ಹೊಸಕೋಟೆಯಲ್ಲಿ ಗೆಲುವು ಯಾರಿಗೆ?


Team Udayavani, Apr 12, 2018, 4:07 PM IST

blore-g-1.jpg

ಹೊಸಕೋಟೆ: ತಾಲೂಕಿನಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಸ್ಪರ್ಧೆ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಕಮಲ ಅರಳುವುದೇ, ಕೈ ಮುದುಡುವುದೋ ಎಂಬುದನ್ನು ಕಾದುನೋಡಬೇಕಾಗಿದೆ. ಜೆಡಿಎಸ್‌ ಸ್ಪರ್ಧೆಯಲ್ಲಿದ್ದರೂ ಕೇವಲ ಮತ ವಿಭಜನೆಗಷ್ಟೇ ಸೀಮಿತಗೊಂಡಿದೆ.

ತಾಲೂಕಿನಲ್ಲಿ ಒಟ್ಟು 1,06,795 ಪುರುಷರು, 1,03,811 ಮಹಿಳೆಯರು ಒಟ್ಟು 2,10,606 ಮತದಾರರಿದ್ದಾರೆ. 2013ರಲ್ಲಿ 1,82911 ಒಟ್ಟು ಮತದಾರರಿದ್ದು ಈ ಬಾರಿ ಶೇ.15.15ರಷ್ಟು ಏರಿಕೆಯಾಗಿದೆ. ಕಳೆದ ಚುನಾವಣೆಗಿಂತಲೂ ಮತದಾರರ ಆಧಾರದ ಮೇಲೆ 40 ಮತಗಟ್ಟೆಗಳನ್ನು ಹೆಚ್ಚಾಗಿ ಸ್ಥಾಪಿಸಲಾಗಿದ್ದು 142 ಸೂಕ್ಷ್ಮ, 58 ಅತಿಸೂಕ್ಷ್ಮ, 86 ಸಾಮಾನ್ಯ ಸೇರಿ ಒಟ್ಟು 286 ಮತಕೇಂದ್ರ ಹೊಂದಿದೆ. 

2013ರ ಚುನಾವಣೆಯಲ್ಲಿ ಶೇ.90.91 ರಷ್ಟು ಮತದಾನವಾಗಿದ್ದು ಕಾಂಗ್ರೆಸ್‌ನ ಎನ್‌. ನಾಗರಾಜ್‌ 85,238, ಬಿಜೆಪಿಯ ಬಿ.ಎನ್‌. ಬಚ್ಚೇಗೌಡ 78,099 ಮತಗಳನ್ನು ಪಡೆದು 7139 ಮತಗಳ ಅಂತರದಿಂದ ಕಾಂಗ್ರೆಸ್‌ ಜಯ ಸಾಧಿಸಿತ್ತು. ಜೆಡಿಎಸ್‌ನ ಶ್ರೀಧರ್‌ ಕೇವಲ 1,304 ಮತ ಗಳಿಸಿದ್ದರು. 

ವರ್ಷದಿಂದಲೇ ಪ್ರಚಾರ:ಈಗಾಗಲೇ ರಾಜಕೀಯ ಪಕ್ಷಗಳು ಮತದಾರರ ಪಟ್ಟಿಗಳನ್ನು ಪಡೆದು ಜಾತಿವಾರು ಹಾಗೂ ತಮಗೆ ಮತ ನೀಡುವಂತಹ ವ್ಯಕ್ತಿಗಳ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಕಳೆದ ಒಂದು ವರ್ಷ ದಿಂದಲೂ ಬಿಜೆಪಿ, ಕಾಂಗ್ರೆಸ್‌ ಎರಡೂ ಪಕ್ಷಗಳು ಚುನಾವಣಾ ಪ್ರಚಾರ ಕಾರ್ಯ ಪ್ರಾರಂಭಿಸಿದ್ದು ಆರೋಪ ಪ್ರತ್ಯಾರೋಪಗಳನ್ನು ಮಾಡುವುದು ಸಾಮಾನ್ಯವಾಗುತ್ತಿದೆ.

ತಾಲೂಕಿನ 6 ಜಿಲ್ಲಾ ಪಂಚಾಯಿತಿ ಸದಸ್ಯರಲ್ಲಿ ಕಾಂಗ್ರೆಸ್‌ 4 ಸ್ಥಾನಗಳನ್ನು, ಬಿಜೆಪಿ 2 ಸ್ಥಾನಗಳನ್ನು ಪಡೆದಿದ್ದು, 22 ತಾಲೂಕು ಪಂಚಾಯಿತಿ ಸದಸ್ಯರಲ್ಲಿ 15 ಕಾಂಗ್ರೆಸ್‌, 7 ಬಿಜೆಪಿ, 28 ಗ್ರಾಮ ಪಂಚಾಯಿತಿಗಳಲ್ಲಿ 16ರಲ್ಲಿ ಕಾಂಗ್ರೆಸ್‌ 12ರಲ್ಲಿ ಬಿಜೆಪಿ ಅಧಿಕಾರ ಪಡೆದಿವೆ. ಪಟ್ಟಣದ ನಗರಸಭೆ 23ರಲ್ಲಿ 13 ಕಾಂಗ್ರೆಸ್‌, 10 ಬಿಜೆಪಿ ಸದಸ್ಯರಿದ್ದಾರೆ.

ಹಿಂದಿನ ಚುನಾವಣೆ ನಡೆದ ಸಂದರ್ಭಕ್ಕೂ ಪ್ರಸ್ತುತ ಸನ್ನಿವೇಶಕ್ಕೂ ಬಹಳಷ್ಟು ವ್ಯತ್ಯಾಸಗಳು ಕಂಡುಬರುತ್ತಿದೆ. ತಾಲೂಕಿನಲ್ಲಿ ಪ್ರತಿ ಹಂತದಲ್ಲೂ ರಾಜಕೀಯದ ವಾಸನೆ ಪರೋಕ್ಷವಾಗಿ ಕಾಣುತ್ತಿದೆ. ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವುದು ಗ್ರಾಮಸ್ಥರಿಗೆ ಉಚಿತವಾಗಿ ತಮ್ಮ ಹೆಸರುಳ್ಳ ವಾಟರ್‌ ಕ್ಯಾನ್‌ಗಳನ್ನು ನೀಡುವುದು ಸಾಮಾನ್ಯವಾಗುತ್ತಿದೆ. ಮತ್ತೂಂದೆಡೆ ಬಹಳಷ್ಟು ಸಾರ್ವಜನಿಕ ಸಮಾರಂಭಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಸೀರೆಗಳನ್ನು ವಿತರಿಸಲಾಗುತ್ತಿದೆ.

ಪಕ್ಷಾಂತರ: ಕಳೆದ ಸುಮಾರು 6 ತಿಂಗಳುಗಳಿಂದಲೂ ಪಕ್ಷಾಂತರ ನಿರಂತರವಾಗಿ ನಡೆಯುತ್ತಿದ್ದು ಕೆಲವು ಸಂದರ್ಭಗಳಲ್ಲಿ ಹಣದ ಆಮಿಷಗಳಿಗೆ ಒಳಗಾಗಿರುವ ಸಂಶಯ ಬರುತ್ತಿದೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ಜಿಗಿಯುತ್ತಿರುವವರೇ ಹೆಚ್ಚಾಗಿದ್ದು ಚುನಾವಣೆ ಘೋಷಣೆ ನಂತರ ಇನ್ನೂ ಹೆಚ್ಚಿನ ಪ್ರಭಾವಶಾಲಿ ಮುಖಂಡರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಹಾಲಿ ಶಾಸಕ ಕಾಂಗ್ರೆಸ್‌ನ ಎನ್‌. ನಾಗರಾಜ್‌ ಹಾಗೂ ಬಿಜೆಪಿಯ ಮಾಜಿ ಸಚಿವ ಬಿ.ಎನ್‌.ಬಚ್ಚೇಗೌಡ ನಡುವೆ ನೇರ ಸ್ಪರ್ಧೆ ಏರ್ಪಡಬಹುದೆಂದು ಊಹಿಸಲಾಗಿದೆ. ಇದೀಗ ಬಚ್ಚೇಗೌಡರ ಮಗ ಶರತ್‌ ಬಚ್ಚೇಗೌಡ ಅಭ್ಯರ್ಥಿಯೆಂದು ಘೋಷಣೆ ಯಾಗಿರುವುದು ಎರಡೂ ಪಕ್ಷಗಳಲ್ಲೂ ಸಂಚಲನ ಮೂಡಿಸಿದೆ. ಶರತ್‌ ಬಚ್ಚೇಗೌಡ ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂಘಟನೆಯಲ್ಲಿ ನಿರತವಾಗಿ ದ್ದಾರೆ. ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್‌ ನ ಮುಖಂಡರು, ಕಾರ್ಯಕರ್ತರು ಬಹಳಷ್ಟು ಗ್ರಾಮಗಳಲ್ಲಿ, ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.

ಜೆಡಿಎಸ್‌ನಲ್ಲಿ ಗೊಂದಲ: ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದ ತಾಲೂಕಿನ ವಿ.ಶ್ರೀಧರ್‌ ಈ ಬಾರಿಯೂ ಅಭ್ಯರ್ಥಿಯೆಂದು ಘೋಷಿಸಿಲ್ಲವಾದರೂ ಪಟ್ಟಣ ಸಮೀಪದ ಬಿದರಹಳ್ಳಿ ಹೋಬಳಿಯ ಜಿಂಕತಿಮ್ಮನ ಹಳ್ಳಿಯ ಕೃಷಮೂರ್ತಿ ಪಟೇಲ್‌ ಈಗಾಗಲೇ ತಾನೇ ಅಭ್ಯರ್ಥಿಯೆಂದು ಪ್ರಚಾರ ಕಾರ್ಯ ಕೈಗೊಂಡಿರುವ ಕಾರಣ ಗೊಂದಲ ನಿರ್ಮಾಣಗೊಂಡಿದೆ. ಈ ಬಾರಿ ಗರಿಷ್ಠ 5 ಅಭ್ಯರ್ಥಿಗಳು ಸ್ಪರ್ಧಿಸಬಹುದೆಂದು ನಿರೀಕ್ಷಿಸಲಾಗಿದೆ.

ಸಾಲ ತೀರಿಸಿದರೆ ಮತ!
ತಾಲೂಕಿನಲ್ಲಿ ಬಹಳಷ್ಟು ರೈತರು ಮಾಡಿಕೊಂಡಿರುವ ಸಾಲವನ್ನು ಯಾವ ಪಕ್ಷದವರು ತೀರಿಸುತ್ತಾರೋ ಅವರಿಗೆ ಮತ ಎಂದು ಷರತ್ತು ವಿಧಿಸುತ್ತಿದ್ದಾರೆ. ಇದರಿಂದ ರಾಜಕೀಯ ಪಕ್ಷದ ಮುಖಂಡರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಮತ್ತೂಂದೆಡೆ ಅಕ್ರಮ ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿರುವವರು ಇದೇ ರಾಗ ಹಾಡುತ್ತಿದ್ದು, ಈಗಾಗಲೇ ಒಂದು ರಾಜಕೀಯ ಪಕ್ಷದ ಮುಖಂಡ ರೊಬ್ಬರು ನಂದಗುಡಿ ಹೋಬಳಿ ಯಲ್ಲಿ ಸುಮಾರು 2.58 ಲಕ್ಷ ರೂ.ಗಳ ಶುಲ್ಕ ಪಾವತಿಸಿರುವುದನ್ನು ಅರಿತುಕೊಂಡಿ ರುವ ಇತರೆ ಹೋಬಳಿಗಳವರು ಇದೇ ರೀತಿ ಆಗಬಹುದೆಂದು ನಿರೀಕ್ಷಿಸಿ ಶುಲ್ಕ ಪಾವತಿಸಲು ನಿರಾಸಕ್ತಿ ತೋರುತ್ತಿದ್ದಾರೆ. 

ರಾಜಕಾರಣಿಗಳು ಮತ ಪಡೆಯಲು ಚಾಪೆ ಕೆಳಗೆ ನುಸುಳಿದರೆ ಮತದಾರರು ಇವರನ್ನೂ ಮೀರಿ ತಮ್ಮ ಆಕಾಂಕ್ಷೆಗಳನ್ನು ಈಡೇರಿಸುವ ಷರತ್ತುಗಳನ್ನು ಹಾಕುವ ಮೂಲಕ ರಂಗೋಲಿ ಕೆಳಗೆ ಹೋಗಲು ಪ್ರಯತ್ನಿಸುತ್ತಿದ್ದಾರೆ. 

ಟಾಪ್ ನ್ಯೂಸ್

ಕಡೆಕಾರ್‌: ಕೆರೆಯಲ್ಲಿ ಮುಳುಗಿ 8 ವರ್ಷದ ಬಾಲಕ ಸಾವು

ಕಡೆಕಾರ್‌: ಕೆರೆಯಲ್ಲಿ ಮುಳುಗಿ 8 ವರ್ಷದ ಬಾಲಕ ಸಾವು

4-sdsda

ಮಂದಾರ್ತಿ ಸಮೀಪ ಕಾರಿನಲ್ಲಿ ಭಸ್ಮವಾಗಿದ್ದು ಬೆಂಗಳೂರಿನ ನವ ಜೋಡಿ!

ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಈ ವೇಗಿ ಇರಲೇಬೆಕು: ಸುನಿಲ್ ಗವಾಸ್ಕರ್

ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಈ ವೇಗಿ ಇರಲೇಬೆಕು: ಸುನಿಲ್ ಗವಾಸ್ಕರ್

sidda dkshi

ಪರಿಷತ್ : ಹಿಂದುಳಿದ ವರ್ಗ,ಮುಸ್ಲಿಂ ಅಥವಾ ಕ್ರೈಸ್ತರಿಗೆ ಅವಕಾಶಕ್ಕೆ ಸಿದ್ದರಾಮಯ್ಯ ಮನವಿ

ಅಲ್ಲಿ ಲವ್- ಇಲ್ಲಿ ಮದುವೆ: ತಾಳಿ ಕಟ್ಟುವ ವೇಳೆ ಮದುವೆಗೆ ‘ನೋ ‘ಎಂದು ವಧುವಿನ ಹೈಡ್ರಾಮಾ

ಅಲ್ಲಿ ಲವ್- ಇಲ್ಲಿ ಮದುವೆ: ತಾಳಿ ಕಟ್ಟುವ ವೇಳೆ ಮದುವೆಗೆ ‘ನೋ ‘ಎಂದು ವಧುವಿನ ಹೈಡ್ರಾಮಾ

Raj THakre

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಪ್ರಧಾನಿಯನ್ನು ಒತ್ತಾಯಿಸಿದ ರಾಜ್ ಠಾಕ್ರೆ

ವಿಜಯಪುರ ಸರ್ಕಾರಿ ಆಸ್ಪತ್ರೆ ಪ್ರಕರಣ: ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ದೂರು

ವಿಜಯಪುರ ಸರ್ಕಾರಿ ಆಸ್ಪತ್ರೆ ಪ್ರಕರಣ: ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ದೂರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡ್ರೋನ್‌ ಬಳಕೆಯಿಂದ ಕೃಷಿಯಲ್ಲಿ ಕೂಲಿ ಸಮಸ್ಯೆ ನಿವಾರಣೆ

ಡ್ರೋನ್‌ ಬಳಕೆಯಿಂದ ಕೃಷಿಯಲ್ಲಿ ಕೂಲಿ ಸಮಸ್ಯೆ ನಿವಾರಣೆ

ಜಿಲ್ಲೆಯಲ್ಲಿ ಚುರುಕುಗೊಂಡ ಬಿತ್ತನೆ ಕಾರ್ಯ

ಜಿಲ್ಲೆಯಲ್ಲಿ ಚುರುಕುಗೊಂಡ ಬಿತ್ತನೆ ಕಾರ್ಯ

ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಭ್ರಷ್ಟಾಚಾರ: ಆರೋಪ

ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಭ್ರಷ್ಟಾಚಾರ: ಆರೋಪ

ಪೋಷಕರೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ; ಶಾಸಕ ಟಿ. ವೆಂಕಟರಮಣಯ್ಯ

ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ

ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ

MUST WATCH

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

udayavani youtube

ದತ್ತಪೀಠದಲ್ಲಿ ನಮಾಜ್.. ವಿಡಿಯೋ ವೈರಲ್ : ಜಿಲ್ಲಾಧಿಕಾರಿ ಹೇಳಿದ್ದೇನು ?

udayavani youtube

ಮೆಸ್ಕಾಂ ಸಿಬ್ಬಂದಿ ಮೇಲೆ ತಂಡದಿಂದ ಹಲ್ಲೆ! ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹೊಸ ಸೇರ್ಪಡೆ

15canel

ತುಂಗಭದ್ರಾ ಜಲಾಶಯ ಒಳಹರಿವು ಹೆಚ್ಚಳ

ಕಡೆಕಾರ್‌: ಕೆರೆಯಲ್ಲಿ ಮುಳುಗಿ 8 ವರ್ಷದ ಬಾಲಕ ಸಾವು

ಕಡೆಕಾರ್‌: ಕೆರೆಯಲ್ಲಿ ಮುಳುಗಿ 8 ವರ್ಷದ ಬಾಲಕ ಸಾವು

14appeal

ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ ಮನವಿ

18

ಮುಂಗಾರು ಹಂಗಾಮಿಗೆ ರೈತ ಸಜ್ಜು

17

ಪ್ರವಾಹ ತಡೆಗೆ ಸಕಲ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.