Udayavni Special

ಬೇಡಿಕೆ ಈಡೇರದಿದ್ದರೆ ಮೌಲ್ಯಮಾಪನ ಬಹಿಷ್ಕಾರ

Team Udayavani, Jul 10, 2020, 7:27 AM IST

bedike-bahish

ದೊಡ್ಡಬಳ್ಳಾಪುರ: ಕೋವಿಡ್‌ 19ನಿಂದಾಗಿ ಖಾಸಗಿ ಶಾಲಾ- ಕಾಲೇಜುಗಳ ಶಿಕ್ಷಕರು ಸಂಕಷ್ಟದಲ್ಲಿದ್ದಾರೆ. ಶಿಕ್ಷಕರ ನೆರವಿಗೆ ಬಾರದೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮೌಲ್ಯಮಾಪನ ಆರಂಭಿಸಲು ಹೊರಟಿರುವ ಶಿಕ್ಷಣ ಸಚಿವರಿಗೆ ನೈತಿಕತೆಯಿಲ್ಲ. ಸರ್ಕಾರ ಶಿಕ್ಷಕರಿಗೆ ಆರ್ಥಿಕ ನೆರವು ಹಾಗೂ ವೈದ್ಯಕೀಯ ಭದ್ರತೆ ನೀಡದಿದ್ದರೆ, ಮೌಲ್ಯಮಾಪನ ಬಹಿಷ್ಕಾರದ ನಿರ್ಧಾರ ಕೈಗೊಳ್ಳಬೇಕಾ ಗುತ್ತದೆ ಎಂದು ಶಿಕ್ಷಕರ ಮತ್ತು ಆಡಳಿತ ಮಂಡಳಿ ಫೋರಂ, ಕರ್ನಾಟಕ ಸಂಸ್ಥೆಯ  ಅಧ್ಯಕ್ಷ ಎ.ಪಿ.ರಂಗನಾಥ್‌ ಹೇಳಿದ್ದಾರೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್‌-19ನಿಂದಾಗಿ ಬಹಳ ಖಾಸಗಿ ಶಾಲೆಗಳಲ್ಲಿ ಶಿಕ್ಷಕರಿಗೆ 3 ತಿಂಗಳಿನಿಂದ ಸಂಬಳ ನೀಡಿಲ್ಲ. ತೀವ್ರ ಆರ್ಥಿಕ ಸಂಕಷ್ಟ ಅನು  ಭವಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಸರ್ಕಾರ ಹಠಕ್ಕೆ ಬಿದ್ದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಿದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ಪರೀಕ್ಷೆ ಎದುರಿಸಿದ್ದಾರೆ. ಶಿಕ್ಷಕರ ನೆರವಿಗೆ ಬಾರದ ಸರ್ಕಾರ ಎಸ್‌ಎಸ್‌ಎಲ್‌ಸಿ  ಮೌಲ್ಯಮಾಪನ ಮಾಡುವಂತೆ ಆದೇಶಿಸಿರುವುದು ಎಷ್ಟು ಸರಿ? ಇತ್ತೀಚೆಗೆ ನಡೆದ ಪಿಯುಸಿ ಮೌಲ್ಯ ಮಾಪನದ ವೇಳೆ ನೂರಾರು ಕಿ.ಮೀ. ದೂರ ದಿಂದಬೆಂಗಳೂರಿಗೆ ಉಪನ್ಯಾಸಕರು ಬಂದಿದ್ದರು.

ಈಗ ಎಸ್‌ಎಸ್‌ಎಲ್‌ಸಿ ಮೌಲ್ಯ  ಮಾಪನ ಮಾಡಲು ನೂರಾರು ಶಿಕ್ಷಕರು ಸೇರು ತ್ತಾರೆ. ಆದರೆ ಶಿಕ್ಷಕರಿಗೆ ವೈದ್ಯಕೀಯ ಭದ್ರತೆಯಿಲ್ಲ. ಶಾಲಾ ಶಿಕ್ಷಕರಿಗೆ ಈ ವೇಳೆ ಕೋವಿಡ್‌ 19 ಸೋಂಕು ತಗುಲಿದರೆ ಯಾರು ಹೊಣೆ? ಎಂದರು. ಖಾಸಗಿ ಶಾಲೆಗಳಿಗೆ ಸರ್ಕಾರ ಬಾಕಿ ಇರಿಸಿ  ಕೊಂಡಿರುವ ಸುಮಾರು 1,025 ಕೋಟಿ ಆರ್‌ಟಿಇ ಹಣ ಕೂಡಲೇ ಬಿಡುಗಡೆ ಮಾಡಿ ದರೆ, ಶಾಲೆಗಳಿಗೆ ಸಹಕಾರಿಯಾಗುತ್ತದೆ. ಶಿಕ್ಷಕ ರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು. ಶಿಕ್ಷಕರಿಗೆ ವೈದ್ಯಕೀಯ ವಿಮೆ ಒದಗಿಸಬೇಕು ಎಂದು  ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿ ದೆ ಎಂದು ತಿಳಿಸಿದರು.

ಮೌಲ್ಯಮಾಪನ ಬಹಿಷ್ಕಾರ?: ತಾಲೂಕು ಅನುದಾನ ರಹಿತ ಖಾಸಗಿ ಶಾಲೆಗಳ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟೇಶ್‌ ಮಾತನಾಡಿ, ಎಷ್ಟೋ ಶಾಲೆಗಳಲ್ಲಿ ಶಿಕ್ಷಕರು ಬರೀ 4-5 ಸಾವಿರ ರೂ.ಗಳ ಸಂಬಳಕ್ಕೆ ದುಡಿಯುತ್ತಿದ್ದಾರೆ. ಖಾಸಗಿ  ಆಡಳಿತ ಮಂಡಳಿಗಳು ಶಿಕ್ಷಕರಿಗೆ ಸಂಬಳ ನೀಡದೇ ಶಿಕ್ಷಕರು ಅನ್ಯ ಉದ್ಯೋ ಗಗಳತ್ತ ತೆರಳಬೇಕಿದೆ. ಸರ್ಕಾರ ಖಾಸಗಿ ಶಾಲೆಗಳ ಶಿಕ್ಷಕರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಈ ದಿಸೆಯಲ್ಲಿ ಶಿಕ್ಷಕರಿಗೆ ಆರ್ಥಿಕ ಪ್ಯಾಕೇಜ್‌ ಹಾಗೂ  ವೈದ್ಯಕೀಯ ವಿಮೆಯ ಬೇಡಿಕೆಗಳು ಈಡೇರದಿದ್ದರೆ ಜುಲೈ 13ರಂದು ನಡೆಯಲಿರುವ ಎಸ್‌ ಎಸ್‌ಎಲ್‌ಸಿ ಮೌಲ್ಯಮಾಪನ ಕಾರ್ಯ ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

ರಾಜ್ಯದಲ್ಲಿ ಸುಮಾರು 2.5 ಲಕ್ಷ ಶಿಕ್ಷಕರಿದ್ದು,  ಒತ್ತಡಕ್ಕೆ ಮಣಿದ ಕೆಲವಷ್ಟು ಶಿಕ್ಷಕರನ್ನು ಹೊರತುಪಡಿಸಿ ಬಹಳಷ್ಟು ಶಿಕ್ಷಕರು ಮೌಲ್ಯಮಾಪನ ಬಹಿಷ್ಕಾರಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ ಎಂದು ತಿಳಿಸಿದರು. ಶಿಕ್ಷಕರ ಮತ್ತು ಆಡಳಿತ ಮಂಡಳಿ ಫೋರಂ ಕಾರ್ಯದರ್ಶಿ ಸೂಡಿ ಸುರೇಶ್‌, ಜಂಟಿ  ಕಾರ್ಯದರ್ಶಿ ಟಿ.ಕೆ.ನರಸೇಗೌಡ, ತಾಲೂಕು ಅನುದಾನ ರಹಿತ ಖಾಸಗಿ ಶಾಲೆಗಳ ಶಿಕ್ಷಕರ ಸಂಘದ ಗೌರವ ಅಧ್ಯಕ್ಷ ಶ್ರೀನಿವಾಸ್‌, ಉಪಾಧ್ಯಕ್ಷ ಮೋಹನ್‌ ನಾಯಕ್‌, ಪ್ರಧಾನ ಸಂಚಾಲಕ ದಾದಾಪೀರ್‌ ಭಾಗವಹಿಸಿದ್ದರು.

ಟಾಪ್ ನ್ಯೂಸ್

 ಅಪರಾಧಿಯನ್ನು ಸಾರ್ವಜನಿಕವಾಗಿ ನೇಣಿಗೇರಿಸುವುದಿಲ್ಲ: ತಾಲಿಬಾನ್‌

 ಅಪರಾಧಿಯನ್ನು ಸಾರ್ವಜನಿಕವಾಗಿ ನೇಣಿಗೇರಿಸುವುದಿಲ್ಲ: ತಾಲಿಬಾನ್‌

ಡಿಎಚ್ಓ ಕಚೇರಿಯೆದುರು ಅಹೋ ರಾತ್ರಿಯವರೆಗೂ ಮುಷ್ಕರ

ಡಿಎಚ್ಓ ಕಚೇರಿಯೆದುರು ಅಹೋ ರಾತ್ರಿಯವರೆಗೂ ಮುಷ್ಕರ

 ಟಿಬೆಟಿಯನ್‌ ಗಡಿ ಪೊಲೀಸ್‌ಗೆ ಸೇರಿದ 38 ವೈದ್ಯರು

 ಟಿಬೆಟಿಯನ್‌ ಗಡಿ ಪೊಲೀಸ್‌ಗೆ ಸೇರಿದ 38 ವೈದ್ಯರು

ಸಮ್ಮಿಶ್ರ ಸರ್ಕಾರ ರಚಿಸಿದರೆ ಪುಣ್ಯಾತ್ಮ ಎಚ್‌ಡಿಕೆ ಉಳಿಸಿಕೊಳ್ಳಲಿಲ್ಲ: ಸಿದ್ದರಾಮಯ್ಯ

ಸಮ್ಮಿಶ್ರ ಸರ್ಕಾರ ರಚಿಸಿದರೆ ಪುಣ್ಯಾತ್ಮ ಎಚ್‌ಡಿಕೆ ಉಳಿಸಿಕೊಳ್ಳಲಿಲ್ಲ: ಸಿದ್ದರಾಮಯ್ಯ

ಜೆಡಿಎಸ್ ನಲ್ಲಿ ಅಲ್ಪಸಂಖ್ಯಾತರನ್ನು ಸಿಎಂ ಅಭ್ಯರ್ಥಿಯೆಂದು ಘೋಷಣೆ ಮಾಡಲಿ:ಜಮೀರ್

ಜೆಡಿಎಸ್ ಪಕ್ಷದಲ್ಲಿ ಅಲ್ಪಸಂಖ್ಯಾತರನ್ನು ಸಿಎಂ ಸ್ಥಾನದ ಅಭ್ಯರ್ಥಿಯೆಂದು ಘೋಷಣೆ ಮಾಡಲಿ

ಅಯೋಧ್ಯೆ ಯಾತ್ರೆಗೆ 5,000 ರೂ. ನೆರವು: ಗುಜರಾತ್‌ ಸರ್ಕಾರ

ಅಯೋಧ್ಯೆ ಯಾತ್ರೆಗೆ 5,000 ರೂ. ನೆರವು: ಗುಜರಾತ್‌ ಸರ್ಕಾರ

ರೈತರು ಅಸಮಾಧಾನಗೊಳ್ಳಲು ಬಿಡಬೇಡಿ: ಕೇಂದ್ರಕ್ಕೆ ಎಚ್ಚರಿಕೆ ನೀಡಿದ ಶರದ್‌ ಪವಾರ್‌

ರೈತರು ಅಸಮಾಧಾನಗೊಳ್ಳಲು ಬಿಡಬೇಡಿ: ಕೇಂದ್ರಕ್ಕೆ ಎಚ್ಚರಿಕೆ ನೀಡಿದ ಶರದ್‌ ಪವಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜೆಡಿಎಸ್ ನಲ್ಲಿ ಅಲ್ಪಸಂಖ್ಯಾತರನ್ನು ಸಿಎಂ ಅಭ್ಯರ್ಥಿಯೆಂದು ಘೋಷಣೆ ಮಾಡಲಿ:ಜಮೀರ್

ಜೆಡಿಎಸ್ ಪಕ್ಷದಲ್ಲಿ ಅಲ್ಪಸಂಖ್ಯಾತರನ್ನು ಸಿಎಂ ಸ್ಥಾನದ ಅಭ್ಯರ್ಥಿಯೆಂದು ಘೋಷಣೆ ಮಾಡಲಿ

Public outrage over legislators’ dirty talk – issue at Nelamangala

ಶಾಸಕರ ದರ್ಪದ ಮಾತಿಗೆ ಸಾರ್ವಜನಿಕರ ಆಕ್ರೋಶ

ವೈಭವದ ಚೌಡೇಶರಿ ದೇವಿ ದಸರಾ ಉತ್ಸವ

ವೈಭವದ ಚೌಡೇಶರಿ ದೇವಿ ದಸರಾ ಉತ್ಸವ

ಮೀನುಗಾರರು ಆರ್ಥಿಕವಾಗಿ ಮುಂದೆ ಬನ್ನಿ

ಮೀನುಗಾರರು ಆರ್ಥಿಕವಾಗಿ ಮುಂದೆ ಬನ್ನಿ

doddaballapura dasara

ಜಿಲ್ಲಾದ್ಯಂತ ವಿಜಯ ದಶಮಿ ಸಂಭ್ರಮ

MUST WATCH

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

ಹೊಸ ಸೇರ್ಪಡೆ

ಭಾರತದಲ್ಲೇ ಮುಂದಿನ ಐಪಿಎಲ್‌: ಗಂಗೂಲಿ

ಭಾರತದಲ್ಲೇ ಮುಂದಿನ ಐಪಿಎಲ್‌: ಗಂಗೂಲಿ

 ಅಪರಾಧಿಯನ್ನು ಸಾರ್ವಜನಿಕವಾಗಿ ನೇಣಿಗೇರಿಸುವುದಿಲ್ಲ: ತಾಲಿಬಾನ್‌

 ಅಪರಾಧಿಯನ್ನು ಸಾರ್ವಜನಿಕವಾಗಿ ನೇಣಿಗೇರಿಸುವುದಿಲ್ಲ: ತಾಲಿಬಾನ್‌

ಡಿಎಚ್ಓ ಕಚೇರಿಯೆದುರು ಅಹೋ ರಾತ್ರಿಯವರೆಗೂ ಮುಷ್ಕರ

ಡಿಎಚ್ಓ ಕಚೇರಿಯೆದುರು ಅಹೋ ರಾತ್ರಿಯವರೆಗೂ ಮುಷ್ಕರ

 ಟಿಬೆಟಿಯನ್‌ ಗಡಿ ಪೊಲೀಸ್‌ಗೆ ಸೇರಿದ 38 ವೈದ್ಯರು

 ಟಿಬೆಟಿಯನ್‌ ಗಡಿ ಪೊಲೀಸ್‌ಗೆ ಸೇರಿದ 38 ವೈದ್ಯರು

ಸಮ್ಮಿಶ್ರ ಸರ್ಕಾರ ರಚಿಸಿದರೆ ಪುಣ್ಯಾತ್ಮ ಎಚ್‌ಡಿಕೆ ಉಳಿಸಿಕೊಳ್ಳಲಿಲ್ಲ: ಸಿದ್ದರಾಮಯ್ಯ

ಸಮ್ಮಿಶ್ರ ಸರ್ಕಾರ ರಚಿಸಿದರೆ ಪುಣ್ಯಾತ್ಮ ಎಚ್‌ಡಿಕೆ ಉಳಿಸಿಕೊಳ್ಳಲಿಲ್ಲ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.