ಆಚರಣೆಗಷ್ಟೇ ಪರಿಸರ ದಿನ ಬೇಡ
Team Udayavani, Jun 8, 2020, 7:40 AM IST
ಆನೇಕಲ್: ಪರಿಸರ ರಕ್ಷಣೆ ಒಂದು ದಿನಕ್ಕೆ ಸೀಮಿತವಾಗಬಾರದು. ಪರಿಸರ ರಕ್ಷಣೆಗೆ ನಮ್ಮ ಕೈಲಾದ ಕೊಡುಗೆ ನೀಡಬೇಕು ಎಂದು ಬೊಮ್ಮಸಂದ್ರ ಕೈಗಾರಿಕೆ ಸಂಘದ ಅಧ್ಯಕ್ಷ ಎ.ಪ್ರಸಾದ್ ಹೇಳಿದರು. ಬೊಮ್ಮಸಂದ್ರ ಕೈಗಾರಿಕೆ ಸಂಘದಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೊಮ್ಮಸಂದ್ರ ಅತಿ ಹಳೆಯ ಕೈಗಾರಿಕೆ ಪ್ರದೇಶ ಅಂದಾಜು 2,500 ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಬೊಮ್ಮಸಂದ್ರ ಕೈಗಾರಿಕೆ ಸಂಘದ ಅಧೀನದಲ್ಲಿವೆ. ಈ ಭಾಗದಲ್ಲಿ ಪರಿಸರ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು. ರಸ್ತೆ ಅಭಿವೃದ್ಧಿ, ಚರಂಡಿ, ಬೀದಿದೀಪ, ಸಿಸಿ ಕ್ಯಾಮರಾ ಅಳವಡಿಕೆ, ಟ್ರಾಫಿಕ್ ತಡೆಗಟ್ಟುವ ಸಲುವಾಗಿ ಬೊಮ್ಮಸಂದ್ರದಲ್ಲಿ ಸಿಗ್ನಲ್ ಅಳವಡಿಕೆ, ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಆದ್ಯತೆ ನೀಡಲಾಗಿದೆ.
ಅದರ ಜೊತೆಗೆ ಸುಮಾರು 10 ಸಾವಿರ ಗಿಡ ನೆಡಲು ಚಾಲನೆ ನೀಡಲಾಗಿದೆ ಎಂದರು. ಪರಿಸರ ಮಾಲಿನ್ಯ ಮಂಡಳಿಯ ಬೊಮ್ಮಸಂದ್ರ ವ್ಯಾಪ್ತಿಯ ಅಧಿಕಾರಿ ಮಂಜುನಾಥ್ ಮಾತನಾಡಿದರು. ಖಜಾಂಚಿ ಸಂಜೀವ್ ಸಾವಂತ್, ಜಂಟಿ ಕಾರ್ಯದರ್ಶಿ ಮುರಳೀಧರ, ಕಾರ್ಯದರ್ಶಿ ನರೇಂದ್ರ ಕುಮಾರ್, ಜಂಟಿ ಖಜಾಂಚಿ ರಾಜಶೇಖರ್ ಪಾಟೀಲ್, ಎಕ್ಸಿಕ್ಯೂಟಿವ್ ಮೆಂಬರ್ ಜಿ.ಚಂದ್ರಶೇಖರ್, ವ್ಯವಸ್ಥಾಪಕ ಶಿವಕುಮಾರ್, ಎಕ್ಸಿಕ್ಯೂಟಿವ್ ಮೆಂಬರ್‌ಗಳಾದ ನೀಲಕಂಠಯ್ಯ, ನಾಗರಾಜ್ ಶೆಟ್ಟಿ, ಮಧುಸೂದನ್, ಶಶಿಕಿರಣ್, ಮಲ್ಲಿಕಾರ್ಜುನ್,ಜನಾರ್ಧನ್, ವಾಸು ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪಾವಗಡ : ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ
ವರ್ಷದೊಳಗೆ 3.55 ಕೋಟಿ ವೆಚ್ಚದ ರಾಜಕಾಲುವೆ ನಿರ್ಮಾಣ ಭರವಸೆ : ಎಸ್.ಜಯರಾಂ
ಹಿಪ್ಹಾಪ್ ನೃತ್ಯದ ಜೊತೆ ಹೈಬ್ರಿಡ್ ಭರತನಾಟ್ಯ : ನೆಟ್ಟಿಗರಿಂದ ಭಾರಿ ಮೆಚ್ಚುಗೆ
ರೆನ್ಯೂ ಪವರ್ನಿಂದ 7 ವರ್ಷದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ : ಸಿಎಂ ಬೊಮ್ಮಾಯಿ
ಶಿರಸಿ: ಚಾಲಿ ಅಡಿಕೆ ಕಳ್ಳತನ ಪ್ರಕರಣ; ಮತ್ತೋರ್ವ ಆರೋಪಿ ಬಂಧನ, ಆಟೋ ರಿಕ್ಷಾ ವಶಕ್ಕೆ