Udayavni Special

ವಿಜಯಪುರದಲ್ಲಿಲ್ಲ ಲಾಕ್‌ಡೌನ್‌; ಜನ ಜಾತ್ರೆ


Team Udayavani, May 18, 2021, 11:15 AM IST

ವಿಜಯಪುರದಲ್ಲಿಲ್ಲ ಲಾಕ್‌ಡೌನ್‌; ಜನ ಜಾತ್ರೆ

ವಿಜಯಪುರ: ಲಾಕ್‌ ಡೌನ್‌ ಎಂದರೆ ಏನು  ಎಂಬ ಅರಿವು ಸರ್ಕಾರಕ್ಕೂ ಇಲ್ಲ. ಜನರಿಗೂ ಇಲ್ಲ. ಹೊರ ಬಂದವರಿಗೆ ಲಾಠಿ ಏಟು ಕೊಟ್ಟು ಮನೆಗೆ ಕಳಿಸುವುದು ಪೊಲೀಸರ ಅರ್ಥದಲ್ಲಿಲಾಕ್‌ ಡೌನ್‌ ಪಾಲಿಸುವ ನಿಯಮವಾಗಿತ್ತು. ಈಗ ಅವರು ಬೇಸತ್ತುಕೈಕಟ್ಟಿಕುಳಿತಿದ್ದಾರೆ.

ಒಳಗೊಳಗೇ ಮೇ 10 ರಿಂದ ಸಂಪೂರ್ಣ ಲಾಕ್‌ ಡೌನ್‌ ಹೆಸರಿನಲ್ಲಿ ಅಗತ್ಯ ವಸ್ತುಗಳ ಅಂದರೆ ದಿನಸಿ, ತರಕಾರಿ, ಹಾಲು, ಮೆಡಿಕಲ್‌ ಸ್ಟೋರ್‌ ಮಾತ್ರ ಬೆಳಗ್ಗೆ 6 ರಿಂದ 10 ರವರೆಗೂ ತೆರೆಯುವ ಅನುಮತಿ ಇದೆ. ಆದರೆ ದೇವನ ಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಮಾತ್ರ ಹೊಸ ನಿಯಮ ಜಾರಿಯಾದಂತಿದೆ.

ಇಲ್ಲಿ ಬೆಳಗ್ಗೆ 6 ರಿಂದ 10 ಗಂಟೆವರೆಗೂ ಜ್ಯುವೆಲ್ಲರಿ ಶಾಪ್‌, ಮೊಬೈಲ್‌ ಅಂಗಡಿ, ಬೇಕರಿ, ಕಾಂಡಿಮೆಂಟ್ಸ್‌, ಬಟ್ಟೆ ಅಂಗಡಿ, ಚಪ್ಪಲಿ ಅಂಗಡಿ, ಫ್ಯಾನ್ಸಿ ಸ್ಟೋರ್‌ ಸಹ ತೆರೆದಿರುತ್ತೆ. ಮೊದಮೊದಲು ಹತ್ತಾರು ಅಂಗಡಿಗಳು ಕದ್ದು ಮುಚ್ಚಿ ತೆಗೆಯುತ್ತಿದ್ದು, ಈಗ ಒಬ್ಬರನ್ನು ನೋಡಿ ಮತ್ತೂಬ್ಬರು ಬೆಳಗಿನ ಸಮಯ ಅಂಗಡಿಗಳ ಅರ್ಧ ಶೆಟರ್‌ ತೆರೆದು ವ್ಯಾಪಾರ ಮಾಡಲು ಆರಂಭಿಸಿರೆ. ಜ್ಯುವೆಲ್ಲರಿ ಶಾಪ್‌ಗಳಂತೂ ಒಳಗೊಳಗೇ ಗ್ರಾಹಕರನ್ನು ಸೇರಿಸಿ ವ್ಯವಹರಿಸುತ್ತಿದ್ದಾರೆ.

ಇಂತಹ ಬಂಗಾರ ಸಿಂಗಾರ ತೊಟ್ಟು ಯಾವ ಫ್ಯಾಶನ್‌ ಶೋ ನಲ್ಲಿ ಭಾಗವಹಿಸಬೇಕು? ಆದರೆ, ಇಂತಹ ಅಂಗಡಿಗಳು ತೆರೆಯಲು ಅನುಮತಿ ಕೊಟ್ಟವರು ಯಾರು. ಇಲ್ಲಿ ಅಗತ್ಯ ವಸ್ತು ಹೊರತು ಪಡಿಸಿದ ಅಂಗಡಿಗಳು ತೆರೆದಿದ್ದರೂ, ಪುರಸಭಾಅಧಿಕಾರಿಗಳಾಗಲಿ,ಪೊಲೀಸ್‌ ಸಿಬ್ಬಂದಿ ಅಥವಾ ಅಧಿಕಾರಿಗಳಾಗಲಿ ಯಾವುದೇ ಆಕ್ಷೇಪಣೆ ವ್ಯಕ್ತ ಪಡಿಸುತ್ತಿಲ್ಲ. ನೆಪ ಹೇಳಿ ಅಂಗಡಿ ತೆಗೆಯೋ ಜನ. ತಮಗೇ ಕೋವಿಡ್ ಬಂದಾಗ ಸರ್ಕಾರದ ಸೌಲಭ್ಯ ಸಿಗಲಿಲ್ಲ, ಬೆಡ್‌ ಸಿಗ್ತಿಲ್ಲ, ವಾಕ್ಸಿನೇಷನ್‌ ಸ್ಟಾಕ್‌ ಇಲ್ಲ, ಚಿತಾಗಾರ ಇಲ್ಲ ಅಂತ ಸಾಲು ಸಾಲು ದೂರು ಮಾತ್ರ ಸಲ್ಲಿಸುತ್ತಾರೆಂದು ಸ್ಥಳೀಯರೇ ಆರೋಪಿಸುತ್ತಿದ್ದಾರೆ.

ಗೌರವ ಕೊಡಿ: ಪೊಲೀಸರು, ಪುರಸಭೆ ಯವರು ಮಾಸ್ಕ್ ಇಲ್ಲದವರಿಗೆ ದಂಡ ಹಾಕಿ, ಅನಗತ್ಯ ವಾಹನ ಸವಾರರನ್ನು ನಿಲ್ಲಿಸಿ ವಾಹನ ಜಪ್ತಿ ಮಾಡಿದರೆ ಸಾಲದು. ಬೆಳಗ್ಗೆ ನಡೆಯುವ ಜನ ಜಾತ್ರೆಯ ಬಗ್ಗೆಯೂ ನಿಗಾ ವಹಿಸಬೇಕು. ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ‌ ಕೋವಿಡ್‌ ಸಂಖ್ಯೆ ಹೆಚ್ಚುತ್ತಿದೆ ಎಂದರೆ ನಿಯಮ ಉಲ್ಲಂಘನೆಯೇ ಕಾರಣ. ಸಣ್ಣ ಪುಟ್ಟ ಗ್ರಾಮ, ಪಟ್ಟಣಗಳು ಎಂಬ ವಿನಾಯಿತಿಖಂಡಿತಾ ಬೇಡ. ವೈದ್ಯರು, ದಾದಿಯರು ಇತರೆ ಕೋವಿಡ್ ವಾರಿಯರ್ಸ್‌ಗೆ ಗೌರವ ಕೊಡುವುದಾದರೆ, ಅವರಿಗೆ ವಿಶ್ರಾಂತಿನೀಡುವ ನಿಟ್ಟಿನಲ್ಲಿ ಕೊರೊನಾ ನಿಯಮ ಪಾಲಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬೆಳಗ್ಗೆಯೇ ಅಂಗಡಿಗಳಿಗೆ ಮುತ್ತಿಕೊಳ್ಳುವ ಜನ :

ಮೇ10 ರಿಂದ ನರೇಗಾ ಕಾಮಗಾರಿಗೂ ಸರ್ಕಾರಕಡಿವಾಣ ಹಾಕಿದೆ. ಅಂತಹಕೂಲಿ ಕೆಲಸ ಮಾಡುವವರೇ ಮನೆಯಲ್ಲಿ ಸುಮ್ಮನೆ ಇರೋವಾಗ ಮೊಬೈಲ್ ಚಪ್ಪಲಿ, ಬೆಳ್ಳಿ, ಬಂಗಾರ ಇಲ್ಲದೆ ಜೀವನ ನಡೆಯೋದೇ ಇಲ್ಲ ಅನ್ನುವ ರೀತಿ ಚಪ್ಪಲಿ, ಮೊಬೈಲ್‌, ಚಿನ್ನಕೊಳ್ಳಲು ಬೆಳ್ಳಂ ಬೆಳಗ್ಗೆ ಅಂಗಡಿಗಳಲ್ಲಿ ಜನಜಂಗುಳಿ ಸೇರುತ್ತಿದ್ದಾರೆ. ಹಾಲಿನ ಅಂಗಡಿಗಳನ್ನು ಬೆಳಗ್ಗೆ10 ನಂತರಮುಚ್ಚಿಸುತ್ತಿರುವ ಪೊಲೀಸರ ಕಣ್ಣಿಗೆ ಇತರೆ ಅಂಗಡಿಗಳುಕಾಣುತ್ತಿಲ್ಲವೇ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.

ಕೊರೊನಾಗಿಂತ ಭೀಕರ ಬ್ಲಾಕ್‌ ಫ‌ಂಗಸ್‌ಗೂ ಹೆದರಲ್ಲ. ಬಾರ್‌ಗಳಲ್ಲೂ ನಿಯಮ ಉಲ್ಲಂಘನೆ. ಚಿಕನ್‌ ಅಂಗಡಿಗಳಲ್ಲೂ ಗ್ರಾಹಕರು ಮುತ್ತಿಕೊಂಡಿರುತ್ತಾರೆ. ಬೆಳಗಿನ3 ಗಂಟೆಗಳ ಅವಧಿ ಮಾತ್ರ ಕೋವಿಡ್ ನಿಯಮ ಉಲ್ಲಂಘನೆಯಾಗಿ ಉಳಿದ ಸಮಯ ಮನೆಯಲ್ಲಿಕುಳಿತು ಬಿಟ್ಟರೆ ಲಾಕ್‌ ಡೌನ್‌ಯಶಸ್ವಿಯಾಗುತ್ತಾ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.

ಜನ ಮಾತು ಕೇಳದೆ ಹೋದರೆ ನಾವೇನು ಮಾಡುವುದು. ನಾವು ಕೋವಿಡ್  ಸೋಂಕುಕುರಿತು ಜಾಗೃತಿ ಮೂಡಿಸಿದ್ದೇವೆ. ಮತ್ತೇನೂ ಮಾಡಲು ಸಾಧ್ಯವಿಲ್ಲ. -ಎ.ಬಿ.ಪ್ರದೀಪ್‌ಕುಮಾರ್‌, ಪುರಸಭಾ ಮುಖ್ಯಾಧಿಕಾರಿ

 

– ಅಕ್ಷಯ್‌ ವಿ.ವಿಜಯಪುರ

ಟಾಪ್ ನ್ಯೂಸ್

ಅಮೆರಿಕನ್‌ ನಕಲಿ ಡಾಲರ್‌ ದಂಧೆ-ಇಬ್ಬರು ಕ್ಯಾಮರೂನ್‌ ದೇಶದ ಪ್ರಜೆಗಳ ಬಂಧನ

ಅಮೆರಿಕನ್‌ ನಕಲಿ ಡಾಲರ್‌ ದಂಧೆ-ಇಬ್ಬರು ಕ್ಯಾಮರೂನ್‌ ದೇಶದ ಪ್ರಜೆಗಳ ಬಂಧನ

ಆಂಧ್ರ ಹೈಕೋರ್ಟ್‌ನಿಂದಲೇ ಸಿಎಂ ಜಗನ್‌ ವಿರುದ್ಧ 11 ಪ್ರಕರಣ!

ಆಂಧ್ರ ಹೈಕೋರ್ಟ್‌ನಿಂದಲೇ ಸಿಎಂ ಜಗನ್‌ ವಿರುದ್ಧ 11 ಪ್ರಕರಣ!

j14srs4

ಅನ್‌ಲಾಕ್‌ಗೂ ಮೊದಲೇ ಮುಂಡಿಗೆಕೆರೆಗೆ ಬಂದವು ಬೆಳ್ಳಕ್ಕಿಗಳು!

ವಿಜಯಪುರ ಮರ್ಯಾದಾ ಹತ್ಯೆ: ನಾಲ್ವರು ಆರೋಪಿಗಳ ಬಂಧನ

ವಿಜಯಪುರ ಮರ್ಯಾದಾ ಹತ್ಯೆ: ನಾಲ್ವರು ಆರೋಪಿಗಳ ಬಂಧನ

23msk04 (1)

ಬೀಜ ಮಾತ್ರವಲ್ಲ ಗೊಬ್ಬರವೂ ನಕಲಿ!

Delimitation, peaceful polls important milestones in restoring statehood: Amit Shah after all-party meet on Jammu and Kashmir

ಜಮ್ಮು ಮತ್ತು ಕಾಶ್ಮೀರದ ಸರ್ವತೋಮುಖ ಅಭಿವೃದ್ಧಿಗೆ ಕೇಂದ್ರ ಬದ್ಧ : ಅಮಿತ್ ಶಾ

Committed to restoring statehood: PM Narendra Modi tells J&K leaders after all-party meet

ಜಮ್ಮು ಕಾ‍ಶ್ಮೀರಕ್ಕೆ ಶೀಘ್ರ ರಾಜ್ಯ ಸ್ಥಾನಮಾನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Corona control

ಮುಂಜಾಗೃತಿಯಿಂದ ಕೊರೊನಾ ನಿಯಂತ್ರಣ

bangalore news

ಬೆಲೆ ಏರಿಕೆಗೆ ಜೆಡಿಎಸ್‌ ಖಂಡನೆ

covid news

ಪ್ರಮುಖ ರಸ್ತೆಗಳಲ್ಲಿ  ವಾಹನ ದಟ್ಟಣೆ ಹೆಚ್ಚಳ

Distribution of poultry

ಪೌರಕಾರ್ಮಿಕರಿಗೆ ಮಾಂಸದ ಕೋಳಿ ವಿತರಣೆ

Marriage registration authority for PDOs

ಪಿಡಿಒಗಳಿಗೆ ವಿವಾಹ ನೋಂದಣಿ ಅಧಿಕಾರ

MUST WATCH

udayavani youtube

ಕೊಮೆ : ಮೀನುಗಾರರಿಂದ ಸಮುದ್ರ ಪೂಜೆ

udayavani youtube

ನಾನು ಸೋತು ಹೋಗಿದ್ದೇನೆ ಸ್ವಾಮಿ; ಜವಳಿ ವ್ಯಾಪಾರಿಯ ನೋವಿನ ಮಾತು

udayavani youtube

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

udayavani youtube

ನೇಗಿಲು ಹಿಡಿದು ಉಳುಮೆ ಮಾಡಿದ ಶಾಸಕ ರೇಣುಕಾಚಾರ್ಯ

udayavani youtube

ಖಾಸಗಿ TECHIE, ದೇಸಿ ದನ ಸಾಕಣೆಯಲ್ಲಿ ಯಶಸ್ಸು ಕಂಡಿದ್ದು ಹೇಗೆ ?

ಹೊಸ ಸೇರ್ಪಡೆ

ಅಮೆರಿಕನ್‌ ನಕಲಿ ಡಾಲರ್‌ ದಂಧೆ-ಇಬ್ಬರು ಕ್ಯಾಮರೂನ್‌ ದೇಶದ ಪ್ರಜೆಗಳ ಬಂಧನ

ಅಮೆರಿಕನ್‌ ನಕಲಿ ಡಾಲರ್‌ ದಂಧೆ-ಇಬ್ಬರು ಕ್ಯಾಮರೂನ್‌ ದೇಶದ ಪ್ರಜೆಗಳ ಬಂಧನ

24-23

ಆಧುನಿಕ ತಂತ್ರಜ್ಞಾನ ಸದ್ಬಳಕೆಯಾಗಲಿ

24-22

ದೇಶಕ್ಕೆ ಶ್ಯಾಮಪ್ರಸಾದ್‌ ಮುಖರ್ಜಿ ಕೊಡುಗೆ ಅಪಾರ

24-22

ರೈತರಿಗೆ ಬೆಳೆ ವಿಮೆ ಕೊಡಿಸಲು ಪ್ರಾಮಾಣಿಕ ಯತ್ನ : ಶ್ರೀರಾಮುಲು

24-21

ಅಗಲಿದ ಗಣ್ಯರಿಗೆ ಕಸಾಪ ನುಡಿ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.