ತುಂಬಿ ಹರಿದ ದಕ್ಷಿಣ ಪಿನಾಕಿನಿ ನದಿ


Team Udayavani, Oct 13, 2017, 12:17 PM IST

blore-g-3.jpg

ಎಸ್‌.ಮಹೇಶ್‌
ದೇವನಹಳ್ಳಿ:
ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಸೂಲಿಬೆಲೆ ರಸ್ತೆಯ ರಾಷ್ಟ್ರೀಯ ಹೆದ್ದಾರಿ 207ರ ಬಾಲೇಪುರ
ಗ್ರಾಮದ ಸಮೀಪದಲ್ಲಿರುವ ದಕ್ಷಿಣ ಪಿನಾಕಿನಿ ನದಿ ತುಂಬಿ ಹರಿಯುತ್ತಿದೆ. ಸುಮಾರು 25 ವರ್ಷಗಳ ನಂತರ ತುಂಬಿ
ಹರಿದ ದಕ್ಷಿಣ ಪಿನಾಕಿನಿ ನದಿ ಈ ಭಾಗದ ಜನರಿಗೆ ಮತ್ತು ರೈತರಿಗೆ ಈ ನೀರನ್ನು ನೋಡಿ ಸಂತಸ ಪಡುತ್ತಿದ್ದಾರೆ.

ರೈತಾಪಿ ವರ್ಗದವರಲ್ಲಿ ಸಂತಸದ ವಾತಾವರಣ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೆ ಹರಿಯುವ ಏಕೈಕ ನದಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಕ್ಷಿಣ ಪಿನಾಕಿನಿ ನದಿ ಸೂಲಿಬೆಲೆಯ ರಾಷ್ಟ್ರೀಯ ಹೆದ್ದಾರಿ ಮೂಲಕ ಹಾದು ಹೋಗಿದೆ. ಸರಿಸುಮಾರು 25 ವರ್ಷಗಳ ಬಳಿಕ ತುಂಬಿ ಹರಿದ ದಾಖಲೆ ನಿರ್ಮಾಣ ಮಾಡುವುದರ ಮೂಲಕ ಪ್ರಕೃತಿ ಪ್ರಿಯರನ್ನು ತನ್ನತ್ತ ಆಕರ್ಷಿಸುವುದರ ಜೊತೆಗೆ ರೈತಾಪಿ ವರ್ಗದವರಲ್ಲಿ ಸಂತಸದ ವಾತಾವರಣ ನಿರ್ಮಾಣ ಮಾಡಿತ್ತು. 

ಬಂಗಾಳಕೊಲ್ಲಿ ಸೇರುವ ಪಿನಾಕಿನಿ: ಚಿಕ್ಕಬಳ್ಳಾಪುರದ ಜಿಲ್ಲೆಯ ನಂದಿ ಬೆಟ್ಟದ ತಪ್ಪಲಿನಲ್ಲಿ ಉಗಮವಾಗಿ, ದೇವನಹಳ್ಳಿ ಮಾರ್ಗವಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಕ್ಕದಲ್ಲಿರುವ ಬೆಟ್ಟಕೋಟೆ ಕೆರೆ ತುಂಬಿ ನಲ್ಲೂರು ಬಿದಲಪುರ ಮುಖಾಂತರ ಸೂಲಿಬೆಲೆ ಮಾರ್ಗವಾಗಿ ಹೊಸಕೋಟೆ ಕೆರೆ ಸೇರುವ ಮೂಲಕ ಕೋಲಾರ ಮಾರ್ಗವಾಗಿ ತಮಿಳುನಾಡಿನ ಮೂಲಕ ಬಂಗಾಳಕೊಲ್ಲಿ
ಸೇರುವ ಪಿನಾಕಿನಿ ಐತಿಹಾಸಿಕವಾಗಿ ಬಹಳಷ್ಟು ಪ್ರಾಮುಖ್ಯತೆ ಪಡೆಯವುದರ ಮೂಲಕ ನದಿ ತಪ್ಪಲಿನ ಕೃಷಿಕರಿಗೆ ವರದಾನವಾಗಿತ್ತು. ಆದರೆ, ಕಳೆದ 25 ವರ್ಷಗಳಿಂದ ಮಳೆ ಅವಕೃಪೆಯಿಂದ ಭೀಕರ ಬರ ಪರಿಸ್ಥಿತಿ ಎದುರಿಸುತ್ತಿದ್ದ ವೇಳೆ ನದಿ ನೀರು ಬತ್ತಿಹೋಗಿತ್ತು. ಇತ್ತಿಚೆಗೆ ಮಳೆಯಿಂದ ನೀರು ಬಂದಿದೆ. ತಾಲೂಕಿನಲ್ಲಿಯೇ ಅತೀ ಹೆಚ್ಚು ಮಳೆಯಾಗಿರುವ ಪ್ರದೇಶವೆಂದರೆ ಅದು ಚನ್ನರಾಯಪಟ್ಟಣ ಹೋಬಳಿಯಾಗಿದೆ. ಅಂತರ್ಜಲ ಕುಸಿತದ ಕಾರಣದಿಂದ ಶೇಖರಣೆಯಾಗಿದ್ದ ನೀರೆಲ್ಲಾ ಆವಿಯಾಗಿದ್ದು, ಈ ಮಳೆಯಿಂದಾಗಿ ದಕ್ಷಿಣಾ ಪಿನಾಕಿನಿ ಪುನರ್‌ ಜೀವನ ನೀಡಿದೆ. ಮಳೆಯಿಂದ ನೀರು ಶೇಖರಣೆಯಾಗಿ ನದಿ ತಪ್ಪಲಿನ ರೈತರು ಕೃಷಿಗೆ ಪೂರಕ ಹಾಗೂ ಉತ್ತಮ ಬೆಳೆಗಳನ್ನು ಬೆಳೆಯಬಹುದೆಂಬ ಸಂತಸ ಮೂಡಿದ್ದು ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. 

ಯಥೇತ್ಛ ನೀರು ಸಿಗುತಿತ್ತು: ಸುಮಾರು 20 ವರ್ಷಗಳ ಹಿಂದೆ ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ತುಂಬಿದ ಕೆರೆಗಳು ದೇವನಹಳ್ಳಿ ಮಾರ್ಗವಾಗಿ ಬೆಟ್ಟಕೋಟೆ ಕೆರೆಯಿಂದ ತುಂಬಿ ಹರಿಯುತ್ತಿದ್ದು, ಬೇಸಿಗೆ ಕಾಲದಲ್ಲೂ ಭತ್ತ ಬೆಳೆಯುವ ಕಾಲವಾಗಿತ್ತು. ಎಲ್ಲಾ ಕಾಲದಲ್ಲೂ ನೀರು ಸಿಗುತ್ತಿತ್ತು. ದಕ್ಷಿಣ ಪಿನಾಕಿನಿ ನದಿ ಅಕ್ಟೋಬರ್‌ ತಿಂಗಳಿನಲ್ಲಿ ಯಥೇತ್ಛವಾಗಿ ಹರಿಯುತ್ತಿತ್ತು. ಆಗ ರಸ್ತೆಗಳ ಸೇತುವೆಗಳು ಇರಲಿಲ್ಲ. ನೀರು ಹರಿದು ಬಂದಾಗ ಸಂಚಾರ ಅಸ್ತವ್ಯಸ್ತವಾಗುತ್ತಿತ್ತು. ಈಗ ಸೇತುವೆಗಳು ನೀರ್ಮಾಣವಾದರೆ ನೀರು ನೋಡುವುದು ಕಷ್ಟಕರವಾಗಿದೆ. ಈ ಬಾರಿ ಸುರಿದ ಮಳೆಯಿಂದ ಸೇತುವೆಗಳ ಕೆಳಗಡೆ ನೀರು ಹರಿಯುತ್ತಿರುವುದನ್ನು ನೋಡಬಹುದು. ಇದರಿಂದ ಅಂತರ್ಜಲಮಟ್ಟ ಹೆಚ್ಚಿ ಕೊಳವೆ ಬಾವಿಗಳಲ್ಲಿ ಸ್ವಲ್ಪಮಟ್ಟಿಗೆ ನೀರು ಹೆಚ್ಚಾಗಿದೆ. ಹಾಗೂ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ ಎಂದು ರೈತ ಹೊಸನಲ್ಲೂರು ನಂಜೇಗೌಡ ಹೇಳುತ್ತಾರೆ.

ಶ್ರೀಮಂತ ಮರಳಿನಿಂದ ಲೂಟಿ : ನದಿ ಮರಳು ನಿರ್ಮಾಣವೂ ಬಹಳ ಪ್ರಭಾವವಾಗಿದ್ದು, ಇದನ್ನು ಹಿಂದೆ ದೊಡ್ಡ ನೀರಿನ ಹರಿವಿನೊಂದಿಗೆ ದೀರ್ಘ‌ಕಾಲಿಕ ನದಿಯಾಗಿರಬಹುದು ಎಂಬುವುದನ್ನು ಸೂಚಿಸುತ್ತದೆ. ಈ ನದಿ ಈಗ ಅದರ ಶ್ರೀಮಂತ ಮರಳಿನಿಂದ ಲೂಟಿ ಮಾಡಲಾಗಿದೆ. ಮಾನ್ಸೂನ್‌ ಋತುಗಳಲ್ಲಿ ಮಾತ್ರ ನೀರಿನ ಹರಿವು ಹೆಚ್ಚಾಗಿರುತ್ತದೆ. ವರ್ಷದಲ್ಲಿ ಉಳಿದ ಭಾಗಗಳಲ್ಲಿ ನದಿ
ಶುಷ್ಕವಾಗಿರುತ್ತದೆ ಎಂದು ಹಿರಿಯ ನಾಗರಿಕ ನಾರಾಯಣಚಾರ್‌ ಹೇಳುತ್ತಾರೆ.

ದಕ್ಷಿಣ ಪಿನಾಕಿನಿ ನದಿ ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯೆ ಸುಮಾರು 400ಕಿ.ಮೀ. ದೂರ ಹರಿಯುತ್ತಿದೆ. ಕರ್ನಾಟಕದಲ್ಲಿ ದಕ್ಷಿಣ ಪಿನಾಕಿನಿ ಎನ್ನುತ್ತಾರೆ. ತಮಿಳುನಾಡಿನಲ್ಲಿ ಥನ್ಪೆನೈ ಎಂದು ಕರೆಯುತ್ತಾರೆ. ಮುಂದಿನ ಪೀಳಿಗೆಗೆ ಈ ರೀತಿ ಇತ್ತು ಎಂದು ಹೇಳುವ ಪರಿಸ್ಥಿತಿ ಬಂದೊದಗಿದೆ.
ನಾರಾಯಣಚಾರ್‌, ನಲ್ಲೂರು ಗ್ರಾಮಸ್ತ

ಟಾಪ್ ನ್ಯೂಸ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.