ಕಳಪೆ ಬಿತ್ತನೆ ಬೀಜ ಪೂರೈಕೆ: ರೈತರ ಆಕ್ರೋಶ


Team Udayavani, Jul 1, 2020, 7:32 AM IST

akrosha

ದೊಡ್ಡಬಳ್ಳಾಪುರ: ಕೃಷಿ ಇಲಾಖೆ ವತಿಯಿಂದ ರೈತರಿಗೆ ಸಬ್ಸಿಡಿ ದರದಲ್ಲಿ ಮಾರಾಟ ಮಾಡಿದ್ದ ಖಾಸಗಿ ಕಂಪನಿಯೊಂದರ ಸಿಪಿ-818 ತಳಿಯ ಮುಸುಕಿನಜೋಳ ಕಳಪೆಯಾಗಿದ್ದು ಸರಿಯಾಗಿ ಹುಟ್ಟುವಳಿ ಆಗಿಲ್ಲ ಎಂದು ಆರೋಪಿಸಿ  ನೇರಳೆಘಟ್ಟ ಗ್ರಾಮದಲ್ಲಿ ರೈತರು ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತರಿಂದ ದೂರು ಕೇಳಿ ಬಂದ ತಕ್ಷಣ ಎಚ್ಚೆತ್ತ ಕೃಷಿ ಇಲಾಖೆ ಅಧಿಕಾರಿಗಳು ಸಿಪಿ-818 ತಳಿಯ ಮುಸುಕಿನ ಜೋಳ ಬಿತ್ತನೆ  ಬೀಜದ ಮಾರಾಟವನ್ನು ಮಂಗಳವಾರ ಬೆಳಗ್ಗೆಯಿಂದಲೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಬಿತ್ತನೆ ಮಾಡಿದ 5 ರಿಂದ 7 ದಿನಗಳ ಒಳಗೆ ಜೋಳ ಮೊಳಕೆಯೊಡೆದು ಪೈರಾದರೆ ಮಾತ್ರ ಉತ್ತಮ ಇಳಿವರಿ ಬರುವ ನಿರೀಕ್ಷೆ ಹಾಗೂ  ಗುಣಮಟ್ಟದ ಬೀಜ ಎನ್ನುವ ನಂಬಿಕೆ. ಆದರೆ 7 ದಿನವಾದರೂ ಮೊಳಕೆಯೇ ಹೊಡೆದಿಲ್ಲ.

ಕೃಷಿ ಇಲಾಖೆ ಮಾಹಿತಿ ಪ್ರಕಾರ ಸುಮಾರು 80 ಕ್ವಿಂಟಾಲ್‌ ಬಿತ್ತನೆ ಬೀಜ ಮಾರಾಟವಾಗಿ ಎನ್ನಲಾಗುತ್ತಿದೆ. ಇದೇ ದಿನ ಬಿತ್ತನೆ ಮಾಡಿರುವ ಇತರೆ  ಕಂಪನಿಯ ಬೀಜಗಳು ಮೊಳಕೆಯೊಡೆದು ಪೈರಾಗಿವೆ ಎನ್ನುವ ನೇರಳೆಘಟ್ಟ ಗ್ರಾಮದ ರೈತ ಮಧನ್‌, ರೈತರಿಗೆ ಉಳುಮೆ ಮಾಡಿರುವ ಖರ್ಚಿನಿಂದ ಮೊದಲುಗೊಂಡು ಬತ್ತನೆ ಬೀಜ ನಾಟಿ ಮಾಡುವವರೆಗಿನ ಎಲ್ಲಾ ಖರ್ಚನ್ನು ಕಂಪನಿ  ರೈತರಿಗೆ ಪರಿಹಾರವಾಗಿ ನೀಡಬೇಕೆಂದರು. ಕೃಷಿ ಇಲಾಖೆ ತಾಂತ್ರಿಕ ವಿಭಾಗದ ಅಧಿಕಾರಿ ರೂಪಾ, ಸರ್ಕಾರ ನೀಡಿರುವ ಬೀಜವನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ಸಬ್ಸಿಡಿ ದರದಲ್ಲಿ ಮಾರಾಟ ಮಾಡುವುದಷ್ಟೇ ನಮ್ಮ ಕೆಲಸ.

ಬೀಜ  ಪರಿಶೀಲನೆ ಮಾಡುವ ಜವಾಬ್ದಾರಿ ನಮ್ಮದಲ್ಲ. ಬುಧವಾರ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಬೀಜ ತಜ್ಞರ ತಂಡ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವರು ಎಂದು ತಿಳಿಸಿದರು. ನೇರಳೆಘಟ್ಟದಲ್ಲಿ ಜೋಳ ಬಿತ್ತನೆ  ಮಾಡಿರುವ ರೈತರ ಹೊಲಗಳಿಗೆ ಭೇಟಿ ನೀಡಿದ್ದ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಬೀಜ ತಜ್ಞರಾದ ಡಾ.ವೆಂಕಟೇಗೌಡ, ಮೇಲ್ನೋಟಕ್ಕೆ ಬೀಜ ಮೊಳಕೆಯಲ್ಲಿ ತೊಂದರೆ ಕಂಡುಬಂದಿದೆ ಎಂದರು.

ಟಾಪ್ ನ್ಯೂಸ್

Untitled-1

ರಸ್ತೆ ಅಪಘಾತ: ಕೊಳಲಗಿರಿ ಮೂಲದ ಯುವಕ ಮೃತ್ಯು

ಬಿ.ವೈ.ವಿಜಯೇಂದ್ರ

ಉಪ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಶೂನ್ಯ : ಬಿ.ವೈ.ವಿಜಯೇಂದ್ರ

Netherlands player Ryan ten Doeschate announced retirement

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ನೆದರ್ಲೆಂಡ್ ಆಲ್ ರೌಂಡರ್ ಟೆನ್ ಡೆಶ್ಕೋಟ್

ಸಿರಿಯಾದಲ್ಲಿ ಏರ್ ಸ್ಟ್ರೈಕ್ ನಡೆಸಿದ ಅಮೆರಿಕ: ಹಿರಿಯ ಅಲ್ ಖೈದಾ ಉಗ್ರನ ಹತ್ಯೆ

ಸಿರಿಯಾದಲ್ಲಿ ಏರ್ ಸ್ಟ್ರೈಕ್ ನಡೆಸಿದ ಅಮೆರಿಕ: ಹಿರಿಯ ಅಲ್ ಖೈದಾ ಉಗ್ರನ ಹತ್ಯೆ

ಬುಮ್ರಾ ಮತ್ತು ಶಾಹಿನ್ ಅಫ್ರಿದಿ ನಡುವಿನ ಹೋಲಿಕೆ ಮೂರ್ಖತನ: ಆಮಿರ್

ಬುಮ್ರಾ ಮತ್ತು ಶಾಹಿನ್ ಅಫ್ರಿದಿ ನಡುವಿನ ಹೋಲಿಕೆ ಮೂರ್ಖತನ: ಆಮಿರ್

ಲಾಸರ್‍ದೊಡ್ಡಿಯಲ್ಲಿ ಸಿಡಿಲಿನ ಹೊಡೆತಕ್ಕೆ ಕುಸಿದ ಮನೆಯ ಗೋಡೆ: ತಪ್ಪಿದ ಭಾರೀ ಅನಾಹುತ

ಲಾಸರ್‍ದೊಡ್ಡಿಯಲ್ಲಿ ಸಿಡಿಲಿನ ಹೊಡೆತಕ್ಕೆ ಕುಸಿದ ಮನೆಯ ಗೋಡೆ: ತಪ್ಪಿದ ಭಾರೀ ಅನಾಹುತ

11 ಮಂದಿ ಚಾರಣಿಗರು ಸಾವು! 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

11 ಮಂದಿ ಚಾರಣಿಗರು ಸಾವು! 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಕ್ಕಳು, ಗುಣಮಟ್ಟದ ಆಹಾರ, udayavanipaper, kannadanews,

ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಿ

Lawmakers who come to the village return without seeing the road!

ಗ್ರಾಮಕ್ಕೆ ಬಂದ ಶಾಸಕರು ರಸ್ತೆ ನೋಡದೇ ವಾಪಸ್‌!

ಜಿಂಕೆ

ವಾಹನಗಳ ವೇಗಕ್ಕೆ ಬಲಿಯಾಗುತ್ತಿವೆ ಕಾಡುಪ್ರಾಣಿಗಳು: ಆಕ್ರೋಶ

ನಿರಂತರ ಮಳೆಯಿಂದ ಕಳೆಗಟ್ಟಿದ ಬೆಳೆ

ನಿರಂತರ ಮಳೆಯಿಂದ ಕಳೆಗಟ್ಟಿದ ಬೆಳೆ

bangalore news

ರಾಗಿ ಬೆಳೆಯುತ್ತಿದ್ದ ರೈತರಿಂದ ಈಗ ಭತ್ತ ನಾಟಿ

MUST WATCH

udayavani youtube

ಆಟೋ ಚಾಲಕನ ನತದೃಷ್ಟ ಕಥೆಯಿದು

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

ಹೊಸ ಸೇರ್ಪಡೆ

9tamba

ತಾಂಬಾದಲ್ಲಿ ವಿಜಯೇಂದ್ರ ರೋಡ್‌ ಶೋ: ಭರ್ಜರಿ ಮತಬೇಟೆ

Untitled-1

ರಸ್ತೆ ಅಪಘಾತ: ಕೊಳಲಗಿರಿ ಮೂಲದ ಯುವಕ ಮೃತ್ಯು

ಕಿತ್ತೂರು ಉತ್ಸವಕ್ಕೆ ಸಿಗಲಿ ರಾಜ್ಯಮಟ್ಟದ ಮಾನ್ಯತೆ

ಕಿತ್ತೂರು ಉತ್ಸವಕ್ಕೆ ಸಿಗಲಿ ರಾಜ್ಯಮಟ್ಟದ ಮಾನ್ಯತೆ

ಬಿ.ವೈ.ವಿಜಯೇಂದ್ರ

ಉಪ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಶೂನ್ಯ : ಬಿ.ವೈ.ವಿಜಯೇಂದ್ರ

8vote

ಕಾಂಗ್ರೆಸ್‌ ಪರ ಮಾಜಿ ಸಚಿವ ಮಹಾದೇವಪ ಮತಯಾಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.