Udayavni Special

ಚೇತರಿಸಿಕೊಂಡ ಅಂತರ್ಜಲ ಮಟ್ಟ


Team Udayavani, Oct 20, 2019, 3:00 AM IST

chetarisionda

ನೆಲಮಂಗಲ: ದಿನೇ ದಿನೇ ಕ್ಷೀಣಿಸುತ್ತಿರುವ ಅಂತರ್ಜಲದ ಮಟ್ಟಕ್ಕೆ ಚೆಕ್‌ ಡ್ಯಾಮ್‌ಗಳು ಮರುಜೀವ ನೀಡಿದ್ದು, ನಿರುಪಯುಕ್ತವಾಗಿ ಹರಿದು ಹೋಗುತ್ತಿದ ಮಳೆ ನೀರಿಗೆ ಅಡ್ಡಲಾಗಿ ನಿರ್ಮಿಸಿರುವ ಮಲ್ಟಿ ಆರ್ಚ್‌ ಚೆಕ್‌ ಡ್ಯಾಮ್‌ ನೂರಾರು ರೈತರ ಜೀವನದ ದಿಕ್ಕು ಬದಲಿಸಿದ್ದು, ಬತ್ತಿಹೋಗಿದ್ದ ಕುಮುದ್ವತಿ ಹಾಗೂ ಕೊಳವೆ ಬಾವಿಗಳಲ್ಲಿ ಗಂಗೆಯ ದರ್ಶನವಾಗಿದೆ.

ಒಂದು ಕಾಲದಲ್ಲಿ ಬೆಂಗಳೂರಿಗೆ ಜೀವನದಿಯಾಗಿದ್ದ ಅರ್ಕಾವತಿಯ ಉಪನದಿ ಕುಮುದ್ವತಿ ದಕ್ಷಿಣಕಾಶಿ ಶಿವಗಂಗೆಯಲ್ಲಿ ಹುಟ್ಟಿ ತಿಪ್ಪಗೊಂಡನಹಳ್ಳಿ ಜಲಾಶಯ ಸೇರುತಿದ್ದಳು. ಆದರೆ ಕೆಲ ವರ್ಷಗಳಿಂದ ಬತ್ತಿ ಹೊಗಿದ್ದ ನದಿಗೆ ಚೆಕ್‌ ಡ್ಯಾಮ್‌ಗಳು ಜೀವ ನೀಡಿದ್ದು ಅಂತರ್ಜಲ ಮಟ್ಟ ಚೇತರಿಸಿಕೊಂಡಿದೆ. ಸರ್ಕಾರದ ಅನುದಾನದಲ್ಲಿ ಕುಮುದ್ವತಿ ಉಪ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಚೆಕ್‌ಡ್ಯಾಮ್‌ಗಳು ಆರೇಳು ತಿಂಗಳು ನೀರಿನ ಬವಣೆಯನ್ನು ತಪ್ಪಿಸುತ್ತಿದೆ.

ತಾಲೂಕಿನ ಶ್ರೀನಿವಾಸಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ತೊರೆಮೂಡಲಪಾಳ್ಯದ ಸಮೀಪ ನಿರ್ಮಿಸಿರುವ ಚೆಕ್‌ಡ್ಯಾಮ್‌ಗಳಲ್ಲಿ ಹತ್ತು ಅಡಿಗೂ ಹೆಚ್ಚು ನೀರಿನ ಸಂಗ್ರಹಣೆಯಾಗಿದ್ದು, ತೊರೆಪಾಳ್ಯ, ಹೊಸಪಾಳ್ಯ, ತೊರೆಮೂಡಲಪಾಳ್ಯ, ಹನುಮಂತೆಗೌಡನಪಾಳ್ಯ, ಬೈರಸಂದ್ರ, ಯಲಚಗೆರೆ, ಕೆಂಚನಹಳ್ಳಿ ಸೇರಿದಂತೆ ಅನೇಕ ಗ್ರಾಮದ ರೈತರ ವ್ಯವಸಾಯಕ್ಕೆ ಅನುಕೂಲವಾವೆ. ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ನೀರಿನ ಸಂಗ್ರಹಣೆಯ ಸಾಮರ್ಥ್ಯ ಹೆಚ್ಚಾಗಿದೆ.

55 ಚೆಕ್‌ಡ್ಯಾಮ್‌: ಮಳೆಯ ನೀರು ಹರಿದು ಹೋಗುವುದನ್ನು ತಡೆದು ಅಂತರ್ಜಲ ಹೆಚ್ಚಿಸುವ ಮೂಲಕ ರೈತರಿಗೆ ಅನುಕೂಲವಾಗಲು ಸರಕಾರ ಚೆಕ್‌ಡ್ಯಾಮ್‌ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದು, ಅದರ ಅನುಕೂಲತೆಯನ್ನು ತಿಳಿದು ತಾಲೂಕಿನಲ್ಲಿ ಈಗಾಗಲೇ 15 ಚೆಕ್‌ಡ್ಯಾಮ್‌ ಪೂರ್ಣವಾಗಿದ್ದು, 40 ಪ್ರಗತಿಯಲ್ಲಿವೆ. ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಮತ್ತಷ್ಟು ಹೆಚ್ಚಲಿದೆ.

ಲಾಭ ಪಡೆದ ಗ್ರಾ.ಪಂ: ಶಿವಗಂಗೆಯಿಂದ ಹರಿಯುವ ಕುಮುದ್ವತಿಯು ಅನೇಕ ಗ್ರಾಮಗಳಲ್ಲಿ ಹಾದು ಹೋದರೂ ನೀರಿನ ಬಳಕೆಯನ್ನು ಮಾಡಿಕೊಳ್ಳುವಲ್ಲಿ ಶ್ರೀನಿವಾಸಪುರ ಗ್ರಾ.ಪಂ ಯಶಸ್ವಿಯಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಪ್ರಮುಖ 8 ಚೆಕ್‌ಡ್ಯಾಮ್‌ ನಿರ್ಮಿಸಿದ್ದು, ಅನೇಕ ಗ್ರಾಮಗಳಲ್ಲಿ ಸಣ್ಣಸಣ್ಣ ಹಳ್ಳಗಳಿಗೆ ಅಡ್ಡಲಾಗಿ ಅನೇಕ ಚೆಕ್‌ ಡ್ಯಾಮ್‌ ನಿರ್ಮಿಸಿ ರೈತರಿಗೆ ಅನುಕೂಲ ಮಾಡುವ ಜೊತೆ ಅಂತರ್ಜಲ ಉಳಿಸುವ ಮೂಲಕ ಹರಿದು ಹೋಗುವ ನೀರಿನ ಲಾಭವನ್ನು ಪಡೆಯಲಾಗಿದೆ.

ಕುಮುದ್ವತಿ ನದಿಗೆ ನಿರ್ಮಿಸಿರುವ ಚೆಕ್‌ ಡ್ಯಾಮ್‌ನಿಂದ ಸುತ್ತುಮುತ್ತಲ ರೈತರಿಗೆ ಬಹಳಷ್ಟು ಅನುಕೂಲವಾಗಿದ್ದು, ವರ್ಷಪೂರ್ತಿ ಬೆಳೆ ಬೆಳೆಯಲು ಸಹಕಾರಿಯಾಗಿದೆ. ಕೊಳವೆ ಬಾವಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.
-ಮುದ್ದಗಂಗಯ್ಯ, ಹೊಸಪಾಳ್ಯದ ಗ್ರಾಮದ ರೈತ

ಗ್ರಾ.ಪಂ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಚೆಕ್‌ಡ್ಯಾಮ್‌ನಿಂದ ಬಹಳಷ್ಟು ಅನುಕೂಲವಾಗಿದ್ದು, ಅಂತರ್ಜಲ ಮಟ್ಟ ಹೆಚ್ಚಾಗುತ್ತಿರುವುದರಿಂದ ಪ್ರತಿ ಗ್ರಾಮದಲ್ಲಿಯೂ ಚೆಕ್‌ಡ್ಯಾಮ್‌ ನಿರ್ಮಾಣ ಮಾಡಲು ಮುಂದಾಗಿದ್ದೇವೆ.
-ದಿವಾಕರಯ್ಯ ಶ್ರೀನಿವಾಸಪುರ ಗ್ರಾ.ಪಂ ಪಿಡಿಓ

* ಕೊಟ್ರೇಶ್‌.ಆರ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಯೋಗ ಮತ್ತು ಪ್ರಕೃತಿ ಚಿಕಿತ್ಸೆ

ಯೋಗ ಮತ್ತು ಪ್ರಕೃತಿ ಚಿಕಿತ್ಸೆ ; ಜೀವನ ಪದ್ಧತಿ ಕ್ರಮ ಇಂತಿರಲಿ

ಸಸ್ಯ ಲೋಕದಲ್ಲಿ ಸ್ಯಾನಿಟೈಸರ್

ಸಸ್ಯ ಲೋಕದಲ್ಲಿ ಸ್ಯಾನಿಟೈಸರ್

Italy-Marinie-case

ಮೀನುಗಾರರನ್ನು ಇಟಲಿ ನಾವಿಕರು ಕೊಂದ ಪ್ರಕರಣ: ಅಂ.ರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತಕ್ಕೆ ಜಯ

ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ : ಜೆಡಿಯು ಪಕ್ಷದಿಂದ ಅಭ್ಯರ್ಥಿ ಘೋಷಣೆ

ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ : ಜೆಡಿಯು ಪಕ್ಷದಿಂದ ಅಭ್ಯರ್ಥಿ ಘೋಷಣೆ

ವಿಶ್ವ ಕ್ರೀಡಾ ಪತ್ರಕರ್ತರ ದಿನ; ಕ್ರೀಡಾಪಟುಗಳಿಂದ ಶುಭಾಶಯ

ವಿಶ್ವ ಕ್ರೀಡಾ ಪತ್ರಕರ್ತರ ದಿನ; ಕ್ರೀಡಾಪಟುಗಳಿಂದ ಶುಭಾಶಯ

ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ ಮಹಾಮಾರಿಗೆ ನಾಲ್ಕನೇ ಬಲಿ

ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ ಮಹಾಮಾರಿಗೆ ನಾಲ್ಕನೇ ಬಲಿ

ಪುಲ್ವಾಮ್ ದಾಳಿಯ ಜೈಶ್ ಸಂಘಟನೆ ರೂವಾರಿಗೆ ನೆರವು ನೀಡಿದ್ದ ವ್ಯಕ್ತಿ ಎನ್ ಐಎ ಬಲೆಗೆ

ಪುಲ್ವಾಮ್ ದಾಳಿಯ ಜೈಶ್ ಸಂಘಟನೆ ರೂವಾರಿಗೆ ನೆರವು ನೀಡಿದ್ದ ವ್ಯಕ್ತಿ ಎನ್ ಐಎ ಬಲೆಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cor-hechidare

ಕೋವಿಡ್‌ 19 ಹೆಚ್ಚಿದರೆ ವಸತಿ ಶಾಲೆಗಳಲ್ಲಿ ಚಿಕಿತ್ಸೆ

kridhangana

ಕ್ರೀಡಾಂಗಣಕ್ಕೆ ಸೌಲಭ್ಯ ಒದಗಿಸಲು ಸೂಚನೆ

akrosha

ಕಳಪೆ ಬಿತ್ತನೆ ಬೀಜ ಪೂರೈಕೆ: ರೈತರ ಆಕ್ರೋಶ

raste-bachegowda

ರಸ್ತೆ ಕಾಮಗಾರಿಗೆ ಚಾಲನೆ

madyana-2

ಮಧ್ಯಾಹ್ನ 2ರ ನಂತರ “ದೊಡ್ಡಬಳ್ಳಾಪುರ ಲಾಕ್‌’

MUST WATCH

udayavani youtube

Uday Innaje : Success story of Sugarcane Farmer | Udayavani

udayavani youtube

Manoj Kumar : Success story of Indigenous Dairy Farmer from Moodbidri

udayavani youtube

Udupi’s Master Chariot Maker Lakshmi Narayan Acharya

udayavani youtube

LIC ಅಧಿಕಾರಿಯ ‘Part Time’ ಕೃಷಿ ‘ಪಾಲಿಸಿ’! | LIC Officer Excels in Agriculture

udayavani youtube

SSLC ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ Medical Education Minister Dr Sudhakar


ಹೊಸ ಸೇರ್ಪಡೆ

ಯೋಗ ಮತ್ತು ಪ್ರಕೃತಿ ಚಿಕಿತ್ಸೆ

ಯೋಗ ಮತ್ತು ಪ್ರಕೃತಿ ಚಿಕಿತ್ಸೆ ; ಜೀವನ ಪದ್ಧತಿ ಕ್ರಮ ಇಂತಿರಲಿ

ಸಸ್ಯ ಲೋಕದಲ್ಲಿ ಸ್ಯಾನಿಟೈಸರ್

ಸಸ್ಯ ಲೋಕದಲ್ಲಿ ಸ್ಯಾನಿಟೈಸರ್

Italy-Marinie-case

ಮೀನುಗಾರರನ್ನು ಇಟಲಿ ನಾವಿಕರು ಕೊಂದ ಪ್ರಕರಣ: ಅಂ.ರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತಕ್ಕೆ ಜಯ

ಆಗಸ್ಟ್‌ನಲ್ಲಿ ಲಂಕಾ ಪ್ರೀಮಿಯರ್‌ ಲೀಗ್‌?

ಆಗಸ್ಟ್‌ನಲ್ಲಿ ಲಂಕಾ ಪ್ರೀಮಿಯರ್‌ ಲೀಗ್‌?

ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ : ಜೆಡಿಯು ಪಕ್ಷದಿಂದ ಅಭ್ಯರ್ಥಿ ಘೋಷಣೆ

ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ : ಜೆಡಿಯು ಪಕ್ಷದಿಂದ ಅಭ್ಯರ್ಥಿ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.