ಗ್ರಂಥಾಲಯ ಸ್ಥಳಾಂತರಕ್ಕೆ ಆಕ್ರೋಶ

Team Udayavani, Feb 3, 2019, 7:20 AM IST

ನೆಲಮಂಗಲ: ಪಟ್ಟಣದ ನೇತಾಜಿ ಪಾರ್ಕ್‌ ನಲ್ಲಿ ಕಾರ್ಯನಿರ್ವಸುತ್ತಿದ್ದ ಬೆಂಗಳೂರು ಗ್ರಾಮಾಂತರ ಕೇಂದ್ರ ಗ್ರಂಥಾಲಯದ ತಾಲೂಕು ಶಾಖೆಯನ್ನು ಚಾವಣಿಯಲ್ಲಿ ನೀರು ಬರುತ್ತದೆ ಎಂಬ ಕಾರಣದಿಂದ ವರ್ಗಾವಣೆ ಮಾಡಿದ್ದಾರೆ. ಇದರಿಂದ ವೃದ್ಧರಿಗೆ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಬಹಳಷ್ಟು ತೊಂದರೆಯಾಗಿದೆ ಎಂದು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಪುಟ್ಟಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ನೇತಾಜಿ ಪಾರ್ಕ್‌ನಲ್ಲಿ ಬೀಗ ಹಾಕಲಾಗಿರುವ ಹಳೇ ಗ್ರಂಥಾಲಯದ ಎದುರು ಸಾರ್ವಜನಿಕರು, ಸರ್ಕಾರಿ ನಿವೃತ್ತ ನೌಕರರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿ ಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಹಣ ಹೊಡೆಯಲು ಹೊಂಚು: ಈ ಹಿಂದೆ ಗ್ರಂಥಾಲಯವಿರುವ ಕಟ್ಟಡ ಉತ್ತಮವಾ ಗಿದ್ದು, ಸ್ವಲ್ಪ ರಿಪೇರಿ ಇದೆಯಷ್ಟೆ. ಕೇವಲ 15 ರಿಂದ 20 ಸಾವಿರ ರೂ. ಖರ್ಚು ಮಾಡಿದರೆ ಕಟ್ಟಡ ಉತ್ತಮವಾಗಿ ಸಿದ್ಧವಾಗುತ್ತದೆ. ಆದರೆ, ಗ್ರಂಥಾಲಯ ಇಲಾಖೆ ಕಟ್ಟಡ ರಿಪೇರಿ ಮಾಡುವುದನ್ನು ಬಿಟ್ಟು ಬೇರೊಂದು ಬಹು ಮಹಡಿ ಕಟ್ಟಡಕ್ಕೆ ವರ್ಗಾವಣೆ ಮಾಡಿದೆ.

ಈ ಕಟ್ಟಡದ ಕೊಠಡಿಗೆ ತಿಂಗಳಿಗೆ 15 ಸಾವಿರ ರೂ.ಬಾಡಿಗೆ ನೀಡುತ್ತಿದ್ದಾರೆ. ಅವರಿಗೆ ಬಾಡಿಗೆ ನೀಡುವ ಕಾಲು ಭಾಗದ ಹಣದಲ್ಲಿ ಹಳೇ ಗ್ರಂಥಾಲಯ ರಿಪೇರಿಯಾಗುತ್ತಿತ್ತು. ಹಣವನ್ನು ದುರುಪಯೋಗಪಡಿಸಿಕೊಳ್ಳಲು ಅಧಿಕಾರಿಗಳು ಗ್ರಂಥಾಲಯ ವರ್ಗಾವಣೆ ಮಾಡಿದ್ದಾರೆ. ಇದರಿಂದ ವೃದ್ಧರು, ವಿದ್ಯಾರ್ಥಿ ಗಳು, ಯುವತಿಯರು ಗ್ರಂಥಾಲಯದ ಕಡೆ ಮುಖ ಮಾಡದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸೌಲಭ್ಯವಿಲ್ಲದ ಬಾಡಿಗೆ ಕಟ್ಟಡ: ಗ್ರಂಥಾಲ ಯವನ್ನು ವರ್ಗಾವಣೆ ಮಾಡಿರುವ ಕಟ್ಟಡ ರಸ್ತೆಯ ಪಕ್ಕದಲ್ಲಿದ್ದರೂ ಎರಡನೇ ಮಹಡಿ ಯಲ್ಲಿದೆ. ವೃದ್ಧರು ಮೇಲೆ ಹೋಗಲು ಸಾಧ್ಯ ವಾಗುವುದಿಲ್ಲ. ಇದರ ಜೊತೆ ಗ್ರಂಥಾಲಯದ ಮುಂದೆ ಪಾರ್ಕಿಂಗ್‌ ವ್ಯವಸ್ಥೆಯಿಲ್ಲ. ತೀರಾ ಒಳಭಾಗದಲ್ಲಿರುವುದರಿಂದ ಯುವತಿ ಯರು, ವಿದ್ಯಾರ್ಥಿಗಳಿಗೂ ತೊಂದರೆಯಾ ಗಿದೆ. ಅಧಿಕಾರಿಗಳಿಗೆ ಪರಿಚಯವಿರುವ ವ್ಯಕ್ತಿಗಳಿಗೆ ಅನುಕೂಲವಾಗಲಿ ಎಂದು ಗ್ರಂಥಾಲಯ ವರ್ಗಾವಣೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಅಕ್ರೋಶ ವ್ಯಕ್ತಪಡಿಸಿದರು.

ನಿವೃತ್ತರಿಗೆ ತೊಂದರೆ: ನೇತಾಜಿ ಪಾರ್ಕ್‌ ನಲ್ಲಿರುವ ಗ್ರಂಥಾಲಯಕ್ಕೆ ಸರ್ಕಾರಿ ನಿವೃತ್ತ ನೌಕರರು ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡಿ, ದಿನಪತ್ರಿಕೆಗಳು, ಪುಸ್ತಕಗಳನ್ನು ಓದುತ್ತಿ ದ್ದರು. ಆದರೆ, ಗ್ರಂಥಾಲಯ ವರ್ಗಾವಣೆ ಮಾಡಿದ ನಂತರ ನಿವೃತ್ತ ನೌಕರರು ಮೆಟ್ಟಿಲು ಹತ್ತಲಾಗದೆ ಗ್ರಂಥಾಲಯವನ್ನು ಮರೆಯು ವಂತಾಗಿದೆ. 70 ವರ್ಷದ ವೃದ್ಧರು ರಸ್ತೆ ದಾಟಿ ಎರಡನೇ ಮಹಡಿಯಲ್ಲಿನ ಗ್ರಂಥಾಲಯಕ್ಕೆ ಹೋಗಲು ಹೇಗೆ ಸಾಧ್ಯ? ಇದಕ್ಕೆ ಪರಿಹಾರ ಕಲ್ಪಿಸಬೇಕು. ಗ್ರಂಥಾಲಯ ಮತ್ತೆ ನೇತಾಜಿ ಪಾರ್ಕ್‌ಗೆ ವರ್ಗಾವಣೆ ಮಾಡದಿದ್ದರೆ ಸತ್ಯಾ ಗ್ರಹ ಮಾಡಿ ಪುರಸಭೆ ಕಚೇರಿಗೆ ಮುತ್ತಿಗೆ ಹಾಕುತ್ತೇವೆಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯಸರ್ಕಾರಿ ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಎಚ್.ಡಿ. ನರಸಿಂಹಯ್ಯ, ನಿರ್ದೇಶಕ ವೆಂಕಟರಮ ಣಯ್ಯ, ನಿವೃತ್ತ ಸಬ್‌ ಇನ್‌ಸ್ಪೆಕ್ಟರ್‌ ನಂದ ರಾಜು, ನಿವೃತ್ತ ಪ್ರಾಂಶುಪಾಲ ರಾಮಯ್ಯ, ನಿವೃತ್ತ ತಾಲೂಕು ಆಡಳಿತಾಧಿಕಾರಿ ಮುನಿ ರಾಮಣ್ಣ, ನಿವೃತ್ತ ಪೊಲೀಸ್‌ ಅಧಿಕಾರಿ ಚನ್ನ ರಂಗೇಗೌಡ, ಜಿಪಂ ಮಾಜಿ ಸದಸ್ಯ ಎಂ.ಎನ್‌.ರಾಮು,ಯುವ ಮುಖಂಡ ಆನಂದ್‌, ಗ್ರಂಥಾಲಯದ ಓದುಗರು ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ