ಬಕ್ರೀದ್‌ಗೆ ಮುಸ್ಲಿಮರ ಸಕಲ ಸಿದ್ಧತೆ


Team Udayavani, Aug 11, 2019, 3:00 AM IST

bakrid-ge

ದೇವನಹಳ್ಳಿ: ತ್ಯಾಗ, ಬಲಿದಾನಗಳ ಸಂಕೇತವಾಗಿ ಆಚರಿಸುವಂತಹ ಮುಸಲ್ಮಾನರ ಬಕ್ರೀದ್‌ಗೆ ದಿನಗಣನೆ ಆರಂಭವಾಗಿದೆ. ಬಕ್ರೀದ್‌ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಕುರಿ ಹಾಗೂ ಮೇಕೆಗಳಿಗೆ ಬೇಡಿಕೆ ಹೆಚ್ಚಿದೆ. ಸಾಮಾನ್ಯವಾಗಿ 4-5 ಸಾವಿರಕ್ಕೆ ಮಾರಾಟವಾಗುತ್ತಿದ್ದ ಕುರಿಗಳು ಈಗ 20-25 ಸಾವಿರ ರೂ.ಗಳವರೆಗೆ ಹೆಚ್ಚಿದ್ದು, ಜೋಡಿ ಕುರಿಗೆ 50 ಸಾವಿರಕ್ಕೂ ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗುತ್ತಿವೆ.

ಮನೆಗೆ ಹೋಗಿ ಕುರಿ ವ್ಯಾಪಾರ: ಬಕ್ರೀದ್‌ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಮ್‌ ಸಮುದಾಯದವರು ಕುರಿಗಳನ್ನು ಬಲಿಕೊಡುತ್ತಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಸಹಜವಾಗಿಯೇ ಕುರಿ ಬೆಲೆ ಗಗನಕ್ಕೇರುತ್ತದೆ. ಈ ಪ್ರದೇಶದಲ್ಲಿ ಮುಸ್ಲಿಮರು ಕುರಿಗಳನ್ನು ಸಾಕಾಣಿಕೆ ಮಾಡಿರುವವರ ಮನೆಗೆ ಹೋಗಿ ವ್ಯಾಪಾರ ಕುದುರಿಸಿಕೊಂಡು ಬರುತ್ತಾರೆ. ಕೊಂಡುಕೊಳ್ಳುವವರು ಉಂಡೆ ಕುರಿಯನ್ನೇ ತೂಕಕ್ಕೆ ಹಾಕಿ ಕಿಲೋಗೆ ಸಾವಿರದಂತೆ ನಿಗದಿ ಮಾಡಿ ಮಾರಾಟ ಮಾಡಿಕೊಳ್ಳುತ್ತಾರೆ.

ಅಂಗಾಗ ವೈಫಲ್ಯ ಕುರಿ ಬಲಿ ನಿಷೇಧ: ಗಾಯವಾಗಿರುವ ಅಥವಾ ಅಂಗ ಊನತೆ ಇರುವ ಕುರಿಯನ್ನು ಬಲಿ ಕೊಡುವುದು ನಿಷೇಧ. ಕುರಿಯ ಕೊಂಬು ಮುರಿದಿದ್ದರೂ ಬಲಿ ನೀಡಲು ಅನರ್ಹವಾಗಿರುತ್ತದೆ. ಜತೆಗೆ ರೋಗಗ್ರಸ್ಥವಾಗಿರುವ ಕುರಿಯನ್ನು ಬಲಿಕೊಡುವುದಿಲ್ಲ. ಬಲಿಗಾಗಿ ಆರೋಗ್ಯವಾಗಿರುವ ಹಾಗೂ ದಷ್ಟಪುಷ್ಟವಾಗಿರುವ ಕುರಿಯನ್ನು ನೀಡಲಾಗುತ್ತದೆ ಎಂದು ಮುಸ್ಲಿಮ್‌ ಮುಖಂಡ ಫ‌ಸಲ್‌ ಪಾಷ ಹೇಳುತ್ತಾರೆ.

ಮೂರು ಭಾಗವಾಗಿ ಮಾಂಸ ವಿಂಗಡಣೆ: ಬಕ್ರೀದ್‌ ಹಬ್ಬದಲ್ಲಿ ಬಲಿ ನೀಡಿದ ಪ್ರಾಣಿ ಮಾಂಸವನ್ನು ಮೂರು ಭಾಗಗಳಾಗಿ ವಿಂಗಡಿಸಿ, ಒಂದು ಭಾಗ ಸಂಬಂಧಿಕರಿಗೆ, 2ನೇ ಭಾಗವನ್ನು ಬಡವರಿಗೆ ಹಂಚುತ್ತಾರೆ. ಮೂರನೇ ಭಾಗವನ್ನು ಮನೆಯವರಿಗೆ ಉಳಿಸಿಕೊಳ್ಳುವ ಸಂಪ್ರದಾಯವಿದೆ. ಪ್ರವಾದಿ ಇಬ್ರಾಹಿಂನ ದೈವಾಜ್ಞೆ ಪಾಲನೆ ನೆನಪನ್ನು ಬಲಿದಿನದಂದು ಪುನರಾವರ್ತನೆಗೆ ಒಳಪಡಿಸುವುದು ವಿಶೇಷ.

ಮಾರಾಟಕ್ಕೆ ಸಿದ್ಧಗೊಳಿಸುವ ಮಾಲೀಕರು: ಮಾರಾಟ ಮಾಡಲು ಹಲವು ತಿಂಗಳಿನಿಂದ ಕುರಿಗಳನ್ನು ತಯಾರು ಮಾಡಲಾಗುತ್ತದೆ. ಕೊಬ್ಬಿದ, ಹೆಚ್ಚು ತೂಕವುಳ್ಳ ಕುರಿಗಳಿಗೆ ಬೇಡಿಕೆ ಹೆಚ್ಚು. ಹೀಗಾಗಿ ಕುರಿಯನ್ನು ಕೊಬ್ಬವಂತೆ ಮಾಡುವುದಕ್ಕೆ ಆದ್ಯತೆ ನೀಡುತ್ತೇವೆ. ಹಬ್ಬ ಒಂದು ತಿಂಗಳು ಇದ್ದಂತೆ ಕುರಿಗೆ ಹೆಚ್ಚು ಆರೈಕೆ ಮಾಡಲಾಗುತ್ತದೆ. ಪೌಷ್ಟಿಕ ಆಹಾರ, ತಾಜ ಸೊಪ್ಪು ಹೀಗೆ ಹತ್ತು ಹಲವಾರು ರೀತಿಯಲ್ಲಿ ಕುರಿ ನೋಡಿಕೊಳ್ಳಲಾಗುತ್ತದೆ. ಬಳಿಕ ಇದನ್ನು ಹಬ್ಬದಂದು ಕುರಿಯನ್ನು ಅಲ್ಲಾಹನಿಗೆ ಬಲಿ ನೀಡಲಾಗುತ್ತದೆ ಎಂದು ಜಾಮೀಯ ಮಸೀದಿ ಹೈದರ್‌ಸಾಬ್‌ ಹೇಳುತ್ತಾರೆ.

ತ್ಯಾಗ ಬಲಿದಾನದ ಹಬ್ಬ: ಪ್ರವಾದಿ ಇಬ್ರಾಹಿಂ, ತಮ್ಮ ಮಗ ಇಸ್ಮಾಯಿಲ್‌ನನ್ನು ಅಲ್ಲಾಹನಿಗೆ ಬಲಿ ಕೊಡಲು ಮುಂದಾದ ದಿನವನ್ನೇ ಈದ್‌-ಉಲ್‌-ಅದಾ (ಬಕ್ರೀದ್‌)ಎನ್ನಲಾಗುತ್ತದೆ. ತನ್ನ ಮಗನನ್ನು ಬಲಿ ಕೊಡುವಾಗ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಿಸ್ಮಿಲ್ಲಾ ಎಂದು ಹೇಳಿ ಮಗನ ಕತ್ತಿನ ಮೇಲೆ ಹಲವಾರು ಬಾರಿ ಕತ್ತಿ ಹರಿಸಿದರೂ ಕತ್ತು ಕುಯ್ಯುವುದಿಲ್ಲ. ಆ ವೇಳೆಯಲ್ಲಿ ದೇವದೂತ ಜಿಬ್ರಾಯಿಲ್‌ ಪ್ರತ್ಯಕ್ಷರಾಗಿ ಒಂದು ದುಂಬಿ (ದಷ್ಟಪುಷ್ಟ ಕುರಿ)ಯನ್ನು ಆ ಜಾಗದಲ್ಲಿ ಇಡುತ್ತಾರೆ. ಆಗ ಶ್ರದ್ಧೆ ಹಾಗೂ ನಿಷ್ಠೆಯಿಂದ ಕುರಿ ಬಲಿ ನೀಡಿ ಇಸ್ಲಾಂ ಧರ್ಮದಲ್ಲಿ ಸುವರ್ಣ ದಿನವಾಗಿಬಿಡುತ್ತದೆ.

ಬಕ್ರೀದ್‌ ಹಬ್ಬದಲ್ಲಿ ಕುರಿಗಳಿಗೆ ಹೆಚ್ಚು ಬೇಡಿಕೆ. 10-15 ಕುರಿ ಸಾಕಿದ್ದೇವೆ. ಹಬ್ಬದಿಂದಾಗಿ ಆದಾಯ ಉತ್ತಮವಾಗಿದೆ. ಜತೆಗೆ ಮನೆಗೆ ಬಂದು ಕುರಿ ಖರೀದಿಸುವುದರಿಂದ ದಲ್ಲಾಳಿಗಳ ಹಸ್ತಕ್ಷೇಪ ಇರುವುದಿಲ್ಲ. ನ್ಯಾಯಯುತ ಬೆಲೆ ದೊರೆಯುತ್ತದೆ.
-ನಾರಾಯಣ ಸ್ವಾಮಿ, ಬೈಚಾಪುರ

* ಎಸ್‌.ಮಹೇಶ್‌

ಟಾಪ್ ನ್ಯೂಸ್

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.