
ವಿಜ್ಞಾನ, ತಂತ್ರಜ್ಞಾನದಿಂದ ಕೃತಕ ರಕ್ತ ಸೃಷ್ಟಿಸಲು ಸಾಧ್ಯವಿಲ್ಲ
ವೈದ್ಯಾಧಿಕಾರಿ ಡಾ.ಶ್ಯಾಮಸುಂದರ್ ಅಭಿಮತ ವಿಜಯಪುರದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ
Team Udayavani, Oct 30, 2021, 12:05 PM IST

ವಿಜಯಪುರ: ತಂತ್ರಜ್ಞಾನ, ವಿಜ್ಞಾನ ಎಷ್ಟೇ ಮುಂದುವರಿದರೂ ಕೃತಕವಾಗಿ ರಕ್ತ ಸೃಷ್ಟಿಸ ಲಾ ಗದು. ಆದ್ದರಿಂದ ರಕ್ತದಾನ ಶ್ರೇಷ್ಠದಾನ, ರಕ್ತ ದಾನದ ವಿಷಯದಲ್ಲಿ ಜನರಲ್ಲಿ ಆತಂಕಗಳಿವೆ. ಆದರೆ, ಯಾವ ಸಮಸ್ಯೆಯೂ ಉಂಟಾಗುವುದಿಲ್ಲ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ಯಾಮಸುಂದರ್ ತಿಳಿಸಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ರಕ್ತನಿಧಿ ಕೇಂದ್ರ, ಜನರಲ್ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತ ನಾಡಿದ ಅವರು, ರಕ್ತದಾನ ಮಾಡುವುದರಿಂದ ವ್ಯಕ್ತಿಯ ಜೀವ ಉಳಿಸಿದ ಭಾವನೆ ದಾನಿಯ ಆರೋಗ್ಯ ಜತೆಯಲ್ಲಿ ವೃದ್ಧಿಯಾಗುತ್ತದೆ. ರಕ್ತ ಮನು ಷ್ಯನ ದೇಹದ ಅಮೂಲ್ಯವಾದ ವಸ್ತು. ಅಪಘಾತ, ಅನಾಹುತ, ಶಸ್ತ್ರಚಿಕಿತ್ಸೆ ಮುಂತಾದ ಸಂದರ್ಭದಲ್ಲಿ ರೋಗಿಗಳಿಗೆ ರಕ್ತದ ಅಗತ್ಯ ಇರುತ್ತದೆ. ಇಂತಹ ಸಂದರ್ಭದಲ್ಲಿ ರೋಗಿಗಳಿಗೆ ರಕ್ತ ಕೊಡ ಬೇಕಾ ಗುತ್ತದೆ ಎಂದರು.
ರಕ್ತದ ಗುಂಪು ಪರೀಕ್ಷಿಸಿ: ದಾನಿಗಳಿಂದ ಸಂಗ್ರಹಿಸಿದ ರಕ್ತ ರೋಗಿಗಳಿಗೆ ನೀಡಲಾಗುತ್ತದೆ. 18 ವರ್ಷ ಮೇಲ್ಪಟ್ಟು 60 ವರ್ಷ ಒಳಗಿನವರು ರಕ್ತದಾನ ಮಾಡಬಹುದು. ಪ್ರತಿಯೊಬ್ಬರೂ ತನ್ನ ರಕ್ತದ ಗುಂಪು ಯಾವುದೆಂದು ಪರೀಕ್ಷೆ ಮಾಡಿಸಿಕೊಳ್ಳಬೇಕು.
ಈ ಮೂಲಕ ರೋಗಿಗಳ ರಕ್ತದ ಗುಂಪಿಗೆ ಅನ್ವಯ ಆಗುವಂತೆ ರಕ್ತ ನೀಡಲಾಗುತ್ತದೆ. ಮೂರು ತಿಂಗಳಿಗೊಮ್ಮೆಯಂತೆ ರಕ್ತದಾನ ಮಾಡ ಬಹುದು. ಇದರಿಂದ ಮೇಲೆ ರಕ್ತದಾನಿ ಯಾವುದೇ ಆರೋಗ್ಯದ ತೊಂದರೆಯಾಗುವುದಿಲ್ಲ. ಇದರ ಜತೆಯಲ್ಲಿ ರಕ್ತದಾನಿ ಆರೋಗ್ಯ ಸುಧಾರಿಸುತ್ತದೆ. ರಕ್ತದಾನ ಮಾಡುವುದರಿಂದ ವ್ಯಕ್ತಿಯಲ್ಲಿ ಮಾನಸಿಕ ಉಲ್ಲಾಸ ಹೆಚ್ಚಾಗುವುದರ ಜತೆಗೆ ಉತ್ತಮ ಆರೋಗ್ಯ ಲಭಿಸುತ್ತದೆ ಎಂದರು.
ಇದನ್ನೂ ಓದಿ:- ಸಾಹಿತಿಗಳು ಅಜರಾಮರರು: ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ
ರಕ್ತದಾನ ಮಾಡಲು ಮುಂದಾಗಿ: ಜ್ಞಾನಗಂಗಾ ಕಾಲೇಜಿನ ಪದವಿ ಪ್ರಾಂಶುಪಾಲೆ ಭಾರತಿ ಮಾತ ನಾಡಿ, ರಕ್ತದಾನ ಮಾಡುವುದರಿಂದ ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು. ಹೃದಯಕ್ಕೆ ರಕ್ತದ ಹರಿವು ಮಿತಿ ಗೊಳಿಸುತ್ತದೆ. ಇದರಿಂದ ಅಂಗಾಂಗ ವೈಫಲ್ಯ ಅಥವಾ ಹೃದಯಾಘಾತದ ಅನಾಹುತಗಳನ್ನು ತಡೆಯಬಹುದು. ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ರಕ್ತದೊ ತ್ತಡ ನಿಯಂತ್ರಿಸುತ್ತದೆ. ಕಬ್ಬಿಣಾಂಶದ ಮಟ್ಟ ನಿಯಂ ತ್ರಣದಲ್ಲಿಡುತ್ತದೆ. ಯುವಜನರು ಹೆಚ್ಚಿನ ಸಂಖ್ಯೆ ಯಲ್ಲಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
52 ಯೂನಿಟ್ ರಕ್ತ ಸಂಗ್ರಹ: ಪ್ರಗತಿ ಪದವಿ ಕಾಲೇಜು ಹಾಗೂ ಜ್ಞಾನಗಂಗಾ ಪದವಿ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ 52 ಯೂನಿಟ್ ರಕ್ತ ಸಂಗ್ರಹವಾಯಿತು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಪ್ಪೇಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಡಾ. ಸಂಜಯ್, ಬೆಂಗಳೂರಿನ ವಿಕ್ಟೋರಿಯಾ ಆಸ್ಪ ತ್ರೆಯ ವೈದ್ಯ ಡಾ.ಪ್ರಸನ್ನ, ಡಾ.ಉದಯ್‌ಕುಮಾರ್, ಡಾ. ರಶ್ಮಿ, ಐಸಿಟಿಸಿ ಸುಮಾ ಹಾಗೂ ಮತ್ತಿತರರು ಇದ್ದರು.
ಟಾಪ್ ನ್ಯೂಸ್
