Udayavni Special

ಕಬ್ಬಿಣದ ಅಕ್ರಮ ತ್ಯಾಜ್ಯ ಘಟಕ:ಅಧಿಕಾರಿಗಳ ಮೌನ


Team Udayavani, Mar 28, 2019, 5:43 PM IST

blore-g
ನೆಲಮಂಗಲ: ಸರ್ಕಾರದ ಅನುಮತಿಯಿಲ್ಲದೇ ಗ್ರಾಮೀಣ ಪ್ರದೇಶದಲ್ಲಿ ರಾಜಾರೋಷವಾಗಿ ಕಬ್ಬಿಣದ ತ್ಯಾಜ್ಯ ಸಂಗ್ರಹಣೆ ಮಾಡಿ ರವಾನೆ ಮಾಡುತ್ತಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಕಂಡೂ ಕಾಣದಂತೆ ಜಾಣ ಕುರುಡುತನ
ಪ್ರದರ್ಶಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಅನುಮಾನ ಹಾಗೂ ಚರ್ಚೆಗೆ ಗ್ರಾಸವಾಗಿದೆ.
ಪಟ್ಟಣ ಹಾಗೂ ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿ ಯಲ್ಲಿರುವ ಬಸವನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಸ್ಲಾಂಪುರದ ರಸ್ತೆ ಪಕ್ಕದಲ್ಲಿಯೇ ತ್ಯಾಜ್ಯ ಸಂಗ್ರಹಣೆ ಹಾಗೂ ರವಾನೆಗೆ ಯಾವುದೇ ಅನುಮತಿಯಿಲ್ಲ. ಮತ್ತೂಂದೆಡೆ ನೌಕರರಿಗೆ ಕೆಲಸ ಮಾಡಲು ಸುರಕ್ಷತಾ ಕವಚಗಳಿಲ್ಲದೇ ತ್ಯಾಜ್ಯ ಸಂಗ್ರಹಣೆ ಮಾಡುತ್ತಿದ್ದರೂ ಸ್ಥಳೀಯ ಗ್ರಾಪಂ ಅಧಿಕಾರಿಗಳು ಸುಮ್ಮನಿರುವುದು ಅನುಮಾನಕ್ಕೆಡೆ ಮಾಡಿದೆ.
 ಅಕ್ರಮ ತ್ಯಾಜ್ಯ ಸಂಗ್ರಹಣಾ ಘಟಕದಲ್ಲಿ ಕಬ್ಬಿಣದ ಅಪಾಯಕಾರಿ ತ್ಯಾಜ್ಯಗಳು ಹಾಗೂ ಪೆಟ್ರೋಲಿಯಂ ಉತ್ಪನ್ನಗಳನ್ನು ಶೇಖರಿಸಿ ಬಳಕೆ ಮಾಡಿದ ಡಬ್ಬ ಗಳನ್ನು ಸಂಗ್ರಹಣೆ ಮಾಡಲಾಗುತ್ತದೆ. ಇದರೊಂದಿಗೆ ತ್ಯಾಜ್ಯ ಘಟಕಕ್ಕೆ ವಿದ್ಯುತ್‌ ಸೌಲಭ್ಯದ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈ ಜಾಗದಲ್ಲಿ ಕಳೆದ ಎರಡು ತಿಂಗಳಿನಿಂದ ತ್ಯಾಜ್ಯ ಸಂಗ್ರಹಣೆ ಮಾಡುತ್ತಿರುವವರ ಬಗ್ಗೆ ಬಸವನಹಳ್ಳಿ ಗ್ರಾಮ ಪಂಚಾಯತಿ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
ಅಪಾಯದ ಭೀತಿ: ಕಬ್ಬಿಣದ ಅಪಾಯಕಾರಿ ತ್ಯಾಜ್ಯ ಗಳನ್ನು ಸಂಗ್ರಹಣೆ ಮಾಡಿ ಲಾರಿಗಳಲ್ಲಿ ಸಾಗಟ ಮಾಡುವ ವೇಳೆ ತ್ಯಾಜ್ಯಗಳ ಸಣ್ಣ ಸಣ್ಣ ತುಂಡುಗಳು ರಸ್ತೆಯಲ್ಲಿ ಬಿದ್ದು ಜನರ ಕಾಲುಗಳಿಗೆ ಚುಚ್ಚುತ್ತವೆ. ಅಲ್ಲದೇ, ಪ್ರಾಣಿಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ. ರಸ್ತೆಗಳಲ್ಲಿ ಚಲಿಸುವ ವಾಹ ನಗಳ ಚಕ್ರಗಳು ಪಂಚರ್‌ ಆಗಿ ರಸ್ತೆ ಅಪಘಾತಕ್ಕೂ ಎಡೆಮಾಡಿಕೊಡುತ್ತವೆ.
ಅಧಿಕಾರಿಗಳ ಶ್ರೀರಕ್ಷೆ?: ಅಕ್ರಮವಾಗಿ ತ್ಯಾಜ್ಯ ಸಂಗ್ರಹಣೆ ಮಾಡುತ್ತಿರುವ ವ್ಯಕ್ತಿಗಳು ಸ್ಥಳೀಯ ಗ್ರಾಪಂಯಲ್ಲಿ ಅನುಮತಿ ಪಡೆದುಕೊಳ್ಳದಿದ್ದರೂ ಕೆಲಸ ಆರಂಭಿಸಿದ್ದಾರೆ. ದುರಂತವೆಂಬಂತೆ, ಅಧಿಕಾರಿಗಳೇ ಅಕ್ರಮದ ಪರವಾಗಿ ಬ್ಯಾಟಿಂಗ್‌ ಮಾಡು ತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಇದು ಕೇವಲ ತ್ಯಾಜ್ಯ ಸಂಗ್ರಹಣೆಗೆ ಮಾತ್ರ ಎಂಬ ಬೇಜವಾಬ್ದಾರಿ ಉತ್ತರ ನೀಡುವ ಮೂಲಕ ಅಕ್ರಮದಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಅಧಿಕಾರಿಗಳೇ ಶ್ರೀರಕ್ಷೆಯಾಗಿದ್ದಾರೆಯೇ ಎಂಬ ಅನುಮಾನವೂ ವ್ಯಕ್ತ ವಾಗಿದೆ. ಬಡವರು ಅಥವಾ ಮಧ್ಯಮ ವರ್ಗದ ಜನರು ತಮ್ಮ ನಿವೇಶದಲ್ಲಿ ಗೃಹ ನಿರ್ಮಾಣಕ್ಕೆ ಮುಂದಾದರೆ ಅನುಮತಿ ಪಡೆದಿಲ್ಲ ಎಂದು ಕ್ಯಾತೆ ತೆಗೆಯುವ ಅಧಿಕಾರಿಗಳಿಗೆ ಅಕ್ರಮ ತ್ಯಾಜ್ಯ ಘಟಕದ ಸಮಸ್ಯೆ ಕಾಣುತ್ತಿಲ್ಲವೇ ಎಂದು ಜನರು ಅಧಿಕಾರಿಗಳ ನಡವಳಿಕೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಜನರ ಆಕ್ರೋಶ: ಬಸವನಹಳ್ಳಿ ಗ್ರಾಪಂ ವ್ಯಾಪ್ತಿಯ ಜಾಗದಲ್ಲಿ ಅನುಮತಿಯಿಲ್ಲದೇ ಅಕ್ರಮ ವಾಗಿ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಮಾಡುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿ ರುವುದು ಜನರ ಅಕ್ರೋಶಕ್ಕೆ ಕಾರಣವಾಗಿದೆ.
ಬಸವನವನಹಳ್ಳಿ ಗ್ರಾಪಂ ಪಿಡಿಒ ಎ.ಭಾರತಿ ಮಾತನಾಡಿ, ಅಕ್ರಮವಾಗಿ ತ್ಯಾಜ್ಯ ಸಂಗ್ರಹಣೆ ಬಗ್ಗೆ ಮಾಹಿತಿಯಿಲ್ಲ. ಯಾರಿಗೂ ನಾವು ಅನುಮತಿ ನೀಡಿಲ್ಲ. ಮೂರು ಬಾರಿ ನೋಟಿಸ್‌ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಅಧಿಕಾರಿಗಳ ಮೌನ: ಸ್ಥಳೀಯರಾದ ರಮೇಶ್‌ ಪ್ರತಿಕ್ರಿಯಿಸಿ, ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಅಕ್ರಮ ವಾಗಿ ತ್ಯಾಜ್ಯ ಸಂಗ್ರಹಣೆ ಮಾಡುತ್ತಿದ್ದರೆ ಗ್ರಾಮೀಣ ಮತ್ತು ಗಡಿ ಪ್ರದೇಶಗಳಲ್ಲಿ ಯಾವ ರೀತಿ ಗಮನಿ ಸುತ್ತಾರೆ. ಅಧಿಕಾರಿಗಳು ಯಾವುದೇ ಕ್ರಮ ಕೈಗೊ ಳ್ಳದಿರುವುದು ಅನುಮಾನಕ್ಕೆಡೆ ಮಾಡಿದೆ ಎಂದರು.
ಅನುಮತಿಯಿಲ್ಲದೇ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಮಾಡುತ್ತಿದ್ದರೆ ಸ್ಥಳ ಪರಿಶೀಲಿಸಿ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ.
● ಕೆ.ಎನ್‌.ರಾಜಶೇಖರ್‌, ತಹಶೀಲ್ದಾರ್‌, ನೆಲಮಂಗಲ

ಟಾಪ್ ನ್ಯೂಸ್

2022ರ ಆಸ್ಕರ್‌ ಅರ್ಹತಾ ಪಟ್ಟಿಯಲ್ಲಿ “ಮಂಡೇಲಾ’, “ನಯತ್ತು’ ಚಿತ್ರ

2022ರ ಆಸ್ಕರ್‌ ಅರ್ಹತಾ ಪಟ್ಟಿಯಲ್ಲಿ “ಮಂಡೇಲಾ’, “ನಯತ್ತು’ ಚಿತ್ರ

ಟ್ರಂಪ್‌ರಿಂದ “ಟ್ರಾತ್‌ ಸೋಷಿಯಲ್‌’ ಎಂಬ ಹೆಸರಿನಲ್ಲಿ ಪ್ರತ್ಯೇಕ ಸಾಮಾಜಿಕ ಜಾಲತಾಣ

ಟ್ರಂಪ್‌ರಿಂದ “ಟ್ರಾತ್‌ ಸೋಷಿಯಲ್‌’ ಎಂಬ ಹೆಸರಿನಲ್ಲಿ ಪ್ರತ್ಯೇಕ ಸಾಮಾಜಿಕ ಜಾಲತಾಣ

ಗತಿಶಕ್ತಿ ಯೋಜನೆಗೆ ಕೇಂದ್ರ ಸಂಪುಟ ಅಸ್ತು: ಕೇಂದ್ರ ಆರ್ಥಿಕ ವ್ಯವಹಾರಗಳ ಸಭೆಯಲ್ಲಿ ಒಪ್ಪಿಗೆ

ಗತಿಶಕ್ತಿ ಯೋಜನೆಗೆ ಕೇಂದ್ರ ಸಂಪುಟ ಅಸ್ತು: ಕೇಂದ್ರ ಆರ್ಥಿಕ ವ್ಯವಹಾರಗಳ ಸಭೆಯಲ್ಲಿ ಒಪ್ಪಿಗೆ

ಪ್ರಾಥಮಿಕ ತರಗತಿ ಆರಂಭಕ್ಕೆ ಮಾರ್ಗಸೂಚಿ

ಪ್ರಾಥಮಿಕ ತರಗತಿ ಆರಂಭಕ್ಕೆ ಮಾರ್ಗಸೂಚಿ

ಉ.ಪ್ರ.ದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್‌, ಸ್ಕೂಟಿ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್‌, ಸ್ಕೂಟಿ

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ : ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಸಿಂಧು

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ : ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಸಿಂಧು

ಧರ್ಮಗಳನ್ನು ಒಡೆಯುವುದೇ ಕಾಂಗ್ರೆಸ್ ಪಕ್ಷದವರ ಕೆಲಸ ಸಿಎಂ ಬೊಮಾಯಿ ಆರೋಪ

ಧರ್ಮಗಳನ್ನು ಒಡೆಯುವುದೇ ಕಾಂಗ್ರೆಸ್ ಪಕ್ಷದವರ ಕೆಲಸ ಸಿಎಂ ಬೊಮ್ಮಾಯಿ ಆರೋಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lawmakers who come to the village return without seeing the road!

ಗ್ರಾಮಕ್ಕೆ ಬಂದ ಶಾಸಕರು ರಸ್ತೆ ನೋಡದೇ ವಾಪಸ್‌!

ಜಿಂಕೆ

ವಾಹನಗಳ ವೇಗಕ್ಕೆ ಬಲಿಯಾಗುತ್ತಿವೆ ಕಾಡುಪ್ರಾಣಿಗಳು: ಆಕ್ರೋಶ

ನಿರಂತರ ಮಳೆಯಿಂದ ಕಳೆಗಟ್ಟಿದ ಬೆಳೆ

ನಿರಂತರ ಮಳೆಯಿಂದ ಕಳೆಗಟ್ಟಿದ ಬೆಳೆ

bangalore news

ರಾಗಿ ಬೆಳೆಯುತ್ತಿದ್ದ ರೈತರಿಂದ ಈಗ ಭತ್ತ ನಾಟಿ

doddaballapura news

ಡಿವೈಎಸ್ಪಿ ಟಿ.ರಂಗಪ್ಪ ಪತ್ನಿ ರಶ್ಮಿಗೆ “ಮಿಸಸ್‌ ಇಂಡಿಯಾ ಪ್ರಶಸ್ತಿ”

MUST WATCH

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

ಹೊಸ ಸೇರ್ಪಡೆ

ಮೊದಲ ದಿನ ಸಿಹಿಯೊಂದಿಗೆ ಬಿಸಿಯೂಟ

ಮೊದಲ ದಿನ ಸಿಹಿಯೊಂದಿಗೆ ಬಿಸಿಯೂಟ

ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಆರಂಭ

ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಆರಂಭ

ಮೊದಲ ದಿನ ಸಿಹಿಯೊಂದಿಗೆ ಬಿಸಿಯೂಟ

ಮೊದಲ ದಿನ ಸಿಹಿಯೊಂದಿಗೆ ಬಿಸಿಯೂಟ

ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಆರಂಭ: ವಿದ್ಯಾರ್ಥಿಗಳ ಸಂಭ್ರಮ

ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಆರಂಭ: ವಿದ್ಯಾರ್ಥಿಗಳ ಸಂಭ್ರಮ

ಹೆದ್ದಾರಿಯಿಂದ ನಗರಕ್ಕೆ ಪ್ರವೇಶ: ಸಮಿತಿ ರಚನೆ

ಹೆದ್ದಾರಿಯಿಂದ ನಗರಕ್ಕೆ ಪ್ರವೇಶ: ಸಮಿತಿ ರಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.