್ಕಿ ನೀಡಲು ಸರಕಾರದ ಚಿಂತನೆ

ಪಶ್ಚಿಮ ಕರಾವಳಿಯುದ್ದಕ್ಕೆ “ತೌಕ್ತೆ’ ಕಾಟ

ಪಶ್ಚಿಮ ಕರಾವಳಿಯುದ್ದಕ್ಕೆ “ತೌಕ್ತೆ’ ಕಾಟ

ಕೋವಿಡ್ ತುರ್ತುಸ್ಥಿತಿ ವಿಸ್ತರಣೆ : ಟೋಕಿಯೊ ಒಲಿಂಪಿಕ್ಸ್‌ ತಯಾರಿಗೆ ಹಿನ್ನಡೆ

ಕೋವಿಡ್ ತುರ್ತುಸ್ಥಿತಿ ವಿಸ್ತರಣೆ : ಟೋಕಿಯೊ ಒಲಿಂಪಿಕ್ಸ್‌ ತಯಾರಿಗೆ ಹಿನ್ನಡೆ

ತೌಕ್ತೆ ಅಬ್ಬರ: ಕರಾವಳಿ ಸಿದ್ಧ : ಕೇರಳ ಸಹಿತ ಹಲವೆಡೆ ಮಳೆ ಆರಂಭ

ತೌಕ್ತೆ ಅಬ್ಬರ: ಕರಾವಳಿ ಸಿದ್ಧ : ಕೇರಳ ಸಹಿತ ಹಲವೆಡೆ ಮಳೆ ಆರಂಭಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13_5_dbp_1_1305bg_2

ಆಟೋ ಬೇಕಿದ್ದರೆ ಸಹಾಯವಾಣಿ ಸಂಪರ್ಕಿಸಿ: ಡಿವೈಎಸ್ಪಿ ರಂಗಪ್ಪ

vdfdfsd

ವಿಮಾನ ನಿಲಾಣದಲ್ಲಿ 150 ಹಾಸಿಗೆ ಚಿಕಿತ್ಸಾ ಕೇಂದ್ರ ಸ್ಥಾಪನೆ

gdgdfgf

ಲಸಿಕೆ ಪಡೆಯಲು ಹಳ್ಳಿಗಳಿಗೆ ಬಂದ ಬೆಂಗಳೂರಿಗರು!

Police service wearing PPE kit

ಪಿಪಿಇ ಕಿಟ್‌ ಧರಿಸಿ ಪೊಲೀಸರ ಸೇವೆ

Eye surgery

ಕಣ್ಣಿನ ಶಸ್ತ್ರಚಿಕಿತ್ಸೆ , ನೇತ್ರದಾನಕ್ಕೆ ಮತ್ತೆ ಕೊರೊನಾತಂಕ

MUST WATCH

udayavani youtube

ರಷ್ಯಾದ ಸ್ಫುಟ್ನಿಕ್ v ಬೆಲೆ 995 ರೂ

udayavani youtube

ಕೋವಿಡ್ ಲಸಿಕೆ ವಿತರಣೆಗೆ ಕಾಂಗ್ರೆಸ್ ಪಕ್ಷ 100 ಕೋಟಿ

udayavani youtube

ಸರ್ಕಾರ ಚಿತ್ರರಂಗದ ಕೈ ಹಿಡಿಯಲಿ

udayavani youtube

ಮರವಂತೆಯಲ್ಲಿ‌ ತೀವ್ರಗೊಂಡ‌ ಕಡಲ್ಕೊರೆತ

udayavani youtube

ಸ್ವ್ಯಾಬ್ ಕಲಕ್ಷನ್​ಗೆ ಬಂದ ಆರೋಗ್ಯ ಸಿಬ್ಬಂದಿ ಮೇಲೆ ಅವಾಜ್​ ಹಾಕಿದ ವ್ಯಕ್ತಿ

ಹೊಸ ಸೇರ್ಪಡೆ

‘ತೌಖ್ತೆ’ ಚಂಡಮಾರುತ ಪರಿಣಾಮ: ಕರಾವಳಿ ಜಿಲ್ಲೆಯಲ್ಲಿ ಉತ್ತಮ ಮಳೆ

‘ತೌಖ್ತೆ’ ಚಂಡಮಾರುತ ಪರಿಣಾಮ: ಕರಾವಳಿ ಜಿಲ್ಲೆಯಲ್ಲಿ ಉತ್ತಮ ಮಳೆ

ಸೋಂಕು ನಿಯಂತ್ರಣಕ್ಕೆ ಹೆರಂಜಾಲು ಗ್ರಾಮಸ್ಥರೇ ಮುಂದಾದರು!

ಸೋಂಕು ನಿಯಂತ್ರಣಕ್ಕೆ ಹೆರಂಜಾಲು ಗ್ರಾಮಸ್ಥರೇ ಮುಂದಾದರು!

horoscope

ಈ ರಾಶಿಯವರಿಂದು ಅಚ್ಚರಿಯ ರೀತಿಯಲ್ಲಿ ಅಧಿಕಾರಿಗಳ ವಕ್ರದೃಷ್ಟಿಯಿಂದ ಪಾರಾಗುವಿರಿ!

ration

ಬಿಪಿಎಲ್‌ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೂ 10 ಕೆ.ಜಿ. ಅಕ್ಕಿ ನೀಡಲು ಸರಕಾರದ ಚಿಂತನೆ

ಪಶ್ಚಿಮ ಕರಾವಳಿಯುದ್ದಕ್ಕೆ “ತೌಕ್ತೆ’ ಕಾಟ

ಪಶ್ಚಿಮ ಕರಾವಳಿಯುದ್ದಕ್ಕೆ “ತೌಕ್ತೆ’ ಕಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.