ಪುರಸಭೆ 23 ವಾರ್ಡ್‌ಗಳಿಗೆ 78 ಅಭ್ಯರ್ಥಿ

Team Udayavani, May 22, 2019, 8:13 AM IST

ದೇವನಹಳ್ಳಿ ಪುರಸಭಾ ಕಾರ್ಯಾಲಯ.

ದೇವನಹಳ್ಳಿ: ಇಲ್ಲಿನ ಪುರಸಭೆ ಚುನಾವಣೆ 29ರಂದು 23 ವಾರ್ಡ್‌ಗಳಿಗೆ ವಿವಿಧ ಪಕ್ಷಗಳಿಂದ 78 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಮಪತ್ರ ಹಿಂಪಡೆಯಲು ಸೋಮವಾರ ಕಡೆ ದಿನವಾಗಿದ್ದರಿಂದ 1 ರಿಂದ 12 ವಾರ್ಡ್‌ ವರೆಗಿನ ಚುನಾವಣಾ ಅಧಿಕಾರಿ ವ್ಯಾಪ್ತಿಯಲ್ಲಿ 51 ನಾಮಪತ್ರ ಪೈಕಿ 9 ಮಂದಿ ವಾಪಸ್‌ ಪಡೆದು, 42 ಅಭ್ಯರ್ಥಿಗಳು ಕಣದಲ್ಲಿ ಉಳಿದರು. 13 ರಿಂದ 23 ವರೆಗಿನ ಚುನಾವಣಾಧಿಕಾರಿ ವ್ಯಾಪ್ತಿಯಲ್ಲಿ 44 ನಾಮಪತ್ರಗಳು ಸ್ವೀಕೃತವಾಗಿದ್ದವು. ಈ ಪೈಕಿ 8 ಮಂದಿ ಹಿಂಪಡೆದಿದ್ದರಿಂದ ಕಣದಲ್ಲಿ 36 ಅಭ್ಯರ್ಥಿಗಳು ಉಳಿದರು. ಒಟ್ಟಾರೆ ಪುರಸಭೆ 23 ವಾರ್ಡ್‌ಗಳಿಗೆ 78 ಹುರಿಯಾಳುಗಳು ಅಖಾಡದಲ್ಲಿದ್ದಾರೆ.

ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿರುವು ದರಿಂದ ಪಕ್ಷೇತರರು ಸೇರಿ 3 ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ವಾರ್ಡ್‌ವಾರು ಅಭ್ಯರ್ಥಿಗಳ ವಿವರ ಹೀಗಿದೆ.

ವಾರ್ಡ್‌-1: ಹಿಂದುಳಿದ ವರ್ಗ ಎ ಮಹಿಳೆ; ಬಿಜೆಪಿ-ಕೀರ್ತಿ ಕುಮಾರಿ, ಜೆಡಿಎಸ್‌-ಕೋಮಲಾ, ಪಕ್ಷೇತರ- ಆಶಾ ರಾಣಿ ಅಭ್ಯರ್ಥಿಯಾಗಿದ್ದಾರೆ. ವಾರ್ಡ್‌-2:ಸಾಮಾನ್ಯ ಮಹಿಳೆ; ಬಿಜೆಪಿ-ಶ್ವೇತಾ, ಕಾಂಗ್ರೆಸ್‌-ಗೀತಾ, ಜೆಡಿಎಸ್‌- ಲಲಿತಮ್ಮ.

ವಾರ್ಡ್‌-3: ಪರಿಶಿಷ್ಟ ಜಾತಿ ಮಹಿಳೆ; ಪಕ್ಷೇತರ-ಎಸ್‌.ಹಂಸವೇಣಿ, ಕಾಂಗ್ರೆಸ್‌- ರತ್ನಮ್ಮ, ಜೆಡಿಎಸ್‌-ಲೀಲಾವತಿ, ಬಿಜೆಪಿ- ಅಂಜಲಿ, ಬಿಎಸ್ಪಿ- ವರಲಕ್ಷ್ಮೀ. ವಾರ್ಡ್‌ -4:ಸಾಮಾನ್ಯ; ಪಕ್ಷೇತರ-ಸೋಮಶೇಖರ್‌, ಬಿಜೆಪಿ-ನಟರಾಜ್‌, ಜೆಡಿಎಸ್‌-ಬಿ.ದೇವರಾಜ್‌, ಕಾಂಗ್ರೆಸ್‌-ಆರ್‌. ರವಿಕುಮಾರ್‌. ವಾರ್ಡ್‌ -5:ಸಾಮಾನ್ಯ; ಕಾಂಗ್ರೆಸ್‌-ವೇಣುಗೋಪಾಲ್, ಬಿಜೆಪಿ-ಎಸ್‌.ಪ್ರಭಾಕರ್‌. ವಾರ್ಡ್‌ -6:ಸಾಮಾನ್ಯ ಮಹಿಳೆ; ಬಿಜೆಪಿ-ಪುನೀತಾ, ಜೆಡಿಎಸ್‌-ಶ್ವೇತಾ, ಕಾಂಗ್ರೆಸ್‌-ರೇಖಾ.

ವಾರ್ಡ್‌-7:ಸಾಮಾನ್ಯ ಮಹಿಳೆ; ಜೆಡಿಎಸ್‌-ಪುಷ್ಪಲತಾ, ಕಾಂಗ್ರೆಸ್‌- ಸುಮತಿ. ವಾರ್ಡ್‌-8: ಹಿಂದುಳಿದ ವರ್ಗ ಎ; ಜೆಡಿಎಸ್‌- ಆರ್‌.ನಾರಾಯಣಸ್ವಾಮಿ, ಬಿಜೆಪಿ- ಗೋಪಾಲ ಕೃಷ್ಣ, ಪಕ್ಷೇತರ- ನಾರಾಯಣ ಸ್ವಾಮಿ, ಪಕ್ಷೇತರ-ಜ.ೆ ನಾರಾಯಣ ಸ್ವಾಮಿ. ವಾರ್ಡ್‌ -9:ಪರಿಶಿಷ್ಟ ಜಾತಿ; ಪಕ್ಷೇತರ-ನಾಗರಾಜ್‌, ಜೆಡಿಎಸ್‌- ಕೆ.ವೆಂಕಟೇಶ್‌, ಕಾಂಗ್ರೆಸ್‌-ಭಾನು ಪ್ರಕಾಶ್‌, ಬಿಜೆಪಿ-ವಿ.ಮಹೇಶ್‌, ಬಿಎಸ್ಪಿ ಬಾಲರಾಜ್‌. ವಾರ್ಡ್‌-10:ಸಾಮಾನ್ಯ; ಬಿಜೆಪಿ-ಎನ್‌.ಎಲ್. ಅಂಬರೀಶ್‌, ಪಕ್ಷೇತರ- ಕಮಲಮ್ಮ, ಕಾಂಗ್ರೆಸ್‌-ಮಂಜುನಾಥ್‌, ಜೆಡಿಎಸ್‌-ಎನ್‌.ಆರ್‌. ಮಂಜುನಾಥ್‌ ನಾಮಪತ್ರ ಸಲ್ಲಿಸಿದ್ದಾರೆ.

ವಾರ್ಡ್‌-11:ಸಾಮಾನ್ಯ; ಕಾಂಗ್ರೆಸ್‌-ಎಸ್‌.ಸಿ.ಚಂದ್ರಪ್ಪ, ಜೆಡಿಎಸ್‌- ವಿ. ಗೋಪಾಲ್, ಬಿಜೆಪಿ-ಗೀತಾ, ಪಕ್ಷೇತರ-ಅರುಣಾ. ವಾರ್ಡ್‌ -12:ಪರಿಶಿಷ್ಟ ಜಾತಿ; ಜೆಡಿಎಸ್‌-ಲಕ್ಷ್ಮೀ, ಬಿಜೆಪಿ-ಗುಂಡಮ್ಮ, ಕಾಂಗ್ರೆಸ್‌- ಸುಮಿತ್ರಾ, ವಾರ್ಡ್‌-13:ಹಿಂದುಳಿದ ವರ್ಗ ಎ ಮಹಿಳೆ; ಜೆಡಿಎಸ್‌-ಡಿ ಗೋಪಮ್ಮ, ಬಿಜೆಪಿ-ಲಕ್ಷ್ಮೀ. ವಾರ್ಡ್‌ -14:ಸಾಮಾನ್ಯ; ಬಿಜೆಪಿ- ಲೋಹಿತ್‌, ಜೆಡಿಎಸ್‌- ವೈಸಿ ಸತೀಶ್‌ ಕುಮಾರ್‌, ಪಕ್ಷೇತರ-ವಿ. ನಂದ ಕುಮಾರ್‌, ಪಕ್ಷೇತರ- ಎಸ್‌.ಸತೀಶ್‌ ಕುಮಾರ್‌. ವಾರ್ಡ್‌ -15:ಹಿಂದುಳಿದ ವರ್ಗ ಎ; ಬಿಜೆಪಿ-ಆನಂದ, ಕಾಂಗ್ರೆಸ್‌-ಎನ್‌.ರಘು , ಪಕ್ಷೇತರ-ಎಂ.ಆನಂದ್‌. ವಾರ್ಡ್‌ -16:ಪರಿಶಿಷ್ಟ ಜಾತಿ ಮಹಿಳೆ; ಬಿಜೆಪಿ-ಕಲಾವತಿ, ಕಾಂಗ್ರೆಸ್‌-ಮಂಜುಳಾ, ಜೆಡಿಎಸ್‌-ಶೋಭಾ, ಪಕ್ಷೇತರ- ಲಕ್ಷ್ಮೀ ಅಪರ್ಣ. ವಾರ್ಡ್‌-17:ಪರಿಶಿಷ್ಟ ಜಾತಿ; ಕಾಂಗ್ರೆಸ್‌-ರಾಜಣ್ಣ , ಬಿಜೆಪಿ-ಎನ್‌.ಶ್ರೀನಿವಾಸ್‌ ಮೂರ್ತಿ, ಪಕ್ಷೇತರ-ಸುರೇಶ್‌. ವಾರ್ಡ್‌ -18:ಸಾಮಾನ್ಯ; ಬಿಜೆಪಿ-ಆರ್‌.ಮುನಿರಾಜು, ಜೆಡಿಎಸ್‌-ಜಿ.ಎ. ರವೀಂದ್ರ, ಕಾಂಗ್ರೆಸ್‌-ವಿಜಯ್‌ ಕುಮಾರ್‌. ವಾರ್ಡ್‌-19:ಸಾಮಾನ್ಯ ಮಹಿಳೆ; ಬಿಜೆಪಿ-ಚೈತ್ರಾ, ಕಾಂಗ್ರೆಸ್‌-ಜ್ಯೋತಿ ಲಕ್ಷ್ಮೀ, ಜೆಡಿಎಸ್‌-ವಿ. ಪದ್ಮಾವತಮ್ಮ. ವಾರ್ಡ್‌ -20:ಪರಿಶಿಷ್ಟ ಪಂಗಡ; ಜೆಡಿಎಸ್‌-ಎನ್‌.ನಾಗೇಶ್‌ ಬಾಬು, ಬಿಜೆಪಿ-ಮಹೇಶ್‌, ಕಾಂಗ್ರೆಸ್‌- ಮುನಿಕೃಷ್ಣ . ವಾರ್ಡ್‌ -21:ಸಾಮಾನ್ಯ ಮಹಿಳೆ; ಕಾಂಗ್ರೆಸ್‌-ಕಸ್ತೂರಿ, ಜೆಡಿಎಸ್‌-ಗೀತಾ ಜಗದೇವ್‌, ಬಿಜೆಪಿ-ಲಕ್ಷ್ಮೀ. ವಾರ್ಡ್‌ -22:ಸಾಮಾನ್ಯ ಮಹಿಳೆ; ಕಾಂಗ್ರೆಸ್‌-ರತ್ನಮ್ಮ, ಬಿಜೆಪಿ-ಎಂ.ಲಕ್ಷ್ಮೀ, ಜೆಡಿಎಸ್‌-ಎಸ್‌.ವಿನೋದ. ವಾರ್ಡ್‌ -23:ಹಿಂದುಳಿದ ವರ್ಗ ಬಿ; ಬಿಜೆಪಿ-ಕೆ.ಎ.ನಾಗೇಶ್‌, ಜೆಡಿಎಸ್‌-ಎಸ್‌.ನಾಗೇಶ್‌, ಕಾಂಗ್ರೆಸ್‌-ಪ್ರಮೋದ್‌, ಪಕ್ಷೇತರ-ಉಮೇಶ್‌, ಪಕ್ಷೇತರ- ಸಂದೀಪ್‌ ಕಣದಲ್ಲಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಆನೇಕಲ್‌: ಕೋವಿಡ್ 19 ಮಹಾಮಾರಿ ವೇಗವಾಗಿ ಹಬ್ಬುತ್ತಿರುವ ಹಿನ್ನಲೆಯಲ್ಲಿ ಘೋಷಿಸಿರುವ ಕರ್ಫ್ಯೂಗೆ ತಾಲೂಕು ಸಂಪೂರ್ಣ ಬಂದ್‌ ಆಗಿತ್ತು. ಯುಗಾದಿ ಹಿನ್ನಲೆಯಲ್ಲಿ...

  • ದೇವನಹಳ್ಳಿ: ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಜನಸಾಮಾನ್ಯರ ಅನುಕೂಲಕ್ಕಾಗಿ ಸಪ್ತಪದಿ ಸಾಮೂಹಿಕ ಸರಳ ವಿವಾಹವೆಂಬ...

  • ನೆಲಮಂಗಲ: ಕೋವಿಡ್ 19 ವೈರಸ್‌ ಮನುಕುಲವನ್ನು ಆತಂಕಕ್ಕೆ ತಳ್ಳಿದೆ. ಹೀಗಾಗಿ ಎಲ್ಲರೂ ಜಾಗೃತಿ ವಹಿಸಿ, ಸುತ್ತ ಮುತ್ತಲ ಪ್ರದೇಶವನ್ನು ಸ್ವಚ್ಛವಾಗಿರಿಸಿ ಕೊಳ್ಳಬೇಕು...

  • ದೊಡ್ಡಬಳ್ಳಾಪುರ: ಬೇಸಿಗೆ ಆರಂಭವಾಗಿದ್ದು, ಜತೆಗೆ ನೀರಿನ ಸಮಸ್ಯೆಯೂ ಹೆಚ್ಚುತ್ತಿದೆ. ಸರಬರಾಜಾಗುತ್ತಿರುವ ನೀರಿನ ಸ್ಥಿತಿಗತಿ ಅರಿಯಬೇಕಿದ್ದು, ನೀರಿನ ಮಿತ...

  • ದೇವನಹಳ್ಳಿ: ವಿದೇಶಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ 183 ವಿದೇಶಿ ಪ್ರಯಾಣಿಕರನ್ನು ಕೋವಿಡ್ 19 ಶಂಕೆ ಹಿನ್ನೆಲೆ ತಪಾಸಣೆ ನಡೆಸಲಾಗಿದೆ...

ಹೊಸ ಸೇರ್ಪಡೆ