ವಿದ್ಯುತ್‌ ಕಡಿತ: ಉಪಗ್ರಹ ಆಧಾರಿತ ತರಬೇತಿ ಸ್ಥಗಿತ


Team Udayavani, Oct 12, 2019, 3:00 AM IST

vidyt

ದೇವನಹಳ್ಳಿ: ವಿದ್ಯುತ್‌ ಕಡಿತವಾದ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ಉಪಗ್ರಹ ಆಧಾರಿತ ತರಬೇತಿ ಕಾರ್ಯಗಾರ ಸ್ಥಗಿತಗೊಂಡಿದ್ದರಿಂದ ತಾಪಂ ಕಚೇರಿಯ ತರಬೇತಿ ಕೇಂದ್ರದಲ್ಲಿ ಗ್ರಾಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಪಂ ಸದಸ್ಯರಿಗಾಗಿ ಉಪಗ್ರಹ ಆಧಾರಿತವಾಗಿ ಮೈಸೂರಿನಲ್ಲಿರುವ ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್‌ ಸಂಸ್ಥೆಯ ವತಿಯಿಂದ ಸಬ್‌ ಕೀ ಯೋಜನಾ ಸಬ್‌ ಕಾ ವಿಕಾಸ್‌ ಯೋಜನೆ ಅಡಿಯಲ್ಲಿ ಮಿಷನ್‌ ಅಂತ್ಯೋದಯ ಮತ್ತು ಜನರ ಯೋಜನೆಯ ಅಭಿವೃದ್ಧಿ ಹಾಗೂ 2020-21ರ ನಮ್ಮ ಗ್ರಾಮ ಯೋಜನೆಗೆ ಸಿದ್ಧ ಪಡಿಸುವ ಕುರಿತು ಗ್ರಾಪಂ ಸದಸ್ಯರಿಗೆ ಉಪಗ್ರಹ ಆಧಾರಿತ ತರಬೇತಿ ಮೂಲಕ ಸಂವಾದ ನಡೆಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.

ಹಾರೋಹಳ್ಳಿ ಗ್ರಾಪಂ ಸದಸ್ಯ ಬುಳ್ಳ ಹಳ್ಳಿ ರಾಜಪ್ಪ ಮಾತನಾಡಿ, ಸೆ.3 ರಿಂದ 15ರ ವರೆಗೆ ರಜಾ ದಿನಗಳನ್ನು ಹೊರತುಪಡಿಸಿ ಪ್ರತಿ ತರಬೇತಿ ಶಿಬಿರಕ್ಕೆ ತಲಾ 3 ಗ್ರಾಪಂಗಳನ್ನು ಆಯ್ಕೆ ಮಾಡಲಾಗಿದೆ. ಗ್ರಾಪಂ ಸದಸ್ಯರಿಗೆ ಇಂತಹ ತರಬೇತಿಗಳು ಅನವಶ್ಯಕವಾಗಿದೆ. ಆದರೆ ತರಬೇತಿ ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. 1 ಗಂಟೆ 20 ನಿಮಿಷ ವಿದ್ಯುತ್‌ ಪೂರೈಕೆ ಇಲ್ಲ. ಕಾಟಾಚಾರಕ್ಕೆ ತರಬೇತಿ ಆಯೋಜಿಸಿದರೆ ಹೇಗೆ? ಸ್ಥಳೀಯ ಮೂಲ ಸೌಲಭ್ಯಗಳು ಇಲ್ಲವಾದರೆ ಕೋಟ್ಯಾಂತರ ರೂ. ವೆಚ್ಚದ ಬಹು ನಿರೀಕ್ಷಿತ ಯೋಜನೆಗಳು ಸಫಲ ವಾಗುವುದಿಲ್ಲ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಗೊಂಡು ಮೂಲಭೂತ ಸೌಲಭ್ಯಗಳು ಕಲ್ಪಿಸಬೇಕು ಎಂದರು.

ಗ್ರಾಪಂ ಸದಸ್ಯೆ ವರಲಕ್ಷ್ಮೀ ಮಾತನಾಡಿ, ಗ್ರಾಪಂ ಸದಸ್ಯರಾಗಿ ಆಯ್ಕೆ ಗೊಂಡು 2 ವರ್ಷ ಕಳೆದ ನಂತರ ಪ್ರಸ್ತುತ ರಾಜ್ಯ ಸರ್ಕಾರ ತರಬೇತಿ ಶಿಬಿರ ನಡೆಸಲು ಅವಕಾಶ ಕಲ್ಪಿಸಿದೆ. ಆಸಕ್ತರು ತರಬೇತಿಯಲ್ಲಿ ಭಾಗವಹಿಸಿದ್ದಾರೆ. ಯಾವುದೇ ಕಾರ್ಯಕ್ರಮ ಪೂರ್ವ ಸಿದ್ಧತೆಯ ಬಗ್ಗೆ ಸ್ಪಷ್ಟತೆ ಇರಬೇಕು ನಮಗೂ ಮಾಹಿತಿ ಪಡೆಯುವ ಕುತೂಹಲ ಇದ್ದು, ಕಾಲಹರಣ ಮಾಡಲು ಇಲ್ಲಿಗೆ ಯಾರು ಬರುವುದಿಲ್ಲ. ತರಬೇತಿಯಲ್ಲಿ ಹೆಚ್ಚಿನ ಮಾಹಿತಿ ಪಡೆದರೆ ಹೆಚ್ಚಿನ ಕಾರ್ಯ ನಿರ್ವಹಿಸಲು ಅನುಕೂಲ ಎಂದು ಹೇಳಿದರು.

ತಾಪಂ ಇಒ ಮುರುಡಯ್ಯ ಮಾತನಾಡಿ ವಿದ್ಯುತ್‌ ಪೂರೈಕೆ ಸ್ಥಗಿತದ ಬಗ್ಗೆ ನಮ್ಮ ಗಮನಕ್ಕೆ ಬಂದಿರಲಿಲ್ಲ. ಬಂದಿದ್ದರೆ ಜನರೇಟರ್‌ ವ್ಯವಸ್ಥೆ ಮಾಡಲಾಗುತ್ತಿತ್ತು. ಈಗಲೂ ಸಹ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರೂ ಸಹ ಸದಸ್ಯರು ಎದ್ದು ಹೊರ ನಡೆದರು ಎಂದು ತಿಳಿಸಿದರು. ಈ ವೇಳೆ ಗ್ರಾಪಂ ಉಪಾಧ್ಯಕ್ಷ ಹರೀಶ್‌, ಸದಸ್ಯರಾದ ಮಾಲ, ಮುನಿರಾಜು ಮತ್ತಿತರರಿದ್ದರು.

ಟಾಪ್ ನ್ಯೂಸ್

ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ; ಚುನಾವಣಾ ಸಿದ್ದತೆ ಆರಂಭಿಸಿದ ಕೈ ಪಡೆ

ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ; ಚುನಾವಣಾ ಸಿದ್ದತೆ ಆರಂಭಿಸಿದ ಕೈ ಪಡೆ

ಜಿ.ಪಂ-ತಾ.ಪಂ ಚುನಾವಣೆ: ವಿಚಾರಣೆ ಮೇ 23ಕ್ಕೆ ಮುಂದೂಡಿಕೆ

ಜಿ.ಪಂ-ತಾ.ಪಂ ಚುನಾವಣೆ: ವಿಚಾರಣೆ ಮೇ 23ಕ್ಕೆ ಮುಂದೂಡಿಕೆ

1-fdsfdsfds

ಕಿರುತೆರೆ ನಟಿ ಚೇತನಾ ಸಾವು!: ಬೊಜ್ಜು ತೆಗೆಯುವ ಶಸ್ತ್ರಚಿಕಿತ್ಸೆ ಮುಳುವಾಯಿತೇ ?

ಸಾಗರ : ಶಾಲೆಗೆ ಹೋಗುವುದಾಗಿ ಹೇಳಿ ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಸಾಗರ: ಶಾಲೆಗೆ ಹೋಗುತ್ತೇನೆಂದು ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ ಶವ ಕೆರೆಯಲ್ಲಿ ಪತ್ತೆ

cm-ibrahim.

ಪರಿಷತ್ ಸ್ಥಾನದ ಮೇಲೆ ಕಣ್ಣಿಟ್ಟ ಸಿ.ಎಂ.ಇಬ್ರಾಹಿಂ; ಜೆಡಿಎಸ್ ನಾಯಕರಿಗೆ ಕಸಿವಿಸಿ

sensex

1,300 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್ ; 16,200 ಮಟ್ಟವನ್ನು ಮರಳಿ ಪಡೆದ ನಿಫ್ಟಿ

21

ಹೆತ್ತವರ ಅಪಸ್ವರ ಲೆಕ್ಕಿಸದೇ ಹಿಂದೂ ಯುವಕ, ಮುಸ್ಲಿಂ ಯುವತಿ ವಿವಾಹಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಮಾಜದ ಅಜ್ಞಾನ ಹೋಗಲಾಡಿಸಿದ ಬುದ್ಧ

ಸಮಾಜದ ಅಜ್ಞಾನ ಹೋಗಲಾಡಿಸಿದ ಬುದ್ಧ

ತರಕಾರಿ ಬೆಲೆ ಏರಿಕೆ: ಗ್ರಾಹಕರ ಜೇಬಿಗೆ ಕತ್ತರಿ

ತರಕಾರಿ ಬೆಲೆ ಏರಿಕೆ: ಗ್ರಾಹಕರ ಜೇಬಿಗೆ ಕತ್ತರಿ

ಗುಜರಾತ್‌ ಟೈಟಾನ್ಸ್‌ ನಲ್ಲಿದ್ದಾರೆ ದೊಡ್ಡಬಳ್ಳಾಪುರದ “ಜೂನಿಯರ್‌ ಬುಮ್ರಾ” ಮಹೇಶ್‌ಕುಮಾರ್‌

ಗುಜರಾತ್‌ ಟೈಟಾನ್ಸ್‌ ನಲ್ಲಿದ್ದಾರೆ ದೊಡ್ಡಬಳ್ಳಾಪುರದ “ಜೂನಿಯರ್‌ ಬುಮ್ರಾ” ಮಹೇಶ್‌ಕುಮಾರ್‌

ಸಂಪುಟ ವಿಸ್ತರಣೆ ವಿಚಾರ: ಸಿಎಂ ಹಾಗೂ ಹೈಕಮಾಂಡ್ ತೀರ್ಮಾನವೇ ಅಂತಿಮ; ಸಚಿವ ವಿ.ಸೋಮಣ್ಣ

ಸಂಪುಟ ವಿಸ್ತರಣೆ ವಿಚಾರ: ಸಿಎಂ ಹಾಗೂ ಹೈಕಮಾಂಡ್ ತೀರ್ಮಾನವೇ ಅಂತಿಮ; ಸಚಿವ ವಿ.ಸೋಮಣ್ಣ

ಸ್ವಂತ ಹಿತವನ್ನು ರಾಜ್ಯದ ಹಿತ ಎಂದು ಬಯಸಿದರೆ.. ಸಿಟಿ ರವಿ ಟಾಂಗ್ ಕೊಟ್ಟದ್ದು ಯಾರಿಗೆ ?

ಸ್ವಂತ ಹಿತವನ್ನು ರಾಜ್ಯದ ಹಿತ ಎಂದು ಬಯಸಿದರೆ.. ಸಿಟಿ ರವಿ ಟಾಂಗ್ ಕೊಟ್ಟದ್ದು ಯಾರಿಗೆ ?

MUST WATCH

udayavani youtube

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

udayavani youtube

ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ

udayavani youtube

ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ

udayavani youtube

ಶಂಕರನಾರಾಯಣ : ಶಾಲಾರಂಭದ ದಿನದಂದೇ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಬಿಸಿ

ಹೊಸ ಸೇರ್ಪಡೆ

20fever

ಜ್ವರ ಇದ್ದಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ

ಕಾಸರಗೋಡು ಅಪರಾಧ ಸುದ್ದಿಗಳು

ಕಾಸರಗೋಡು ಅಪರಾಧ ಸುದ್ದಿಗಳು

19land

ಶಾಲಾ ಕಟ್ಟಡ ಕಾಮಗಾರಿಗೆ ಭೂಮಿಪೂಜೆ

ಸಾಗರ: ಹೊಟ್ಟೆಯೊಳಗಿದ್ದ ಏಳು ಕೆಜಿಯ ಗಡ್ಡೆಯನ್ನು ಯಶಸ್ವಿಯಾಗಿ ಹೊರ ತೆಗೆದ ವೈದ್ಯರು

ಸಾಗರ: ಹೊಟ್ಟೆಯೊಳಗಿದ್ದ ಏಳು ಕೆಜಿಯ ಗಡ್ಡೆಯನ್ನು ಯಶಸ್ವಿಯಾಗಿ ಹೊರ ತೆಗೆದ ವೈದ್ಯರು

18raichur

ರಾಯಚೂರು ನಗರಸಭೆಗೆ ಮತ್ತೆ ಹಳೇ ಕಮಿಷನರ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.