Udayavni Special

ವಾಹನ ಎಳೆದಾಡಿದ ಹುಲಿ ವಿಡಿಯೋ ವೈರಲ್


Team Udayavani, Jan 16, 2021, 12:13 PM IST

tiger

ಆನೇಕಲ್‌: ಬೆಂಗಳೂರು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಹುಲಿ ಸಿಂಹ ಸಫಾರಿ ಆವರಣದಲ್ಲಿ ಹುಲಿ ಒಂದು ಪ್ರವಾಸಿಗರನ್ನು ಕರೆದೊಯ್ದಿದ್ದ ವಾಹನವನ್ನು ಎಳೆದಾಡಿದ ಹಳೆ ವಿಡಿಯೋ ಒಂದು ಈಗ ವೈರಲ್‌ ಆಗಿದೆ.

ಕಳೆದ ವರ್ಷದ ಕೊನೆಯ ನ.22 ರಂದು ಈ ದೃಶ್ಯವನ್ನು ಜೆಸ್ವಿನ್‌.ಸಿ ಹೆಸರಿನಲ್ಲಿ ಯೂಟ್ಯೂಬ್‌ಗ ಅಪ್‌ಲೋಡ್‌ ಆಗಿದೆ. ಕಳೆದ ಹತ್ತು ದಿನಗಳ ಹಿಂದೆಯೂ ಸಾಮಾಜಿಕ ಜಾಲತಾಣದಲ್ಲಿ ಇದೇ ವಿಡಿಯೋ ಹರಿದಾಡುತ್ತಿತ್ತು. ಆದರೆ ಶುಕ್ರವಾರ ಈ ವಿಡಿಯೋ ದೃಶ್ಯ ಮಾಧ್ಯಮಗಳಲ್ಲಿ ಇತ್ತೀಚೆಗೆ ನಡೆದ ಘಟನೆ ಎಂದು ಪ್ರಸಾರ ಮಾಡಲಾಗಿದೆ.

ಇಂಜಿನ್‌ ಆಫ್ ಆಗಿತ್ತು: ಉದ್ಯಾನ ವನದಲ್ಲಿನ ಸಫಾರಿಯ ಹುಲಿ ಆವರಣದಲ್ಲಿ ಗಂಡು ಹುಲಿ ರಂಜನ್‌ ಇದಾಗಿದ್ದು, ಕೆಲ ವರ್ಷಗಳಿಂದ ಈ ರೀತಿ ವರ್ತಿಸುತ್ತಿದೆ. ಈ ವಿಡಿಯೋದಲ್ಲಿ ಸೆರೆಯಾಗಿರುವ ದಿನ ಸಹ ಸಫಾರಿ ವಾಹನ ಸೈಲೋ (ವಾಹನ) ಪ್ರವಾಸಿಗರನ್ನು ಕರೆದೊಯ್ದಿತ್ತು. ಆ ಸಮಯದಲ್ಲಿ ವಾಹನದ ಇಂಜಿನ್‌ ಆಫ್ ಆಗಿದೆ. ಮತ್ತೆ ಸ್ಟಾರ್ಟ್ ಮಾಡಲು ಚಾಲಕ ಮುಂದಾದರೂ ಬ್ಯಾಟರಿ ಸಮಸ್ಯೆಯಿಂದ ಸಾಧ್ಯವಾಗಿರಲಿಲ್ಲ. ಆಗ ಹುಲಿ ರಂಜನ್‌ ವಾಹನ ಹಿಂಭಾಗದಿಂದ ಬಂಪರ್‌ನ್ನು ಕಚ್ಚಿ ಎಳೆದು ಹೋಗಲು ಯತ್ನಿಸಿದೆ. ಇದನ್ನು ಮತ್ತೂಂದು ಪ್ರವಾಸಿ ವಾಹನದಲ್ಲಿದ್ದ ಪ್ರವಾಸಿಗರು ಸೆರೆ ಹಿಡಿದು ನ.22 ರಂದು ಯೂಟ್ಯೂಬ್‌ಗ ಅಪ್‌ಲೋಡ್‌ ಮಾಡಿದ್ದಾರೆ.= ಇದೇ ರೀತಿ ಸಿಂಹ ಒಂದು ಸಫಾರಿ ವಾಹನದ ಚಕ್ರ ಕಚ್ಚಲು ಹೋಗಿದ್ದ ವಿಡಿಯೋ ಸಹ ಸೆರೆಯಾಗಿ ವೈರಲ್‌ ಆಗಿತ್ತು. ಕರಡಿ ಸಫಾರಿ ವಾಹನದ ಕಿಟಕಿ ಹಿಡಿದು ನಿಂತಿರುವ ವಿಡಿಯೋ ಸಹ ಸೆರೆಯಾಗಿತ್ತು. ಇಂತಹ ಘಟನೆಗಳು ಸಫಾರಿಯಲ್ಲಿ ಆಗಿಂದಾಗ್ಗೆ ನಡೆಯುತ್ತಿರುವುದು ಸಾಮಾನ್ಯವಾಗಿದೆ.

ಇದನ್ನೂ ಓದಿ:ಭಾರತದಲ್ಲಿ ಬಡವರಿಗೂ ಕೈಗೆಟುಕುವ ದರದಲ್ಲಿ ವ್ಯಾಕ್ಸಿನ್ ಲಭ್ಯ: ಕೆ.ಎಸ್.ಈಶ್ವರಪ್ಪ

ಹಳೆ ವಿಡಿಯೋ ಈಗ ವೈರಲ್‌: ಇಂತಹ ಘಟನೆ ಸಾಮಾನ್ಯ

ಈ ವಿಡಿಯೋ ಕುರಿತು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕರಾದ ವನಶ್ರೀ ವಿಪಿನ್‌ ಸಿಂಗ್‌ ಮಾತನಾಡಿ, ಈ ವಿಡಿಯೋ ತುಂಬಾ ಹಳೆಯದು. ಯಾರೋ ಪ್ರವಾಸಿಗರು ಈಗ ವಿಡಿಯೋವನ್ನು ವೈರಲ್‌ ಮಾಡಿದ್ದಾರೆ. ಅಂದು ಸಫಾರಿ ವಾಹನದ ಬ್ಯಾಟರಿ ಸಮಸ್ಯೆಯಾಗಿತ್ತು. ನಮ್ಮ ರೆಸ್ಕ್ಯೂ ಟೀಮ್‌ ಕೂಡಲೇ ಹೋಗಿ ವಾಹನವನ್ನು ಅಲ್ಲಿಂದ ಹೊರ ತಂದಿದ್ದಾರೆ. ಹುಲಿ ಹಾಗೂ ಪ್ರವಾಸಿಗರಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ಅವರು ಹೇಳಿದರು. ಸಫಾರಿಯಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿರುತ್ತವೆ. ಆದರೆ ಸಾರ್ವಜನಿಕರು ಆ ವಿಡಿಯೋಗಳನ್ನು ವೈರಲ್‌ ಮಾಡಿದರೆ ನಾವು ಏನು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ಟಾಪ್ ನ್ಯೂಸ್

ಫ್ಲಿಪ್ ಕಾರ್ಟ್ ನಿಂದ ಕೌಶಲ್ಯಾಭಿವೃದ್ಧಿ ತರಬೇತಿಗೆ ಸಪ್ಲೈ ಚೈನ್ ಆಪರೇಷನ್ಸ್ ಅಕಾಡೆಮಿ ಆರಂಭ

ಫ್ಲಿಪ್ ಕಾರ್ಟ್ ನಿಂದ ಕೌಶಲ್ಯಾಭಿವೃದ್ಧಿ ತರಬೇತಿಗೆ ಸಪ್ಲೈ ಚೈನ್ ಆಪರೇಷನ್ಸ್ ಅಕಾಡೆಮಿ ಆರಂಭ

ಜಾನುವಾರುಗಳಿಗೆ ಆಸರೆಯಾಗಿದ್ದ ಇನ್ಸ್ಪೆಕ್ಟರ್ ಮೊಹಮ್ಮದ್ ರಫಿಕ್ ನಿಧನ

ಜಾನುವಾರುಗಳಿಗೆ ಆಸರೆಯಾಗಿದ್ದ ಇನ್ಸ್ಪೆಕ್ಟರ್ ಮೊಹಮ್ಮದ್ ರಫಿಕ್ ನಿಧನ

2020-21ನೇ ಸಾಲಿನ ಐಟಿಆರ್ ಫೈಲಿಂಗ್ :- ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ

2020-21ನೇ ಸಾಲಿನ ಐಟಿಆರ್ ಫೈಲಿಂಗ್: ಈ 9 ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

ಆರ್.ಅಶೋಕ್

ಉತ್ತರಾಖಂಡ್ ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಬದ್ಧ: ಸಚಿವ ಆರ್.ಅಶೋಕ್

ಟಿಪ್ಪರ್ – ಕಾರು ನಡುವೆ ಭೀಕರ ಅಪಘಾತ : ಓರ್ವ ಸ್ಥಳದಲ್ಲೆ ಸಾವು , ನಾಲ್ವರಿಗೆ ಗಾಯ

ಟಿಪ್ಪರ್ – ಕಾರು ನಡುವೆ ಭೀಕರ ಅಪಘಾತ : ಓರ್ವ ಸ್ಥಳದಲ್ಲೇ ಸಾವು , ನಾಲ್ವರಿಗೆ ಗಾಯ

1-AAA

ನಕ್ಸಲ್ ನಂಟು : ವಿಠಲ ಮಲೆಕುಡಿಯ,ತಂದೆ ನಿರ್ದೋಷಿ ಎಂದ ಕೋರ್ಟ್

ಹೋಮ್ ವರ್ಕ್ ಮಾಡಿಲ್ಲ ಎಂದು 7ನೇ ತರಗತಿ ವಿದ್ಯಾರ್ಥಿಯನ್ನು ಹೊಡೆದು ಕೊಂದ ಶಿಕ್ಷಕ!

ಹೋಮ್ ವರ್ಕ್ ಮಾಡಿಲ್ಲ ಎಂದು 7ನೇ ತರಗತಿ ವಿದ್ಯಾರ್ಥಿಯನ್ನು ಹೊಡೆದು ಕೊಂದ ಶಿಕ್ಷಕ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lawmakers who come to the village return without seeing the road!

ಗ್ರಾಮಕ್ಕೆ ಬಂದ ಶಾಸಕರು ರಸ್ತೆ ನೋಡದೇ ವಾಪಸ್‌!

ಜಿಂಕೆ

ವಾಹನಗಳ ವೇಗಕ್ಕೆ ಬಲಿಯಾಗುತ್ತಿವೆ ಕಾಡುಪ್ರಾಣಿಗಳು: ಆಕ್ರೋಶ

ನಿರಂತರ ಮಳೆಯಿಂದ ಕಳೆಗಟ್ಟಿದ ಬೆಳೆ

ನಿರಂತರ ಮಳೆಯಿಂದ ಕಳೆಗಟ್ಟಿದ ಬೆಳೆ

bangalore news

ರಾಗಿ ಬೆಳೆಯುತ್ತಿದ್ದ ರೈತರಿಂದ ಈಗ ಭತ್ತ ನಾಟಿ

doddaballapura news

ಡಿವೈಎಸ್ಪಿ ಟಿ.ರಂಗಪ್ಪ ಪತ್ನಿ ರಶ್ಮಿಗೆ “ಮಿಸಸ್‌ ಇಂಡಿಯಾ ಪ್ರಶಸ್ತಿ”

MUST WATCH

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

udayavani youtube

ಉದಯವಾಣಿ ಕಚೇರಿಯಲ್ಲಿ ‘ಸಲಗ’ !

udayavani youtube

ಗೂಟಿ ಕೃಷಿ ( air layering ) ಮಾಡುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ

udayavani youtube

ಭಾರತ – ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು

ಹೊಸ ಸೇರ್ಪಡೆ

ಫ್ಲಿಪ್ ಕಾರ್ಟ್ ನಿಂದ ಕೌಶಲ್ಯಾಭಿವೃದ್ಧಿ ತರಬೇತಿಗೆ ಸಪ್ಲೈ ಚೈನ್ ಆಪರೇಷನ್ಸ್ ಅಕಾಡೆಮಿ ಆರಂಭ

ಫ್ಲಿಪ್ ಕಾರ್ಟ್ ನಿಂದ ಕೌಶಲ್ಯಾಭಿವೃದ್ಧಿ ತರಬೇತಿಗೆ ಸಪ್ಲೈ ಚೈನ್ ಆಪರೇಷನ್ಸ್ ಅಕಾಡೆಮಿ ಆರಂಭ

dandeli news

ಅಕ್ರಮವಾಗಿ ಕೋಣಗಳ ಸಾಗಾಟ: ಲಾರಿ, ಕಾರು ಸಮೇತ ಆರೋಪಿಗಳ ಬಂಧನ

ಜಾನುವಾರುಗಳಿಗೆ ಆಸರೆಯಾಗಿದ್ದ ಇನ್ಸ್ಪೆಕ್ಟರ್ ಮೊಹಮ್ಮದ್ ರಫಿಕ್ ನಿಧನ

ಜಾನುವಾರುಗಳಿಗೆ ಆಸರೆಯಾಗಿದ್ದ ಇನ್ಸ್ಪೆಕ್ಟರ್ ಮೊಹಮ್ಮದ್ ರಫಿಕ್ ನಿಧನ

2020-21ನೇ ಸಾಲಿನ ಐಟಿಆರ್ ಫೈಲಿಂಗ್ :- ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ

2020-21ನೇ ಸಾಲಿನ ಐಟಿಆರ್ ಫೈಲಿಂಗ್: ಈ 9 ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

23

ವಿದ್ಯುತ್ ಕೊಡದಿದ್ದರೆ ಕ್ರಿಮಿನಾಶಕ ಸೇವಿಸಿ ಕಚೇರಿ ಎದುರು ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.