Udayavni Special

ಸಾವಯವ ತರಕಾರಿ ಬೆಳೆದು ಆರೋಗ್ಯವಂತರಾಗಿ


Team Udayavani, Feb 27, 2019, 6:56 AM IST

savayava.jpg

ದೇವನಹಳ್ಳಿ: ಸಾವಯವ ಗೊಬ್ಬರ ಬಳಸಿ ಉತ್ತಮ ತರಕಾರಿ ಬೆಳೆದು ಆರೋಗ್ಯ ರಕ್ಷಿಸಿಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜಿ.ಮಂಜುನಾಥ್‌ ತಿಳಿಸಿದರು.

ನಗರದ ಲಯನ್ಸ್‌ ಸೇವಾ ಭವನದಲ್ಲಿ ತಾಲೂಕು ತೋಟಗಾರಿಕ ಇಲಾಖೆ ವತಿಯಿಂದ ಕೈ ಮತ್ತು ತಾರಸಿ ತೋಟಗಳ ಉತ್ತೇಜನ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿದ್ದ ತರಬೇತಿ ಮತ್ತು ಮಿನಿ ಕಿಟ್‌ಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಧುನಿಕತೆ ಬೆಳೆದಂತೆ ಅಭಿವೃದ್ಧಿಗಾಗಿ ಇರುವ ಜಾಗವನ್ನೆಲ್ಲ ಕಳೆದುಕೊಂಡು ಇರುವಷ್ಟು ಜಾಗದಲ್ಲಿಯೇ ಕೈತೋಟ ತೋಟ ಮಾಡುವ ಪರಿಸ್ಥಿತಿಗೆ ಬಂದಿದ್ದೇವೆ. ಸಾವಯವ ಗೊಬ್ಬರ ಹೆಚ್ಚಾಗಿ ಬಳಸಿದರೂ ಆರೋಗ್ಯ ರಕ್ಷಿಸಿಕೊಳ್ಳಬಹುದು ಎಂದು ಹೇಳಿದರು.

ಯಾಂತ್ರೀಕರಣ: ಗೋಬಿ ಮಂಚೂರಿಯನ್ನು ಹೊರಗಡೆ ಹೆಚ್ಚು ತಿನ್ನಬೇಡಿ ಮನೆಯಲ್ಲಿಯೇ ನೀವೇ ಹೂ ಕೋಸನ್ನು ಬೆಳೆದು ಅದರಲ್ಲಿ ಮಂಚೂರಿ ಮಾಡಿ ಸವಿಯಿರಿ. ಸಣ್ಣ ಕುಂಡಗಳಲ್ಲಿ ಇಲಾಖೆ ನೀಡುವ ಸಾವಯವ ಗೊಬ್ಬರ ಬಳಸಿ ಉತ್ತಮ ತರಕಾರಿ, ಹೂ, ಸೊಪ್ಪು, ಹಣ್ಣು ಹೀಗೆ ವಿವಿಧ ರೀತಿಯಲ್ಲಿ ದಿನ ಬಳಕೆ ನೀರನ್ನು ಬಳಸಿ ಬೆಳೆಸಬಹುದು. ಮಾರುಕಟ್ಟೆಗೆ ಹೋಗಿ ಇಷ್ಟ ಬಂದ ತರಕಾರಿಗಳನ್ನು ತರುತ್ತೇವೆ. ಅವು ವಿಷದಿಂದ ಹೊರತಲ್ಲ, ಇವುಗಳ ಸೇವನೆಯಿಂದ ದೈಹಿಕ ಚಟುವಟಿಕೆಗಳು ಸಹ ಕಡಿಮೆಯಾಗುತ್ತಿದೆ. ನಿತ್ಯದ ಜೀವನ ಬಹುತೇಕ ಯಾಂತ್ರೀಕರಣವಾಗಿದೆ ಎಂದು ಹೇಳಿದರು. 

ತಾರಸಿ ತೋಟ ಬೆಳೆಯಿರಿ: ಸ್ತ್ರೀಶಕ್ತಿ ಸಂಘಗಳಿಗೆ ಕೈ ತೋಟ ಮತ್ತು ತಾರಸಿ ತೋಟಗಳ ಉತ್ತೇಜನ ತರಬೇತಿ ನೀಡಿ ಸಾವಯವ ಗೊಬ್ಬರದ ಮಹತ್ವವನ್ನು ತಿಳಿಸಲಾಗಿದೆ. ಮಹಿಳೆಯರು ಇಲ್ಲಿ ತರಬೇತಿ ಪಡೆದು ಹೋದರೆ ಸಾಲದು, ನಿಮ್ಮ ಮನೆಯ ಮೇಲೆ ಯಾವ ರೀತಿ ತಾರಸಿ ತೋಟ ಮಾಡಬೇಕು ಎಂಬುವುದರ ವಿಧಾನ ತಿಳಿದು ಅದನ್ನು ಅನುಸರಿಸಬೇಕು. ಈ ತರಬೇತಿಯಲ್ಲಿ ಭಾಗವಹಿಸುವ ಮಹಿಳೆಯರಿಗೆ ಮಿನಿ ಕಿಟ್‌ ನೀಡುತ್ತಿದ್ದೇವೆ ಅದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.

ಉತ್ತಮ ಪರಿಸರ: ಕೈ ಮತ್ತು ತಾರಸಿ ತೋಟಗಳಲ್ಲಿ ಸಾವಯವ ಗೊಬ್ಬರ ಬಳಸಿ ಉತ್ತಮ ತರಕಾರಿ ಬೆಳೆದರೆ ಆರೋಗ್ಯ ವಂತರಾಗಬಹುದು. ನೈಸರ್ಗಿಕ ಸಂಪನ್ಮೂಲಗಳಿಗೆ ದಕ್ಕೆ ಆಗದಂತೆ ಪರಿಸರ ಸಮತೋಲನ ಹಾಗೂ ಜೀವ ವೈವಿಧ್ಯತೆ ಕಾಪಾಡಿಕೊಂಡು ನಡೆಸುವ ಪರಿಪೂರ್ಣ ಕೃಷಿ ಪದ್ಧತಿಯೇ ಸಾವಯವ ಕೃಷಿಯಾಗಿದೆ ಎಂದು ಹೇಳಿದರು. ತಾಲೂಕು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನಾಧಿಕಾರಿ ಅಕ್ಷತಾ ರೈ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಧಾರಾವಾಹಿಗಳನ್ನು ವೀಕ್ಷಿಸುವುದರ ಬದಲಿಗೆ ತರಬೇತಿಯಲ್ಲಿ ಕಲಿತಿರುವ ಎಲ್ಲಾ ಅಂಶಗಳನ್ನು ಅಧ್ಯಯನ ಮಾಡಬೇಕು.

ಹಿಂದೆ ಮನೆಯ ಹಿಂಬದಿಯಲ್ಲಿಯೇ ಕೈ ತೋಟ ಮಾಡಲಾಗುತ್ತಿತ್ತು. ಆದರೆ, ಈಗ ಬದಲಾದ ಸನ್ನಿವೇಶದಲ್ಲಿ ಅಭಿವೃದ್ಧಿಗಾಗಿ ಇರುವ ಜಾಗವನ್ನೆಲ್ಲ ಕಾಂಕ್ರೀಟ್‌ ರಸ್ತೆಗಳನ್ನಾಗಿ ಮಾಡಲಾಗಿದೆ ಎಂದು ಹೇಳಿದರು.  ಈ ವೇಳೆಯಲ್ಲಿ ಲಯನ್ಸ್‌ ಸಂಸ್ಥೆ ಅಧ್ಯಕ್ಷ ನಾಗರಾಜಯ್ಯ, ತರಬೇತಿದಾರ ವಿಶ್ವನಾಥ್‌, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಂಯೋಜಕ ವಿಶ್ವನಾಥ್‌, ಹರೀಶ್‌ ಮತ್ತಿತರರು ಭಾಗವಹಿಸಿದ್ದರು.

ಟಾಪ್ ನ್ಯೂಸ್

basavana-gowdddd

5 ಸಾವಿರ ಹಿಂದೂ ಸ್ಲಂ ಕುಟುಂಬಗಳಿಗೆ ಯತ್ನಾಳ್ ದೀಪಾವಳಿ ಉಡುಗೊರೆ

1-haara

ಆರ್ಯನ್ ಗೆ ಜಾಮೀನಿಲ್ಲ :’ಅತಿರೇಕ,ಹೃದಯ ವಿದ್ರಾವಕ’ಎಂದ ಬಾಲಿವುಡ್ ಮಂದಿ

ಉಳ್ಳಾಲ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ: ಇಬ್ಬರ ಬಂಧನ ; ಎಂಟು ಮಂದಿ ಪರಾರಿ

ಉಳ್ಳಾಲ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ: ಇಬ್ಬರ ಬಂಧನ ; ಎಂಟು ಮಂದಿ ಪರಾರಿ

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

eshwarappa

ದಿಟ್ಟ ನಿಲುವಿಗೆ ಇಂದಿರಾ ಗಾಂಧಿಯವರನ್ನೂ ಹೊಗಳಿದ್ದೆವು : ಸಚಿವ ಕೆ.ಎಸ್. ಈಶ್ವರಪ್ಪ

aaryan

ಡ್ರಗ್ಸ್ ಪ್ರಕರಣದಲ್ಲಿ ಜಾಮೀನಿಲ್ಲ: ಆರ್ಯನ್ ಖಾನ್ ಗೆ ಜೈಲೇ ಗತಿ

ತಾಲಿಬಾನ್ ಉಗ್ರರ ರಣಕೇಕೆ; ವಾಲಿಬಾಲ್ ತಂಡದ ಸ್ಟಾರ್ ಆಟಗಾರ್ತಿಯ ಶಿರಚ್ಛೇದನ

ತಾಲಿಬಾನ್ ಉಗ್ರರ ರಣಕೇಕೆ; ವಾಲಿಬಾಲ್ ತಂಡದ ಸ್ಟಾರ್ ಆಟಗಾರ್ತಿಯ ಶಿರಚ್ಛೇದನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಿರಂತರ ಮಳೆಯಿಂದ ಕಳೆಗಟ್ಟಿದ ಬೆಳೆ

ನಿರಂತರ ಮಳೆಯಿಂದ ಕಳೆಗಟ್ಟಿದ ಬೆಳೆ

bangalore news

ರಾಗಿ ಬೆಳೆಯುತ್ತಿದ್ದ ರೈತರಿಂದ ಈಗ ಭತ್ತ ನಾಟಿ

doddaballapura news

ಡಿವೈಎಸ್ಪಿ ಟಿ.ರಂಗಪ್ಪ ಪತ್ನಿ ರಶ್ಮಿಗೆ “ಮಿಸಸ್‌ ಇಂಡಿಯಾ ಪ್ರಶಸ್ತಿ”

ಕಸ, ಗ್ರಾಮಸ್ಥರಿಂದ ತರಾಟೆ, udayavanipaper, kannadanews,

ಕಸ ಹಾಕಿದವರಿಗೆ ಗ್ರಾಮಸ್ಥರಿಂದ ತರಾಟೆ

ವೀಲಿಂಗ್‌ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ ಬಹುಜನ ಸಮಿತಿ ಸಂಸ್ಥಾಪಕ ಅಧ್ಯಕ್ಷ ಬಿಜ್ಜವಾರ ನಾಗರಾಜ್‌ ಮನವಿ

ವೀಲಿಂಗ್‌ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ

MUST WATCH

udayavani youtube

‘ಅಂಬಾರಿ’ಯಲ್ಲಿ ಕುಳಿತು ಅರಮನೆ ನಗರಿ ನೋಡಿ

udayavani youtube

ಹುಣಸೂರು : ಟಿಬೆಟ್ ಕ್ಯಾಂಪ್ ನೊಳಗೆ ನುಗ್ಗಿ ದಾಂದಲೆ ನಡೆಸಿದ ಒಂಟಿ ಸಲಗ

udayavani youtube

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 2500ರೂ : ದುಬಾರಿ ಬಾಡಿಗೆಗೆ ಬೇಸತ್ತ ರೈತರು

udayavani youtube

ಮಲೆನಾಡಿನಾದ್ಯಂತ ಭೂಮಿ ಹುಣ್ಣಿಮೆಯ ಸಂಭ್ರಮ

udayavani youtube

ನಮ್ಮ ಸೇನೆಗೊಂದು ಸಲಾಂ

ಹೊಸ ಸೇರ್ಪಡೆ

basavana-gowdddd

5 ಸಾವಿರ ಹಿಂದೂ ಸ್ಲಂ ಕುಟುಂಬಗಳಿಗೆ ಯತ್ನಾಳ್ ದೀಪಾವಳಿ ಉಡುಗೊರೆ

ಭತ್ತದ ಗದ್ದೆ ಇದ್ದರೂ ಅಡಿಕೆಗೆ ಸಿಗಬೇಕಾದ ಸೌಲಭ್ಯಕ್ಕೆ ಖೋತಾ 

ಭತ್ತದ ಗದ್ದೆ ಇದ್ದರೂ ಅಡಿಕೆಗೆ ಸಿಗಬೇಕಾದ ಸೌಲಭ್ಯಕ್ಕೆ ಖೋತಾ 

1-haara

ಆರ್ಯನ್ ಗೆ ಜಾಮೀನಿಲ್ಲ :’ಅತಿರೇಕ,ಹೃದಯ ವಿದ್ರಾವಕ’ಎಂದ ಬಾಲಿವುಡ್ ಮಂದಿ

ನಂದಳಿಕೆ ಗೋಳಿಕಟ್ಟೆಯಲ್ಲಿ ಶಾಸನ ಪತ್ತೆ

ನಂದಳಿಕೆ ಗೋಳಿಕಟ್ಟೆಯಲ್ಲಿ ಶಾಸನ ಪತ್ತೆ

Untitled-1

ಸ್ವಚ್ಛ ಶಿರ್ವ-ನಮ್ಮ ಶಿರ್ವ ಅಭಿಯಾನ: ಕಸ ತ್ಯಾಜ್ಯ ನಿರ್ಮೂಲನೆಗೆ ಪಣತೊಟ್ಟ ಗ್ರಾ.ಪಂ.ಅಧ್ಯಕ್ಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.