ಮಾವು-ಹಲಸಿನ ಹಣ್ಣು ಆಸ್ವಾದಿಸಿದ ಗ್ರಾಹಕರು

Team Udayavani, May 19, 2019, 3:00 AM IST

ದೇವನಹಳ್ಳಿ: ಎಲ್ಲೆಲ್ಲೂ ಹಣ್ಣುಗಳ ರಾಜ…ಕಣ್ಮನ ಸೆಳೆದ ಮಲಗೋಬ, ಮಲ್ಲಿಕಾ, ಬಾದಾಮಿ, ರಸಪೂರಿ, ಅರ್ಕ, ಪುನಿತ. ಗ್ರಾಹಕರ ಮನಸೆಳೆದ ಹಲಸಿನ ಹಣ್ಣುಗಳ
ಆಸ್ವಾದ… ಖರೀದಿ ಬಲು ಜೋರು, ಹಳ್ಳಿಗರು ಫ‌ುಲ್‌ ಖುಷ್‌.

ನಗರದ ರಾಣಿ ಸರ್ಕಲ್‌ನ ನಂದಿ ಉಪಚಾರ ಮತ್ತು ನಂದಗೋಕುಲ ಹೋಟೆಲ್‌ ಬಳಿ ರಾಜ್ಯ ಮಾವು ಅಭಿವೃದ್ಧಿ ಕೇಂದ್ರ ಮತ್ತು ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ ವತಿಯಿಂದ ನಡೆದ ಮಾವು ಮತ್ತು ಹಲಸು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಕಂಡು ಬಂದ ದೃಶ್ಯಗಳಿವು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಕರೀಗೌಡ, ಮಾವು ಬೆಳೆಗಾರರಿಗೆ ನ್ಯಾಯಾಯುತ ಬೆಲೆ ಸಿಗಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಬೇಕು. ರೈತರಿಗೆ ಒಳ್ಳೆಯ ದರ ಸಿಗಬೇಕು ಎಂಬ ನಿಟ್ಟಿನಲ್ಲಿ ಗುಣಮಟ್ಟದ ಮಾವಿನ ಹಣ್ಣು ಮತ್ತು ಹಲಸು ಗುಣಮಟ್ಟದಲ್ಲಿ ಸಿಗುವಂತೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಹಳಷ್ಟು ರೈತರು ಮಾವು ಮತ್ತು ಹಲಸನ್ನು ಬೆಳೆಯುತ್ತಾರೆ. ಜನರಿಗೆ ಒಳ್ಳೆಯ ಗುಣಮಟ್ಟದ ಮಾವು ಮತ್ತು ಹಲಸು ಸಿಗುತ್ತದೆ. ಹೀಗಾಗಿ ಈ ವಿಷಯವನ್ನು ಸಮಾಜಕ್ಕೆ ತಿಳಿಸಲು ಒಂದು ಉತ್ತಮ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು.

ನಂದಿಗೋಕುಲ ಹಾಗೂ ನಂದಿ ಉಪಚಾರ ಹೋಟೆಲ್‌ ಮುಂಭಾಗ ನಡೆಯುತ್ತಿದ್ದು ಇನ್ನೊಂದು ವಾರದ ನಂತರ ಸಾದಹಳ್ಳಿ ಗೇಟ್‌ ಬಳಿಯಲ್ಲಿಯೂ ದೊಡ್ಡ ಮಟ್ಟದಲ್ಲಿ ಮಾವು ಮೇಳ ಮಾಡಲಾಗುತ್ತದೆ ಎಂದ ಜಿಲ್ಲಾಧಿಕಾರಿ, ಅನೇಕ ರೈತರು ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಶಾಸಕರೂ ಇದರ ಬಗ್ಗೆ ಚುನಾವಣೆ ಮುಂಚೆಯೇ ಚರ್ಚಿಸಿದ್ದರು. ಗ್ರಾಹಕರಾಗಿ ಶಾಸಕರು ಕಾರ್ಯಕ್ರಮದಲ್ಲಿ ಗ್ರಾಹಕರಾಗಿ ಪಾಲ್ಗೊಂಡಿದ್ದಾರೆಂದರು.

ಶಾಸಕ ನಿಸರ್ಗ ಎಲ್‌.ಎನ್‌.ನಾರಾಯಣಸ್ವಾಮಿ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಾವು ಮತ್ತು ಹಲಸು ಮೇಳ ಮಾಡಿ ರೈತರಿಗೆ ಅನುಕೂಲ ಕಲ್ಪಿಸುವ ಕೆಲಸ ಮಾಡುತ್ತಿದ್ದಾರೆ. ರೈತರಿಗೆ ಉತ್ತಮ ಬೆಲೆ ಸಿಗುವಂತೆ ಆಗಬೇಕು. ಜನರ ಸಹಕಾರ ಇದ್ದರೆ ಮುಂದಿನ ವರ್ಷವೂ ಇದೇ ರೀತಿ ಮಾಡಲು ಯೋಜನೆ ರೂಪಿಸಲಾಗುವುದು. ಬರಗಾಲ ಇರುವುದರಿಂದ ರೈತರು ಸಂಕಷ್ಟದ ಸ್ಥಿತಿಯಲ್ಲಿ ಇದ್ದಾರೆ. ಹಣ್ಣುಗಳಿಗೆ ಉತ್ತಮ ಬೆಲೆ ಬಂದರೆ ಮಾತ್ರ ಬದುಕು ಕಟ್ಟಿಕೊಳ್ಳಲು ಸಾಧ್ಯವೆಂದರು.

ವಿವಿಧ ತಳಿ: ಮಾವು ಮೇಳದಲ್ಲಿ ಮಲಗೋಬ, ಮಲ್ಲಿಕಾ, ಆರ್ಕಾಉದಯ, ಐಲ್ಡಾನ್‌, ಲಿಲ್ಲಿ, ಬಾದಾಮಿ, ತೋತಾಪುರಿ, ಲಾಲ್‌ ಮಣಿ, ಆಸ್ಟೀವ, ಟಾಯ್‌ಅರ್ಬೀನ್‌, ಅರ್ಕಾ ಅನ್ಮೋಲ್‌, ದಶೇರಿ, ಬೆನ್ನೇಶಾನ್‌, ರಸಪೂರಿ, ಅರ್ಕ ಪುನಿತ, ಸನ್ಸೇಷಿನ್‌, ಆರ್ಕನಿಲ್ಕಿಕಾಗ್‌, ಪಾಯರ್‌, ಕೇಂಟ್‌, ಕಿಟ್‌, ಮಾಯ, ಇತರೆ ಜಾತಿಯ ಮಾವುಗಳು ಗ್ರಾಹಕರನ್ನು ಸೆಳೆದವು. ಪ್ರತಿಯೊಬ್ಬರೂ ಹಣ್ಣಿನ ರುಚಿ ಸವಿದರು.

ತೋಟಗಾರಿಕಾ ಇಲಾಖೆ ಉಪನಿರ್ದೇಶಕ ರುದ್ರೇಶ್‌, ಜಿಲ್ಲೆಯಲ್ಲಿ 3763 ಹೆಕ್ಟೇರ್‌ನಲ್ಲಿ ಮಾವು ಹಾಗೂ 20 ಹೆಕ್ಟೇರ್‌ನಲ್ಲಿ ಹಲಸು ಬೆಳೆಯಲಾಗಿದೆ. ನಂದಿ ಉಪಚಾರ ಮತ್ತು ನಂದ ಗೋಕುಲ ಹೋಟೆಲ್‌ ಮುಂಭಾಗದಲ್ಲಿ ತಲಾ ಹತ್ತತ್ತು ಮಳಿಗೆ ನಿರ್ಮಿಸಲಾಗಿದೆ. ಸುಮಾರು 25ಕ್ಕೂ ಹೆಚ್ಚು ವಿವಿಧ ಮಾವು ತಳಿಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯಿದ್ದು ರೈತರಿಂದ ನೇರವಾಗಿ ಖರೀದಿಸಬಹುದು. ಐದು ದಿನಗಳಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಹಣ ಬರುವಂತೆ ರೈತರಿಗೆ ಆದರೆ ಸಂತಸವಾಗುತ್ತದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಕಾರ್ಯಕ್ರಮ ರೂಪಿಸಿದ್ದೇವೆ. ರೈತರು ಮತ್ತು ಗ್ರಾಹಕರು ಮಾವು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆಂದರು.

ಇದೇ ವೇಳೆ ತಹಶೀಲ್ದಾರ್‌ ಮಂಜುನಾಥ್‌, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್‌, ಪಿಕಾರ್ಡ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಆರ್‌.ಮುನೇಗೌಡ, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೊಣ್ಣಪ್ಪ, ತಾಪಂ ಸದಸ್ಯ ಮಹೇಶ್‌, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ: ನೈಸರ್ಗಿಕವಾಗಿ ಮಾಗಿಸಿದ ಒಳ್ಳೆಯ ರುಚಿಯ ಮಾವಿನ ಹಣ್ಣು ಮತ್ತು ಹಲಸು ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ. ಎಲ್ಲಾ ಜಾತಿಯ ಹಣ್ಣುಗಳನ್ನು ಪ್ರದರ್ಶನಕ್ಕಿಡಲಾಗಿದ್ದು ರೈತರಿಂದ ನೇರವಾಗಿ ಗ್ರಾಹಕರಿಗೆ ನೀಡಲಾಗುತ್ತಿದೆ. ಇದು ಮೊದಲ ಬಾರಿಗೆ ಜಿಲ್ಲೆಯಲ್ಲಿ ಪ್ರಾರಂಭಗೊಳಿಸಿದ್ದೇವೆ. ಎಲ್ಲಾ ರೀತಿಯ ಸೌಲಭ್ಯ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕರೀಗೌಡ ಹೇಳಿದರು.

ಜಿಲ್ಲಾಡಳಿತ ಮತ್ತು ತೋಟಗಾರಿಕೆ ಇಲಾಖೆ ಮಾವು ಮೇಳ ಏರ್ಪಡಿಸಿರುವುದರಿಂದ ರೈತರಿಗೆ ಅನುಕೂಲವಾಗಿದೆ. ಎಷ್ಟೇ ಮಾವು ಬೆಳೆದರೂ ಇವತ್ತಿನ ಮಾರುಕಟ್ಟೆಯಲ್ಲಿ ರೈತನಿಗೆ ಬೆಲೆ ಸಿಗದಂತೆ ಆಗಿದೆ. ಹೀಗಾಗಿ ರೈತರಿಗೆ ಉತ್ತಮ ಬೆಂಬಲ ಬೆಲೆ ಸಿಗಬೇಕು.
-ಸುಬ್ಬಣ್ಣ, ರೈತ

ಎಲ್ಲಾ ಜಾತಿಯ ಮಾವುಗಳನ್ನು ಪ್ರದರ್ಶನಕ್ಕೆ ಇಟ್ಟಿರುವುದು ಗಮನ ಸೆಳೆಯುತ್ತಿವೆೆ. ಮಾರಾಟಕ್ಕಿಟ್ಟಿರುವ ಮಾವು ಕಡಿಮೆ ಬೆಲೆಗೆ ನೇರವಾಗಿ ರೈತರಿಂದ ನೀಡುತ್ತಿರುವುದು ಸಂತಸದ ವಿಷಯ.
-ಮಂಜುನಾಥ್‌, ಗ್ರಾಹಕ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಆನೇಕಲ್‌: ಕೋವಿಡ್ 19 ಮಹಾಮಾರಿ ವೇಗವಾಗಿ ಹಬ್ಬುತ್ತಿರುವ ಹಿನ್ನಲೆಯಲ್ಲಿ ಘೋಷಿಸಿರುವ ಕರ್ಫ್ಯೂಗೆ ತಾಲೂಕು ಸಂಪೂರ್ಣ ಬಂದ್‌ ಆಗಿತ್ತು. ಯುಗಾದಿ ಹಿನ್ನಲೆಯಲ್ಲಿ...

  • ದೇವನಹಳ್ಳಿ: ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಜನಸಾಮಾನ್ಯರ ಅನುಕೂಲಕ್ಕಾಗಿ ಸಪ್ತಪದಿ ಸಾಮೂಹಿಕ ಸರಳ ವಿವಾಹವೆಂಬ...

  • ನೆಲಮಂಗಲ: ಕೋವಿಡ್ 19 ವೈರಸ್‌ ಮನುಕುಲವನ್ನು ಆತಂಕಕ್ಕೆ ತಳ್ಳಿದೆ. ಹೀಗಾಗಿ ಎಲ್ಲರೂ ಜಾಗೃತಿ ವಹಿಸಿ, ಸುತ್ತ ಮುತ್ತಲ ಪ್ರದೇಶವನ್ನು ಸ್ವಚ್ಛವಾಗಿರಿಸಿ ಕೊಳ್ಳಬೇಕು...

  • ದೊಡ್ಡಬಳ್ಳಾಪುರ: ಬೇಸಿಗೆ ಆರಂಭವಾಗಿದ್ದು, ಜತೆಗೆ ನೀರಿನ ಸಮಸ್ಯೆಯೂ ಹೆಚ್ಚುತ್ತಿದೆ. ಸರಬರಾಜಾಗುತ್ತಿರುವ ನೀರಿನ ಸ್ಥಿತಿಗತಿ ಅರಿಯಬೇಕಿದ್ದು, ನೀರಿನ ಮಿತ...

  • ದೇವನಹಳ್ಳಿ: ವಿದೇಶಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ 183 ವಿದೇಶಿ ಪ್ರಯಾಣಿಕರನ್ನು ಕೋವಿಡ್ 19 ಶಂಕೆ ಹಿನ್ನೆಲೆ ತಪಾಸಣೆ ನಡೆಸಲಾಗಿದೆ...

ಹೊಸ ಸೇರ್ಪಡೆ