ಅವ್ಯವಸ್ಥೆ ಆಗರ ಈ ಕ್ವಾರಂಟೈನ್‌ ಕೇಂದ್ರ


Team Udayavani, Jun 22, 2020, 7:43 AM IST

agara kendra

ವಿಜಯಪುರ: ಕೋವಿಡ್‌ 19 ಸೋಂಕಿತರ ಸಂಪರ್ಕಿತರನ್ನು ಕ್ವಾರಂಟೈನ್‌ಗೊಳಿಸಿರುವ ಪಟ್ಟಣದ ವಸತಿ ನಿಲಯ ಅವ್ಯವಸ್ಥೆ ಗಳ ಆಗರವಾಗಿದೆ ಎಂಬ ದೂರುಗಳು ಕೇಳಿವೆ. ಪಟ್ಟಣದ ಹೊರವಲಯದ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯವನ್ನು ಕ್ವಾರಂಟೈನ್‌ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ಆದರೆ ಈ ಕ್ವಾರಂಟೈನ್‌ ಕೇಂದ್ರದಲ್ಲಿ ಮೂಲ ಸೌಕರ್ಯಗಳ ವ್ಯವಸ್ಥೆ ಸರಿಯಿಲ್ಲ. ಕೇಂದ್ರದಲ್ಲಿ 30 ಮಂದಿ ಸಂಪರ್ಕಿತರು ಇದ್ದು, ಅವರಿಗೆ ಸೂಕ್ತ  ಸೌಲಭ್ಯಗಳು ದೊರೆಯು ತ್ತಿಲ್ಲ. ಕೇಂದ್ರದಲ್ಲಿ 6 ಶೌಚಾಲಯಗಳಿದ್ದು, 2 ಮಾತ್ರ ಯೋಗ್ಯವಾಗಿದೆ.

ಉಳಿದ ನಾಲ್ಕು ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ. ಅಲ್ಲದೆ ವಸತಿ ನಿಲಯದಲ್ಲಿ ಎಲ್ಲೆಂದರಲ್ಲಿ ಸಿಗರೇಟ್‌ ಪ್ಯಾಕೆಟ್ಟು ಹಾಗೂ  ಸಿಗರೇಟ್‌ ತುಂಡುಗಳು ಬಿದ್ದಿವೆ. ಕೇಂದ್ರದ ಕೊಠಡಿಗಳನ್ನು ಸ್ವಚ್ಛಗೊಳಿ ಸುವ ಕನಿಷ್ಠ ಜ್ಞಾನವೂ ಇಲ್ಲ ಎಂಬ ಆರೋಪ ಕೇಳಿದೆ. ಕೇಂದ್ರದಲ್ಲಿ ನೀರಿನ ವ್ಯವಸ್ಥೆಗೆ ಒಂದೇ ಟ್ಯಾಂಕ್‌ ಇದ್ದು, ಕುಡಿಯಲು, ಸ್ನಾನಕ್ಕೆ ಬಿಸಿ ನೀರಿಲ್ಲ. ಭಾನುವಾರ  ಬೆಳಗ್ಗೆ ಕ್ವಾರಂಟೈನ್‌ ಕೇಂದ್ರದಲ್ಲಿ ಹಾವು ಪತ್ತೆಯಾಗಿದ್ದು, ಕ್ವಾರಂಟೈನ್‌ನಲ್ಲಿರು ವವರೇ, ಅದನ್ನು ಹಿಡಿದು ಹೊರಗೆ ಬಿಟ್ಟಿದ್ದಾರೆ. ಕ್ವಾರಂಟೈನ್‌ ಕೇಂದ್ರದಲ್ಲಿ ಸ್ಯಾನಿ ಟೈಸರ್‌ ನೀಡಲಾಗಿಲ್ಲ. ಗ್ಲೌಸ್‌ ಇಲ್ಲ. ಕ್ವಾರಂ ಟೈನ್‌ಗೆ ಹೊಸಬರು  ಬಂದ 15 ಗಂಟೆ ಬಳಿಕ ಸರ್ಜಿಕಲ್‌ ಮಾಸ್ಕ್ ನೀಡಲಾಗಿದೆ.

ಆ್ಯಂಬುಲೆನ್ಸ್‌ನಲ್ಲಿ 16 ಮಂದಿ ಸಾಗಣೆ: ಆರೋಗ್ಯಾಧಿಕಾರಿ ಗಳು ಒಂದೇ ಆ್ಯಂಬುಲೆನ್ಸ್‌ನಲ್ಲಿ 16 ಮಂದಿ ಅನುಮಾನಿತ ಸೋಂಕಿತರು ಹಾಗೂ ಸಂಪರ್ಕಿತರನ್ನು ಕರೆ ತಂದಿದ್ದಾರೆ. ಅವರಲ್ಲಿ ಕೋವಿಡ್‌ 19 ಸೋಂಕಿತನಿಗೆ ಅತ್ಯಂತ ಆಪ್ತ ವಲಯದಲ್ಲಿದ್ದವನನ್ನು ಕರೆತರಲಾಗಿದ್ದು, ಈಗ ಎಲ್ಲರಲ್ಲೂ ಸೋಂಕಿನ ಭೀತಿ ಎದುರಾಗಿದೆ ಎಂದು ಆತಂಕ ವ್ಯಕ್ತವಾಗಿದೆ. ಇನ್ನಾ ದರೂ ಅಧಿಕಾರಿ ಗಳು ಎಚ್ಚೆತ್ತುಕೊಂಡು ಸೂಕ್ತ ಮೂಲ ಸೌಕರ್ಯ ಗಳನ್ನು ಒದಗಿಸ ಬೇಕು ಎಂದು ಆಗ್ರಹ  ವ್ಯಕ್ತವಾಗಿದೆ.

ಸಿಗರೇಟ್‌ ಸೇದುತ್ತಿದ್ದರೆ ನಾವೇನು ಮಾಡಲು ಸಾಧ್ಯ?: ಕ್ವಾರಂಟೈನ್‌ಗೆ ತಕ್ಷಣ ಜನರನ್ನು ಒಳಪಡಿಸಬೇಕಾದ ಕಾರಣ ಹಿಂದಿನ ದಿನ ಕ್ವಾರಂಟೈನ್‌ ಕೇಂದ್ರ ಸ್ವಚ್ಛತೆ ಮಾಡಿರಲಿಲ್ಲ. ಒಂದೆರೆಡು ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಇರಲಿಲ್ಲ.  ಈಗ ಸರಿ ಮಾಡಿಸುತ್ತಿದ್ದೇವೆ. ಕ್ವಾರಂಟೈನ್‌ನಲ್ಲಿ ಇರುವವರೇ ಸಿಗರೇಟು ಸೇದುತ್ತಿದ್ದರೆ ನಾವೇನು ಮಾಡಲು ಸಾಧ್ಯ?

ನಾವು ಕ್ವಾರಂಟೈನ್‌ ಸೌಲಭ್ಯ ಕೊಟ್ಟಿರುವ ಬಗ್ಗೆಯೇ ದೂರುತ್ತಿದ್ದಾರೆ. ನಾವು ಪೌರ ಕಾರ್ಮಿಕರನ್ನು ಕಳುಹಿಸಿ ಸ್ವಚ್ಛ ಮಾಡಿಸುತ್ತೇವೆ. ಅವರೂ ಸಹ ಮನುಷ್ಯರೇ. ಅವರಿಗೂ ಕೋವಿಡ್‌ 19 ಬಗ್ಗೆ ಭಯವಿರುತ್ತದೆ. ಕೇಂದ್ರದಲ್ಲಿ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಂಡಿದ್ದೇವೆ. ಅಲ್ಲಿ ಇರುವವರು ಸಹ ಸ್ವಚ್ಛತೆ ಕಾಪಾಡಬೇಕು. ಜತೆಗೆ ಸಿಬ್ಬಂದಿ ಯೊಂದಿಗೆ  ಸಹಕರಿಸಬೇಕು ಎಂದು ಪುರಸಭಾ ಮುಖ್ಯಾಧಿಕಾರಿ ಪ್ರದಿಪ್‌ ಕುಮಾರ್‌ ತಿಳಿಸಿದರು.

* ಅಕ್ಷಯ್‌ ವಿ. ವಿಜಯಪುರ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.