ಮಳೆನೀರು ಕೊಯ್ಲುನಿಂದ ಸಾವಯವ ಕೃಷಿ


Team Udayavani, Jun 11, 2019, 3:00 AM IST

maleneeru

ನೆಲಮಂಗಲ: ಜಗತ್ತಿನಲ್ಲಿ ನೀರಿನ ಬವಣೆ ಹೆಚ್ಚಾಗುವ ಜೊತೆ ಅಂತರ್ಜಲದ ಮಟ್ಟ ಸಂಪೂರ್ಣವಾಗಿ ಕುಸಿತ ಕಂಡಿದೆ. ಧರೆಗೆ ಬರುವ ಮಳೆಯ ನೀರನ್ನು ಸಂಗ್ರಹಿಸದೇ ಕೊಳವೆ ಬಾವಿ ತೆಗೆದು ಭೂಮಿಯ ಒಡಲನ್ನು ಖಾಲಿ ಮಾಡುತ್ತಿರುವ ಜನರ ಮಧ್ಯೆ ಮಳೆನೀರಿನಿಂದ ಸಾವಯವ ಕೃಷಿ ಮಾಡಿಕೊಂಡು, ನಿತ್ಯಜೀವನದಲ್ಲಿ ಮಳೆಯ ನೀರನ್ನು ಬಳಸುತ್ತಿರುವ ಅಪರೂಪದ ವ್ಯಕ್ತಿಯ ಪರಿಚಯ.

ಭೂಮಿಯ ಮೇಲೆ ಬಿದ್ದ ಅಪಾರ ಮಳೆಯನೀರು ಹಿಂಗುವುದಕ್ಕಿಂತ ಹರಿದು ಹೋಗುವುದು ಹೆಚ್ಚು, ಇದನ್ನು ಮನಗಂಡ ಕೆಲವರು ಮಳೆನೀರಿನ ಕೊಯ್ಲು ವಿಧಾನದಿಂದ ನೀರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇಂತಹ ಆಧುನಿಕ ಯುಗದಲ್ಲಿ ಮಳೆಯ ನೀರಿನ ಬಳಕೆಯಿಂದ ನಿತ್ಯಜೀವನ ನಡೆಸುತ್ತಿರುವವರನ್ನು ಕಾಣುವುದೇ ಅಪರೂಪವಾಗಿದೆ.

ತಾಲೂಕಿನ ಮರಸರಹಳ್ಳಿ ಗ್ರಾಮದಲ್ಲಿ ವಾಸಿಸುತ್ತಿರುವ ನಡೂರು ರವೀಂದ್ರನಾಥ್‌ ಶೆಟ್ಟಿ ಮೂಲತಃ ಹಾಸನದ ನಡೂರಿನವರು, ಶಿಕ್ಷಣ ಮುಗಿದ ನಂತರ ಬೆಂಗಳೂರಿನಲ್ಲಿ ಬಿಎಸ್‌ಎನ್‌ಎಲ್‌ ನೌಕರರಾಗಿ ಕಾರ್ಯನಿರ್ವಹಿಸಿ ನಿವೃತ್ತಿಯಾಗಿದ್ದಾರೆ. ನಿವೃತ್ತಿಯ ನಂತರ ತಂದೆಯ ಕೃಷಿ ಆಸಕ್ತಿಯನ್ನು ಮನಗಂಡು ನೆಲಮಂಗಲದ ಮರಸರಹಳ್ಳಿಯಲ್ಲಿ ಒಂದು ಕಾಲು ಎಕರೆ ಜಮೀನು ಖರೀದಿಸಿ ಸಾವಯವ ಕೃಷಿಗೆ ಮುಂದಾಗಿ ಯಶಸ್ಸನ್ನು ಕಂಡಿದ್ದಾರೆ.

ಮಳೆನೀರು ಕೊಯ್ಲು: ಸಾವಯವ ಕೃಷಿ ಮಾಡಲು ಜಮೀನು ಖರೀದಿಸಿದ ನಂತರ ನೀರಿನ ಅನಿವಾರ್ಯತೆ ಎದುರಾಗುತ್ತದೆ. ಆ ವೇಳೆಯಲ್ಲಿ ಕೊಳವೆ ಬಾವಿಯ ಕಡೆ ಮುಖ ಮಾಡದೆ, ಒಂದು ಕಾಲು ಎಕರೆಯ ಸುತ್ತಲು ಕಾಲುವೆ ಹಾಗೂ ಬದುಗಳನ್ನು ನಿರ್ಮಾಣ ಮಾಡಿ ಮಳೆಯ ನೀರು ಹಿಂಗುವಂತೆ ಮಾಡಿದ್ದಾರೆ, ಅದಲ್ಲದೇ ಹೊಲದಲ್ಲಿ ಬೀಳುವ ನೀರು ಸಂಪೂರ್ಣವಾಗಿ ಸಂಗ್ರಹಣೆಯಾಗುವಂತೆ ಹಿಂಗುಗುಂಡಿ ನಿರ್ಮಾಣ ಮಾಡಿದ್ದಾರೆ. ಜಮೀನಿನಲ್ಲಿ ಮನೆ ಹಾಗೂ ತೋಟಕ್ಕೆ ಸಂಪೂರ್ಣ ಮಳೆನೀರು ಕೊಯ್ಲು ಯೋಜನೆ ಅಳವಡಿಸಿಕೊಂಡು, 14 ವರ್ಷದಿಂದ ಕೃಷಿ ಹಾಗೂ ಮನೆಯ ಬಳಕೆಗೆ ಮಳೆನೀರು ಬಳಸುತ್ತಿದ್ದಾರೆ.

ಸಾವಯವ ಕೃಷಿ: ಮನುಷ್ಯನ ಉತ್ತಮ ಆರೋಗ್ಯಕ್ಕೆ ಸಾವಯವ ಆಹಾರ ಮುಖ್ಯ ಎಂದು ತಿಳಿದ ಎನ್‌ಆರ್‌ಶೆಟ್ಟಿ ತೋಟದಲ್ಲಿ ಒಂದು ಹನಿ ಹೊರಗಿನ ನೀರನ್ನು ಬಳಸದೇ ಮಳೆಯ ನೀರನ್ನು ಬಳಸಿಕೊಂಡು ಐವತ್ತಕ್ಕೂ ಅಧಿಕ ತಳಿಯ ಮರಗಳು ಹಾಗೂ ಮಾವು , ಸೀತಾಫ‌ಲ, ನೆಲ್ಲಿ, ಸಪೋಟ, ಸೀಬೆ, ನೇರಳೆ, ಹಲಸು ಸೇರಿದಂತೆ ಅನೇಕ ಹಣ್ಣಿನ ಮರಗಳನ್ನು ಬೆಳೆಯವುದರ ಜೊತೆಗೆ ಬಯಲು ಸೀಮೆ ಭೂಮಿಯ ಲಕ್ಷಣಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ತೋಟದ ಸುತ್ತಲು ಕಡಿಮೆ ಖರ್ಚಿನಲ್ಲಿ ಆಗ್ರೋ ಫಾರೆಸ್ಟ್‌ ಮಾದರಿಯಲ್ಲಿ ತೇಗ,

ಹೊನ್ನೆ, ಬೀಟೆ, ಬಿದಿರು, ಸಿಲ್ವರ್‌, ಎಬೋನಿ, ಮಹಾಗನಿ ಸೇರಿದಂತೆ ಹತ್ತು ಹಲವು ಮರಗಳನ್ನು ಬೆಳೆಯುವುದಲ್ಲದೆ ಒಂದು ಕಾಲು ಎಕರೆ ಜಾಗವನ್ನು ಮಲೆನಾಡಿನ ಅರಣ್ಯದಂತೆ ಮಾಡಿದ್ದಾರೆ. ಮನೆಗೆ ಬೇಕಾದ ಎಲ್ಲಾ ಅಗತ್ಯ ತರಕಾರಿಗಳನ್ನು ಸಂಪೂರ್ಣ ಸಾವಯವ ಹಾಗೂ ಮಳೆನೀರು ಕೊಯ್ಲು ತೊಟ್ಟಿನಿಂದ ನೀರನ್ನು ಹಾಯಿಸಿ ಗ್ರಾಮೀಣ ಪ್ರದೇಶದ ರೈತರಿಗೆ ವೈಜ್ಞಾನಿಕ ಕೃಷಿ ತಜ್ಞರಾಗಿದ್ದಾರೆ.

20 ಸಾವಿರ ಲೀಟರ್‌ ಸಂಗ್ರಹ: ನೆಲಮಂಗಲ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆಯಾಗುವ ಪ್ರಮಾಣವನ್ನು ಮನಗಂಡು ಅದರ ಉಪಯೋಗ ಪಡೆಯಲು ಮುಂದಾದೆ, ಮರಸರಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ 800 ರಿಂದ 900 ಮಿ.ಮೀ ಮಳೆಯಾಗುವುದರಿಂದ 240 ಅಡಿ ವಿಸ್ತೀರ್ಣದಲ್ಲಿ 20 ಸಾವಿರ ಲೀಟರ್‌ ನೀರು ಸಂಗ್ರಹವಾಗುತ್ತದೆ. ಈ ನೀರು 6 ರಿಂದ 7 ತಿಂಗಳು ಬಳಸುತ್ತೇವೆ. ಈ ಭಾಗದಲ್ಲಿ ನವೆಂಬರ್‌, ಡಿಸೆಂಬರ್‌ ಸಮಯದಲ್ಲಿ ಮಳೆಯಾಗುವುದರಿಂದ ವರ್ಷ ಪೂರ್ಣ ಮಳೆಯ ನೀರಿನ ಬಳಕೆಮಾಡಲು ಸಹಕಾರಿಯಾಗಿದೆ ಎಂದು ಎನ್‌.ಆರ್‌.ಶೆಟ್ಟಿ ಉದಯವಾಣಿಗೆ ತಿಳಿಸಿದರು.

ಸಣ್ಣ ಹಿಡುವಳಿದಾರಿಗೆ ಅನುಕೂಲ: ನನ್ನ ಬಳಿ ಕಡಿಮೆ ಜಮೀನಿದೆ ನಾನು ವ್ಯವಸಾಯ ಮಾಡಲು ಸಾಧ್ಯವಿಲ್ಲ ಕೊಳವೆ ಬಾವಿ ತೆಗೆಸಲು ಹಣವಿಲ್ಲ ಎನ್ನುವ ರೈತರಿಗೆ ಎನ್‌.ಆರ್‌.ಶೆಟ್ಟಿಯವರು ಮಾದರಿ, ಒಂದು ಕಾಲು ಎಕರೆಯಲ್ಲಿ ಮಾಡಿರುವ ಸಾವಯವ ಕೃಷಿ ತೋಟ ಹಾಗೂ ಮಳೆನೀರು ಕೊಯ್ಲು ವಿಧಾನ ಸಣ್ಣ ಹಿಡುವಳಿದಾರ ರೈತರಿಗೆ ಬಹಳಷ್ಟು ಅನುಕೂಲಕರವಾಗಿದೆ.

14 ವರ್ಷ ಜೀವನ: ತಾಲೂಕಿನ ಮರಸರಹಳ್ಳಿ ಗ್ರಾಮಕ್ಕೆ ಬಂದ ಎನ್‌.ಆರ್‌.ಶೆಟ್ಟಿ ಹಾಗೂ ಪತ್ನಿ ಸರಸ್ವತಿ 14 ವರ್ಷಗಳಿಂದ ಗ್ರಾಪಂನಿಂದ ಬರುವ ಕುಡಿಯುವ ನೀರು ಅಥವಾ ಕೊಳವೆ ಬಾವಿಯ ನೀರನ್ನು ಬಳಸದೇ 15 ಅಡಿ ಅಗಲ, 30 ಅಡಿ ಉದ್ದವಿರುವ ಹಂಚಿನ ಮನೆಯಲ್ಲಿ ಮಳೆನೀರು ಕೊಯ್ಲು ಪದ್ಧತಿಯಿಂದ ಸಂಪಿನಲ್ಲಿ ನೀರನ್ನು ಸಂಗ್ರಹಿಸಿ ಆ ನೀರನ್ನು ಶುದ್ಧೀಕರಿಸಿ ಕುಡಿಯಲು, ಅಡುಗೆಗೆ ಹಾಗೂ ದಿನನಿತ್ಯ ಚಟುವಟಿಕೆಗಳಲ್ಲಿ ಮಳೆಯ ನೀರನ್ನೇ ಬಳಸುತ್ತಿದ್ದಾರೆ.

ಪ್ರಧಾನಿ ಮೋದಿ ಅಭಿನಂದನೆ: ಎನ್‌.ಆರ್‌.ಶೆಟ್ಟಿ ಬೆಂಗಳೂರಿನಲ್ಲಿ ಸಹಜ ಸಮೃದ್ಧ ಟ್ರಸ್ಟ್‌ ರಚಿಸಿಕೊಂಡು ಕಳೆದ ಹದಿನೈದು ವರ್ಷಗಳಿಂದ ಸಾವಯುವ ಕೂಟ ರಚಿಸಿದ್ದಾರೆ. ಈ ಕೂಟಕ್ಕೆ 2018ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ತಿಳಿಸಿರುವ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಾರೆ.

ಮಡಿಕೆಯ ನೀರು: 14 ವರ್ಷಗಳ ಹಿಂದೆಯೇ ಅಗೋಫಾರೆಸ್ಟ್‌ ಮಾಡಿ ಬೇಸಿಗೆಯಲ್ಲಿ ಮರಗಳಿಗೆ ನೀರು ಒದಗಿಸಲು ಮರದ ಬುಡಕ್ಕೆ ಮಡಿಕೆಯನ್ನು ಹೂದಿಗಿಸಿ ನೀರನ್ನು ಹಾಯಿಸಿ ಅಂದಿನ ಕಾಲದಲ್ಲೇ ಇಂದಿನ ಇಸೇಲ್‌ ಮಾದರಿ ಕೃಷಿಯನ್ನು ಅಳವಡಿಸಿಕೊಂಡ ಸಸಿಗಳನ್ನು ಮರಗಳಾಗಿ ಮಾಡಿರುವ ಎನ್‌.ಆರ್‌.ಶೆಟ್ಟಿಯವರ ಪರಿಶ್ರಮ ನಿಜಕ್ಕೂ ಮಾದರಿ.

* ಕೊಟ್ರೇಶ್‌.ಆರ್‌

ಟಾಪ್ ನ್ಯೂಸ್

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಹೃದಯಾಘಾತಗೊಂಡು ಎಎಸ್ಐ ಸಾವು

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಹೃದಯಾಘಾತಗೊಂಡು ಎಎಸ್ಐ ಸಾವು

ಸಿದ್ದು-ಡಿಕೆಶಿ ತಿಕ್ಕಾಟದಿಂದ ಹಲವರು ಕಾಂಗ್ರೆಸ್ ಬಿಡುತ್ತಾರೆ, ಯಾರೂ ಸೇರಲ್ಲ:ಸಿಎಂ ಬೊಮ್ಮಾಯಿ

ಸಿದ್ದು-ಡಿಕೆಶಿ ತಿಕ್ಕಾಟದಿಂದ ಹಲವರು ಕಾಂಗ್ರೆಸ್ ಬಿಡುತ್ತಾರೆ,ಯಾರೂ ಸೇರಲ್ಲ: ಸಿಎಂ ಬೊಮ್ಮಾಯಿ

vಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

Woke Up To Personal Message From PM Narendra Modi”: Chris Gayle

ಕ್ರಿಸ್ ಗೇಲ್ ಗೆ ಸಂದೇಶ ಕಳುಹಿಸಿದ ಪ್ರಧಾನಿ ನರೇಂದ್ರ ಮೋದಿ: ಯುನಿವರ್ಸಲ್ ಬಾಸ್ ಹೇಳಿದ್ದೇನು?

ಜಗಳ ಬಿಡಿಸಲು ಹೋಗಿ ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವು : ಇಬ್ಬರ ಬಂಧನ

ಮಗನಿಂದ ಸೊಸೆಯ ಮೇಲಿನ ಹಲ್ಲೆ ತಪ್ಪಿಸಲು ಹೋಗಿ ಗಂಭೀರ ಗಾಯಗೊಂಡಿದ್ದ ತಾಯಿ ಸಾವು : ಇಬ್ಬರ ಬಂಧನ

ಮಾರ್ಚ್ ತಿಂಗಳಲ್ಲಿ ಆರೋಗ್ಯ ವಿವಿ ಕ್ಯಾಂಪಸ್, ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು:ಅಶ್ವತ್ಥನಾರಾಯಣ

ಮಾರ್ಚ್ ನಲ್ಲಿ ಆರೋಗ್ಯ ವಿವಿ ಕ್ಯಾಂಪಸ್, ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು: ಅಶ್ವತ್ಥನಾರಾಯಣ

ಯತ್ನಾಳ ಮಂತ್ರಿ ಆಗ್ತಾರೆ, ನಾವಿಬ್ರು ಜೊತೆಯಾಗಿ ಕೆಲಸ ಮಾಡ್ತೇವೆ: ಸಚಿವ ಉಮೇಶ್ ಕತ್ತಿ

ಯತ್ನಾಳ ಮಂತ್ರಿ ಆಗ್ತಾರೆ, ನಾವಿಬ್ರು ಜೊತೆಯಾಗಿ ಕೆಲಸ ಮಾಡ್ತೇವೆ: ಸಚಿವ ಉಮೇಶ್ ಕತ್ತಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಲಿಕೆ ತ್ಯಾಜ್ಯದಿಂದ ಬೆಟ್ಟದಾಸನಪುರದಲ್ಲಿ ದಟ್ಟ ಹೊಗೆ

ಪಾಲಿಕೆ ತ್ಯಾಜ್ಯದಿಂದ ಬೆಟ್ಟದಾಸನಪುರದಲ್ಲಿ ದಟ್ಟ ಹೊಗೆ

ಮೇಕ್‌ ಶಿಫ್ಟ್ ಆಸ್ಪತ್ರೆ ಲೋಕಾರ್ಪಣೆ

ಮೇಕ್‌ ಶಿಫ್ಟ್ ಆಸ್ಪತ್ರೆ ಲೋಕಾರ್ಪಣೆ

ದುರಸ್ತಿ ಆಗದ ರೈಲ್ವೆ ಅಂಡರ್‌ಪಾಸ್‌: ಪರದಾಟ

ದುರಸ್ತಿ ಆಗದ ರೈಲ್ವೆ ಅಂಡರ್‌ಪಾಸ್‌: ಪರದಾಟ

ಮಾವಿಗೆ ಹೂ; ಭಾರೀ ಇಳುವರಿ ನಿರೀಕ್ಷೆ

ಮಾವಿಗೆ ಹೂ; ಭಾರೀ ಇಳುವರಿ ನಿರೀಕ್ಷೆ

Untitled-1

ಹಣಗಳಿಸಲು ಯುವತಿಯ ಅಪಹರಣ ಮಾಡಿದ ಕುಟುಂಬ ಪೊಲೀಸರ ವಶಕ್ಕೆ

MUST WATCH

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

udayavani youtube

ಗಣರಾಜ್ಯ ದಿನದ ಮೆರವಣಿಗೆ 2022

udayavani youtube

೭೩ನೇ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ರಾರಾಜಿಸಿದ ಕರ್ನಾಟಕದ ಸ್ತಬ್ಧಚಿತ್ರ

udayavani youtube

ಕಾಂಗ್ರೆಸ್ ಕೊಳೆತು ನಾರುತ್ತಿರುವ ಮಾವಿನ ಹಣ್ಣು : ಈಶ್ವರಪ್ಪ ಲೇವಡಿ

udayavani youtube

73ನೇ ಗಣರಾಜ್ಯೋತ್ಸವ ಹಿನ್ನೆಲೆ ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ

ಹೊಸ ಸೇರ್ಪಡೆ

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಹೃದಯಾಘಾತಗೊಂಡು ಎಎಸ್ಐ ಸಾವು

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಹೃದಯಾಘಾತಗೊಂಡು ಎಎಸ್ಐ ಸಾವು

ಕಾಪು ತಾಲೂಕು ಮಟ್ಟದಲ್ಲಿ 73ನೇ ಗಣರಾಜ್ಯೋತ್ಸವ ಆಚರಣೆ

ಕಾಪು ತಾಲೂಕು ಮಟ್ಟದಲ್ಲಿ 73ನೇ ಗಣರಾಜ್ಯೋತ್ಸವ ಆಚರಣೆ

ಹಾಸ್ಟೆಲ್‌ ಮಕ್ಕಳಿಗೆ 3 ತಿಂಗಳಿಂದ ಅಕ್ಕಿಯಿಲ್ಲ 

ಹಾಸ್ಟೆಲ್‌ ಮಕ್ಕಳಿಗೆ 3 ತಿಂಗಳಿಂದ ಅಕ್ಕಿಯಿಲ್ಲ 

ಸಿದ್ದು-ಡಿಕೆಶಿ ತಿಕ್ಕಾಟದಿಂದ ಹಲವರು ಕಾಂಗ್ರೆಸ್ ಬಿಡುತ್ತಾರೆ, ಯಾರೂ ಸೇರಲ್ಲ:ಸಿಎಂ ಬೊಮ್ಮಾಯಿ

ಸಿದ್ದು-ಡಿಕೆಶಿ ತಿಕ್ಕಾಟದಿಂದ ಹಲವರು ಕಾಂಗ್ರೆಸ್ ಬಿಡುತ್ತಾರೆ,ಯಾರೂ ಸೇರಲ್ಲ: ಸಿಎಂ ಬೊಮ್ಮಾಯಿ

23JDS

ತಳ ಮಟ್ಟದಿಂದ ಜೆಡಿಎಸ್‌ ಸಂಘಟಿಸಲು ಕಾರ್ಯಕರ್ತರಿಗೆ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.