ಶಾಸಕರ ದರ್ಪದ ಮಾತಿಗೆ ಸಾರ್ವಜನಿಕರ ಆಕ್ರೋಶ

Team Udayavani, Oct 16, 2021, 11:54 AM IST

Public outrage over legislators’ dirty talk – issue at Nelamangala

ನೆಲಮಂಗಲ: ರಸ್ತೆ ಸಮಸ್ಯೆ ನಿಮಗೆ ತಿಳಿದಿದೆ ಸಮಸ್ಯೆ ಬಗೆಹರಿಸಿಕೊಡಿ ಸರ್‌ ಎಂದು ಕೇಳಿದ ಗ್ರಾಮದ ಯುವಕನಿಗೆ ಶಾಸಕರು ದರ್ಪದ ಉತ್ತರ ನೀಡಿರುವ ಆಡಿಯೋ ವೈರಲ್‌ ಆಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತಾಲೂಕಿನ ಶ್ರೀನಿವಾಸಪುರ ಗ್ರಾಪಂ ಭೈರಸಂದ್ರದ ತೊರೆಪಾಳ್ಯ ಗ್ರಾಮ, ನಗರದಿಂದ 7ಕಿಮೀ ದೂರವಿದ್ದು ಉತ್ತಮ ರಸ್ತೆ ಇಲ್ಲದೆ ಕೆಸರುಗದ್ದೆ ಹಾಗೂ ಗುಂಡಿಬಿದ್ದು ಸಮಸ್ಯೆ ಎದುರಾಗಿತ್ತು.

ಅನೇಕ ಬಾರಿ ಮನವಿ ಮಾಡಿದರು ಸಮಸ್ಯೆ ಬಗೆಹರಿಸದ ಕಾರಣ ಶಾಸಕರ ವಿರುದ್ಧ ಅ.11ರಂದು ತೊರೆಪಾಳ್ಯಗ್ರಾಮದ ಜನರು ವಿನೂತನ ಪ್ರತಿಭಟನೆ ಮಾಡಿ ಶಾಸಕರೇ ನಮ್ಮ ಗ್ರಾಮಕ್ಕೆ ರಸ್ತೆ ಮಾಡಿಸಿಕೊಡಿ ನಿಮ್ಮ ಪಾದಪೂಜೆ ಮಾಡುವೆವು ಎಂದು ಮಾಧ್ಯಮದ ಮೂಲಕ ಮನವಿ ಮಾಡಿದ್ದರು. ಅನಂತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಮಾಡಿ ವಾಸ್ತವತೆ ಮನಗಂಡಿದ್ದರು.

ಇದನ್ನೂ ಓದಿ:- ಜನ ನನ್ನ ಕೈ ಬಿಡಲ್ಲ: ರಮೇಶ ಭೂಸನೂರ

ಕೆಸರಲ್ಲಿ ಸಿಲುಕಿದ ಕಾರು: ಪತ್ರಿಕಾ ಮಾಧ್ಯಮದಲ್ಲಿ ಸುದ್ದಿಯಾದ ತಕ್ಷಣ ಸ್ಥಳಕ್ಕೆ ಬಂದ ತಾಪಂ ಅಧಿಕಾರಿಗಳು ಹಾಗೂ ಗ್ರಾಪಂ ಅಧ್ಯಕ್ಷರು ರಸ್ತೆ ಪರಿಶೀಲನೆ ಮಾಡಿ ಹೋಗುವಾಗ ಅವರ ಕಾರು ಕೆಸರಿನಲ್ಲಿ ಸಿಲುಕಿತು. ಗ್ರಾಮಸ್ಥರು ಟ್ರ್ಯಾಕ್ಟರ್‌ಮೂಲಕ ಕಾರನ್ನು ಎಳೆದು ಹೊರಗೆ ತೆಗೆದ ಘಟನೆ ನಡೆದಿದ್ದು ಗ್ರಾಮದ ರಸ್ತೆ ಸಮಸ್ಯೆಅಧಿಕಾರಿಗಳಿಗೆ ಸ್ಥಳದಲ್ಲಿ ಅರಿವಾಗಿದೆ.

 ಜಿಲ್ಲಾಧಿಕಾರಿ ಬರುವಂತೆ ಮನವಿ: ನೆಲಮಂಗಲ ದಲ್ಲಿ ಈ ಬಾರಿ ಡಿಸಿ ನಡೆ ಹಳ್ಳಿ ಕಡೆ ಕಾರ್ಯಕ್ರಮವಿದ್ದು ಜಿಲ್ಲಾಧಿಕಾರಿಗಳು ತೊರೆಪಾಳ್ಯ ಗ್ರಾಮಕ್ಕೆ ಬಂದು ರಸ್ತೆ ಸಮಸ್ಯೆ ಬಗೆಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಸಾಮಾಜಿಕ ಜಾಲತಾಣದಲ್ಲಿ ಜಿಲ್ಲಾಧಿಕಾರಿಗಳು ಯಾವಾಗ ಬರುತ್ತೀರಾ ತೊರಪಾಳ್ಯಕ್ಕೆ ಎಂಬ ಸಂದೇಶ ವೈರಲ್‌ ಆಗಿದೆ.

ಶಾಸಕರ ವಿರುದ್ಧ ಆಕ್ರೋಶ: ತೊರೆಪಾಳ್ಯಗ್ರಾಮದ ಯುವಕನೊಬ್ಬ ಶಾಸಕರಿಗೆ ಕರೆ ಮಾಡಿ, ಸರ್‌ ನಾನು ನೆಲಮಂಗಲ ತಾಲೂಕಿನ ತೊರೆಪಾಳ್ಯ ಗ್ರಾಮದವನು. ನಮ್ಮ ಗ್ರಾಮದಲ್ಲಿ ರಸ್ತೆ ಸಮಸ್ಯೆ ನಿಮಗೆ ತಿಳಿದಿದೆ. ಸರಿ ಪಡಿಸಿ ಸರ್‌ ಎಂದು ಕೇಳಿರುವುದಕ್ಕೆ ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ಪ್ರತಿಕ್ರಿಯಿಸಿ ಮಾಧ್ಯಮದಲ್ಲಿ ತೋರಿಸಿ ಸುದ್ದಿ ಮಾಡಿದ್ದಾರಲ್ಲ, ಅವರ ಕೈಯಲ್ಲೇ ಮಾಡಿಸಿಕೊಳ್ಳಿ, ಮಾಧ್ಯಮದವರೇ ಬಂದು ಮಾಡುತ್ತಾರೆ ಡೋಂಟ್‌ವರಿ ಎಂದು ಹೇಳಿ ಕರೆ ಕಟ್‌ ಮಾಡಿರುವ ಆಡಿಯೋ ಜಾಲ ತಾಣದಲ್ಲಿ ವೈರಲ್‌ ಆಗಿದೆ.

ಇದಕ್ಕೆ ಸಾಮಾಜಿಕ ಜಾಲತಾಣ ಸೇರಿದಂತೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ. ಸಮಸ್ಯೆ ವರದಿ ಮಾಡುವುದು ಮಾಧ್ಯಮದ ಕರ್ತವ್ಯ, ಹೋರಾಟ ಮಾಡಿ ಸಮಸ್ಯೆ ಬಗೆಹರಿಸುವಂತೆ ಕೇಳುವುದು ಸಂಘಟನೆಗಳ ಕರ್ತವ್ಯ, ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವುದು ಜನಪ್ರತಿನಿಧಿಯ ಕರ್ತವ್ಯ.

ಆದರೆ ಮಾಧ್ಯಮದವರೇ ಮಾಡಿಸಲಿ ಎಂಬ ಶಾಸಕರ ಬೇಜವಾಬ್ದಾರಿಯ ಹೇಳಿಕೆ ಸರಿಯಲ್ಲ, ಶಾಸಕರೇ ನಿಮ್ಮ ಕೈನಲ್ಲಿ ಆಗಲ್ಲ ಅಂದ್ರೆ ಹೇಳಿ ನಾವೇ ಭಿಕ್ಷೆಬೇಡಿ ರಸ್ತೆ ಮಾಡಿಸುತ್ತೇವೆ ಎಂದು ಕರ್ನಾಟಕ ಜನ ಸೈನ್ಯ, ಕರ್ನಾಟಕ ರಣಧೀರ ವೇದಿಕೆ ರಾಜ್ಯಾಧ್ಯಕ್ಷರು ಹಾಗೂ ರೈತಪರ ಸಂಘಟನೆಗಳು ಎಚ್ಚರಿಕೆ ನೀಡಿವೆ. ಮಾನವಿಯತೆ ಮರೆತ ಶಾಸಕ ಗ್ರಾಮದ ಜನರ ಮನವಿಗೆ ಸ್ಪಂದಿಸಿ ಸ್ಥಳ ಪರಿಶೀಲನೆ ಮಾಡಿ ಕಾಮಗಾರಿ ಮಾಡಬೇಕಾಗಿದ್ದ ಶಾಸಕರು ದರ್ಪದ ಮಾತುಗಳನ್ನು ಹೇಳುವ ಜತೆ ಕಾಮಗಾರಿ ಮಾಡಲು ಮುಂದಾಗದಿ ರುವುದು ದುರಂತವೇ ಸರಿ. ಅಧಿಕಾರಕ್ಕಾಗಿ ಮತ ಕೇಳಲು ಬರುವ ಶಾಸಕರು ಸಮಸ್ಯೆಗಳಿಗೆ ಬೆನ್ನು ತೋರಿಸಿರೋದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

ಟಾಪ್ ನ್ಯೂಸ್

ಅಸ್ತಿತ್ವವಾದಿ ಹೋರಾಟಗಳನ್ನು ಚಲನಚಿತ್ರಗಳಲ್ಲಿ ಸೆರೆಹಿಡಿದ ಸತ್ಯಜಿತ್ ರೇ : ಮನು ಚಕ್ರವರ್ತಿ

ಅಸ್ತಿತ್ವವಾದಿ ಹೋರಾಟಗಳನ್ನು ಚಲನಚಿತ್ರಗಳಲ್ಲಿ ಸೆರೆಹಿಡಿದ ಸತ್ಯಜಿತ್ ರೇ : ಮನು ಚಕ್ರವರ್ತಿ

3 ವರ್ಷದ ಹಿಂದೆ ಜೀವಾವಧಿ ಶಿಕ್ಷೆಗೆ ಗುರಿಯಾಗಿ ತಪ್ಪಿಸಿಕೊಂಡಿದ್ದ ಅಪರಾಧಿ ಸೆರೆ

3 ವರ್ಷದ ಹಿಂದೆ ಜೀವಾವಧಿ ಶಿಕ್ಷೆಗೆ ಗುರಿಯಾಗಿ ತಪ್ಪಿಸಿಕೊಂಡಿದ್ದ ಅಪರಾಧಿ ಸೆರೆ

kambala5

ಹೊಸಮಠ ಕಂಬಳದಲ್ಲಿ ಹಲಗೆ ಸಹಿತ ಕೆರೆಗೆ ಜಿಗಿದ ಕೋಣಗಳು ; ತಪ್ಪಿದ ಅನಾಹುತ

cm-bomm

ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ: ರಾಜ್ಯ ಸರ್ಕಾರದ ವಿರೋಧ

yoga

ಎ ಮಂಜುಗೆ ಸೆಡ್ಡು : ಬಿಜೆಪಿಗೆ ಮರಳಿದ ಯೋಗ ರಮೇಶ್

1-ffdd

ಅವ್ಯವಸ್ಥೆಯ ಕುರಿತು ದೂರು : ದೆಹಲಿ ವಿಮಾನ ನಿಲ್ದಾಣದಲ್ಲಿ 20 ಪರೀಕ್ಷಾ ಕೌಂಟರ್‌

ಕೋಟಿ ರೂ.ಬಿಡುಗಡೆಯಾದರೂ ಬಿಳಿಗಿರಿರಂಗನ ದೇಗುಲದಲ್ಲಿ ಕಳಪೆ ನೆಲಹಾಸು

ಕೋಟಿ ರೂ.ಬಿಡುಗಡೆಯಾದರೂ ಬಿಳಿಗಿರಿರಂಗನ ದೇಗುಲದಲ್ಲಿ ಕಳಪೆ ನೆಲಹಾಸುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮತ್ತೆ ಮಳೆ ಅರ್ಭಟ, ನೆಲಕಚ್ಚಿದ ಬೆಳೆ : ರಾಗಿ ತೆನೆ ಕೊಯ್ಲು ಮಾಡಲಾಗದೇ ರೈತರ ಪರದಾಟ

ಮತ್ತೆ ಮಳೆ ಅರ್ಭಟ, ನೆಲಕಚ್ಚಿದ ಬೆಳೆ : ರಾಗಿ ತೆನೆ ಕೊಯ್ಲು ಮಾಡಲಾಗದೇ ರೈತರ ಪರದಾಟ

ವಿಧಾನಪರಿಷತ್ ಚುನಾವಣೆ : ಸೇಡು ತೀರಿಸಿಕೊಳ್ಳಲು ಜೆಡಿಎಸ್‌ ತವಕ

ವಿಧಾನಪರಿಷತ್ ಚುನಾವಣೆ : ಸೇಡು ತೀರಿಸಿಕೊಳ್ಳಲು ಜೆಡಿಎಸ್‌ ತವಕ

PANCHAYATH ELECTION

ಗ್ರಾಪಂಗಳಿಗೆ ಚುನಾವಣೆ ಘೋಷಣೆ

lake filled

ಬೂದಿಗೆರೆ ಕೆರೆಯಲ್ಲಿನ್ನು 24ಗಂಟೆಯೂ ನೀರು

protest

ಸಚಿವರ ಮನವಿಗೂ ಕ್ಯಾರೆ ಎನ್ನಲಿಲ್ಲ..!

MUST WATCH

udayavani youtube

ಹೊಸಮಠ ಕಂಬಳದಲ್ಲಿ ಹಲಗೆ ಸಹಿತ ಕೆರೆಗೆ ಜಿಗಿದ ಕೋಣಗಳು ; ತಪ್ಪಿದ ಅನಾಹುತ

udayavani youtube

ನಮ್ಮ ನೌಕಾಪಡೆ ಎಲ್ಲದಕ್ಕೂ ಸನ್ನದ್ಧ !

udayavani youtube

ಸರ್ಕಾರ ಹೇಗೆಲ್ಲಾ ರೈತರ ಬೆಂಬಲಕ್ಕೆ ನಿಂತಿದೆ ?

udayavani youtube

ಬಂಟ್ವಾಳ : ಬೇಟೆಗಾಗಿ ಬಂದು ಹೆದರಿ ಓಡಿದ ಚಿರತೆ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

udayavani youtube

ಚಿಕ್ಕಮಗಳೂರು : ಕಾಫಿ ತೋಟದೊಳಗೆ ನುಗ್ಗಿದ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಾವಲು ವಾಹನ

ಹೊಸ ಸೇರ್ಪಡೆ

ಅಸ್ತಿತ್ವವಾದಿ ಹೋರಾಟಗಳನ್ನು ಚಲನಚಿತ್ರಗಳಲ್ಲಿ ಸೆರೆಹಿಡಿದ ಸತ್ಯಜಿತ್ ರೇ : ಮನು ಚಕ್ರವರ್ತಿ

ಅಸ್ತಿತ್ವವಾದಿ ಹೋರಾಟಗಳನ್ನು ಚಲನಚಿತ್ರಗಳಲ್ಲಿ ಸೆರೆಹಿಡಿದ ಸತ್ಯಜಿತ್ ರೇ : ಮನು ಚಕ್ರವರ್ತಿ

3 ವರ್ಷದ ಹಿಂದೆ ಜೀವಾವಧಿ ಶಿಕ್ಷೆಗೆ ಗುರಿಯಾಗಿ ತಪ್ಪಿಸಿಕೊಂಡಿದ್ದ ಅಪರಾಧಿ ಸೆರೆ

3 ವರ್ಷದ ಹಿಂದೆ ಜೀವಾವಧಿ ಶಿಕ್ಷೆಗೆ ಗುರಿಯಾಗಿ ತಪ್ಪಿಸಿಕೊಂಡಿದ್ದ ಅಪರಾಧಿ ಸೆರೆ

acb

ಚಾಮರಾಜನಗರ : ತೆರಿಗೆ ಇಲಾಖೆಯ ಇಬ್ಬರು ಇನ್‌ಸ್ಪೆಕ್ಟರ್‌ಗಳು ಎಸಿಬಿ ಬಲೆಗೆ

kambala5

ಹೊಸಮಠ ಕಂಬಳದಲ್ಲಿ ಹಲಗೆ ಸಹಿತ ಕೆರೆಗೆ ಜಿಗಿದ ಕೋಣಗಳು ; ತಪ್ಪಿದ ಅನಾಹುತ

cm-bomm

ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ: ರಾಜ್ಯ ಸರ್ಕಾರದ ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.