ಪರಿಸರ ಸ್ನೇಹಿ ಗಣೇಶನಿಗೆ ಆದ್ಯತೆಯಿರಲಿ

Team Udayavani, Aug 20, 2019, 3:00 AM IST

ದೊಡ್ಡಬಳ್ಳಾಪುರ: ದೊಡ್ಡದಾದ ಹಾಗೂ ವಿವಿಧ ಬಣ್ಣಗಳಿಂದ ಶೃಂಗಾರಗೊಂಡಿರುವ ಗಣೇಶನನ್ನು ಪ್ರತಿಷ್ಠಾಪಿಸಿದರೆ ದೇವರು ವರ ನೀಡುತ್ತಾನೆ ಎಂಬ ತಪ್ಪು ಮನೋಭಾವ ಬೆಳೆದಿದೆ. ಅದು ನಿಲ್ಲಬೇಕು. ಪರಿಸರ ಸ್ನೇಹಿ ಗಣಪನಿಗೆ ಮೊದಲ ಆದ್ಯತೆ ನೀಡಬೇಕು ಎಂದು ಎಂದು ಪ್ರಗತಿಪರ ಕೃಷಿಕ ಶಿವಪ್ಪ ಹೇಳಿದರು. ನಗರದ ಬೆಸೆಂಟ್‌ ಪಾರ್ಕ್‌ ನಲ್ಲಿ ಸುಚೇತನ ಎಜುಕೇಷನಲ್‌ ಮತ್ತು ಚಾರಿಟಬಲ್‌ ಟ್ರಸ್ಟ್‌, ಪರಿಸರ ಸಿರಿ ಅಭಿವೃದ್ಧಿ ಸಂಘದಿಂದ ನಡೆದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ತಯಾರಿಕೆ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಮುಗಿದ ನಮ್ಮ ಪರಂಪರೆ: ಸಗಣಿಯಿಂದ ಪಿಳ್ಳೇರಾಯನ ಮಾಡಿ ಗಣಪ ನೆಂದು ಪೂಜಿಸುತ್ತಿದ್ದುದು ನಮ್ಮ ಪರಂಪರೆ. ಈ ಅಧುನಿಕ ಸಂಸ್ಕೃತಿಯಿಂದ ಪರಿಸರ ನಾಶವಾಗುತ್ತಿದ್ದು, ಪ್ರಕೃತಿಗೆ ವಿರುದ್ಧವಾಗಿ ನಡೆದರೆ ಅನಾಹುತಗಳು ಸಂಭವಿಸುತ್ತವೆ. ಪರಿಸರ ಇಲ್ಲಿದಿದ್ದರೆ ಮನುಷ್ಯನಿಲ್ಲ. ಈ ಸತ್ಯ ಪ್ರತಿಯೊಬ್ಬರ ಅರಿವಿಗೆ ಬರಬೇಕಿದೆ. ಮಳೆ, ಬೆಳೆ ಇಲ್ಲದೆ ಬರಗಾಲ, ಇನ್ನೊಂದೆಡೆ ಅತಿವೃಷ್ಟಿಯಿಂದಾಗಿ ಸಂಕಷ್ಟ ಅನುಭವಿಸುವಂತಾಗಿದೆ. ಇನ್ನಾದರೂ ಜನರಲ್ಲಿ ಪರಿಸರ ಕಾಳಜಿ ಮೂಡಬೇಕಿದೆ ಎಂದು ಹೇಳಿದರು.

ಮೂರ್ತಿ ನೀವೇ ಸಿದ್ಧಪಡಿಸಿ ಪೂಜಿಸಿ: ಪರಿಸರ ಸಿರಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥರೆಡ್ಡಿ ಮಾತನಾಡಿ, ಮಕ್ಕಳು ಗಣೇಶ ಮೂರ್ತಿ ಸಿದ್ಧಪಡಿಸಿಕೊಂಡು ಪೂಜಿಸುವಂತೆ ಮಾಡುವ ಉದ್ದೇಶದಿಂದ ಕಾರ್ಯಾಗಾರ ನಡೆಸಲಾಗುತ್ತಿದೆ. ನಾವೇ ಸಿದ್ಧಪಡಿಸಿದ ಗಣೇಶ ಮೂರ್ತಿ ಪೂಜಿಸುವುದರಿಂದ ಗಣೇಶ ಹಬ್ಬ ಮತ್ತಷ್ಟು ಖುಷಿಕೊಡಲಿದೆ. ಇದರಿಂದ ನಮ್ಮ ಸುತ್ತಲಿನ ಪರಿಸರವನ್ನು ಗಣೇಶ ಹಬ್ಬದ ನೆಪದಲ್ಲಿ ಹಾಳಾಗುವುದನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂದರು.

ಗಣೇಶನ ಮೂರ್ತಿ ಸಿದ್ಧಪಡಿಸುವ ಕಲಾವಿದ ಬಿ.ಆರ್‌.ಬಸವರಾಜು, ಮಣ್ಣಿನಿಂದ ಗಣೇಶನ ಮೂರ್ತಿ ಸಿದ್ಧಪಡಿಸುವ ಕುರಿತು ಮಾರ್ಗದರ್ಶನ ನೀಡಿದರು. ಸುಮಾರು ನೂರಕ್ಕೂ ಹೆಚ್ಚು ಜನರು ಸ್ಥಳದಲ್ಲೇ ಗಣೇಶ ಮೂರ್ತಿ ಸಿದ್ಧಪಡಿಸಿಕೊಂಡು ಹಬ್ಬದಲ್ಲಿ ಪೂಜಿಸಲು ತಮ್ಮ ಮನೆಗಳಿಗೆ ಕೊಂಡೊಯ್ದರು. ಭಾರತ್‌ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್‌.ಸಿಂಧ್ಯ ಮಾತನಾಡಿದರು.

ಸುಚೇತನ ಎಜುಕೇಷನಲ್‌ ಮತ್ತು ಚಾರಿಟಬಲ್‌ ಟ್ರಸ್ಟ್‌ ಗೌರವ ಅಧ್ಯಕ್ಷ ಕೆ.ಎನ್‌. ಮಂಜುನಾಥ್‌, ಅಧ್ಯಕ್ಷ ಸುನಿಲ್‌ ಗೌ ಡ ಸಲಹೆಗಾರ ಜಿ.ರಾಜಶೇಖರ್‌, ಭವಿಷ್ಯ ಎಜುಕೇಷನ್‌ ಟ್ರಸ್ಟ್‌ ಅಧ್ಯಕ್ಷ ನಾಗರಾಜ್‌, ಸಿವಿಕ್‌ ನ್ಯೂಸ್‌ ವರದಿಗಾರ ಎ.ರಮೇಶ್‌, ಸುಚೇತನ ಟ್ರಸ್ಟ್‌ನ ಕಾರ್ಯದರ್ಶಿ ಪ್ರದೀಪ್‌, ಖಜಾಂಚಿ ಅನಿಲ್‌ ಗೌಡ, ಟ್ರಸ್ಟಿ ಪ್ರವೀಣ್, ಪಿ.ಎಸ್‌. ಲೋಕೇಶ್‌, ಶ್ರೀನಿವಾಸ್‌, ಶ್ರೀನಿಧಿ, ಪಿ.ಬಿ. ಲೋಕೇಶ್‌, ಭರತ್‌, ರೋಟ್ರಾಕ್ಟ್ ಕ್ಲಬ್‌ ಆಫ್‌ ವಿದ್ಯಾರಣ್ಯಪುರ ಸದಸ್ಯರು ಭಾಗವಹಿಸಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಆನೇಕಲ್‌: ಕೋವಿಡ್ 19 ಮಹಾಮಾರಿ ವೇಗವಾಗಿ ಹಬ್ಬುತ್ತಿರುವ ಹಿನ್ನಲೆಯಲ್ಲಿ ಘೋಷಿಸಿರುವ ಕರ್ಫ್ಯೂಗೆ ತಾಲೂಕು ಸಂಪೂರ್ಣ ಬಂದ್‌ ಆಗಿತ್ತು. ಯುಗಾದಿ ಹಿನ್ನಲೆಯಲ್ಲಿ...

  • ದೇವನಹಳ್ಳಿ: ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಜನಸಾಮಾನ್ಯರ ಅನುಕೂಲಕ್ಕಾಗಿ ಸಪ್ತಪದಿ ಸಾಮೂಹಿಕ ಸರಳ ವಿವಾಹವೆಂಬ...

  • ನೆಲಮಂಗಲ: ಕೋವಿಡ್ 19 ವೈರಸ್‌ ಮನುಕುಲವನ್ನು ಆತಂಕಕ್ಕೆ ತಳ್ಳಿದೆ. ಹೀಗಾಗಿ ಎಲ್ಲರೂ ಜಾಗೃತಿ ವಹಿಸಿ, ಸುತ್ತ ಮುತ್ತಲ ಪ್ರದೇಶವನ್ನು ಸ್ವಚ್ಛವಾಗಿರಿಸಿ ಕೊಳ್ಳಬೇಕು...

  • ದೊಡ್ಡಬಳ್ಳಾಪುರ: ಬೇಸಿಗೆ ಆರಂಭವಾಗಿದ್ದು, ಜತೆಗೆ ನೀರಿನ ಸಮಸ್ಯೆಯೂ ಹೆಚ್ಚುತ್ತಿದೆ. ಸರಬರಾಜಾಗುತ್ತಿರುವ ನೀರಿನ ಸ್ಥಿತಿಗತಿ ಅರಿಯಬೇಕಿದ್ದು, ನೀರಿನ ಮಿತ...

  • ದೇವನಹಳ್ಳಿ: ವಿದೇಶಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ 183 ವಿದೇಶಿ ಪ್ರಯಾಣಿಕರನ್ನು ಕೋವಿಡ್ 19 ಶಂಕೆ ಹಿನ್ನೆಲೆ ತಪಾಸಣೆ ನಡೆಸಲಾಗಿದೆ...

ಹೊಸ ಸೇರ್ಪಡೆ