ಕೆರೆಗಳ ನಿರ್ವಹಣೆ; ಜಿಲ್ಲಾಡಳಿತ ನಿರ್ಲಕ್ಷ್ಯ!

ವಾಡಿಕೆಗಿಂತ ಶೇ.18ರಷ್ಟು ಹೆಚ್ಚು ಮಳೆಯಾದರೂ ಕೆರೆಗಳಲ್ಲಿ ನೀರಿಲ್ಲ

Team Udayavani, Oct 14, 2020, 1:54 PM IST

ಕೆರೆಗಳ ನಿರ್ವಹಣೆ; ಜಿಲ್ಲಾಡಳಿತ ನಿರ್ಲಕ್ಷ್ಯ!

ದೇವನಹಳ್ಳಿ ತಾಲೂಕಿನಕೊಯಿರ ಗ್ರಾಮದ ಕೊಯಿರ ಕೆರೆ.

ದೇವನಹಳ್ಳಿ: ಬಯಲು ಸೀಮೆಯಾಗಿರುವ ಜಿಲ್ಲೆಗೆ ಯಾವುದೇ ನದಿ ಮೂಲಗಳಿಲ್ಲ. ಆದರೆ ಮಳೆ ಆಶ್ರಿತ ಪ್ರದೇಶದಲ್ಲಿ ಒತ್ತುವರಿಯಿಂದ ಕೆರೆಗಳು ಅವನತಿಯತ್ತ ಸಾಗುತ್ತಿವೆ.

ಭೂಮಾಪನ ಇಲಾಖೆ ಸರ್ವೆ ಪ್ರಕಾರ ಜಿಪಂ ಹಾಗೂ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳು ಸೇರಿ ಜಿಲ್ಲೆಯಲ್ಲಿ710ಕೆರೆಗಳಿದ್ದು, ಅದರಲ್ಲಿ 643 ಕೆರೆಗಳು ಒತ್ತುವರಿಯಾಗಿವೆ. 6,252 ಎಕರೆ 19 ಗುಂಟೆ ಕೆರೆಗಳ ವಿಸ್ತೀರ್ಣ ಒತ್ತುವರಿಯಾಗಿದೆ. ಅದರಲ್ಲಿ 5,189 ಎಕರೆಯಷ್ಟು ಖಾಸಗಿ ಒತ್ತುವರಿ ಹಾಗೂ 1,063 ಎಕರೆಯಷ್ಟು ಸರ್ಕಾರಿ ಒತ್ತುವರಿಯಾಗಿದೆ. ಮಳೆ ಹೆಚ್ಚಾದರೂ ಕೆರೆಗಳಲ್ಲಿ ನೀರಿಲ್ಲ: ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿದು 1,200 ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಉತ್ತಮ ಮಳೆಯಾದರೂ ಸಹ ಕೆರೆಗಳಿಗೆ ನೀರು ಭರ್ತಿಯಾಗುತ್ತಿಲ್ಲಜನವರಿಯಿಂದ ಅಕ್ಟೋಬರ್‌ 9 ವರೆಗೆ ವಾಡಿಕೆ ಮಳೆಯು 688 ಮಿ.ಮಿ ಗುರಿಗೆ 808ಮಿಮಿ ಮಳೆಯಾಗಿದೆ. ಶೇಕಡಾ 18ರಷ್ಟು ಮಳೆ ಪ್ರಮಾಣ ಹೆಚ್ಚಾಗಿದೆ. ಆದರೂ ಸಹ ಕೆರೆಗಳಲ್ಲಿ ಮತ್ತು ಕುಂಟೆಗಳಲ್ಲಿ ನೀರು ಸಂಗ್ರಹವಾಗುತ್ತಿಲ್ಲ.

ಜಿಲ್ಲೆಯಲ್ಲಿ 675 ಎಕರೆ 32 ಗುಂಟೆ ವಿಸ್ತೀರ್ಣದಲ್ಲಿ ರಾಜಕಾಲುವೆ ಇದ್ದು, 59 ಎಕರೆ 15 ಗುಂಟೆ ವರೆಗೆ ಒತ್ತುವರಿಯಾಗಿದೆ. ಆಗಿನ ಜಿಲ್ಲಾಧಿಕಾರಿ ಸಿ.ಎಸ್‌.ಕರೀಗೌಡ ಅವರು ಜಿಲ್ಲೆಯ 30 ಕೆರೆಗಳನ್ನು ಗುರುತಿಸಿ ಗ್ರಾಮಸ್ಥರ ಹಾಗೂ ದಾನಿಗಳ ಸಹಕಾರದಿಂದಕೆರೆಗಳಲ್ಲಿ ಹೂಳು ತಗೆಯುವ ಕಾರ್ಯ ಕೈಗೊಂಡಿದ್ದರು. ಕೆರೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಲು ಸಹಕಾರಿಯಾಗಿತ್ತು.

ನೀರು ಬಳಕೆದಾರರ ಸಂಘ: ಕೆರೆಗಳ ಅಭಿವೃದ್ಧಿಗೆ 2012-13ರಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಗ್ರಾಮಗಳಲ್ಲಿ ನೀರು ಬಳಕೆದಾರರ ಸಂಘವನ್ನು ಅಸ್ಥಿತ್ವಕ್ಕೆ ತಂದು ಸಹಕಾರಿ ಇಲಾಖೆಯಿಂದ ನೋಂದಣಿ ಮಾಡಿಸಲಾಗಿತ್ತು. ಕೆರೆಗಳ ನೀರಿಗೆ ಸಂಬಂಧಿಸಿದ ಸಂಘ ರಚಿಸಿ, ಪದಾಧಿಕಾರಿಗಳನ್ನು ನೇಮಕ ಮಾಡಿ ತರಬೇತಿ ನೀಡಲಾಗಿತ್ತು. ಆದರೆ ಸರ್ಕಾರ ಬದಲಾದ ನಂತರ ನೀರು ಬಳಕೆದಾರರ ಸಂಘಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದರಿಂದ ಯಾವುದೇ ಕಾರ್ಯಗಳು ನಡೆಯುತ್ತಿಲ್ಲ ಎಂದು ಕೊಯಿರ ನೀರು ಬಳಕೆದಾರರ ಸಂಘದ ಅಧ್ಯಕ್ಷರಾಗಿದ್ದ ಕೊಯಿರ ಚಿಕ್ಕೇಗೌಡ ಹೇಳುತ್ತಾರೆ.

ಕೇವಲ ಜಿಲ್ಲೆಯಲ್ಲಿ 7 ರಿಂದ 8 ಕೆರೆಗಳು ಮಾತ್ರ ತುಂಬಿರುತ್ತವೆ. ಕೆಲವು ಕೆರೆಗಳು ಅರ್ಧ ಮುಕ್ಕಾಲು ಮತ್ತೆ ಕೆಲವು ಕೆರೆಗಳು ಖಾಲಿಯಾಗಿ ಗಿಡಗಂಟಿಗಳಿಂದ ಕೂಡಿರುತ್ತವೆ. ಕೇವಲ ಸರ್ವೆ ಮಾಡಿದರೆ ಸಾಲದು, ಬದಲಾಗಿ ಕೆರೆ ಜಾಗವನ್ನು ಉಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಈಗಾಗಲೇ ಭೂಮಾಪನ ಇಲಾಖೆ ವತಿಯಿಂದ ಒತ್ತುವರಿಯಾಗಿರುವ ಕೆರೆಗಳ ಸರ್ವೆ ಕಾರ್ಯ ಕೈಗೊಂಡು ಜಿಪಂ ಮತ್ತು ವಿವಿಧ ಇಲಾಖೆಯ ಕೆರೆಗಳ ಸಂಬಂಧಿಸಿದ ಅಧಿಕಾರಿಗಳು  ಕೆರೆ ಸುತ್ತಲೂಟ್ರಂಚ್‌ಹೊಡೆಸಿದರೂ, ಸುತ್ತಮುತ್ತಲಿನ ಜಮೀನ ಮಾಲೀಕರು ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಎಷ್ಟೇ ಮಳೆ ಬಂದರೂ ಸಹಕೆರೆಗಳು ಖಾಲಿಯಾಗಿಯೇ ಇರುತ್ತಿವೆ.

ಒತ್ತುವರಿ ತೆರವುಗೊಳಿಸಲಿ: ರಾಜಕಾಲುವೆಗಳು ಸಹ ಒತ್ತುವರಿ ಆಗಿರುವುದರಿಂದ ಕೆರೆಗಳಿಗೆ ಮಳೆ ನೀರು ಸರಾಗವಾಗಿ ಹರಿಯದೆ ಪೋಲಾಗುತ್ತಿದೆ. ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಿದರೆ, ಕೆರೆಗೆ ಸಮೃದ್ಧವಾಗಿ ನೀರು ಸಂಗ್ರಹವಾಗುತ್ತದೆ. ಜಿಲ್ಲೆಯಲ್ಲಿ ರಾಜಕಾಲೂವೆ ಮತ್ತು ಕೆರೆಗಳ ಒತ್ತುವರಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಜಿಲ್ಲಾಡಳಿತ ತಹಶೀಲ್ದಾರ್‌ಗಳ ಮೂಲಕ ಕೆರೆಗಳ ಒತ್ತುವರಿ ತೆರವುಗೊಳಿಸುವ ಕಾರ್ಯಕ್ಕೆ ಮುಂದಾ ಗಬೇಕಿದೆ. ಹಸಿರು ನ್ಯಾಯಾಧಿಕರಣದ ಆದೇಶಕ್ಕೆ ಅನುಗುಣವಾಗಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಜಾಗದ ಕೊರತೆ ಎದ್ದುಕಾಣುತ್ತಿದೆ. ಇರುವ ಜಾಗಗಳನ್ನು ಗುರುತಿಸಿ ಕೆರೆ ಅಭಿವೃದ್ಧಿಗೊಳಿಸಲುಕ್ರಮಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಹೊಸಕೋಟೆ ತಾಲೂಕಿಗೆ  ಕೆ.ಸಿ.ವ್ಯಾಲಿ ನೀರು ಬಿಡುಗಡೆ : ಕೇಂದ್ರ ಸರ್ಕಾರ ಅಟಲ್‌ ಭೂ ಜಲ ಯೋಜನೆಯಡಿ ರಾಜ್ಯದ45 ತಾಲೂಕುಗಳಲ್ಲಿಕೆರೆಗಳನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿದ್ದು, ಅದರಲ್ಲಿ ಬರಪೀಡಿತವಾಗಿರುವ ಜಿಲ್ಲೆಯು ಎಲ್ಲಾ ತಾಲೂಕುಗಳನ್ನು ಸೇರಿಸಬೇಕಾಗಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಬೆಂಗಳೂರು ನಗರದ ಹೆಬ್ಟಾಳ ಮತ್ತು ನಾಗವಾರಕೆರೆಗಳಿಂದ ಶುದ್ಧಕರಿಸಿ ದೇವನಹಳ್ಳಿ ತಾಲೂಕಿನ9 ಕೆರೆಗಳಿಗೆ ನೀರು ಹರಿಸುವ ಯೋಜನೆ ಪ್ರಗತಿಯಲ್ಲಿದ್ದು, ಈಗ3 ರಿಂದ4 ಕೆರೆಗಳಿಗೆ ನೀರು ಬಿಡಲಾಗಿದೆ. ಹೊಸಕೋಟೆ ತಾಲೂಕಿಗೆಕೆ.ಸಿ. ವ್ಯಾಲಿ ನೀರು ಬಿಡಲಾಗುತ್ತಿದೆ.

ಬ್ರಿಟಿಷರ ಕಾಲದಿಂದಲೂ ಕೆರೆ, ಗುಂಡುತೋಪು, ಗೋಮಾಳ, ಇತರೆ ಜಾಗಗಳು ಒತ್ತುವರಿಯಾಗುತ್ತಲೇ ಇವೆ. ರಾಜಕಾಲುವೆಗಳು ಒತ್ತುವರಿ ಆಗಿರುವುದರಿಂದ ಮಳೆ ನೀರುಕೆರೆಗಳಿಗೆ ಬಂದು ಸೇರಲು ಅಡೆತಡೆಯಾಗುತ್ತಿದೆ. ಅಧಿಕಾರಿಗಳು ಒತ್ತುವರಿ ತೆರವುಗೊಳಿಸದೇ ಕೇವಲ ಸರ್ವೆ ಕಾರ್ಯದಲ್ಲಿಯೇ ಮಗ್ನರಾಗಿದ್ದಾರೆ. ಆಂಜಿನಪ್ಪ, ಸಾಮಾಜಿಕ ಕಾರ್ಯಕರ್ತ

ಜಿಲ್ಲೆಯಕೆರೆಗಳ ನೀಲನಕ್ಷೆ ತಯಾರಿಸಿ ಮಾಹಿತಿ ಕ್ರೂಢೀಕರಿಸುತ್ತಿದ್ದೇವೆ. ಸರ್ವೆ ಇಲಾಖೆ ಒತ್ತುವರಿಯಾಗಿರುವ ಕೆರೆಗಳ ಸರ್ವೆ ಕಾರ್ಯ ಮಾಡಿ ಹದ್ದುಬಸ್ತು ಮಾಡಿಸಲಾಗುತ್ತಿದೆ. ಸಿಎಸ್‌ಆರ್‌ ಅನುದಾನದಲ್ಲಿ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಹಾಗೂ ಜಿಲ್ಲಾಡಳಿತದಿಂದ ಕೆರೆಗಳ ಒತ್ತುವರಿ ತೆರವಿಗೆ ಸೂಕ್ತಕ್ರಮಕೈಗೊಳ್ಳಲಾಗುವುದು. ಪಿ.ಎನ್‌.ರವೀಂದ್ರ, ಜಿಲ್ಲಾಧಿಕಾರಿ

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿಕೆರೆಗಳ ಅಭಿವೃದ್ಧಿಗೆ 120 ಕೋಟಿ ರೂ. ಗೂ ಹೆಚ್ಚು ಅನುದಾನವಿದ್ದು, 2014ರಲ್ಲಿ 24 ಕೋಟಿ ರೂ.ಕೆರೆಗಳಕ್ರಿಯಾ ಯೋಜನೆಯಾಗಿದ್ದು, ಇದುವರೆಗೂ ಸರ್ಕಾರದ ಮಟ್ಟದಲ್ಲಿ ಅನುಮೋದನೆಯಾಗಿಲ್ಲ. ಇದು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆಕಾರಣವಾಗಿದೆ. ಈ ಅನುದಾನ ಬಳಸಿಕೊಂಡುಕೆರೆಗಳ ಅಭಿವೃದ್ಧಿಗೆ ಮುಂದಾಗಬೇಕು. ಚಿಕ್ಕೇಗೌಡ ಗ್ರಾಮಸ್ಥ

 

ಎಸ್‌.ಮಹೇಶ್

ಟಾಪ್ ನ್ಯೂಸ್

ಇನ್ಸ್ಟಾ ಗ್ರಾಂ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಇನ್ಸ್ಟಾ ಗ್ರಾಂನಲ್ಲಿ ಮದುವೆ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಲಾರಿ ಮತ್ತು  ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಲಾರಿ ಮತ್ತು ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ರಸ್ತೆ ಕುಸಿದು ಸ್ಕೂಟರ್ ಸಮೇತ ಗುಂಡಿಗೆ ಬಿದ್ದ ವಿದ್ಯಾರ್ಥಿಗಳು : ಲುಧಿಯಾನದಲ್ಲಿ ಘಟನೆ

ರಸ್ತೆ ಕುಸಿದು ಸ್ಕೂಟರ್ ಸಮೇತ ಗುಂಡಿಗೆ ಬಿದ್ದ ವಿದ್ಯಾರ್ಥಿಗಳು : ಲುಧಿಯಾನದಲ್ಲಿ ನಡೆದ ಘಟನೆ

ಚಿಕ್ಕಮಗಳೂರು: ಪ್ರೀತಿಸಿದವನನ್ನು ಬಿಡಲೊಪ್ಪದ ಮಗಳನ್ನೇ ಹತ್ಯೆಗೈದ ತಂದೆ.!

ಚಿಕ್ಕಮಗಳೂರು: ಪ್ರೀತಿಸಿದವನನ್ನು ಬಿಡಲೊಪ್ಪದ ಮಗಳನ್ನೇ ಹತ್ಯೆಗೈದ ತಂದೆ.!

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500ಗ್ರಾಂ ಗಾಂಜಾ ವಶ, ಒಬ್ಬನ ಬಂಧನ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500 ಗ್ರಾಂ. ಗಾಂಜಾ ವಶ, ಓರ್ವನ ಬಂಧನ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೊಬೊಟಿಕ್‌ ಶಸ್ತ್ರ ಚಿಕಿತ್ಸೆ ಘಟಕಕ್ಕೆ ಡಾ. ದೇವಿ ಶೆಟ್ಟಿ ಚಾಲನೆ

ರೊಬೊಟಿಕ್‌ ಶಸ್ತ್ರ ಚಿಕಿತ್ಸೆ ಘಟಕ..!

ಗ್ರಾಮ ಸಮಸ್ಯೆ ಹೈ ಅಂಗಳಕ್ಕೆ

ಗ್ರಾಮ ಸಮಸ್ಯೆ ಹೈ ಅಂಗಳಕ್ಕೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಸರು ಬದಲು ಬೇಡ „ ಶ್ರೀ ರಮಣಾನಂದ ಸ್ವಾಮೀಜಿಗಳ ಹೇಳಿಕೆ

ಜಿಲ್ಲೆಯ  ಹೆಸರು ಬದಲಾವಣೆ ಮಾಡಿದರೆ ಹೆದ್ದಾರಿ ಬಂದ್‌

ಕಾರಹಳ್ಳಿ ಕೆರೆ ಅಭಿವೃದ್ಧಿಗೆ 48 ಲಕ್ಷ ರೂ.ಅನುಮೋದನೆ

ಕಾರಹಳ್ಳಿ ಕೆರೆ ಅಭಿವೃದ್ಧಿಗೆ 48 ಲಕ್ಷ ರೂ.ಅನುಮೋದನೆ

ಕುಣಿಯುತ್ತಾ ನಲಿಯುತ್ತಾ ಶಾಲೆಗೆ ಬಂದ ಚಿಣ್ಣರು

ಕುಣಿಯುತ್ತಾ ನಲಿಯುತ್ತಾ ಶಾಲೆಗೆ ಬಂದ ಚಿಣ್ಣರು

MUST WATCH

udayavani youtube

ಭತ್ತ ಬೇಸಾಯದಲ್ಲಿ ಯಂತ್ರೋಪಕರಣಗಳ ಬಳಕೆಯಿಂದ ಅಧಿಕ ಆದಾಯಕ್ಕೊಂದು ದಾರಿ

udayavani youtube

ರಾಜಸ್ಥಾನದ ಸಿಕ್ಸ್ ಸೆನ್ಸ್ ಫೋರ್ಟ್ ನಲ್ಲಿ ನೆರವೇರಲಿದೆಯಂತೆ ವಿಕ್ಕಿ – ಕತ್ರಿನಾ ಮದುವೆ

udayavani youtube

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಹೆಜ್ಜೆ ಹಾಕಿದ ಸಿಎಂ ಬೊಮ್ಮಾಯಿ

udayavani youtube

ಕಾಪು ಕಡಲ ಕಿನಾರೆಯಲ್ಲಿ ‘ಕನ್ನಡಕ್ಕಾಗಿ ನಾವು ಗೀತ ಗಾಯನ’ ಕಾರ್ಯಕ್ರಮ ಸಂಪನ್ನ

udayavani youtube

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೊಳಗಿದ ಬಾರಿಸು ಕನ್ನಡ ಡಿಂಡಿಮವ

ಹೊಸ ಸೇರ್ಪಡೆ

ಇನ್ಸ್ಟಾ ಗ್ರಾಂ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಇನ್ಸ್ಟಾ ಗ್ರಾಂನಲ್ಲಿ ಮದುವೆ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಪ್ರಬಲ ಜಾತಿಗಳಿಗೆ 2ಎ ಮೀಸಲಾತಿ ನೀಡದಿರಿ:ಕೆ.ಎಂ. ರಾಮಚಂದ್ರಪ್ಪ

ಪ್ರಬಲ ಜಾತಿಗಳಿಗೆ 2ಎ ಮೀಸಲಾತಿ ನೀಡದಿರಿ:ಕೆ.ಎಂ. ರಾಮಚಂದ್ರಪ್ಪ

ಲಾರಿ ಮತ್ತು  ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಲಾರಿ ಮತ್ತು ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.