ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಗ್ರಾಮಲೆಕ್ಕಾಧಿಕಾರಿಗಳಿಂದ ಜಿಲ್ಲಾಧಿಕಾರಿ ಸಿ.ಎಸ್‌. ಕರೀಗೌಡರಿಗೆ ಮನವಿ ಸಲ್ಲಿಕೆ

Team Udayavani, Jul 19, 2019, 4:48 PM IST

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಜಿಲ್ಲಾಧಿಕಾರಿ ಕರೀಗೌಡರಿಗೆ ಮನವಿ ಪತ್ರ ಸಲ್ಲಿಸಿತು.

ದೇವನಹಳ್ಳಿ: ಗ್ರಾಮ ಲೆಕ್ಕಾಧಿಕಾರಿಗಳಿಗೆ ಜಾಬ್‌ಚಾರ್ಟ್‌ ಹಾಗೂ ಮುಂಬಡ್ತಿ ಅನ್ಯಾಯ ಸರಿಪಡಿಸುವಿಕೆ ಸೇರಿ ಬೇಡಿಕೆ ಈಡೇರಿಸಲು ಆಗ್ರಹಿಸಿ ಜಿಲ್ಲಾ ಗ್ರಾಮಲೆಕ್ಕಾಧಿಕಾರಿಗಳ ಸಂಘದಿಂದ ತಾಲೂಕಿನ ಬೀರಸಂದ್ರ ಗೇಟ್ಹತ್ತಿರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಗ್ರಾಮ ಲೆಕ್ಕಾಧಿಕಾರಿಗಳ ಮುಂಬಡ್ತಿಯಲ್ಲಿ ನಿರಂತರ ಅನ್ಯಾಯ ಆಗುತ್ತಿರುವುದನ್ನು ಸರಿಪಡಿಸ ಬೇಕು. ರಾಜ್ಯ ಸರ್ಕಾರ ಈ ಕೂಡಲೇ 20 ಲಕ್ಷ ರೂ. ವಿಶೇಷ ಪರಿಹಾರ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಿದರು.

ಗ್ರಾಮ ಲೆಕ್ಕಾಧಿಕಾರಿಗಳ ಮೇಲೆ ಒತ್ತಡ: ರಾಜ್ಯ ಕಂದಾಯ ನೌಕರರ ಸಂಘದ ಅಧ್ಯಕ್ಷ ವಿಜಯ್‌ ಕುಮಾರ್‌ ಮಾತನಾಡಿ, ಗ್ರಾಮ ಸಹಾಯಕರ ಹುದ್ದೆ ಈವರೆಗೂ ಕಾಯಂ ಗೊಳಿಸಿಲ್ಲ. ಆದ್ದರಿಂದ ಜಿಲ್ಲೆಯ ಗ್ರಾಮ ಲೆಕ್ಕಾಧಿಕಾರಿಗಳು, ಒಂದು ದಿನದ ಸಾಂಕೇತಿಕ ಮುಷ್ಕರ ನಡೆಸಲಾಗಿದೆ. ಮನವಿಗೆ ಸ್ಪಂದಿಸದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು. ಸರ್ಕಾರಿ ರಜಾ ದಿನಗಳಲ್ಲೂ ಕರ್ತವ್ಯದ ನೆಪದಲ್ಲಿ ಒತ್ತಡ ಹೇರಲಾಗುತ್ತಿದೆ. ಜತೆಗೆ ಅನ್ಯ ಇಲಾಖೆಗಳ ಕೆಲಸದ ಒತ್ತಡ ಹೇರಲಾಗುತ್ತಿದೆ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡು ಒತ್ತಡ ಕಡಿಮೆಗೊಳಿಸಬೇಕು ಎಂದು ಆಗ್ರಹಿಸಿದರು.

ಮುಂಬಡ್ತಿ ಅನ್ಯಾಯ ಸರಿಪಡಿಸಿ: ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಗೌರವಾಧ್ಯಕ್ಷ ಡಿ.ಸಂದೀಪ್‌ ಮಾತನಾಡಿ, ಗ್ರಾಮ ಲೆಕ್ಕಾಧಿಕಾರಿಗಳ ಮುಂಬಡ್ತಿಯಲ್ಲಿ ಅನ್ಯಾಯ ವಾಗುತ್ತಿದೆ. ಇದನ್ನು ಸರಪಡಿಸಬೇಕು. ಪ್ರಯಾಣ ಬಡ್ತಿ ದರವನ್ನು ಒಂದು ಸಾವಿರಕ್ಕೆ ಹೆಚ್ಚುಸುವಂತೆ ಮನವಿ ಮಾಡಲಾಗಿದೆ. ಆದರೆ ಸರ್ಕಾರ ಕೇವಲ 300-500 ರೂ. ಮಾತ್ರ ಹೆಚ್ಚಿಸಿದ್ದು, ಪುನರ್‌ ಪರಿಶೀಲಿಸಬೇಕು. ಲೆಕ್ಕಾಧಿಕಾರಿ ಗಳಿಗೆ ಜಾಬ್‌ಚಾರ್ಟ್‌ ನೀಡಬೇಕು ಎಂದರು.

ವಿಶೇಷ ಪರಿಹಾರ ನೀಡಿ: ಜಿಲ್ಲಾ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಶಿವಕುಮಾರ್‌ ಮಾತನಾಡಿ, ಮರಳು ಅಕ್ರಮ ದಂಧೆಕೋರರಿಮದ ಲಾರಿ ಹರಿದು ಮೃತಪಟ್ಟಿರುವ ಸಾಹೇಬ್‌ ಪಾಟೀಲ್ ಎಂಬ ಗ್ರಾಮ ಲೆಕ್ಕಾಧಿಕಾರಿ ಕುಟುಂಬಕ್ಕೆ ಈವರೆಗೂ ವಿಶೇಷ ಪರಿಹಾರ ಮಂಜೂರು ಮಾಡಿಲ್ಲ. ರಾಜ್ಯ ಸರ್ಕಾರ ಕೂಡಲೇ 20 ಲಕ್ಷ ರೂ. ವಿಶೇಷ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಡೀಸಿ ಸಿ.ಎಸ್‌. ಕರೀಗೌಡರಿಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಮಾತ ನಾಡಿ, ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸರ್ಕಾ ರಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು. ತಾಲೂಕು ಗ್ರಾಮಲೆಕ್ಕಾಧಿಕಾರಿ ಸಂಘದ ಅಧ್ಯಕ್ಷ ಮಹೇಶ್‌ ಹಾಗೂ ಪದಾಧಿಕಾರಿಗಳು ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ನೆಲಮಂಗಲ: ರಾಷ್ಟ್ರದಲ್ಲಿ ದೇಶ ವಿರೋಧಿ ಹೇಳಿಕೆ ನೀಡಿ, ಶತ್ರು ರಾಷ್ಟ್ರಗಳ ಪರ ಘೋಷಣೆ ಕೂಗುವ ಪ್ರತಿಯೊಬ್ಬರಿಗೂ ದೇಶದ ಅನ್ನ, ನೀರು ನೀಡದೆ ಗಡಿಪಾರು ಮಾಡಬೇಕು ಎಂದು...

  • ದೇವನಹಳ್ಳಿ: ಯಾವುದೇ ಅಗ್ನಿ ಅವಘಡಗಳು ಸಂಭವಿಸಿದಾಗ ಮುನ್ನೆಚ್ಚರಿಕೆ ಕ್ರಮ ವಹಿಸಿದರೆ, ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟಬಹುದೆಂದುಇಂಡಿಯನ್‌ ಆಯಿಲ್‌...

  • ನೆಲಮಂಗಲ : ರೈತರಿಗೆ ಎದುರಾಗುವ ಬೆಲೆ ಕುಸಿತ, ಬೆಳೆಹಾನಿಯ ಸಂಕಷ್ಟಗಳ ನಡುವೆ ಸರ್ವರ್‌ ಸಮಸ್ಯೆಯಿಂದಾಗಿ, ಸಾಲ ಸೌಲಭ್ಯಕ್ಕಾಗಿ ಬೆಳೆ ಆಧಾರ್‌ ಪತ್ರ ಪಡೆಯಲು ಅಲೆದಾಡುವ...

  • ನೆಲಮಂಗಲ : ತರಕಾರಿ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರು, ಬೆಳೆದ ಬೆಳೆಯನ್ನು ರಸ್ತೆಗೆ ಸುರಿಯದೇ ಮಠಗಳು ಹಾಗೂ ದಾಸೋಹ ಕೇಂದ್ರಗಳಿಗೆ ರವಾನೆ ಮಾಡುವ ಮೂಲಕ ಸಂಕಷ್ಟದಲ್ಲೂ...

  • ಹೊಸಕೋಟೆ: ಶಿವಾಜಿ ಮಹಾರಾಜರು ಹೊಂದಿದ್ದ ಹೋರಾಟ ಮನೋಭಾವ, ತೋರಿದ ದೈರ್ಯ, ಶೌರ್ಯ ಯುವಕರಿಗೆ ಸ್ಪೂರ್ತಿಯಾಗಿದೆ ಎಂದು ತಹಶೀಲ್ದಾರ್‌ ವಿ. ಗೀತಾ ಹೇಳಿದರು. ಅವರು...

ಹೊಸ ಸೇರ್ಪಡೆ