ಸರ್ಕಾರಿ ಸಿಬ್ಬಂದಿಯಿಂದ ಲಸಿಕೆ ಮಾರಾಟ


Team Udayavani, Jun 13, 2021, 6:23 PM IST

Vaccine sales

ನೆಲಮಂಗಲ: ರಾಜ್ಯದಲ್ಲಿ ಲಸಿಕೆಗಾಗಿ ಜನ ಪರ ದಾಡುವ ಸಮಯದಲ್ಲಿ ಸರ್ಕಾರಿ ಸಿಬ್ಬಂದಿ ಉಚಿತ ಲಸಿಕೆಯನ್ನು 400ಕ್ಕಿಂತ ಹೆಚ್ಚು ಹಣಕ್ಕೆ ಮಾರಾಟ ಮಾಡುತ್ತಿರುವುದು ಅಧಿಕಾರಿಗಳ ದಾಳಿಯಿಂದ ಪತ್ತೆಯಾಗಿದೆ. ನಗರಸಭೆ ವ್ಯಾಪ್ತಿಯ ಅರಿಶಿನಕುಂಟೆ ಆರೋಗ್ಯ ಉಪ ಕೇಂದ್ರದಲ್ಲಿ 50 ಡೋಸ್ ಉಚಿತ ಲಸಿಕೆ ನೀಡಲಾಗುತ್ತಿತ್ತು.

ಆದರೆ, ಆರೋಗ್ಯ ಸಹಾಯಕಿ ಗಾಯಿತ್ರಿ ಲಸಿಕೆ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ರಹಸ್ಯ ಕಾರ್ಯಾಚರಣೆ ನಡೆಸಿ ದಾಗ ಸಿಕ್ಕಿಬಿದ್ದಿದ್ದಾರೆ. ತಕ್ಷಣ ಇದರ ಬಗ್ಗೆ ಮಾಹಿತಿ ತಿಳಿದು ತಹಶೀಲ್ದಾರ್ ಮಂಜುನಾಥ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ, ಸ್ಥಳದಲ್ಲಿ ಎರಡು ಬಾಟಲ್ ಲಸಿಕೆ ದೊರೆತ್ತಿದ್ದು, ಹಣ ಪಡೆದಿರುವುದು ಖಚಿತವಾಗಿದೆ.

ಅಧಿಕಾರಿಗಳ ಮೇಲೆ ಕೂಗಾಟ: ಲಸಿಕೆ ಹಣ ಪಡೆಯುತ್ತಿರುವ ಬಗ್ಗೆ ವಿಡಿಯೋ ಸಮೇತ ಮಾಹಿತಿ ಸಿಕ್ಕ ನಂತರ ಅಧಿಕಾರಿಗಳು ಕೇಂದ್ರದ ಮೇಲೆ ದಾಳಿ ಮಾಡಿದಾಗ  ಗಾಯಿತ್ರಿ ಅಧಿಕಾರಿಗಳ ಮೇಲೆ ಕೂಗಾಡಿದರು. ಪರಿಶೀಲನೆ ಮಾಡಿ ದಾಗ ದಾಖಲಾತಿ, ಲಸಿಕೆ ಸಿಕ್ಕಿದ ತಕ್ಷಣ ತಹಶೀಲ್ದಾರ್, ತಾಲೂಕು ಆರೋಗ್ಯಾಧಿಕಾರಿ ಕಾಲಿಗೆ ಬಿದ್ದು ನಾನು ಸಾಯುತ್ತೇನೆ, ಬಿಟ್ಟು ಬಿಡಿ ಎಂದು ಹೈಡ್ರಾಮ ಮಾಡಿದ್ದಾಳೆ. ದಾಖಲಾತಿ, ಲಸಿಕೆ ವಶ ಪಡಿಸಿಕೊಂಡಿದ್ದು, ತನಿಖೆಗೆ ಆದೇಶ ಮಾಡಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

ಲಸಿಕೆ ವ್ಯರ್ಥವಾಗದಿರಲಿ: ಒಬ್ಬ ವ್ಯಕ್ತಿಗೆ 0.5 ಎಂಎಲ್ ಲಸಿಕೆ ನೀಡಬೇಕು. ಆದರೆ, ಅರಿಶಿನಕುಂಟೆ ಆರೋಗ್ಯ ಉಪಕೇಂದ್ರದಲ್ಲಿ 0.3 ಎಂಎಲ್, 0.2 ಎಂಎಲ್ ನೀಡುವ ಮೂಲಕ ಇಲಾಖೆ ನೀಡುತ್ತಿದ್ದ 5 ಬಾಟಲ್ನ 50 ಡೋಸನ್ನು 80ಕ್ಕೂ ಹೆಚ್ಚು ಜನರಿಗೆ ನೀಡುತ್ತಿದ್ದು, 400ರಿಂದ 500 ರೂ.ಗೆ ಮಾರಾಟ ಮಾಡಿದ್ದಾರೆ. ಲಸಿಕೆ ಪಡೆದವರಿಗೆ 5-6 ದಿನ ನಂತರ ನೋಂದಣಿ ಮಾಡಿ, ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಡೋಸ್ ಪ್ರಮಾಣ ಕಡಿಮೆಯಾ ದರೆ, ಲಸಿಕೆ ಪರಿಣಾಮಕಾರಿಯಲ್ಲ. ಕಡಿಮೆ ಪ್ರಮಾಣ ನೀಡುವ ಬಗ್ಗೆ ಸಮಗ್ರ ತನಿಖೆ ಮುಂದಾಗಿದ್ದು, ಮುಂದಿನ ದಿನದಲ್ಲಿ ಮತ್ತೆ ಅವರಿಗೆ ಲಸಿಕೆ ನೀಡುವುದು ಅನಿವಾರ್ಯ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ. ,

ದೊಡ್ಡಜಾಲ: ನನಗೆ ಲಸಿಕೆ ಬಂದಿರುವ ಬಗ್ಗೆ ಮೇಲಾಧಿಕಾರಿಗೆ ಮಾಹಿತಿ ಇದೆ. ನಾನು ಒಬ್ಬಳೇ ಲಸಿಕೆ ಮಾರಾಟ ಮಾಡುತ್ತಿಲ್ಲ. ಅನೇಕರು ಮಾಡುತ್ತಿದ್ದಾರೆ. ನಾನು ಒತ್ತಾಯ ಮಾಡಿ ಲಸಿಕೆ ತಂದಿದ್ದೇನೆ ಎಂದು ದಾಳಿ ವೇಳೆ ಸಿಬ್ಬಂದಿ ಗಾಯಿತ್ರಿ, ಅಧಿಕಾರಿಗಳಿಗೆ ಸುಳಿವು ನೀಡಿದ್ದು, ಸರ್ಕಾರಿ ಸಿಬ್ಬಂದಿ, ಕೆಲ ಅಧಿಕಾರಿಯಿಂದಲೇ ಲಸಿಕೆ ಮಾರಾಟ ದಂಧೆ ನಡೆಯುತ್ತಿರುವ ಅನುಮಾನವ್ಯಕ್ತವಾಗಿದ್ದು, ಸಮಗ್ರ ತನಿಖೆಯಾದರೆ ದೊಡ್ಡಜಾಲ ಪತ್ತೆಯಾಗಲಿದೆ.

ಟಾಪ್ ನ್ಯೂಸ್

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

Deepika Padukone, Ranveer Singh Set To Bid For New IPL Team

ಹೊಸ ಐಪಿಎಲ್ ತಂಡ ಖರೀದಿಸುತ್ತಾರಂತೆ ದೀಪಿಕಾ- ರಣವೀರ್

12-asasa

ನಾನು ಸಚಿವನಾಗಲು, ಸಿಎಂ ಆಗಲು ಯಡಿಯೂರಪ್ಪ ಕಾರಣ : ಬಸವರಾಜ ಬೊಮ್ಮಾಯಿ

Major lapse in UP CM Yogi Adityanth

ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭದ್ರತೆಯಲ್ಲಿ ಭಾರೀ ಲೋಪ

kannada actress prema

ವಕಾಲತ್ತು ವಹಿಸಿ ಬಂದರು ಪ್ರೇಮಾ

1-ghate

ಬಿಜೆಪಿ ಹಿರಿಯ ನಾಯಕ,ಉದ್ಯಮಿ ಸುಧೀರ್ ಘಾಟೆ ವಿಧಿವಶ

1-11

ಮುಂಬಯಿಯ 60 ಅಂತಸ್ತಿನ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಕ್ಕಳು, ಗುಣಮಟ್ಟದ ಆಹಾರ, udayavanipaper, kannadanews,

ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಿ

Lawmakers who come to the village return without seeing the road!

ಗ್ರಾಮಕ್ಕೆ ಬಂದ ಶಾಸಕರು ರಸ್ತೆ ನೋಡದೇ ವಾಪಸ್‌!

ಜಿಂಕೆ

ವಾಹನಗಳ ವೇಗಕ್ಕೆ ಬಲಿಯಾಗುತ್ತಿವೆ ಕಾಡುಪ್ರಾಣಿಗಳು: ಆಕ್ರೋಶ

ನಿರಂತರ ಮಳೆಯಿಂದ ಕಳೆಗಟ್ಟಿದ ಬೆಳೆ

ನಿರಂತರ ಮಳೆಯಿಂದ ಕಳೆಗಟ್ಟಿದ ಬೆಳೆ

bangalore news

ರಾಗಿ ಬೆಳೆಯುತ್ತಿದ್ದ ರೈತರಿಂದ ಈಗ ಭತ್ತ ನಾಟಿ

MUST WATCH

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

ಹೊಸ ಸೇರ್ಪಡೆ

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

19

ಡಿಎಪಿ ಸಿಗದೆ ಹಿಂಗಾರಲ್ಲಿ ಕಂಗಾಲಾದ ರೈತ!

Deepika Padukone, Ranveer Singh Set To Bid For New IPL Team

ಹೊಸ ಐಪಿಎಲ್ ತಂಡ ಖರೀದಿಸುತ್ತಾರಂತೆ ದೀಪಿಕಾ- ರಣವೀರ್

12-asasa

ನಾನು ಸಚಿವನಾಗಲು, ಸಿಎಂ ಆಗಲು ಯಡಿಯೂರಪ್ಪ ಕಾರಣ : ಬಸವರಾಜ ಬೊಮ್ಮಾಯಿ

—–18

ಗೊಂಡ ಸಮುದಾಯದಿಂದ ಸಿಎಂ ಬಳಿ ನಿಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.