ಬಂಡೆ ಪ್ರದೇಶದ ಗುಂಡಿಗೆ ತ್ಯಾಜ್ಯ ಸುರಿದ್ರು


Team Udayavani, Jan 16, 2022, 12:03 PM IST

ಬಂಡೆ ಪ್ರದೇಶದ ಗುಂಡಿಗೆ ತ್ಯಾಜ್ಯ ಸುರಿದ್ರು

ದೇವನಹಳ್ಳಿ: ಬೆಂಗಳೂರಿನಿಂದ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಬಿಬಿಎಂಪಿ ಕಸ ಸುರಿಯುತ್ತಿದ್ದರು. ಅದರಿಂದ ಆಗುತ್ತಿರುವ ದುಷ್ಪರಿಣಾಮಗಳನ್ನು ಸ್ಥಳೀಯರು ಎದುರಿಸುತ್ತಿದ್ದು, ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ಹೋರಾಟಗಳನ್ನು ಮಾಡಿದ್ದರು.

ಅದೇ ಮಾದರಿಯಲ್ಲಿ ಅಪರಿಚಿತ ವಾಹನದಲ್ಲಿ ತಾಲೂಕಿನ ಗಡಿ ಪ್ರದೇಶದ ಜಾಲಿಗೆ ಗ್ರಾಪಂ ವ್ಯಾಪ್ತಿಯಲ್ಲಿನ ಬಚ್ಚಹಳ್ಳಿ ರಸ್ತೆ ಮಾರ್ಗದ ಅನುಪಯುಕ್ತ ಬಂಡೆ ಪ್ರದೇಶದ ಗುಂಡಿಗೆ ಅಪರಿ ಚಿತ ವ್ಯಕ್ತಿಗಳು ರಾತ್ರಿ ವೇಳೆಯಲ್ಲಿ ತ್ಯಾಜ್ಯ ಸುರಿಯುತ್ತಿದ್ದು, ಇದರಿಂದ ಸುತ್ತಮುತ್ತಲಿನ ವಾತಾವರಣ ಕಲುಷಿತ ಗೊಂಡು, ದುರ್ವಾಸನೆ ಯಿಂದ ಸ್ಥಳೀಯರು ಬದುಕು ನಡೆಸುವ ಪರಿಸ್ಥಿತಿ ಉಂಟಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕಸವನ್ನು ತಂದು ಸುರಿಯುತ್ತಿರುವವರ ವಿರುದ್ಧ ಜನರು ಹೋರಾಟ ನಡೆಸಿದ್ದರು. ಈ ಘಟನೆ ಮಾಸುವ ಮುನ್ನವೇ ಈ ವ್ಯಾಪ್ತಿಯಲ್ಲಿ ಕಸ ಹಾಕುತ್ತಿದ್ದಾರೆ. ಗ್ರಾಪಂ ಅಭಿವೃದ್ಧಿ ಅಧಿಕಾರಿ ಆಗಲಿ, ಜನಪ್ರತಿನಿಧಿಗಳಾಗಲೀ ಇತ್ತ ಗಮನಹರಿಸಿಲ್ಲ. ಸುತ್ತಮುತ್ತಲಿನ ಜನರು ಅನಾ ರೋಗ್ಯಕ್ಕೆ ತುತ್ತಾಗುವ ಎಲ್ಲ ಲಕ್ಷಣ ಕಾಣಿಸುತ್ತಿದೆ. ತಿಂಡ್ಲು- ದ್ಯಾವರಹಳ್ಳಿ-ಜಾಲಿಗೆ-ಬಚ್ಚಹಳ್ಳಿ ಗ್ರಾಮ ಗಳಿಗೆ ಹೊಂದಿಕೊಂಡಿರುವ ಬಂಡೆ ಇದಾಗಿದ್ದು, ಯಾರೋ ರಾತ್ರಿ ವೇಳೆಯಲ್ಲಿ ಬಿಬಿಎಂಪಿಯಿಂದ ಕೋಳಿ ತ್ಯಾಜ್ಯ, ಪ್ಲಾಸ್ಟಿಕ್‌, ಸತ್ತ ಜಾನು ವಾರು ಇಲ್ಲಿಗೆ ತಂದು ಸುರಿಯುತ್ತಿದ್ದಾರೆ. ಈ ಪ್ರದೇಶದಲ್ಲಿ ಸಂಚಾರ ಮಾಡಲೂ ತೊಂದರೆ ಯಾಗುತ್ತಿದೆ ಎಂದು ಬಿಕೆಎಸ್‌ ಪ್ರತಿಷ್ಠಾನದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗ್ರಾಮಸ್ಥರು ಆರೋಪ: ಗ್ರಾಮಸ್ಥರು ತ್ಯಾಜ್ಯ ಸುರಿಯುತ್ತಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಗ್ರಾಪಂಗೆ ಮನವಿ ಸಲ್ಲಿಸಿದ್ದರೂ,ಅಧಿಕಾರಿಗಳ ನಿರುತ್ಸಾಹ ಎದ್ದು ಕಾಣುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಯತೇತ್ಛವಾಗಿ ಗುಂಡಿಗೆ ತ್ಯಾಜ್ಯ ಸುರಿಯುತ್ತಿರುವುದರಿಂದ ಬಂಡೆ ಪ್ರದೇಶದಲ್ಲಿ ಮಳೆ ನೀರಿನೊಂದಿಗೆ ಬೆರೆತು ಅಂತರ್ಜಲ ವಿಷಪೂರಿತವಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾತ್ರಿ ವೇಳೆಯಲ್ಲಿ ತ್ಯಾಜ್ಯ ಸುರಿಯುತ್ತಿರುವವರ ಮೇಲೆ ಕ್ರಮ ಕೈಗೊಳ್ಳುವು ದರ ಮೂಲಕ ದಂಡವಿಸಬೇಕು. ಸ್ಥಳೀಯ ಜನಪ್ರತಿನಿಧಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಶೀಘ್ರವಾಗಿ ಇತ್ತ ಗಮನಹರಿಸಿಕ್ರಮಕೈಗೊಳ್ಳಬೇಕು. ಕೂಡಲೇ ತ್ಯಾಜ್ಯವನ್ನುತೆರವುಗೊಳಿಸಿ, ತ್ಯಾಜ್ಯ ಸುರಿಯದಂತೆ ಎಚ್ಚರಿಕೆಯ ನಾಮಫ‌ಲಕ ಅಳವಡಿಸಬೇಕು. – ಬಿ.ಕೆ.ಶಿವಪ್ಪ, ಅಧ್ಯಕ್ಷ, ನಾ.ಹಿತರಕ್ಷಣಾ ಸಮಿತಿ

ತಾಲೂಕಿನ ಗಡಿ ಪ್ರದೇಶದ ಜಾಲಿಗೆ ಗ್ರಾಪಂ ವ್ಯಾಪ್ತಿಯಲ್ಲಿನ ಬಚ್ಚಹಳ್ಳಿ ರಸ್ತೆ ಮಾರ್ಗದ ಬಂಡೆ ಮಾರ್ಗದಲ್ಲಿ ಕಸವನ್ನು ಯಾರು ಹಾಕುತ್ತಿದ್ದಾರೆ ಎಂಬುದರ ಬಗ್ಗೆ ಸ್ಥಳೀಯ ಗ್ರಾಪಂ ಅಭಿವೃದ್ಧಿಅಧಿಕಾರಿಗಳು ಪರಿಶೀಲನೆ ಮಾಡಿ ಮಾಹಿತಿ ಪಡೆದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. – ಎಚ್‌.ಡಿ. ವಸಂತಕುಮಾರ್‌, ತಾಪಂ ಇಒ

– ಎಸ್‌.ಮಹೇಶ್‌

ಟಾಪ್ ನ್ಯೂಸ್

2024ರ ಚುನಾವಣೆ “ಕೈ”ಗೆ ದುಬಾರಿಯಾಗಲಿದೆಯೇ: ಐದು ತಿಂಗಳಲ್ಲಿ ಘಟಾನುಘಟಿಗಳ ರಾಜೀನಾಮೆ

2024ರ ಚುನಾವಣೆ “ಕೈ”ಗೆ ದುಬಾರಿಯಾಗಲಿದೆಯೇ: ಐದು ತಿಂಗಳಲ್ಲಿ ಘಟಾನುಘಟಿಗಳ ರಾಜೀನಾಮೆ

1-d-s-sfsf

ಬೆಂಗಳೂರಿನಲ್ಲಿ ಐಕಿಯ ಸ್ಟೋರ್:ಸಿಇಓ ಜೆಸ್ಪರ್ ಬ್ರಾಡಿನ್ ಜತೆ ಸಿಎಂ ಚರ್ಚೆ

ಲವ್‌ ಬರ್ಡ್ಸ್‌ನಲ್ಲಿ ಲವ್‌ ಮಾಕ್ಟೇಲ್‌ ಜೋಡಿ: ಹೊಸ ಚಿತ್ರದಲ್ಲಿ ಕೃಷ್ಣ-ಮಿಲನಾ

ಲವ್‌ ಬರ್ಡ್ಸ್‌ನಲ್ಲಿ ಲವ್‌ ಮಾಕ್ಟೇಲ್‌ ಜೋಡಿ: ಹೊಸ ಚಿತ್ರದಲ್ಲಿ ಕೃಷ್ಣ-ಮಿಲನಾ

1-fsfdf

ಹೆಚ್ಚುತ್ತಿರುವ ಮಂಕಿ ಪಾಕ್ಸ್ ಸೋಂಕಿನ ಪ್ರಮಾಣ : ಸಲಿಂಗಕಾಮಿಗಳಿಗೆ ಎಚ್ಚರಿಕೆ

1-dfdffds

ಬಿಜೆಪಿ ನಿಷ್ಠಾವಂತನಾದ ನನ್ನ ಸಚಿವ ಸ್ಥಾನ ಭದ್ರ: ಸಚಿವ ಪ್ರಭು ಚವ್ಹಾಣ್

ಜಮ್ಮು-ಕಾಶ್ಮೀರ: ಎನ್ ಕೌಂಟರ್ ನಲ್ಲಿ 3 ಪಾಕಿಸ್ತಾನಿ ಉಗ್ರರ ಹತ್ಯೆ, ಓರ್ವ ಪೊಲೀಸ್ ಹುತಾತ್ಮ

ಜಮ್ಮು-ಕಾಶ್ಮೀರ: ಎನ್ ಕೌಂಟರ್ ನಲ್ಲಿ 3 ಪಾಕಿಸ್ತಾನಿ ಉಗ್ರರ ಹತ್ಯೆ, ಓರ್ವ ಪೊಲೀಸ್ ಹುತಾತ್ಮ

dk shi 2

ಮಸೀದಿ ಕುರಿತು ತಾಂಬೂಲ ಪ್ರಶ್ನೆ; ಬಿಜೆಪಿ ಈ ರಾಜ್ಯವನ್ನು ಕೊಲ್ಲುತ್ತಿದೆ :ಡಿಕೆಶಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ರಸ್ತೆ ತುಂಬಾ ಧೂಳು, ಕೇಳ್ಳೋರಿಲ್ಲ ವಾಹನ ಸವಾರರ ಗೋಳು 

ಗರಿಗೆದರಿದ ಮುಂಗಾರು ಕೃಷಿ ಚಟುವಟಿಕೆ

ಗರಿಗೆದರಿದ ಮುಂಗಾರು ಕೃಷಿ ಚಟುವಟಿಕೆ

1

ಪಡಿತರ ತುಂಬಿಕೊಂಡು ಹೋಗುತ್ತಿದ್ದ ಕ್ಯಾಂಟರ್ ಲಾರಿ ಟೈರ್ ಸ್ಪೋಟಗೊಂಡು ಪಲ್ಟಿ

ರಾಗಿ ಖರೀದಿಸದೇ ಅಧಿಕಾರಿಗಳು ಪರಾರಿ

ರಾಗಿ ಖರೀದಿಸದೇ ಅಧಿಕಾರಿಗಳು ಪರಾರಿ

ಆರ್ಥಿಕ ಸಬಲತೆಗೆ ಹೊಲಿಗೆಯಂತ್ರ ಸಹಕಾರಿ; ಶಾಸಕ ಟಿ. ವೆಂಕಟರಮಣಯ್ಯ

ಆರ್ಥಿಕ ಸಬಲತೆಗೆ ಹೊಲಿಗೆಯಂತ್ರ ಸಹಕಾರಿ; ಶಾಸಕ ಟಿ. ವೆಂಕಟರಮಣಯ್ಯ

MUST WATCH

udayavani youtube

ಮಳಲಿ ಮಸೀದಿಯಲ್ಲಿ ದೇವರ ಸಾನಿಧ್ಯ ಗೋಚರ

udayavani youtube

‘ನನಗೆ ಏಳೂವರೆ ಶನಿ ಉಂಟು!’

udayavani youtube

SSLC ಸಾಧಕರಿಗೆ ಉದಯವಾಣಿ ಸನ್ಮಾನ

udayavani youtube

ಉಡುಪಿ : ಹಲವು ಸಂಶಯಗಳನ್ನು ಹುಟ್ಟು ಹಾಕಿದ ಯುವಜೋಡಿ ಸಾವು ಪ್ರಕರಣ

udayavani youtube

ವೈದ್ಯರ ನಿರ್ಲಕ್ಷದಿಂದ ನೆಲದ ಮೇಲೆ ನರಳಾಡಿದ ಗರ್ಭಿಣಿ

ಹೊಸ ಸೇರ್ಪಡೆ

bjp

ಅಧಿಕಾರವೊಂದೇ ಬಿಜೆಪಿ ಗುರಿಯಲ್ಲ

18

ಸಾಮಾನ್ಯ ಕಾರ್ಯಕರ್ತೆಗೆ ಮೇಲ್ಮನೆ ಗೌರವ

fire-fighters

ಅತಿವೃಷ್ಟಿಯಲ್ಲಿ ಆಪದ್ಭಾಂಧವನಾದ ಅಗ್ನಿಶಾಮಕ ದಳ!

2024ರ ಚುನಾವಣೆ “ಕೈ”ಗೆ ದುಬಾರಿಯಾಗಲಿದೆಯೇ: ಐದು ತಿಂಗಳಲ್ಲಿ ಘಟಾನುಘಟಿಗಳ ರಾಜೀನಾಮೆ

2024ರ ಚುನಾವಣೆ “ಕೈ”ಗೆ ದುಬಾರಿಯಾಗಲಿದೆಯೇ: ಐದು ತಿಂಗಳಲ್ಲಿ ಘಟಾನುಘಟಿಗಳ ರಾಜೀನಾಮೆ

Untitled-1

ಶಿಥಿಲಗೊಂಡ ಸರಕಾರಿ ಶಾಲೆಗಳ ಅಭಿವೃದ್ಧಿಪಡಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.