ಮಳೆ ಕೊರತೆ ಬಿತ್ತನೆ ಕಾರ್ಯಕ್ಕೆ ಹಿನ್ನಡೆ

Team Udayavani, Jul 7, 2019, 3:00 AM IST

ದೇವನಹಳ್ಳಿ: ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 160 ಹೆಕೇrರ್‌ ನೀರಾವರಿ ಪ್ರದೇಶದಲ್ಲಿ ರಾಗಿ ಬಿತ್ತನೆ ಕಾರ್ಯ ಆಗಿದೆ. ಮಳೆಯ ಕೊರತೆ ಎದ್ದು ಕಾಣುತ್ತಿದೆ. ಬಿತ್ತನೆ ಪ್ರಮಾಣದಲ್ಲಿ ತೀವ್ರ ಹಿನ್ನಡೆ ಆಗಿದೆ ಎಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ಎಂ.ಎನ್‌. ಮಂಜುಳಾ ತಿಳಿಸಿದರು. ನಗರದ ಬಿಬಿ ರಸ್ತೆಯಲ್ಲಿರುವ ತಾಲೂಕು ಕೃಷಿ ಸಹಾಯಕ‌ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ತಾಲೂಕು ಕೃಷಿಕ ಸಮಾಜದಿಂದ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.

ಕಳೆದ ವರ್ಷದಲ್ಲಿ ಜೂನ್‌ ತಿಂಗಳಲ್ಲಿ 325 ಹೆಕ್ಟೇರ್‌ನಲ್ಲಿ ವಿವಿಧ ಬೆಳೆ ಬಿತ್ತನೆ ಆಗಿತ್ತು. ತಾಲೂಕಿನಲ್ಲಿ 10 ಸಾವಿರ ಹೆಕೇrರ್‌ ವಿವಿಧ ಬೆಳೆಗಳ ಬಿತ್ತನೆ ಗುರಿ ಇದೆ. ಸಕಾಲದಲ್ಲಿ ಮುಂಗಾರು ಮಳೆ ಇಲ್ಲ. 60 ಹೆಕೇrರ್‌ ನಲ್ಲಿ ಮಾತ್ರ ತೊಗರಿಯ ಬಿತ್ತನೆ ಆಗಿದೆ. ಶೂನ್ಯ ಬಂಡವಾಳದಲ್ಲಿ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು 350 ರೈತರು ನೋಂದಾಯಿಸಿಕೊಂಡಿದ್ದಾರೆ. ಪ್ರತಿ ರೈತರಿಗೆ ಕೃಷಿ ಸೌಲಭ್ಯಗಳು ತಲುಪುವಂತೆ ಮಾಡಲಾಗುತ್ತಿದೆ.

ಕೇಂದ್ರ ಸರ್ಕಾರ 2019ರ ಮುಂಗಾರು ಹಂಗಾಮಿನಲ್ಲಿ ಪ್ರಧಾನ ಮಂತ್ರಿ ಪಸಲ್‌ ಭೀಮಾ (ವಿಮಾ) ಯೋಜನೆ ಅನುಷ್ಠಾನ ಗೊಳಿಸಿದೆ ಬೆಳೆ ಸಾಲ ಪಡೆಯದ ರೈತರಿಗೆ ಈ ಯೋಜನೆಯಲ್ಲಿ ನೋಂದಣಿ ಮಾಡಿಕೊಳ್ಳಲು ಆಯ್ಕೆಗೆ ಅವಕಶ ವಿದೆ. ರೈತ ಸಿರಿ ಯೊಜನೆಯನ್ನು ಸರ್ಕಾರ ಪ್ರಾಯೋಗಿಕವಾಗಿ ಜಾರಿ ಮಾಡಿದೆ. ಸಿರಿ ಧಾನ್ಯ ಬೆಳೆಯುವ ರೈತರಿಗೆ 10 ಸಾವಿರ ರೂ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದರು.

ತಾಲೂಕು ಕೃಷಿಕ ಸಮಾಜದ ನಿರ್ದೇಶಕ ನಟರಾಜ್‌ ಮಾತನಾಡಿ ಹಿಪ್ಪು ನೇರಳೆ ಸೊಪ್ಪನ್ನು ಕೇಳುವವರು ಇಲ್ಲ. ರೇಷ್ಮೇ ಗೂಡಿನ ಬೆಲೆ ಪಾತಾಳಕ್ಕೆ ಇಳಿದಿದೆ. ರೇಷ್ಮೇ ಬೆಳೆಗಾರರು ಬೆಳೆಯನ್ನು ಬಿಟ್ಟು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೂಲಿ ಮಾಡುತ್ತಿದ್ದಾರೆ. ಸರ್ಕಾರದ ಪ್ರೋತ್ಸಾಹ ಧನ ಅವರಿಗೆ ಅವಶ್ಯವಿಲ್ಲ. ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಬೇಕು ಎಂದು ಹೇಳಿದರು.

ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್‌ ಆರ್‌ ರವಿಕುಮಾರ್‌ ಮಾತನಾಡಿ 75 ಲಕ್ಷ ವೆಚ್ಚದ ಕ್ರಿಯಾ ಯೋಜನೆಯಲ್ಲಿ ಕೃಷಿಕ ಸಮಾಜದ ಕಟ್ಟ ಡವನ್ನು ನಿರ್ಮಿಸಲಾಗುತ್ತಿದೆ. ಇನ್ನೂ ಅನುದಾನದ ಕೊರತೆ ಇದ್ದು ಸಂಸದರು , ಶಾಸಕರು, ವಿಧಾನ ಪರಿಷತ್‌ ಸದಸ್ಯರು ಸೇರಿದಂತೆ ಸಚಿವರ ಬಳಿ ಪಕ್ಷಾತೀತ ವಾಗಿ ತೆರಳಿ ಅನುದಾನವನ್ನು ತರುವಂತೆ ಮಾಡಬೇಕು ಎಂದರು.

ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯಿತ್ರಿ ದೇವಿ ಮಾತನಾಡಿ ತಾಲೂಕಿನಲ್ಲಿ 7400 ಎಕರೆ ಹಿಪ್ಪು ನೇರಳೆ ಸೊಪ್ಪು ಹಾಗೂ 3500 ರೇಷ್ಮೆ ಬೆಳೆಗಾರರು ಇದ್ದಾರೆ. ಹೊಸದಾಗಿ ರೇಷ್ಮೆ ಕಡ್ಡಿ ನಾಟಿ ಮಾಡಿ ಬೆಳೆಯಲು 2 ವರ್ಷಗಳ ಪ್ರೋತ್ಸಾಹ ಧನ ರೈತರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ ಶ್ರೀನಿವಾಸ್‌ ಗೌಡ ಅಧ್ಯಕ್ಷತೆಯನ್ನು ಮಾತನಾಡಿ ಮುಂದಿನ ಸಭೆಗಳಿಗೆ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಬರುವಂತೆ ಪತ್ರವನ್ನು ಕಳುಹಿಸಬೇಕು. ತಾಲೂಕಿನಲ್ಲಿ ಜಿಲ್ಲಾ ಕೃಷಿಕ ಭವನ ಕಚೇರಿ ನಿರ್ಮಾಣ ವಾಗುತ್ತಿರುವುದುರಿಂದ ಪಕ್ಷಾತೀತವಾಗಿ ಅನುದಾನಕ್ಕಾಗಿ ನಿಯೋಗ ಹೋಗಬೇಕು. ಸಕಾಲದಲ್ಲಿ ರೈತರಿಗೆ ಬಿತ್ತನೆ ಬೀಜ ದೊರೆಯಬೇಕು. ಕೃಷಿ ಇಲಾಖೆಯಿಂದ ದೊರೆಯುವ ಎಲ್ಲಾ ರೀತಿಯ ಸೌಲಭ್ಯಗಳು ರೈತರಿಗೆ ನೇರವಾಗಿ ದೊರೆಯಬೇಕು ಎಂದರು.

ಇದೇ ಸಂದರ್ಭದಲ್ಲಿ ಕೃಷಿಕ ಸಮಾಜದ ನಿರ್ದೇಶಕ ಪುರಸಭಾ ಚುನಾವಣೆಯಲ್ಲಿ ಸದಸ್ಯರಾಗಿ ಆಯ್ಕೆ ಆದ ಎಸ್‌ಸಿ ಚಂದ್ರಪ್ಪ, ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ರೈತ ಬಿಸೇ ಗೌಡ ಅವರನ್ನು ಸನ್ಮಾನಿಸಿದರು. ಈ ವೇಳೆಯಲ್ಲಿ ತಾಲೂಕು ಕೃಷಿಕ ಸಮಾಜದ ಉಪಧ್ಯಕ್ಷ ದೇವರಾಜ್‌, ಪ್ರಧಾನ ಕಾರ್ಯದರ್ಶಿ ಆನಂದ್‌, ಖಜಾಂಚಿ ಎ ಲಕ್ಷ್ಮೀ ನರಸಿಂಹ ಸ್ವಾಮಿ, ನಿರ್ದೇಶಕರಾದ ಎಚ್‌ ಎಮ್‌ ರವಿಕುಮಾರ್‌, ಎಸ್‌ ಪಿ ಮುನಿರಾಜು, ಕೃಷ್ಣ ಮೂರ್ತಿ, ನಾರಾಯಣಸ್ವಾಮಿ, ಮಾರೇಗೌಡ, ಪುರುಷೊತ್ತಮ್‌, ರಾಜೇಶ್‌, ತೋಟಗಾರಿಕೆ ಸಹಾಯಕ ಹಿರಿಯ ನಿರ್ದೇಶಕ ಮಂಜುನಾಥ್‌, ಪಶು ಪಾಲನಾ ಇಲಾಖೆ ಅಧಿಕಾರಿ ಡಾ.ರಮೇಶ್‌ ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ