ಹಳ್ಳಿ ಫೈಟ್‌: ಸೋಲು ಗೆಲುವಿನ ಲೆಕ್ಕಾಚಾರ

ಗ್ರಾಪಂ ಚುನಾವಣೆ ಮತ ಎಣಿಕೆಯಲ್ಲಿ ಯಾವ ಅಭ್ಯರ್ಥಿ ಗೆಲ್ಲುತ್ತಾರೆ? , ಗ್ರಾಮಗಳಲ್ಲಿ ಶುರುವಾದ ಲೆಕ್ಕಾಚಾರ

Team Udayavani, Dec 29, 2020, 2:29 PM IST

ಹಳ್ಳಿ ಫೈಟ್‌: ಸೋಲು ಗೆಲುವಿನ ಲೆಕ್ಕಾಚಾರ

ದೇವನಹಳ್ಳಿ: ರಾಜಕೀಯ ಪಕ್ಷಗಳಿಗೆಪ್ರತಿಷ್ಠೆಯಾಗಿದ್ದ ಹಾಗೂ ನಾಯರ ಅಸ್ತಿತ್ವ ಗಟ್ಟಿಮಾಡಿಕೊಳ್ಳಲು ನೆರವಾಗಿದ್ದ ಗ್ರಾಪಂ  ಚುನಾವಣೆಗೆ ತೆರೆ ಬಿದ್ದಿದ್ದು, ಜಿಲ್ಲೆಯಲ್ಲಿ ಯಾವ ಗ್ರಾಪಂನಲ್ಲಿ ಯಾರ ಬೆಂಬಲಿತರು ಮೇಲುಗೈ ಸಾಧಿಸುತ್ತಾರೆ ಎಂಬ ಲೆಕ್ಕಾಚಾರಗಳು ಹಳ್ಳಿ ಮಟ್ಟದಲ್ಲಿ ನಡೆಯುತ್ತಿದೆ.

ಗ್ರಾಮದ ಹೋಟೇಲ್‌ಗ‌ಳು, ಅಂಗಡಿ ಮುಗ್ಗಟ್ಟುಗಳ ಹತ್ತಿರ ಚುನಾವಣೆ ಮುಗಿದಮರುದಿನವೇ ನಮ್ಮ ಮತಗಟ್ಟೆಯಲ್ಲಿಇಷ್ಟು-ಅಷ್ಟು ಶೇಕಡವಾರು ಮತದಾನವಾಗಿದೆ. ಯಾರು ಯಾರಿಗೆ ಮತ ಹಾಕಿದ್ದಾರೆ ಎಂಬುವುದುಕುತೂಹಲ ಮೂಡಿಸಿದೆ. ನಮ್ಮ ಬೆಂಬಲಿತ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂಬುವ ಲೆಕ್ಕಾಚಾರಗಳು ಶುರುವಾಗಿದೆ.

ಗ್ರಾಪಂ ವ್ಯಾಪ್ತಿಯಲ್ಲಿ ನಮ್ಮ ಹಳ್ಳಿಯಲ್ಲಿ ನಮ್ಮಬೆಂಬಲಿತ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಯಾವಮತಗಟ್ಟೆಯಲ್ಲಿ ಎಷ್ಟು ಮತಗಳ ಅಂತರದಿಂದಗೆಲುವು ಸಾಧಿಸಲಿದ್ದಾರೆ ಎಂಬುವಲೆಕ್ಕಾಚಾರವನ್ನು ಬೆಂಬಲಿತ ಅಭ್ಯರ್ಥಿಗಳಮುಖಂಡರುಗಳು ನಡೆಸುತ್ತಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ಅಭ್ಯರ್ಥಿಗಳ ಗೆಲುವು-ಸೋಲಿನ ಲೆಕ್ಕಾಚಾರ ಮತ್ತು ಚರ್ಚೆ ಬಿಸಿಬಿಸಿಯಾಗಿ ನಡೆಯುತ್ತಿದೆ.

ಚುನಾವಣೆ ಆಯಾ ಕ್ಷೇತ್ರದ ಸ್ಥಳೀಯ ನಾಯಕರು ತಮ್ಮ ರಾಜಕೀಯ ನೆಲೆಯನ್ನುಗಟ್ಟಿಗೊಳ್ಳಲು ಮಹತ್ವದ ಚುನಾವಣೆ ಇದಾಗಿತ್ತು.ಚಳಿಗಾಳಿ ಎನ್ನದೆ, ಕಳೆದ ಒಂದು ವಾರದಿಂದ ಹಳ್ಳಿಹಳ್ಳಿ ಸುತ್ತಿ, ಪ್ರಚಾರ ಮಾಡಿ, ಚುನಾವಣೆಮುಗಿದು ಹೋಗಿದೆ. ಕ್ಷೇತ್ರದೊಳಗೆ ಅಸ್ತಿತ್ವದಉಳಿವಿನೊಂದಿಗೆ ವರ್ಚಸ್ಸುಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ, ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಅವಿರತವಾಗಿ ಶ್ರಮಿಸಿದ್ದಾರೆ. ಹಳ್ಳಿ ಫೈಟ್‌ ಮೇಲ್ನೋಟಕ್ಕೆ ಪಕ್ಷರಹಿತವಾಗಿದ್ದರೂ, ಅಖಾಡದಲ್ಲಿದ್ದ ಎಲ್ಲಾ ಅಭ್ಯರ್ಥಿಗಳು ಒಂದೊಂದು ಪಕ್ಷದ ಬೆಂಬಲಿತ ಅಭ್ಯರ್ಥಿಗಳೇ ಆಗಿದ್ದವರು. ಹೀಗಾಗಿ ಚುನಾವಣೆಯಲ್ಲಿ ಆ ವ್ಯಾಪ್ತಿಯ ಸ್ಥಳೀಯ ರಾಜಕೀಯ ನಾಯಕರು ತಮ್ಮ ವರ್ಚಸ್ಸುವೃದ್ಧಿಸಿಕೊಳ್ಳಲು ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ದುಡಿದಿದ್ದಾರೆ. ಅದು ಎಷ್ಟರ ಮಟ್ಟಿಗೆ ಯಶಸ್ಸು ಕಂಡಿದೆ ಎಂಬುವುದು ಫ‌ಲಿತಾಂಶದಲ್ಲಿ ಗೊತ್ತಾಗಲಿದೆ.

ಬಿಜೆಪಿ ಖಾತೆ ತೆರೆದು ಕಮಲ ಅರಳಿಸಲು ಶತಪ್ರಯತ್ನದಲ್ಲಿದ್ದಾರೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಸ್ವಪ್ರತಿಷ್ಠೆಯ ಕಣವಾಗಿರುವುದು ಕಂಡುಬರುತ್ತಿದೆ. ಕೆಲವು ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆಯಾಗಿರುವುದರಿಂದ ಗ್ರಾಪಂ ಯಾರ ಹಿಡಿತಕ್ಕೆ ಹೋಗಲಿದೆ ಎಂಬುವುದು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.

ಇಂದು ಮಧ್ಯರಾತ್ರಿಯಿಂದ ಜಿಲ್ಲೆಯಲ್ಲಿ ಮದ್ಯ ನಿಷೇಧ :

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರಮತ್ತು ದೇವನಹಳ್ಳಿ ತಾಲೂಕುಗಳ ಗ್ರಾಪಂಚುನಾವಣೆಯ ಮತ ಎಣಿಕೆ ಕಾರ್ಯ 2020ರಡಿ.30ರಂದು ನಡೆಯಲಿರುವ ಹಿನ್ನೆಲೆ ಮಂಗಳವಾರ ಮಧ್ಯರಾತ್ರಿಯಿಂದ ಬುಧವಾರ ಮಧ್ಯರಾತ್ರಿಯವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾದ್ಯಂತಎಲ್ಲಾ ರೀತಿಯ ಮದ್ಯದ ಅಂಗಡಿಗಳನ್ನು ಮುಚ್ಚಲು ಬೆಂ. ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಪಿ.ಎನ್‌.ರವೀಂದ್ರ ಆದೇಶಿಸಿದ್ದಾರೆ.

ಶಾಂತ ಮತ್ತು ಮುಕ್ತವಾಗಿ ಮತ ಎಣಿಕೆ ಕಾರ್ಯ ನಡೆಯಲು ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಸಲುವಾಗಿ ಕರ್ನಾಟಕ ಅಬಕಾರಿಸನ್ನದುಗಳು (ಸಾಮಾನ್ಯ ಷರತ್ತುಗಳು) ನಿಯಮಗಳು, 1967ರ ನಿಯಮ-10(ಬಿ)ರನ್ವಯ ಮತ್ತು ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತುಪಂಚಾಯತ್‌ ರಾಜ್‌(ತಿದ್ದುಪಡಿ) ಅಧಿನಿಯಮ 2020ರ ಪ್ರಕರಣ 3078ಎಸಿ(ಸಿ) ರಂತೆ ಬೆಂ.ಗ್ರಾಮಾಂತರ ಜಿಲ್ಲೆಯಾದ್ಯಂತ ಚಿಲ್ಲರೆ ಮದ್ಯದಅಂಗಡಿಗಳು, ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳು,ಸಗಟು ಮದ್ಯದ ಅಂಗಡಿಗಳು, ಕ್ಲಬ್‌ಗಳು, ಬೋರ್ಡಿಂಗ್‌ ಮತ್ತು ಲಾಡ್ಜಿಂಗ್‌ಗಳು, ಪಬ್‌ಗಳು, ವೈನ್‌ ಟ್ಯಾವರಿನ್‌ಗಳು, ವೈನ್‌ ಬೋಟಿಕ್‌ಗಳು ಇತ್ಯಾದಿಗಳನ್ನು ಮುಚ್ಚಲು ಆದೇಶಿಸಿದ್ದಾರೆ.

-ಎಸ್‌.ಮಹೇಶ್‌

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.