ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆ

Team Udayavani, Aug 19, 2019, 3:00 AM IST

ನೆಲಮಂಗಲ: ಭಾನುವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಸಾರ್ವಜನಿಕರು ಪರದಾಡುವಂತಾಯಿತು. ಜತೆಗೆ ಸುತ್ತಲಿನ ಗ್ರಾಮಗಳಿಗೆ ತೆರಳುತ್ತಿದ್ದ ಗ್ರಾಮಸ್ಥರು ನಿಂತು ನಿಂತು ಸುರಿಯುತ್ತಿದ್ದ ಮಳೆಗೆ ಸರಿಯಾದ ಸಮಯಕ್ಕೆ ಮನೆಗೆ ತೆರಳಲಾಗದೆ ಮಳೆಯನ್ನು ಶಪಿಸಿದರು. ಜತೆಗೆ ಆರಂಭದಲ್ಲಿ ಸುರಿದ ಭಾರೀ ಮಳೆಗೆ, ಪಟ್ಟಣದ ರಸ್ತೆಗಳು ನೀರಿನಿಂದಾವೃತವಾಗುವ ಆತಂಕ ಎದುರಾಯಿತು.

ಅಮಾನಿಕೆರೆ ಕೋಡಿ ಆತಂಕ: ಭಾರೀ ಪ್ರಮಾಣದಲ್ಲಿ ಸುರಿದ ಮಳೆಯಿಂದಾಗಿ ಕೆಲಕಾಲ ಅಮಾನಿಕೆರೆ ಕೋಡಿ ಹರಿಯುವ ಆತಂಕ ಎದುರಾಯಿತು. ಈ ಹಿಂದೆ ಪಟ್ಟಣದಲ್ಲಿ ಹಲವು ವರ್ಷಗಳ ಹಿಂದೆ ಮಳೆ ಆರ್ಭಟಕ್ಕೆ ಅಮಾನಿಕೆರೆ ಕೊಡಿ ಒಡೆದು ಕೆರೆ ಪಾತ್ರದಲ್ಲಿರುವ ಖಾಸಗಿ ಬಡಾವಣೆಗಳಿಗೆ ನೀರು ನುಗ್ಗಿದ್ದರಿಂದ ಪಟ್ಟಣಿಗರು ಸಂಕಷ್ಟ ಎದುರಿಸುವಂತಾಗಿತ್ತು. ರಾಜಕಾಲುವೆಗಳ ಒತ್ತುವರಿ ಹಾಗೂ ನೀರು ಸರಾಗವಾಗಿ ಹರಿದು ಹೋಗುವಂತೆ ಸ್ವಚ್ಚಗೊಳಿಸದಿರುವುದು ಸಮಸ್ಯೆಗೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ ರಾಜಕಾಲುವೆ ಸ್ವಚ್ಛತೆ ಹಾಗೂ ತೆರವು ಕಾರ್ಯ ಭರದಿಂದ ಸಾಗಿದ್ದು ಅಂದಿಗೆ ಮಾತ್ರ ಸೀಮಿತವಾಯಿತು. ಮತ್ತೇ ಭಾರೀ ಪ್ರಮಾಣದ ಮಳೆ ಸುರಿದರೆ ಪಟ್ಟಣಿಗರು ಸಮಸ್ಯೆಗೆ ಸಿಲುಕುತ್ತಾರೆ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಎಚ್ಚೆತ್ತುಕೊಳ್ಳುತ್ತಾರೆಯೇ? ಎಂಬುದನ್ನು ಕಾದುನೋಡಬೇಕಿದೆ ಎಂಬುದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ನೌಕರರು ವಿದ್ಯಾರ್ಥಿಗಳಿಗೆ ಸಂಕಷ್ಟ: ಬೆಳಗ್ಗೆಯಿಂದಲೂ ಮೋಡಕವಿದ ವಾತಾವರಣ. ಆದರೆ ಸಂಜೆ ವೇಳೆಗೆ ಮಳೆ ಧಾರಾಕವಾಗಿ ಸುರಿಯಿತು. ವಿದ್ಯಾರ್ಥಿಗಳು ಸೇರಿದಂತೆ ಖಾಸಗಿ ಕಾರ್ಖಾನೆ ನೌಕರರು ಹಾಗೂ ಗಾರ್ಮೆಂಟ್ಸ್‌ ನೌಕರರು ಸೇರಿದಂತೆ ಎಲ್ಲರೂ ಮನೆಗೆ ತೆರಳುವ ಸಮಯವಾಗಿದ್ದರಿಂದ ಹರಸಾಹಸ ಪಡಬೇಕಾಯಿತು. ವಿದ್ಯಾರ್ಥಿಗಳು ಬಸ್‌ ನಿಲ್ದಾಣಕ್ಕೆ ತೆರಳಲು ಸಾಧ್ಯವಾಗದೇ ಬಸ್‌ಗಳನ್ನು ತಪ್ಪಿಸಿಕೊಂಡರು.

ಮಳೆಯಿಂದಾಗಿ ಗ್ರಾಮೀಣ ಪ್ರದೇಶಗಳು ಮತ್ತು ಪಟ್ಟಣದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ನೀರು ಹರಿದ ಪರಿಣಾಮ ದಾರಿಹೋಕರಿಗೆ ಯಾವಕಡೆ ವಾಹನ ಚಲಾಯಿಸಬೇಕೆಂಬುದು ತಿಳಿಯದಂತಾಗಿತ್ತು. ಹಳ್ಳಿಗಳಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹೈನೋದ್ಯಮಿಗಳು ಸಮಯಕ್ಕೆ ಸರಿಯಾಗಿ ಹಾಲು ಸರಬರಾಜು ಮಾಡಲಾಗದೆ ಪರಿತಪಿಸುವಂತಾಯಿತು.

ಹೆದ್ದಾರಿ ಸಮಸ್ಯೆ: ತಾಲೂಕಿನಾದ್ಯಂತ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿ 4 ಹಾಗೂ ಮಂಗಳೂರು ಹೆದ್ದಾರಿ 48ರಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರು ಮಳೆಯ ಆರ್ಭಟಕ್ಕೆ ಹೆದರಿಯ ಆಸುಪಾಸುಗಳಲ್ಲಿ ಎಲ್ಲೆಂದರಲ್ಲಿ ಬೈಕ್‌ಗಳನ್ನು ನಿಲ್ಲಿಸಿ ಬಸ್‌ ನಿಲ್ದಾಣಗಳು ಮತ್ತು ಮರಗಳಡಿಯಲ್ಲಿ ಆಶ್ರಯವನ್ನು ಪಡೆದುಕೊಂಡರೆ, ಮತ್ತೇಕೆಲವರು ಕುಣಿಗಲ್‌ ವೃತ್ತ ಮತ್ತು ಸೊಂಡೆಕೊಪ್ಪ ವೃತ್ತ ಸೇರಿದಂತೆ ಹೆದ್ದಾರಿಗಳಲ್ಲಿರುವ ಮೇಲ್ಸೇತುವೆಗಳ ಕೆಳಗೆ ನಿಂತು ಯಾವಾಗ ಮಳೆ ನಿಲ್ಲುತ್ತದೋ ಎಂಬ ಜಪಕ್ಕೆ ಮೊರೆಹೋಗಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ