Udayavni Special

ಬೇಸಿಗೆ ಆರಂಭ; ಹಲವು ಗ್ರಾಮದಲ್ಲಿ ನೀರಿನ ಸಮಸ್ಯೆ

ಟ್ಯಾಂಕರ್‌ ನೀರು ಪೂರೈಕೆಯಲ್ಲಿ ತಾರತಮ್ಯ ಆರೋಪ , ಹಾಹಾಕಾರ ತೀವ್ರಗೊಳ್ಳುವ ಮೊದಲೇ ತಾಲೂಕು ಆಡಳಿತ ಕ್ರಮಕೈಗೊಳ್ಳಲಿ

Team Udayavani, Mar 14, 2021, 11:13 AM IST

ಬೇಸಿಗೆ ಆರಂಭ; ಹಲವು ಗ್ರಾಮದಲ್ಲಿ ನೀರಿನ ಸಮಸ್ಯೆ

ದೊಡ್ಡಬಳ್ಳಾಪುರ: ಈಗಾಗಲೇ ಬೇಸಿಗೆ ಆರಂಭವಾಗಿದ್ದು, ತಾಲೂಕಿನಲ್ಲಿ ನೀರಿನ ಸಮಸ್ಯೆ ತಲೆ ದೋರುತ್ತಿದೆ. ಕುಡಿಯುವ ನೀರಿಗೆ ಬೀದಿ ಜಗಳ ಉಲ್ಬಣಗೊಳ್ಳುವ ಸಾಧ್ಯತೆಯೂ ಹೆಚ್ಚಿದೆ.

ಬೀದಿ ಜಗಳ: ತಾಲೂಕಿನ ಸಿಂಪಾಡಿಪುರ ಗ್ರಾಮ ದಲ್ಲಿ ಕೊಳವೆಬಾವಿ ಬತ್ತಿ ಹೋಗಿದೆ. ಹೀಗಾಗಿ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬ ರಾಜುಮಾಡುವ ಸಂದರ್ಭದಲ್ಲಿ ಕಾಲೋನಿ ಕಡೆಗೆ ಹೆಚ್ಚಿನ ನೀರು ಪೂರೈಸುತ್ತಿಲ್ಲ, ದನಕರು ಸಾಕಿರುವ ಒಂದುಕುಟುಂಬಕ್ಕೆ 10 ಬಿಂದಿಗೆ, ಯಾವುದೇ ಸಾಕು ಪ್ರಾಣಿಗಳು ಇಲ್ಲದ ಕುಟುಂಬಕ್ಕೂ 10 ಬಿಂದಿಗೆ ಲೆಕ್ಕದಲ್ಲಿನೀರು ಸರಬರಾಜು ಮಾಡಿದರೆ ಹೇಗೆ ಎನ್ನುವುದುಗ್ರಾಮಸ್ಥರ ಪ್ರಶ್ನೆಯಾಗಿದೆ. ಇದನ್ನು ಪ್ರಶ್ನಿಸಿದ್ದರಿಂದ ವಿನಾಕಾರಣ ಬೀದಿ ಜಗಳ ನಡೆಯುತ್ತಿದೆ. ಆದರೆ, ಕುಡಿಯುವ ನೀರಿನ ಬವಣೆ ಮಾತ್ರ ನೀಗಿಲ್ಲ ಎನ್ನುವುದು ಗ್ರಾಮ ಮಹಿಳೆಯರ ಅಳಲು.

ಕೆಲವು ಕಡೆ ಮಾತ್ರ ನೀರು ಪೂರೈಕೆ: ತಾಲೂಕಿನ ಹುಲಿಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಕತ್ತಿಹೊಸಹಳ್ಳಿ ಗ್ರಾಮದಲ್ಲಿ ಕೊಳವೆ ಬಾವಿ ಬತ್ತಿ ಹೋಗಿ ನಾಲ್ಕು ದಿನ ಕಳೆದಿದೆ. ಶಿವರಾತ್ರಿ ಹಬ್ಬದ ನಿಮಿತ್ತ ಎರಡು ದಿನ ಮಾತ್ರ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗಿತ್ತು.ನೀರು ತುಂಬಿದ ಟ್ಯಾಂಕರ್‌ ಎÇÉಾ ಬೀದಿಗಳಿಗೂಬರುತ್ತಿಲ್ಲ. ಮುಖ್ಯರಸ್ತೆಯಲ್ಲಿ ಒಂದು ಕಡೆ ಮಾತ್ರಬಂದು ನಿಲ್ಲಿಸುತ್ತಾರೆ. ಇದರಿಂದ ಗ್ರಾಮದಇತರೆಡೆಗಳಲ್ಲಿ ವಾಸ ಮಾಡುವ ಮನೆಯವರುನೀರು ಇಲ್ಲದೆ ಪರದಾಡುವ ಸ್ಥಿತಿ ಉಂಟಾಗಿದೆ.ಬೆಳಗ್ಗೆ, ಸಂಜೆ ನೀರು ಪೂರೈಸಲಿ: ಗ್ರಾಮದಲ್ಲಿಸಂಜೆ, ಬೆಳಗಿನ ವೇಳೆಯಲ್ಲಿ ನೀರಿನ ಟ್ಯಾಂಕರ್‌ ಬಂದರೆ ಎಲ್ಲರೂ ಮನೆಯಲ್ಲಿ ಇರುತ್ತಾರೆ. ಆಗ,ನೀರು ಹಿಡಿದಿಟ್ಟುಕೊಳ್ಳಲು ಅನುಕೂಲವಾಗುತ್ತದೆ.ಆದರೆ, ಟ್ಯಾಂಕರ್‌ ಮಧ್ಯಾಹ್ನದ ವೇಳೆ ಬರುವುದ ರಿಂದ ಬಹುತೇಕ ರೈತರು ಹೊಲದ ಕೆಲಸಕ್ಕೆ, ಕೂಲಿಕೆಲಸಕ್ಕೆ ಹೋಗಿರುತ್ತಾರೆ. ಇದರಿಂದ ಮನೆಯಲ್ಲಿನೀರು ಇಲ್ಲದೆ ಪರದಾಡುವ ಸ್ಥಿತಿ ಇದೆ ಎನ್ನುತ್ತಾರೆ ಗ್ರಾಮಸ್ಥರು.

ಕೊಳವೆ ಬತ್ತುತ್ತಿವೆ: ಈ ಬಾರಿಯ ಮಳೆಗಾಲದಲ್ಲಿ ಬೆಟ್ಟದ ಸಾಲಿನಲ್ಲಿ ಬರುವ ತಾಲೂಕಿನ ಒಂದೆರಡುಕೆರೆ ಹೊರತುಪಡಿಸಿದರೆ ಉಳಿದ ಯಾವುದೇ ಕೆರೆಕುಂಟೆ ತುಂಬಿಲ್ಲ. ಇದರಿಂದಾಗಿ ಅಂತರ್ಜಲದ ಮಟ್ಟ ತೀವ್ರ ಕುಸಿತ ಕಂಡಿದ್ದು, ಪ್ರತಿ ದಿನವೂಕೊಳವೆ ಬಾವಿ ಬತ್ತಿ ಹೋಗುತ್ತಲೇ ಇವೆ.ಕೊಳವೆ ಬಾವಿ ಕೊರೆಯಲು ಹಿಂದೇಟು: ಸರ್ಕಾರ ದಿಂದ ಹಣ ಬರುವುದು ತಡವಾಗುತ್ತದೆ ಎನ್ನುವ ಕಾರಣದಿಂದ ಗುತ್ತಿಗೆದಾರರು ಹೊಸ ಕೊಳವೆಬಾವಿಕೊರೆಯಲು ಮುಂದಾಗುತ್ತಿಲ್ಲ. ಅಲ್ಲದೆ, ಡೀಸೆಲ್‌ ಬೆಲೆ ಪ್ರತಿ ದಿನವೂ ಏರಿಕೆಯಾಗು ತ್ತಲೇ ಇದೆ. ಸರ್ಕಾರ ಮಾತ್ರ ಕೊಳವೆಬಾವಿ ಕೊರೆ ಯಲು ನೀಡುವ ಹಣದಲ್ಲಿ ಏರಿಕೆ ಮಾಡುತ್ತಿಲ್ಲ. ಇದು ಸಹ ಹೊಸ ಕೊಳವೆಬಾವಿ ಕೊರೆಯಿಸಲು ಸಮಸ್ಯೆಯಾಗಿದೆ. ನೀರಿನ ಸಮಸ್ಯೆ ತೀವ್ರವಾಗುವ ಮುನ್ನವೇ ತಾಲೂಕು ಆಡಳಿತ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.

 

ಟಾಪ್ ನ್ಯೂಸ್

/wearing-mask-in-public-space-to-avoid-covid-19-is-no-more-compulsory-says-israel

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಿಲ್ಲ : ಅಚ್ಚರಿಯ ನಿರ್ಣಯ ಕೈಗೊಂಡ ಈ ದೇಶ..!

ಕೋವಿಡ್ 2ನೇ ಅಲೆ: ಭಾರತದಲ್ಲಿ 24 ಗಂಟೆಗಳಲ್ಲಿ 2.73 ಲಕ್ಷ ಪ್ರಕರಣ ಪತ್ತೆ

ಕೋವಿಡ್ 2ನೇ ಅಲೆ: ಭಾರತದಲ್ಲಿ 24 ಗಂಟೆಗಳಲ್ಲಿ 2.73 ಲಕ್ಷ ಪ್ರಕರಣ ಪತ್ತೆ

upendra

ಉಪ್ಪಿ ‘ಲಗಾಮ್‌’ಗೆ ಇಂದು ಮುಹೂರ್ತ

government-has-no-plan-to-impose-nationwide-lockdown-says-nirmala-sitharaman

ದೇಶದಾದ್ಯಂತ ಮತ್ತೆ ಲಾಕ್ ಡೌನ್ ಹೇರುವ ಮಾತೇ ಇಲ್ಲ : ನಿರ್ಮಲಾ ಸೀತಾರಾಮನ್

ಕೋವಿಡ್ ಆತಂಕ : ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1000 ಅಂಕ ಕುಸಿತ, ಹೂಡಿಕೆದಾರರಿಗೆ ನಷ್ಟ

ಕೋವಿಡ್ ಆತಂಕ : ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1000 ಅಂಕ ಕುಸಿತ, ಹೂಡಿಕೆದಾರರಿಗೆ ನಷ್ಟ

if-you-are-a-victim-of-a-online-fraud-you-can-call-on-this-number

ಸೈಬರ್ ವಂಚನೆಗೊಳಗಾದಲ್ಲಿ ಪರಿಹಾರ ಒದಗಿಸಲಿದೆ ಗೃಹ ಸಚಿವಾಲಯದ ಈ ಸಹಾಯವಾಣಿ  

ಬಜಪೆ ವ್ಯವಸಾಯ ಸಹಕಾರಿ ಬ್ಯಾಂಕ್ ನಲ್ಲಿ ಅಗ್ನಿ ಅವಘಡ

ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಅಗ್ನಿ ಅವಘಡಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Take action to vaccinate

ಕೋವಿಡ್ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಿ

Central Guidelines for Covoid Control

ಕೋವಿಡ್ ನಿಯಂತ್ರಣಕ್ಕೆ ಕೇಂದ್ರ ಮಾರ್ಗಸೂಚಿ

Charged with assault by police

ಪೊಲೀಸರಿಂದ ಹಲ್ಲೆ ಆರೋಪ: ಠಾಣೆಗೆ ಮುತ್ತಿಗೆ

Create a duplicate record of land sales

ನಕಲಿ ದಾಖಲೆ ಸೃಷ್ಟಿಸಿ ಭೂಮಿ ಮಾರಾಟ ದಂಧೆ

programme held at devanahalli

ನಗರೇಶ್ವರ ಸ್ವಾಮಿ ಪ್ರಾಕಾರೋತ್ಸವ ಸೇವೆ

MUST WATCH

udayavani youtube

ಆಕಸ್ಮಾತ್ ನಾನು ಕೊರೊನಾದಿಂದ ಸತ್ತೋದ್ರೆ ನೀವೇ ಕಾರಣ : Guru Prasad

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

ಹೊಸ ಸೇರ್ಪಡೆ

Mallikarjuna Temple

ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನ: ದೇವರ ದೊಡ್ಡ ದರ್ಶನ ಬಲಿ ಉತ್ಸವ

/wearing-mask-in-public-space-to-avoid-covid-19-is-no-more-compulsory-says-israel

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಿಲ್ಲ : ಅಚ್ಚರಿಯ ನಿರ್ಣಯ ಕೈಗೊಂಡ ಈ ದೇಶ..!

“All cooperation for village development”

“ಗ್ರಾಮದ ಅಭಿವೃದ್ಧಿಗೆ ಸರ್ವ ಸಹಕಾರ’

ಕೋವಿಡ್ 2ನೇ ಅಲೆ: ಭಾರತದಲ್ಲಿ 24 ಗಂಟೆಗಳಲ್ಲಿ 2.73 ಲಕ್ಷ ಪ್ರಕರಣ ಪತ್ತೆ

ಕೋವಿಡ್ 2ನೇ ಅಲೆ: ಭಾರತದಲ್ಲಿ 24 ಗಂಟೆಗಳಲ್ಲಿ 2.73 ಲಕ್ಷ ಪ್ರಕರಣ ಪತ್ತೆ

upendra

ಉಪ್ಪಿ ‘ಲಗಾಮ್‌’ಗೆ ಇಂದು ಮುಹೂರ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.