ಜನರ ಹೃದಯದಲ್ಲಿ ಶ್ರೀಗಳು ನೆಲೆಸಬೇಕು


Team Udayavani, Mar 11, 2019, 7:41 AM IST

janara.jpg

ನೆಲಮಂಗಲ: ಮಠದ ಸ್ವಾಮಿಗಳು ಸಮಾಜಕ್ಕೆ ಬಿರುಗಾಳಿಯಾಗದೇ ತಂಗಾಳಿಯಂತೆ ಸರ್ವರ ಹೃದಯದಲ್ಲಿ ಸದಾಕಾಲ ಉಳಿಯುವಂತಹ ಸೇವೆ ಸಲ್ಲಿಸಬೇಕೆಂದು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು. ಸೋಂಪುರ ಹೋಬಳಿಯ ಕಂಬಾಳಿನ ಮೇಲಣಗವಿ ಮಠದ ಪೂಜ್ಯ ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಪೀಠಾಧಿಕಾರದ ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.

 ಗುರು ಎಂಬುದು ಜಗತ್ತಿನಲ್ಲಿಯೇ ಬೆಲೆ ಕಟ್ಟಲಾಗದ ಶಕ್ತಿ. ಗುರುವು ಶಿಷ್ಯರಿಗೆ ನಿಜವಾದ ದೇವರಾಗಿರುತ್ತಾರೆ. ಅಂತಹ ಗುರುವಿನ ಸ್ಥಾನಕ್ಕೆ ಎಂದೂ ಚ್ಯುತಿ ಬಾರದಂತೆ ನೋಡಿಕೊಂಡು ಶಿಷ್ಯರನ್ನು ಬೆಳೆಸಬೇಕು. ಆಗ ಮಾತ್ರ ಸಮಾಜ ಗುರುವನ್ನು ಗುರುತಿಸಿ ನೀಡುವ ಸತ್ಕಾರ ಮತ್ತು ಗೌರವಕ್ಕೆ ಬೆಲೆ ಕಟ್ಟಲಾಗದು ಎಂದು ಗುರುವನ್ನು ನೀರಿಗರ ಹಾಗೂ ಶಿಷ್ಯರನ್ನು ಮೀನಿಗೆ ಹೋಲಿಸಿ ಗುರು ಶಿಷ್ಯರ ಬಾಂಧವ್ಯವನ್ನು ವಿವರಿಸಿದರು.  

ಅವಿಸ್ಮರಣೀಯ ಸೇವೆ: ಎಲ್ಲರಿಗೂ ಲೇಸನ್ನೇ ಬಯಸುವ ಹೃದಯವಂತ ಜ್ಞಾನ ರತ್ನಕ್ಕೆ ಸಮಾಜದ ಯಾವುದೇ ಕ್ಷೇತ್ರದಲ್ಲಿಯೂ ಗೌರವ ಸಲ್ಲುತ್ತದೆ. ಸಮಾಜ ಅಂತಹ ಜ್ಞಾನಿಯನ್ನು ಆರಾಧಿಸಿ, ಪೂಜಿಸುವ ಕಾರ್ಯ ಮಾಡುತ್ತದೆ. ಈ ರೀತಿಯ ಸಾಧನೆಯನ್ನು ನಾವು ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿಯವರಲ್ಲಿ ಕಾಣಬಹುದಾಗಿದೆ. ಶ್ರೀಗಳ ಪಾಂಡಿತ್ಯ ಮತ್ತು ಹೃದಯ ಶ್ರೀಮಂತಿಕೆಯಿಂದ ನಾಡಿನುದ್ದಕ್ಕೂ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿ ಉಪನ್ಯಾಸ ನೀಡುತ್ತಾ ಬಂದಿದ್ದಾರೆ.

ಅವರ ಧಾರ್ಮಿಕ ಸೇವೆ ಅವಿಸ್ಮರಣೀಯ ಎಂದರು. ಪೂಜ್ಯರು ಮಠದ ಅಧ್ಯಕ್ಷರಾಗಿ 25 ವರ್ಷ ಸೇವೆ ಸಲ್ಲಿಸುವ ಮೂಲಕ ಮೇಲಣಗವಿ ಮಠವನ್ನು ಸಾಕಷ್ಟು ಅಭಿವೃದ್ಧಿಪಡಿಸಿದ್ದಾರೆ. ಮಠದ ಜಾಗ ಸಮಾಧಿಯಾಗಿತ್ತು. ಆದರೆ, ಇಂದು ಈ ಸ್ಥಳವನ್ನು ಸೇವಾ ಕ್ಷೇತ್ರದ ಪುಣ್ಯಭೂಮಿಯಾಗಿಸಿದ್ದಾರೆ ಎಂದರು.  

ಅಧ್ಯಕ್ಷತೆ ವಹಿಸಿದ್ದ ಕನಕಪುರ ದೇಗುಲ ಮಠದ ಶ್ರೀ ಶಿವಾನುಭವ ಚರಮೂರ್ತಿ ಮುಮ್ಮಡಿ ನಿರ್ವಾಣ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿನ ಓರೆಕೋರೆಗಳನ್ನು ತಿದ್ದುವ ಕಾರ್ಯ ಬಹು ಹಿಂದಿನಿಂದಲೂ ಮಠಮಾನ್ಯಗಳ ಪೂಜ್ಯರು ನಡೆಸಿಕೊಂಡು ಬಂದಿದ್ದಾರೆ. ಇಂದಿಗೂ ಜನರು ಮಠದ ಸ್ವಾಮೀಜಿಯವರಲ್ಲಿ ಅಪಾರ ಭಕ್ತಿ ಭಾವವನ್ನು ತೋರುತ್ತಿರುವುದು ಶ್ಲಾಘನೀಯ ಎಂದರು.  

ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಪಿ.ನಾಡಗೌಡ ಮಾತನಾಡಿ, ನಮ್ಮ ಕುಟುಂಬ ಬಹು ಹಿಂದಿನಿಂದಲೂ ಮಠದ ಪೂಜ್ಯರನ್ನು ಆರಾಧಿಸುತ್ತ ಬಂದಿದೆ. ಮೇಲಣಗವಿ ಮಠದ ಪೂಜ್ಯರು ನಮ್ಮ ಉತ್ತರ ಕರ್ನಾಟಕ ಭಾಗದವರಾಗಿದ್ದು, ಕ್ರೀಯಾಶೀಲರು, ವಾಗ್ಮಿಗಳು, ಸಾಧಕರಾಗಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಸಿದ್ಧಗಂಗಾ ಮಠದ ವತಿಯಿಂದ ಶ್ರೀ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಸಿದ್ಧಲಿಂಗ ಸ್ವಾಮೀಜಿ ಗೌರವಿಸಿದರು.

ಮೇಲಣಗವಿ ಮಠದಿಂದ ಸಿದ್ಧಗಂಗಾ ಮಠದ ಪೂಜ್ಯರನ್ನು ಗೌರಸಲಾಯಿತು. ಮೇಲಣಗವಿ ಮಠದ ಶ್ರೀಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಪ್ರಸ್ತಾವಿಕವಾಗಿ ಮಾತನಾಡಿದರು. ಅಂಧ ಕಲಾದರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ನೆನಪಿಗಾಗಿ ಬೆಂಗಳೂರು ಮಲ್ಲೇಶ್ವರಂನ ರೆಡ್‌ ಕ್ರಾಸ್‌ ಸಂಸ್ಥೆಯಿಂದ ರಕ್ತದಾನ ಶಿಬಿರವನ್ನು ನಡೆಸಲಾಯಿತು.

ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಪಿ.ನಾಡಗೌಡ, ಕಲಾವಿದ ನಾಗರಾಜಮೂರ್ತಿ, ಹಾಲು ಒಕ್ಕೂಟದ ನಿರ್ದೇಶಕ ಎಂ.ಜಿ.ತಿಮ್ಮರಾಜು ಇತರರನ್ನು ಸಿದ್ದಲಿಂಗ ಸ್ವಾಮೀಜಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.

ತಿಪಟೂರು ಮಠದ ಷಡಾಕ್ಷರ ಸ್ವಾಮೀಜಿ, ಕವಲೆದುರ್ಗದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಬೇಬಿ ಮಠದ ತ್ರಿನೇತ್ರ ಶಿವಯೋಗಿ ಸ್ವಾಮೀಜಿ, ಬೆಟ್ಟಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿ, ಬಳ್ಳಾರಿ ಕಲ್ಯಾಣ ಮಠದ ಕಲ್ಯಾಣ ಸ್ವಾಮೀಜಿ, ಗುಳೇದಗುಡ್ಡದ ಕಾಡಸಿದ್ದೇಶ್ವರ ಸ್ವಾಮೀಜಿ, ಸಜ್ಜಲಗುಡ್ಡ ಮಠದ ದೊಡ್ಡಬಸವಾಚಾರ್ಯ ತಾತನ ಸ್ವಾಮೀಜಿ, ಮುಖಂಡರಾದ ಮರಿಸ್ವಾಮಿ, ರುದ್ರೇಶ್‌, ಗ್ರಾಪಂ ಅಧ್ಯಕ್ಷ ಹನುಮಂತರಾಜು ಸೇರಿದಂತೆ ಮತ್ತಿತರ ಮುಖಂಡರು ಭಾಗವಹಿಸಿದ್ದರು.

ಟಾಪ್ ನ್ಯೂಸ್

ಸೋಮೇಶ್ವರ ಬೀಚ್‌: ರಾತ್ರಿ ವೇಳೆ ಡಿಜೆ ಪಾರ್ಟಿ; ಶಬ್ದ ಮಾಲಿನ್ಯದ ಬಗ್ಗೆ ಸ್ಥಳೀಯರಿಂದ ದೂರು

ಸೋಮೇಶ್ವರ ಬೀಚ್‌: ರಾತ್ರಿ ವೇಳೆ ಡಿಜೆ ಪಾರ್ಟಿ; ಶಬ್ದ ಮಾಲಿನ್ಯದ ಬಗ್ಗೆ ಸ್ಥಳೀಯರಿಂದ ದೂರು

ಎನ್‌ಐಎಯಿಂದ ಮುಂದುವರಿದ ದಾಳಿ

ಜಮ್ಮು- ಕಾಶ್ಮೀರ: ಎನ್‌ಐಎಯಿಂದ ಮುಂದುವರಿದ ದಾಳಿ

ಕೇರಳದಲ್ಲಿ ಇನ್ನೂ 2 ವಾರ ಮಳೆ;  9 ಆಣೆಕಟ್ಟಿಗೆ ರೆಡ್‌, 7 ಜಿಲ್ಲೆಗೆ ಯೆಲ್ಲೋ ಅಲರ್ಟ್‌

ಕೇರಳದಲ್ಲಿ ಇನ್ನೂ 2 ವಾರ ಮಳೆ;  9 ಆಣೆಕಟ್ಟಿಗೆ ರೆಡ್‌, 7 ಜಿಲ್ಲೆಗೆ ಯೆಲ್ಲೋ ಅಲರ್ಟ್‌

ಶೀಘ್ರ 5 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಬಿ.ಸಿ.ನಾಗೇಶ್‌

ಶೀಘ್ರ 5 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಬಿ.ಸಿ.ನಾಗೇಶ್‌

ನಟ ಆಸಿಫ್ ಶೇಖ್‌ ವರ್ಲ್ಡ್ ರೆಕಾರ್ಡ್‌

ನಟ ಆಸಿಫ್ ಶೇಖ್‌ ವರ್ಲ್ಡ್ ರೆಕಾರ್ಡ್‌

ಶೂಟಿಂಗ್‌ ವೇಳೆ ನಟನ ಗನ್‌ನಿಂದ ಫೈರಿಂಗ್‌; ಸಿನಿಮಾ ಟೋಗ್ರಾಫ‌ರ್‌ ಸಾವು

ಶೂಟಿಂಗ್‌ ವೇಳೆ ನಟನ ಗನ್‌ನಿಂದ ಫೈರಿಂಗ್‌; ಸಿನಿಮಾ ಟೋಗ್ರಾಫ‌ರ್‌ ಸಾವು

ಎರಡೂ ಡೋಸ್‌ ಲಸಿಕೆ ಪಡೆದವರಿಗಷ್ಟೇ ಹಜ್‌ ಯಾತ್ರೆಗೆ ಅನುಮತಿ

ಎರಡೂ ಡೋಸ್‌ ಲಸಿಕೆ ಪಡೆದವರಿಗಷ್ಟೇ ಹಜ್‌ ಯಾತ್ರೆಗೆ ಅನುಮತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಕ್ಕಳು, ಗುಣಮಟ್ಟದ ಆಹಾರ, udayavanipaper, kannadanews,

ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಿ

Lawmakers who come to the village return without seeing the road!

ಗ್ರಾಮಕ್ಕೆ ಬಂದ ಶಾಸಕರು ರಸ್ತೆ ನೋಡದೇ ವಾಪಸ್‌!

ಜಿಂಕೆ

ವಾಹನಗಳ ವೇಗಕ್ಕೆ ಬಲಿಯಾಗುತ್ತಿವೆ ಕಾಡುಪ್ರಾಣಿಗಳು: ಆಕ್ರೋಶ

ನಿರಂತರ ಮಳೆಯಿಂದ ಕಳೆಗಟ್ಟಿದ ಬೆಳೆ

ನಿರಂತರ ಮಳೆಯಿಂದ ಕಳೆಗಟ್ಟಿದ ಬೆಳೆ

bangalore news

ರಾಗಿ ಬೆಳೆಯುತ್ತಿದ್ದ ರೈತರಿಂದ ಈಗ ಭತ್ತ ನಾಟಿ

MUST WATCH

udayavani youtube

ಆಟೋ ಚಾಲಕನ ನತದೃಷ್ಟ ಕಥೆಯಿದು

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

ಹೊಸ ಸೇರ್ಪಡೆ

ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕಾಮಗಾರಿ

ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕಾಮಗಾರಿ

4 ವರ್ಷವಾದರೂ ಮುಗಿಯದ ಕಚೇರಿ ಕಾಮಗಾರಿ

4 ವರ್ಷವಾದರೂ ಮುಗಿಯದ ಕಚೇರಿ ಕಾಮಗಾರಿ

ಸೋಮೇಶ್ವರ ಬೀಚ್‌: ರಾತ್ರಿ ವೇಳೆ ಡಿಜೆ ಪಾರ್ಟಿ; ಶಬ್ದ ಮಾಲಿನ್ಯದ ಬಗ್ಗೆ ಸ್ಥಳೀಯರಿಂದ ದೂರು

ಸೋಮೇಶ್ವರ ಬೀಚ್‌: ರಾತ್ರಿ ವೇಳೆ ಡಿಜೆ ಪಾರ್ಟಿ; ಶಬ್ದ ಮಾಲಿನ್ಯದ ಬಗ್ಗೆ ಸ್ಥಳೀಯರಿಂದ ದೂರು

ಟಿ20 ವಿಶ್ವಕಪ್‌: ಸೂಪರ್‌-12 ಹಂತಕ್ಕೆ ನಮೀಬಿಯಾ

ಟಿ20 ವಿಶ್ವಕಪ್‌: ಸೂಪರ್‌-12 ಹಂತಕ್ಕೆ ನಮೀಬಿಯಾ

ಎನ್‌ಐಎಯಿಂದ ಮುಂದುವರಿದ ದಾಳಿ

ಜಮ್ಮು- ಕಾಶ್ಮೀರ: ಎನ್‌ಐಎಯಿಂದ ಮುಂದುವರಿದ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.