Udayavni Special

ರೈಲು ಸಂಪರ್ಕ, ರೈತರ ಸಾಲ ಮನ್ನಾದ ನಿರೀಕ್ಷೆ ಹುಸಿ


Team Udayavani, Jul 6, 2019, 3:00 AM IST

railu

ದೇವನಹಳ್ಳಿ: ಕೇಂದ್ರ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್‌ ಅವರು ಶುಕ್ರವಾರ ಮಂಡಿಸಿದ 2019-20ನೇ ಸಾಲಿನ ಆಯವ್ಯಯದಲ್ಲಿ ದೇವನಹಳ್ಳಿಗೆ ರೈಲು ಸಂಪರ್ಕ ಮತ್ತು ರೈತರ ಸಾಲ ಮನ್ನಾದ ನಿರೀಕ್ಷೆಯಲ್ಲಿದ್ದ ಜನರಿಗೆ ನಿರಾಸೆ ಮೂಡಿಸಿದೆ.

ರೈತರ ಸಾಲಮನ್ನಾ, ಶಾಶ್ವತ ಕುಡಿಯುವ ನೀರು, ಸ್ವಾಮಿನಾಥನ್‌ ವರದಿ, ಬೆಳೆಗಳಿಗೆ ಬೆಂಬಲ ಬೆಲೆ, ಪೆಟ್ರೋಲ್‌, ಡೀಸೆಲ್‌ ದರದ ನಿಯಂತ್ರಣ ಹಾಗೂ ದಿನನಿತ್ಯ ಬಳಸುವ ವಸ್ತುಗಳ ಬೆಲೆ ಏರಿಕೆಗಳ ಬಗ್ಗೆ ಕ್ರಮ ಕೈಗೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಸಾರ್ವಜನಿಕರಿಗೆ ನಿರಾಸೆ ಮೂಡಿಸಿದೆ.

ನೀರಾವರಿಗೆ ಅನುದಾನವಿಲ್ಲ: ಬಯಲು ಸೀಮೆ ಪ್ರದೇಶವಾಗಿರುವುದರಿಂದ ಯಾವುದೇ ನದಿ ಮೂಲಗಳು ಇಲ್ಲ. ಕುಡಿಯುವ ನೀರಿಗೆ ಹೆಚ್ಚಿನ ಹಾಹಾಕಾರ ಇರುವುದರಿಂದ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಅನುದಾನ ಮೀಸಲಿಡುತ್ತದೆ ಎಂಬುವ ಆಶಾ ಭಾವನೆಯಲ್ಲಿದ್ದ ಜನರಿಗೆ ನೀರಾವರಿಗೆ ಯಾವುದೇ ಯೋಜನೆ ಮತ್ತು ಅನುದಾನ ನೀಡದಿರುವುದು ಬೇಸರ ತಂದಿದೆ.

ರೈಲು ಸಂಪರ್ಕವಿಲ್ಲ: ಚಿಕ್ಕಬಳ್ಳಾಪುರ, ಬೆಂಗಳೂರು ಮಾರ್ಗಕ್ಕೆ ರೈಲು ಸಂಪರ್ಕ ಹೆಚ್ಚಾಗುತ್ತದೆ ಎಂಬುವ ಭಾವನೆಯಲ್ಲಿದ್ದ ಜನರಿಗೆ ಈ ಬಜೆಟ್‌ನಲ್ಲಿ ನಿರಾಶೆ ಉಂಟಾಗಿದೆ. ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಸದ್ಯಕ್ಕೆ ಎರಡು ರೈಲುಗಳು ಮಾತ್ರ ಸಂಚರಿಸುತ್ತಿದ್ದು, ಯಂಶವಂತಪುರದಿಂದ ದೇವನಹಳ್ಳಿ ಬೆಳಗ್ಗೆ 11 ಗಂಟೆಗೆ ಬಂದು ಪುನಃ ಬೆಂಗಳೂರಿಗೆ ವಾಪಾಸ್‌ ಹೋಗುತ್ತಿದೆ. ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಹೆಚ್ಚು ರೈಲುಗಳು ಬರುವ ನಿರೀಕ್ಷೆಯಲ್ಲಿದ್ದ ಜನರಿಗೆ ನಿರಾಶೆ ಮೂಡಿಸಿದೆ.

ಸಾಲ ಮನ್ನಾವಿಲ್ಲದ ಬಜೆಟ್‌: ಬರಗಾಲದಿಂದ ತತ್ತರಿಸಿ ಹೋಗಿದ್ದ ರೈತರಿಗೆ ಕೆಂದ್ರ ಸರ್ಕಾರ ಸಾಲ ಮನ್ನಾ ಮಾಡುತ್ತದೆ ಎಂಬುವ ಭಾವನೆಯಲ್ಲಿದ್ದವರಿಗೆ ಅದು ಸಹ ಕನ ಸಾಗೇ ಉಳಿ ದಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದರಿಂದ ತಾಲೂಕಿಗೆ ಕೇಂದ್ರದಿಂದ ಯಾವುದಾದರೂ ಯೋಜನೆ ಬರುತ್ತದೆ ಎಂಬುವ ಆಶಾಭಾವನೆ ಇತ್ತು ಅದು ಸಹ ಹುಸಿಯಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಕೀರ್ಣ ಮತ್ತು ಜಿಲ್ಲಾ ಕೇಂದ್ರವಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರಿಗೆ ಹೆಚ್ಚಿನ ಯೋಜನೆ ಇದ್ದ ಭರವಸೆ ಇದ್ದ ಜನರಿಗೆ ತಣ್ಣಿರು ಎರಚುವಂತಾಗಿದೆ.

ರೇಷ್ಮೆ ಆಮದು ಸುಂಕ ಹೆಚ್ಚಿನ ಹೆಚ್ಚು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು ಮಾಡದೇ ಇರುವುದು ಬೇಸರ ತಂದಿದೆ. ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವ ಬಗ್ಗೆ ಘೋಷಣೆ ಮಾಡದಿರುವುದು. ರೈತ ವಿರೋಧಿ ನೀತಿ ಆಗಿದೆ.
-ಕಲ್ಯಾಣ್‌ಕುಮಾರ್‌ ಬಾಬು, ರೇಷ್ಮೆ ಹಿತ ರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ

ರೈತರು ಸಂಕಷ್ಟದಲ್ಲಿದ್ದು ಬರಗಾಲ ಹಾಗೂ ನೀರಿನ ಸಮಸ್ಯೆಯಿಂದ ಪರಿತಪಿಸುತ್ತಿದ್ದರೂ ಸಹ ರೈತ ಸಮಸ್ಯೆಗೆ ಸ್ಪಂದಿಸದೆ ರೈತರಿಗೆ ಅನಾಕೂಲವಾದ ಬಜೆಟ್‌ ಆಗಿದೆ. ರೈತರ ಸಾಲ ಮನ್ನಾ, ಸ್ವಾಮಿನಾಥನ್‌ ವರದಿ ಸಂಬಂಧಿಸಿದಂತೆ ವಿಷಯವೇ ಪ್ರಸ್ತಾ ಪವಾಗಿಲ್ಲ ರೈತರ ಆತ್ಮಹತ್ಯೆ ತಡೆಯುವಲ್ಲಿ ಯಾವುದೇ ಪ್ರಯತ್ನ ಮಾಡಿಲ್ಲ. ಕೃಷಿಗೆ ಶಾಶ್ವತವಾಗಿ ಅನುಕೂಲವಾಗುವ ಕಾರ್ಯಕ್ರಮಗಳನ್ನು ಮಾಡುವಲ್ಲಿ ವಿಫ‌ಲರಾಗಿದ್ದಾರೆ.
-ಬಿದಲೂರು ಆರ್‌.ರಮೇಶ್‌, ತಾಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ

ರೈತರ, ಬಡ ವರ್ಗದ ಜನರಿಗೆ ಈ ಬಜೆಟ್‌ನಿಂದ ಯಾವುದೇ ಉಪಯೋಗವಿಲ್ಲ. ಇದು ತೃಪ್ತಿದಾಯಕ ಬಜೆಟ್‌ ಅಲ್ಲ. ನೀಡಿರುವ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫ‌ಲರಾಗಿದ್ದಾರೆ. ಕೇವಲ ಪತ್ರಕ್ಕೆ ಸೀಮಿತವಾಗಿದೆ. ಈ ಮುಂಗಡ ಪತ್ರ ಉಳ್ಳವರಿಗೆ ಕೈಗಾರಿಕೋದ್ಯಮಿಗಳ ಪರ ಬಜೆಟ್‌ ಆಗಿದೆ.
-ಕೆ.ಸಿ.ಮಂಜುನಾಥ್‌, ಜಿಪಂ ಸದಸ್ಯ

ಪೆಟ್ರೋಲ್‌, ಡೀಸೆಲ್‌ಗ‌ಳ ಬೆಲೆ ಒಂದು ರೂ. ಸೆಸ್ಕ್ ಹೆಚ್ಚಿಸಿ ಶ್ರೀಮಂತ ಬಡವರಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಇಂದ ತತ್ತರಿಸಿ ಹೋಗಿದ್ದಾರೆ. ಕೇಂದ್ರ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫ‌ಲರಾಗಿದ್ದಾರೆ. 5 ವರ್ಷದಲ್ಲಿ ಮಾಡದ ಸಾಧನೆಯನ್ನು ಈಗ ಹೇಗೆ ಮಾಡುತ್ತಾರೆ.
-ಬಿ.ಮುನೇಗೌಡ, ಜೆಡಿಎಸ್‌ ಜಿಲ್ಲಾಧ್ಯಕ್ಷ

ರೈತರ, ಬಡವರ ದೀನ ದಲಿತರ ಹಿಂದುಳಿದ ವರ್ಗದವರ ಹಾಗೂ ಎಲ್ಲಾ ಸಾಮಾನ್ಯ ಜನರ ಪರವಾದ ಬಜೆಟ್‌ ಆಗಿದೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿದೆ. ಗ್ರಾಮೀರ ಬದುಕನ್ನು ಹಸನು ಮಾಡುವ ಬಜೆಟ್‌ ಆಗಿದೆ.
-ಬಿ.ರಾಜಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ

ಶ್ರೀ ಸಾಮಾನ್ಯರ ಮತ್ತು ರೈತರ ಪರ ಬಜೆಟ್‌ ಆಗಿದೆ. ಕಿಸಾನ್‌ ಸಮ್ಮಾನ್‌ ಯೋಜನೆಗೆ 86 ಸಾವಿರ ಕೋಟಿ ಮೀಸಲಿಟ್ಟಿದೆ. 60 ವರ್ಷ ಮೇಲ್ಪಟ್ಟವರಿಗೆ ಮಾಸಿಕ 3 ಸಾವಿರ ಪಿಂಚಣಿ, ಸ್ವತ್ಛ ಭಾರತ್‌ ಯೋಜನೆ ಅಡಿಯಲ್ಲಿ 9.5 ಕೋಟಿ ಶೌಚಾಲಯ ನಿರ್ಮಾಣ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆ ಅಡಿಯಲ್ಲಿ 5 ವರ್ಷಗಳಲ್ಲಿ 1,25,000 ಕಿ.ಲೋ. ರಸ್ತೆ ಅಭಿವೃದ್ಧಿ ಹಲವಾರು ರೀತಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ ರಾಷ್ಟ್ರದ ಮಾದರಿ ಬಜೆಟ್‌ ಆಗಿದೆ.
-ಎಚ್‌.ಎಂ.ರವಿಕುಮಾರ್‌, ತಾಲೂಕು ಕೃಷಿಕ ಸಮಾಜದ ನಿರ್ದೇಶಕ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮುಂಬೈ ಸಿಟಿ ಸೆಂಟರ್ ಮಾಲ್ ನಲ್ಲಿ ಅಗ್ನಿ ಅವಗಢ: 20 ಅಗ್ನಿಶಾಮಕ ವಾಹನಗಳು ದೌಡು

ಮುಂಬೈ ಸಿಟಿ ಸೆಂಟರ್ ಮಾಲ್ ನಲ್ಲಿ ಅಗ್ನಿ ಅವಗಢ: 20 ಅಗ್ನಿಶಾಮಕ ವಾಹನಗಳು ದೌಡು

ಪರೀಕ್ಷೆ ಬಿಡಿ; ಪಠ್ಯಕ್ರಮವೇ ಬಂದಿಲ್ಲ ! ಎಸೆಸೆಲ್ಸಿ ಇನ್ನೂ ಗೊಂದಲದ ಗೂಡು

ಪರೀಕ್ಷೆ ಬಿಡಿ; ಪಠ್ಯಕ್ರಮವೇ ಬಂದಿಲ್ಲ ! ಎಸೆಸೆಲ್ಸಿ ಇನ್ನೂ ಗೊಂದಲದ ಗೂಡು

ಉದಯವಾಣಿ ಸಂದರ್ಶನ : ನಾನು ಮಾಸ್‌ ಲೀಡರ್‌ ಆಗಲು ಬಂದವನಲ್ಲ !

ಉದಯವಾಣಿ ಸಂದರ್ಶನ : ನಾನು ಮಾಸ್‌ ಲೀಡರ್‌ ಆಗಲು ಬಂದವನಲ್ಲ !

ಕೋವಿಡ್ ಲಸಿಕೆಗೆ 50,000 ಕೋಟಿ ರೂ.?

ಕೋವಿಡ್ ಲಸಿಕೆಗೆ 50,000 ಕೋಟಿ ರೂ.?

ಅಂಚೆಯಲ್ಲೇ ಭಾಗ್ಯಲಕ್ಷ್ಮೀ, ಸುಕನ್ಯಾ ಸಮೃದ್ಧಿ ಜತೆ ವಿಲೀನಕ್ಕೆ ಸಂಪುಟ ಅಸ್ತು

ಅಂಚೆಯಲ್ಲೇ ಭಾಗ್ಯಲಕ್ಷ್ಮೀ, ಸುಕನ್ಯಾ ಸಮೃದ್ಧಿ ಜತೆ ವಿಲೀನಕ್ಕೆ ಸಂಪುಟ ಅಸ್ತು

US-ELECTION

ಹೇಗಿದೆ ಅಮೆರಿಕನ್‌ ಚುನಾವಣ ಕಣ?

ಥಾರ್‌ ಮರುಭೂಮಿಯಲ್ಲೂ ನದಿ: 1,72,000 ವರ್ಷಗಳ ಹಿಂದೆ ಹರಿಯುತ್ತಿದ್ದ ನದಿ ಕುರುಹು ಪತ್ತೆ

ಥಾರ್‌ ಮರುಭೂಮಿಯಲ್ಲೂ ನದಿ: 1,72,000 ವರ್ಷಗಳ ಹಿಂದೆ ಹರಿಯುತ್ತಿದ್ದ ನದಿ ಕುರುಹು ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

br–tdy-2

ಈರುಳ್ಳಿ ಬೆಲೆ ಗ್ರಾಹಕರಿಗೆ ಬರೆ

ಯುವ ನಾಯಕತ್ವ ಬೆಂಬಲಿಸಿ:ಪ್ರವೀಣ್ ‌ಪೀಟರ್‌

ಯುವ ನಾಯಕತ್ವ ಬೆಂಬಲಿಸಿ:ಪ್ರವೀಣ್ ‌ಪೀಟರ್‌

rn-tdy-2

ಮರಗಳ ಮಾರಣಹೋಮಕ್ಕೆ ವ್ಯಾಪಕ ಆಕ್ರೋಶ

br-tdy-1

ಬೆಂ.ಗ್ರಾಮಾಂತರ ಕೋವಿಡ್ ಪರೀಕ್ಷೆ ಹೆಚ್ಚಳ

br-tdy-2

ವಿದ್ಯುತ್‌ ಖಾಸಗೀಕರಣಕ್ಕೆ ವಿರೋಧ

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್ಹೊಸ ಸೇರ್ಪಡೆ

ಮುಂಬೈ ಸಿಟಿ ಸೆಂಟರ್ ಮಾಲ್ ನಲ್ಲಿ ಅಗ್ನಿ ಅವಗಢ: 20 ಅಗ್ನಿಶಾಮಕ ವಾಹನಗಳು ದೌಡು

ಮುಂಬೈ ಸಿಟಿ ಸೆಂಟರ್ ಮಾಲ್ ನಲ್ಲಿ ಅಗ್ನಿ ಅವಗಢ: 20 ಅಗ್ನಿಶಾಮಕ ವಾಹನಗಳು ದೌಡು

ಪರೀಕ್ಷೆ ಬಿಡಿ; ಪಠ್ಯಕ್ರಮವೇ ಬಂದಿಲ್ಲ ! ಎಸೆಸೆಲ್ಸಿ ಇನ್ನೂ ಗೊಂದಲದ ಗೂಡು

ಪರೀಕ್ಷೆ ಬಿಡಿ; ಪಠ್ಯಕ್ರಮವೇ ಬಂದಿಲ್ಲ ! ಎಸೆಸೆಲ್ಸಿ ಇನ್ನೂ ಗೊಂದಲದ ಗೂಡು

ಉದಯವಾಣಿ ಸಂದರ್ಶನ : ನಾನು ಮಾಸ್‌ ಲೀಡರ್‌ ಆಗಲು ಬಂದವನಲ್ಲ !

ಉದಯವಾಣಿ ಸಂದರ್ಶನ : ನಾನು ಮಾಸ್‌ ಲೀಡರ್‌ ಆಗಲು ಬಂದವನಲ್ಲ !

ಕೋವಿಡ್ ಲಸಿಕೆಗೆ 50,000 ಕೋಟಿ ರೂ.?

ಕೋವಿಡ್ ಲಸಿಕೆಗೆ 50,000 ಕೋಟಿ ರೂ.?

ಅಂಚೆಯಲ್ಲೇ ಭಾಗ್ಯಲಕ್ಷ್ಮೀ, ಸುಕನ್ಯಾ ಸಮೃದ್ಧಿ ಜತೆ ವಿಲೀನಕ್ಕೆ ಸಂಪುಟ ಅಸ್ತು

ಅಂಚೆಯಲ್ಲೇ ಭಾಗ್ಯಲಕ್ಷ್ಮೀ, ಸುಕನ್ಯಾ ಸಮೃದ್ಧಿ ಜತೆ ವಿಲೀನಕ್ಕೆ ಸಂಪುಟ ಅಸ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.