ಹಲಸಿನ ಸೀಸನ್‌ ಆರಂಭ


Team Udayavani, Apr 30, 2022, 1:00 PM IST

Untitled-1

ದೊಡ್ಡಬಳ್ಳಾಪುರ: ಹಲಸಿನ ಸೀಸನ್‌ ಆರಂಭವಾಗಿದೆ. ರಸ್ತೆಬದಿಯಲ್ಲಿ ಹಲಸು ಹಣ್ಣುಗಳ ಮಾರಾಟ ಆರಂಭವಾಗಿದ್ದು, ಎರಡು ವರ್ಷದಿಂದ ಕೊರೊನಾದಿಂದ ನಷ್ಟ ಅನುಭವಿಸಿದ್ದ ಹಲಸು ಮಾರಾಟಗಾರರು ಈ ಬಾರಿ ಲಾಭದ ನಿರೀಕ್ಷೆಯಲ್ಲಿದ್ದಾರೆ.

ಹಸಿದು ಹಲಸು ತಿನ್ನು, ಉಂಡು ಮಾವು ತಿನ್ನು ಎಂಬ ಮಾತಿನಂತೆ ಹಲಸು ಹಾಗೂ ಮಾವಿನ ಸೀಸನ್‌ ಆರಂಭವಾಗಿದೆ. ಆದರೆ, ಈ ಬಾರಿ ಮಾವು ತೀರಾ ಕಡಿಮೆಯಾಗುವ ಲಕ್ಷಣಗಳಿವೆ. ತಾಲೂಕಿನಲ್ಲಿ ಈ ಬಾರಿ ಮಳೆಯಾಗಿರುವುದರಿಂದ ಹಲಸು ಇಳುವರಿಗೆ ಸಹಾಯಕವಾಗಿ ಸ್ವಾಧಿಷ್ಟ ಹಣ್ಣುಗಳು ಬರ ತೊಡಗಿವೆ.

ಆದರೆ, ಇಳುವರಿ ಇನ್ನು ನಿರೀಕ್ಷಿತ ಪ್ರಮಾಣದಲ್ಲಿಲ್ಲ. ಬೆಂಗಳೂರು-ಹಿಂದೂಪುರ ಹೆದ್ದಾರಿ ನಗರದ ಹೊರವಲಯದ ಟಿ.ಬಿ ವೃತ್ತದ ಬಳಿಯ ರಸ್ತೆಯ ಬದಿ. ಎಪಿಎಂಸಿ ಮಾರುಕಟ್ಟೆ ಮೊದಲಾದ ಕಡೆಗಳಲ್ಲಿ ಹಲಸಿನ ರಾಶಿ ಕಾಣುತ್ತಿದ್ದು, ಹಲಸಿನ ಹಣ್ಣು ಸ್ಥಳೀಯರಲ್ಲದೇ ನೆರೆಯ ಆಂಧ್ರದಿಂದ ಸಹ ವ್ಯಾಪಾರಸ್ಥರು ಖರೀದಿಸುವುದು ವಿಶೇಷವಾಗಿದೆ.

ಉತ್ತಮ ಇಳುವರಿ: ತಾಲೂಕಿನಲ್ಲಿ ಮಾವಿನಂತೆ ಹಲಸಿನ ತೋಪುಗಳು ಕಡಿಮೆ. ಹೀಗಾಗಿ, ರೈತರು ತಮ್ಮ ತೋಟಗಳಲ್ಲಿ ಬೆಳೆದಿರುವ ಹತ್ತಾರು ಮರಗಳ ಹಣ್ಣುಗಳನ್ನೇ ಮಾರಾಟಗಾರರು ಮುಂಚೆಯೇ ಖರೀದಿಸಲಾಗುತ್ತದೆ. ಈ ಬಾರಿ ಇಳುವರಿ ಪರವಾಗಿಲ್ಲ. ನೀರಾವರಿ ಜಮೀನು ಹಾಗೂ ನೀರಿನ ಆಶ್ರಯವಿರುವ ತೋಟಗಳ ಬಳಿ ಹೆಚ್ಚಿನ ಇಳುವರಿ ಬಂದಿದ್ದು, ಉಳಿದೆಡೆ ಸಾಧಾರಣ ಇಳುವರಿಯಾಗಿದೆ. ಹಲಸಿನ ತೋಪುಗಳು ಕಡಿಮೆಯಾಗುತ್ತಿದ್ದರೂ, ತೋಟ ಗಳಲ್ಲಿ ಬೆಳೆಸಿರುವ ಹಲಸಿನ ಮರಗಳಲ್ಲಿ ಜನವರಿ, ಫೆಬ್ರವರಿಯಲ್ಲಿಯೇ ವ್ಯಾಪಾರ ಮಾಡಿ, ಏಪ್ರಿಲ್‌ ತಿಂಗಳಿನಿಂದ ಖರೀದಿಸಿ ತಂದು ಮಾರಾಟ ಮಾಡಲಾಗುತ್ತದೆ. ಒಂದು ಹುಂಡಿಗೆ (ಗುಡ್ಡೆ)100ರಿಂದ 200 ಕಾಯಿ ಇರುತ್ತವೆ. ಕಾಯಿಗಳ ಗಾತ್ರದ ಮೇಲೆ ಹುಂಡಿಗೆ 2 ಸಾವಿರದಿಂದ 5 ಸಾವಿರ ರೂ.ವರೆಗೆ ಬೆಲೆ ಇರುತ್ತದೆ.

ವೈವಿದ್ಯತೆಗೆ ಅನುಗುಣವಾಗಿ ಮಾರಾಟ: ದೊಡ್ಡ ಗಾತ್ರದ ಹಲಸಿನ ಹಣ್ಣು 100ರಿಂದ 150 ರೂ.ವರೆಗೆ ಮಾರಾಟವಾಗುತ್ತಿವೆ. ಹಲಸಿನ ಸೀಸನ್‌ ಅಂಗವಾಗಿ ಮಾರುಕಟ್ಟೆಯಲ್ಲಿ ಭರದಿಂದ ಮಾರಾಟವಾಗುತ್ತಿರುವ ಹಲಸಿನ ತಳಿಗಳಲ್ಲಿ ಹಳದಿ ಬಣ್ಣದ ತೊಳೆಯ ಹಲಸು, ಕೆಂಪುಬಣ್ಣದ ತೊಳೆಯ ಹೆಬ್ಬಲಸು, ಬೇರು ಹಲಸು ಮೊದಲಾಗಿ ನಾನಾ ವಿಧದ ಹಲಸಿನ ಮಾರಾಟ ನಡೆಯುತ್ತಿದೆ. ಇತರ ಹಲಸಿನ ಹಣ್ಣುಗಳ ಗಾತ್ರ, ಹಣ್ಣಿನ ತಳಿ, ವೈವಿದ್ಯತೆಗಳಿಗನುಗುಣವಾಗಿ ಮಾರಾಟ ಆಗುತ್ತಿವೆ.

ಮರದಲ್ಲಿ ಕಾಯಿ ಕಡಿಮೆ: ನೆರೆಯ ಆಂಧ್ರ ಹಾಗೂ ಸುತ್ತಮುತ್ತಲಿನ ತಾಲೂಕುಗಳಿಂದ ಹಲಸನ್ನು ಖರೀದಿಸಲು ಆಗಮಿಸಬೇಕಿದೆ. ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ, ಹೆಚ್ಚಿನ ಬೆಳೆ ಬಂದರೂ ನಷ್ಟ ಉಂಟಾಗಿತ್ತು. ಆದರೆ, ಈ ಬಾರಿ ವ್ಯಾಪಾರ ಆರಂಭವಾಗುತ್ತಿದ್ದು, ಇನ್ನು ಮರದಲ್ಲಿ ಹಲಸಿನ ಕಾಯಿ ಕಡಿಮೆಯಿವೆ. ಇನ್ನು ಎರಡು ಹದ ಮಳೆ ಹೊಯ್ದರೆ ಒಳ್ಳೆಯ ಫಸಲು ಸಿಗಲಿದೆ ಎನ್ನುತ್ತಾರೆ ಹಲಸು ಮಾರಾಟಗಾರ ನೆಲ್ಲುಕುಂಟೆ ತಿಮ್ಮರಾಜು.

ಹಣ್ಣುಗಳ ದೊಡ್ಡಣ್ಣ :

ಹಲಸು ಬಡವರ ಹಣ್ಣು ಎಂದೇ ಜನಜನಿತವಾಗಿದೆ. ಮಾವು, ಬಾಳೆಗಳಂತೆ ಹಲಸನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುವುದಿಲ್ಲ. ಇಳುವರಿ ದೃಷ್ಟಿಯಿಂದ ಈ ಹಣ್ಣಿನ ಬೇಸಾಯ ಇತರ ಹಣ್ಣಿಗಿಂತ ಹೆಚ್ಚು ಲಾಭದಾಯಕ. 5ಕೆ.ಜಿ.ಯಿಂದ 50 ಕೆ.ಜಿ.ವರೆಗೆ ತೂಗುವ ಇದು ಗಾತ್ರದಲ್ಲಿ ಹಣ್ಣುಗಳ ದೊಡ್ಡಣ್ಣನೂ ಹೌದು. ತಾಲೂಕಿನ ತೂಬಗೆರೆ ಹಾಗೂ ಕಸಬಾ ಹೋಬಳಿಗಳಲ್ಲಿ ಹೆಚ್ಚು ಹಲಸು ಬೆಳೆಯಲಾಗುತ್ತದೆ. ಉಳಿದ ಹೋಬಳಿಗಳಿಂದಲೂ ಸೀಸನ್‌ನಲ್ಲಿ ಹಣ್ಣುಗಳು ಮಾರುಕಟ್ಟೆಗೆ ಬರುತ್ತವೆ.

ತೂಬಗೆರೆ ಹಲಸು ತಿನಲು ಸ್ವಾಧಿಷ್ಟ : ಬಯಲುಸೀಮೆ ತೂಬಗೆರೆ ಹೋಬಳಿ ಹಲಸಿನ ಹಣ್ಣುಗಳು ಎಂದರೆ ಹಾಗೆಯೇ. ತಿಂದವರು ಮತ್ತೆ ಮತ್ತೆ ಬಯಸುತ್ತಾರೆ. ತೂಬಗೆರೆ ಹೋಬಳಿ ಕಾಚಳ್ಳಿ, ಮೆಳೇಕೋಟೆ, ನೆಲ್ಲುಕುಂಟೆ ಸೇರಿದಂತೆ ಇಲ್ಲಿನ ಸುತ್ತಮುತ್ತ ನೂರಾರು ವರ್ಷಗಳ ಹಳೆಯ ಮರಗಳಿವೆ. ಬೇರೆಡೆ ಹೆಚ್ಚಿನ ಇಳುವರಿಯಾಗಿ ಹಣ್ಣುಗಳು ಮಾರುಕಟ್ಟೆಗೆ ಬಂದು ಬೆಲೆ ಇಳಿಮುಖ ವಾಗಿದ್ದರೂ, ತೂಬಗೆರೆ ಹಲಸು ಮಾತ್ರ ತನ್ನ ಬೆಲೆ ಕಳೆದುಕೊಂಡಿಲ್ಲ ಎನ್ನುವುದು ವಿಶೇಷ. ಇಲ್ಲಿನ ಮಣ್ಣಿನ ಗುಣ ಹಲಸು ಹಣ್ಣುಗಳ ರುಚಿಗೆ ಕಾರಣ ವಾಗಿದ್ದು, ತೂಬಗೆರೆ ಚಂದ್ರ ಹಲಸು ಬಗೆ ಎಂದೇ ರಾಜ್ಯದಲ್ಲಿ ಹೆಸರು ಮಾಡಿವೆ.

ಹಲಸು ಹಣ್ಣುಗಳನ್ನು ಒಟ್ಟಾಗಿ ತಂದು ಮಾರಬೇಕಾಗಿರುವುದರಿಂದ ಸಗಟಾಗಿ ಖರೀದಿಸುವವರು ಹೆಚ್ಚಿನ ಬೆಲೆ ನೀಡುವುದಿಲ್ಲ. ತೋಟಗಳಲ್ಲಿ ಕಾಯಿ ಕೀಳಲು ಕೂಲಿಕಾರರ ಸಮಸ್ಯೆ, ಸಾಗಾಣಿಕೆ ವೆಚ್ಚ ಹೆಚ್ಚು ಇದರಿಂದ ಲಾಭ ಕಡಿಮೆ. ಇದರೊಂದಿಗೆ ರಾತ್ರಿ ಹೊತ್ತು ಕಾಯದಿದ್ದರೆ ಹಣ್ಣು ಕಳ್ಳತನವಾಗುತ್ತವೆ. ಚಿಲ್ಲರೆ ವ್ಯಾಪಾರದಲ್ಲಿ ಹೆಚ್ಚಿನ ಲಾಭವಿದೆ. ಲಾಲ್‌ಬಾಗ್‌ ಹಾಗೂ ಹಲಸು ಮೇಳಗಳಲ್ಲಿ ಹಣ್ಣು ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟರೆ ಅನುಕೂಲ. – ಹನುಮಂತ ರೆಡ್ಡಿ, ಹಲಸು ಮಾರಾಟಗಾರ

 

– ಡಿ. ಶ್ರೀಕಾಂತ

ಟಾಪ್ ನ್ಯೂಸ್

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.