ಪರಿಹಾರವಾಗದ ಆಧಾರ್‌ ಬವಣೆ

ದಿನಕ್ಕೆ 35 ನೋಂದಣಿಗೆ ಮಾತ್ರ ಅವಕಾಶ | ದಿನವಿಡೀ ಕಾಯಬೇಕಾದ ಪರಿಸ್ಥಿತಿ | ನಿತ್ಯವೂ ಪಟ್ಟಣಕ್ಕೆ ಅಲೆದಾಟ

Team Udayavani, Jun 14, 2019, 8:54 AM IST

br-tdy-1..

ದೇವನಹಳ್ಳಿ ತಾಲೂಕಿನ ಚಪ್ಪರದ ಕಲ್ಲು ಸರ್ಕಲ್ ಸಮೀಪದ ಜಿಲ್ಲಾ ಸಂಕೀರ್ಣದ ಆವರಣದಲ್ಲಿರುವ ಆಧಾರ್‌ ನೋಂದಣಿ ಕೇಂದ್ರದಲ್ಲಿ ಜನರು ಕುಳಿತಿರುವುದು.

ದೇವನಹಳ್ಳಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಧಾರ್‌ಗಾಗಿ ಸಾರ್ವಜನಿಕರು ನಿತ್ಯವೂ ಪರಿತಪ್ಪಿಸುವಂತಾಗಿದೆ. ಸಮರ್ಪಕ ವಾಗಿ ಕಾರ್ಯ ನಿರ್ವಹಿಸದ ಸರ್ವರ್‌, 35ಕ್ಕೆ ಮಿತಿ ಗೊಳಿಸಿರುವ ನೋಂದಣಿ ಸೇರಿ ಹಲವು ಸಮಸ್ಯೆಗ ಳಿಂದ ಹೊಸ ಆಧಾರ್‌ ಪಡೆಯುವವರು ಪರದಾಡುವಂತಾಗಿದೆ.

ನಿತ್ಯವೂ ಗ್ರಾಮೀಣ ಪ್ರದೇಶದಿಂದ ನೂರಾರು ಜನರು ತಾಲೂಕಿನ ಚಪ್ಪರದ ಕಲ್ಲು ಸರ್ಕಲ್ ಸಮೀ ಪದ ಜಿಲ್ಲಾ ಸಂಕೀರ್ಣ ಆಧಾರ್‌ ಕಾರ್ಡ್‌ ಕೇಂದ್ರಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾರ್ವಜನಿಕರ ಪರದಾಟ: ಹೊಸ ಹಾಗೂ ತಿದ್ದು ಪಡಿ ಆಧಾರ್‌ ಕಾರ್ಡ್‌ ವಿತರಣೆ ಜವಾಬ್ದಾರಿಯನ್ನು ಸ್ಪಂದನ ಕೇಂದ್ರ ನಿರ್ವಹಿಸುತ್ತಿದೆ. ಗ್ರಾಪಂ, ಬ್ಯಾಂಕ್‌, ನಾಡ ಕಚೇರಿಗಳಲ್ಲೂ ಆಧಾರ್‌ ಮಾಡಿಸಬಹುದು. ಆದರೆ ಸರ್ವರ್‌ ಸಮಸ್ಯೆ ಹಾಗೂ ನೋಂದಣಿ ಮಿತಿ ಯಿಂದಾಗಿ ಸಾರ್ವಜನಿಕರು ಪರಿತಪ್ಪಿಸುವಂತಾಗಿದೆ. ಆಧಾರನ್ನು ಸುಪ್ರೀಂ ಮಾನ್ಯ ಮಾಡದಿದ್ದರೂ ಸಾರ್ವ ಜನಿಕ ಕಚೇರಿಗಳಲ್ಲಿ ಆಧಾರ್‌ ಕಾರ್ಡ್‌ನ ಅಗತ್ಯವಿದೆ ಎಂದು ಕೇಳುವುದರಿಂದ ಅಗತ್ಯವೆನಿಸಿದೆ.

ಸರ್ವರ್‌ ಸಮಸ್ಯೆ ನೆಪ: ಆಧಾರ್‌ ವಿತರಣೆ ಕೇಂದ್ರ ಗಳು ಆರಂಭವಾದರೂ ಸರ್ವರ್‌ ಸಮಸ್ಯೆಯ ನೆಪ ಹೇಳುವ ಅಧಿಕಾರಿಗಳು, ಸಾರ್ವಜನಿಕರು ಪಟ್ಟಣ ಗಳಿಗೆ ಅಲೆದಾಡುವಂತೆ ಮಾಡುತ್ತಾರೆ. ಇದರಿಂದಾಗಿ ಹಳ್ಳಿಗಾಡಿನ ಪ್ರದೇಶಗಳ ಜನರು ತೊಂದರೆ ಅನುಭವಿ ಸುತ್ತಿದ್ದಾರೆ. ಚಿಕ್ಕ ಮಕ್ಕಳಿಗೂ ಆಧಾರ್‌ ಅಗತ್ಯವಿರುವು ದರಿಂದ ಪಾಲಕರು ಚಿಕ್ಕಮಕ್ಕಳನ್ನು ಜತೆಗೆ ಕರೆದು ಕೊಂಡು ಬಂದು ನರಕಯಾತನೆ ಅನುಭವಿಸುತ್ತಿದ್ದಾರೆ. ಇನ್ನೂ ಕೆಲವರು ಬೆಳಗಿನ ಜಾವ 5-6 ಗಂಟೆಯಿಂದಲೇ ಕಾಯುವ ಪರಿಸ್ಥಿತಿ ಇದೆ.

ಆಧಾರ್‌ ನೋಂದಣಿ ಮಾಡಿಸುವಷ್ಟರಲ್ಲಿ ಸಾಕುಸಾಕಾಗಿ ಹೋಗಿದೆ. ದಿನವಿಡೀ ಕಾದರೂ ಆಧಾರ್‌ ನೋಂದಣಿಯಾಗುತ್ತಿಲ್ಲ. ಹೀಗಾಗಿ ಚಾಪೆ ತಂದು ಇಲ್ಲೆ ಮಲಗುವಂತಹ ಪರಿಸ್ಥಿತಿಯಿದೆ ಎಂದು ಆಧಾರ್‌ ನೋಂದಣಿಗೆ ಬಂದವರೊಬ್ಬರು ಸರ್ಕಾರದ ವಿರುದ್ಧ ಅಸಮಾಧಾನ ತೋಡಿಕೊಂಡರು.

ಸಾರ್ವಜನಿಕರ ಆಕ್ರೋಶ: ಹಳ್ಳಿಗಾಡಿನ ಜನರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಗ್ರಾಪಂ ನಾಡ ಕಚೇರಿ, ಅಂಚೆ ಕಚೇರಿಗಳಲ್ಲೇ ಆಧಾರ್‌ ಕೇಂದ್ರಗಳನ್ನು ತೆರೆಯಬೇಕೆಂಬ ಆದೇಶ ಕಾಗದಕ್ಕೆ ಮಾತ್ರ ಸೀಮಿತವಾಗಿದೆ. ಸರ್ಕಾರಿ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ಸಹ ನೀಡುತ್ತಿಲ್ಲ. ಇದರಿಂದ ಈವರೆಗೂ ಆಧಾರ್‌ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದರು.

ದಿನಕ್ಕೆ 35 ಟೋಕನ್‌ ಮಾತ್ರ: ದಿನವೂ ಸೂರ್ಯ ಉದಯಿಸುವ ಮುನ್ನವೇ ಗ್ರಾಮೀಣ ಪ್ರದೇಶಗಳಿಂದ ಬರುವ ಜನರು ಟೋಕನ್‌ಗಳನ್ನು ಪಡೆಯಲು ಜಿಲ್ಲಾಧಿಕಾರಿಗಳ ಕಚೇರಿ ಬಾಗಿಲು ಕಾಯುತ್ತಿದ್ದಾರೆ. ಬೆಳಿಗ್ಗೆ 10.30ಕ್ಕೆ ಬಾಗಿಲು ತೆರೆಯುವುದನ್ನೇ ಕಾದು ಟೋಕನ್‌ ಪಡೆಯುತ್ತಾರೆ. ದಿನವೊಂದಕ್ಕೆ ಕೇವಲ 35 ಜನರಿಗೆ ಮಾತ್ರ ವಿತರಣೆ ಆಗುತ್ತಿದೆ. ಹೊಸದಾಗಿ ಆಧಾರ್‌ ಹಾಗೂ ತಿದ್ದು ಪಡಿ ಮಾಡಿಸುವವರಿಗೆ ತೀವ್ರ ತೊಂದರೆಯಾಗುತ್ತಿದೆ. ಚಿಕ್ಕ ವåಕ್ಕಳಿಗೂ ಆಧಾರ್‌ ಮಾಡಿಸುವ ಉದ್ದೇಶದಿಂದ ಮಕ್ಕಳೊಂದಿಗೆ ಪೋಷಕರು ಬರುತ್ತಿದ್ದಾರೆ. ತಿಂಡಿಗೂ ಹೋಗಲು ಸಾಧ್ಯವಾಗದೇ, ಅಲ್ಲೆ ತರಿಸಿಕೊಂಡು ತಿಂಡಿ ಸೇವಿಸುವಂತಹ ಪರಿಸ್ಥಿತಿ ಎದುರಾಗಿದೆ.

ಆಧಾರ್‌ಗಾಗಿ ನಿತ್ಯವೂ ಅಲೆದಾಡುವಂತಾಗಿದೆ. ಅಲ್ಲದೆ ಆಧಾರ್‌ ನೋಂದಣಿ ದಿನಕ್ಕೆ ಕೇವಲ 35ಕ್ಕೆ ಮಿತಿಗೊಳಿಸಲಾಗಿದೆ. ಬೆಳಗ್ಗೆಯೇ ಬಂದು ಕಾಯುತ್ತಿದ್ದರೂ ನೋಂದಣಿಯಾಗುತ್ತಿಲ್ಲ. ಜತೆಗೆ ಸಮಯವೂ ವ್ಯರ್ಥವಾಗುತ್ತಿದೆ. ಹೀಗಾಗ ಸರ್ಕಾರ ಇನ್ನಾದರೂ ಆಧಾರ್‌ ಸಮಸ್ಯೆಯನ್ನು ಪರಿಹರಿಸಬೇಕು ಎಂದು ದೊಡ್ಡಬಳ್ಳಾಪುರದ ನಿವಾಸಿ ಆಂಜನೇಯ ಅಸಮಾಧಾನ ವ್ಯಕ್ತಪಡಿಸಿದರು.

● ಎಸ್‌ ಮಹೇಶ್‌

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.