Udayavni Special

ಎತ್ತಿನಹೊಳೆ ಯೋಜನೆಗೆ ಬೇಕು ಅನುದಾನ


Team Udayavani, Mar 6, 2021, 1:53 PM IST

ಎತ್ತಿನಹೊಳೆ ಯೋಜನೆಗೆ ಬೇಕು ಅನುದಾನ

ದೇವನಹಳ್ಳಿ: ಬೆಂ.ಗ್ರಾ.ಜಿಲ್ಲಾ ಕೇಂದ್ರವನ್ನು ಘೋಷಣೆ ಬಜೆಟ್‌ನಲ್ಲಿ ಮಾಡುತ್ತಾರೆಯೋ ಎಂಬುವ ಕುತೂಹಲ ಜನರಲ್ಲಿ ಕಾಡುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಲಿರುವ ಬಜೆಟ್‌ನಲ್ಲಿ ಜಿಲ್ಲೆಯ ಜನ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಪ್ರಪಂಚಕ್ಕೆ ರೇಷ್ಮೆ, ಹಾಲು, ಹಣ್ಣು, ತರಕಾರಿ ಬೆಳೆದು ಕೊಡುವುದರ ಜತೆಗೆ ಕೆಂಪೇಗೌಡಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ದೇವನಹಳ್ಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಔದಾರ್ಯ ತೋರಬಹುದೆಂಬ ನಿರೀಕ್ಷೆಯಲ್ಲಿ ಜನರಿದ್ದಾರೆ. ದೇವನಹಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಒಳ ಚರಂಡಿವ್ಯವಸ್ಥೆ, ದೇವನಹಳ್ಳಿ ಮತ್ತು ವಿಜಯಪುರ ಅವಳಿ ನಗರಗಳಾಗಿ ಅಭಿವೃದ್ಧಿ ಪಡಿಸುವುದು. ದೇವನಹಳ್ಳಿಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆಏರಿಸುವುದು. ಜಿಲ್ಲಾಸ್ಪತ್ರೆ, ಮೆಡಿಕಲ್‌ ಕಾಲೇಜು,ಸರ್ಕಾರಿ ಎಂಜನೀಯರಿಂಗ್‌ ಕಾಲೇಜು, ವೃಷಭಾ ವತಿ ವ್ಯಾಲಿ ಯೋಜನೆ ಶೀಘ್ರ ಜಾರಿ, ಎಚ್‌.ಎನ್‌.ವ್ಯಾಲಿ ನೀರು ಇನ್ನುಳಿದ ಕೆರೆಗಳಿಗೆ ಹರಿಸುವುದು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಕಾವೇರಿ ನೀರು ನಗರಕ್ಕೆ ವಿಸ್ತರಣೆ, ಮೆಟ್ರೋ ರೈಲು,ಜಿಲ್ಲಾ ಕ್ರೀಡಾಂಗಣ, ಜಿಲ್ಲೆಯ 2,253 ಕಿ.ಮೀ. ಜಿಪಂ ರಸ್ತೆಗಳು ಹದಗೆಟ್ಟಿದ್ದು, ಕನಿಷ್ಠ 100 ಕೋಟಿ ರೂ.ಅನುದಾನ ಬಿಡುಗಡೆಯಾಗಬೇಕು. ಎತ್ತಿನ ಹೊಳೆ ಯೋಜನೆಗೆ ಹೆಚ್ಚಿನ ಅನುದಾನ ನೀಡಿ ಪೂರ್ಣ ಗೊಳಿಸಬೇಕು. ಐಟಿಐಆರ್‌ ನೆನೆಗುದ್ದಿಗೆ ಬಿದ್ದಿದೆ.

ಸರ್ಕಾರ ಶಾಶ್ವತ ನೀರಾವರಿ ಯೋಜನೆ ಜಾರಿಕಡೆಗೆ ಹೆಜ್ಜೆ ಹಾಕದಿರುವುದು ಸ್ಪಷ್ಟವಾಗಿದ್ದರೂ ಜಿಲ್ಲೆಯನೀರಾವರಿ ಯೋಜನೆಗಳ ಹೆಸರಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ಎತ್ತಿನಹೊಳೆ ಯೋಜನೆನೀರು ಕಾಮಗಾರಿ ಮುಗಿದು ಯಾವಾಗ ಬರುತ್ತದೆಎಂಬುವ ದೆಸೆಯಲ್ಲಿ ಜನ ಕಾಯುತ್ತಿದ್ದಾರೆ.ಎತ್ತಿನಹೊಳೆ ಯೋಜನೆಗೆ ಹಣಕಾಸಿನ ಕೊರತೆಯ ಜೊತೆಗೆಭೂಸ್ವಾಧೀನ ಸಮಸ್ಯೆ ಇರುವ ಕಾರಣ ಎತ್ತಿನಹೊಳೆಜಿಲ್ಲೆಗೆ ಹರಿಯುವ ಕನಸು ಇನ್ನೂ ಈಡೇರಿಲ್ಲ. ಸರ್ಕಾರ ಪ್ರಾರಂಭಿಕವಾಗಿ 13 ಸಾವಿರ ರೂ.ಕೋಟಿ ಯಲ್ಲಿಯೋಜನೆ ರೂಪಿಸಿದರು. ಯೋಜನೆ ಕಾರ್ಯ ಗತವಿಳಂಬವಾಗಿದ್ದು, ಯೋಜನೆ ವೆಚ್ಚ ರೂ.20 ಸಾವಿರ ಕೋಟಿ ದಾಟುವ ಅಂದಾಜು ಮಾಡಲಾಗಿದೆ.

ಕಳೆದ ಬಜೆಟ್‌ನಲ್ಲಿ ಸಿಕ್ಕಿರುವ ಯೋಜನೆ: ಕುಡಿಯುವ ನೀರಿನ ಅಭಾವವಿರುವ ಬಯಲು ಸೀಮೆಯ ಜಿಲ್ಲೆಗಳಿಗೆ ಎತ್ತಿನ ಹೊಳೆ ಯೋಜನೆ ಕಾಮಗಾರಿ ಸಂಪೂರ್ಣಗೊಳಿಸಲು ಹಾಗೂಮುಂದಿನ ಮುಂಗಾರು ಹಂಗಾಮಿನಲ್ಲಿ ಪ್ರಯೋಗಿಕ ವಾಗಿ ಚಾಲನೆಗೊಳಿಸಲು ಕಾರ್ಯಕ್ರಮ ಮತ್ತು ಯೋಜನೆಗೆ 1,500 ಕೋಟಿ ರೂ.ಗಳು ಮೀಸಲು,ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಪ್ರದೇಶದಲ್ಲಿ 100 ಅಡಿ ಎತ್ತರದ ನಾಡ ಪ್ರಭು ಕೆಂಪೇಗೌಡರ ಕಂಚಿನ ಪುತ್ತಳಿ ನಿರ್ಮಾಣಕ್ಕೆ 66 ಕೋಟಿ ರೂ ಅನುದಾನ, ದೇವನಹಳ್ಳಿಯಲ್ಲಿ ಅಗ್ನಿ ಶಾಮಕ ಠಾಣೆ ಸ್ಥಾಪನೆ ಇತ್ಯಾದಿಗಳನ್ನು ಬಜೆಟ್‌ನಲ್ಲಿ ನೀಡಿರುವ ಕೊಡುಗೆ ಆಗಿದೆ.

ವಿಶೇಷ ಪ್ಯಾಕೆಜ್‌: 50 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಬೈಲ ಗೊಂಡ್ಲು ಜಲಾಶಯ ನಿರ್ಮಾಣ ಹಿನ್ನೆಲೆ ದೊಡ್ಡ ಬಳ್ಳಾಪುರ ತಾಲೂಕಿನ ಗರುಡಗಲ್ಲು, ಲ್ಕಕೇನಹಳ್ಳಿ ಗ್ರಾಮಗಳು ಮುಳುಗಡೆ ಬೀತಿ ಎದುರಿಸುತ್ತಿವೆ. ಆದರೆ, ಈ ಗ್ರಾಮಗಳಿಗೆ ಯಾವುದೇ ವಿಶೇಷ ಪ್ಯಾಕೆಜ್‌ ಘೋಷಣೆ ಮಾಡದೆ ಯೋಜನೆ ಯಲ್ಲಿಯೂ ತಾರತಮ್ಯವೆಸಗಲಾಗಿದೆ ಎಂಬ ಮಾತುಗಳು ವ್ಯಕ್ತವಾಗುತ್ತಿವೆ.

ಹೊಸಕೋಟೆ ತಾಲೂಕು ಅಭಿವೃದ್ಧಿ ಕಾಣಬೇಕು.ವೈದ್ಯಕೀಯ ಕಾಲೇಜು ಸೇರಿ ದಂತೆ ಅನೇಕಸೌಲಭ್ಯ ಬರಬೇಕಾಗಿದೆ. ಕಾವೇರಿ ನೀರು, ಶಾಶ್ವತ ನೀರಾವರಿಗೆ ಹೆಚ್ಚಿನ ಅನುದಾನ ವನ್ನು ಮೀಸಲಿಡಬೇಕು. ಹೊಸಕೋಟೆಗೆ ಹೈಟೆಕ್‌ ಸ್ಪರ್ಶ ನೀಡುವಂತೆ ಆಗಬೇಕು. ಶರತ್‌ಬಚ್ಚೇಗೌಡ, ಶಾಸಕ, ಹೊಸಕೋಟೆ

ಕಳೆದ ಮೈತ್ರಿ ಸರ್ಕಾರದಲ್ಲಿ ಬಿಡುಗಡೆಯಾಗಿದ್ದಅನುದಾನ ಬಿಡುಗಡೆ ಗೊಳಿಸಿದರೆ, ತಾಲೂಕು ಸರ್ವ ತೋಮುಖ ಅಭಿವೃದ್ಧಿಗೊಳ್ಳಲಿದೆ. ಜಿಲ್ಲೆಯಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ಮೀಸಲಿಡಬೇಕು. ಎಲ್‌.ಎನ್‌.ನಾರಾಯಣಸ್ವಾಮಿ, ಶಾಸಕ, ದೇವನಹಳ್ಳಿ

 

ಎಸ್‌.ಮಹೇಶ್‌

ಟಾಪ್ ನ್ಯೂಸ್

ಈ ರಾಶಿಯವರಿಗಿಂದು ಸಾರ್ವಜನಿಕ ಕಾರ್ಯದಲ್ಲಿ ಅವಮಾನ ಅಪಮಾನ ಪ್ರಸಂಗ ಎದುರಾಗಬಹುದು!

ಈ ರಾಶಿಯವರಿಗಿಂದು ಸಾರ್ವಜನಿಕ ಕಾರ್ಯದಲ್ಲಿ ಅವಮಾನ ಅಪಮಾನ ಪ್ರಸಂಗ ಎದುರಾಗಬಹುದು!

ಲಸಿಕೆ ನೀಡಲು 30,000 ಕೋಟಿ ಬೇಕು

ಲಸಿಕೆ ನೀಡಲು 30,000 ಕೋಟಿ ಬೇಕು

ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತಿದೆ

ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತಿದೆ

ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ?

ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ?

ಮೇಯಲ್ಲಿ ಹೆಚ್ಚು ಕೇಸ್‌!

ಮೇಯಲ್ಲಿ ಹೆಚ್ಚು ಕೇಸ್‌!

ರಾಜಕೀಯ ಪಥ ಬದಲಿಸಿದ ಅಣ್ಣಾ ಆಂದೋಲನಕ್ಕೆ ದಶಕ

ರಾಜಕೀಯ ಪಥ ಬದಲಿಸಿದ ಅಣ್ಣಾ ಆಂದೋಲನಕ್ಕೆ ದಶಕ

Untitled-3

ಪುಸ್ತಕಗಳೂ ಓದುವ ಅಭಿರುಚಿಯೂ..ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

New virus to overcome 2nd wave virus?

2ನೇ ಅಲೆ ವೈರಸ್‌ ಮೀರಿಸುವ ಹೊಸ ವೈರಸ್‌?

close Ghati temple till May 4

ಮೇ 4ರವರೆಗೆ ಘಾಟಿ ದೇಗುಲ ಬಂದ್‌

Horticulture Department Office Sealdown

ತೋಟಗಾರಿಕೆ ಇಲಾಖೆ ಕಚೇರಿ ಸೀಲ್‌ಡೌನ್‌

Outrage against the hospital

ರೋಗಿ ಸಾವು: ಆಸ್ಪತ್ರೆ ವಿರುದ್ಧ ಆಕ್ರೋಶ

ಕೋವಿಡ್  ನಿಯಂತ್ರಣದಲ್ಲಿ  ಲೋಪವಾಗದಿರಲಿ

ಕೋವಿಡ್ ನಿಯಂತ್ರಣದಲ್ಲಿ ಲೋಪವಾಗದಿರಲಿ

MUST WATCH

udayavani youtube

ಬೈಕ್ ಗೆ ನಾಯಿಯನ್ನು ಕಟ್ಟಿ ಹೆದ್ದಾರಿಯಲ್ಲೇ ಎಳೆದುಕೊಂಡು ಹೋದ ಸವಾರರು ! |

udayavani youtube

ಅಘೋಷಿತ ಲಾಕ್ ಡೌನ್ ವಿರುದ್ಧ ಮಾಜಿ ಸಿಎಂ ಕುಮಾರ ಸ್ವಾಮಿ ಕೆಂಡಾಮಂಡಲ

udayavani youtube

ಮಂಗಳೂರಿನ ಮಾರುಕಟ್ಟೆ ಸುಧಾರಣೆ ಕುರಿತು ಉದಯವಾಣಿ ಫೋನ್ ಇನ್

udayavani youtube

ಕೊರೊನಾ 1 ವರುಷ !

udayavani youtube

ಆಕ್ಸಿಜನ್ ಮಹಾರಾಷ್ಟ್ರಕ್ಕೆ ಕಳುಹಿಸುವುದಕ್ಕೆ ಎಂ.ಬಿ.ಪಾಟೀಲ ಆಕ್ಷೇಪ

ಹೊಸ ಸೇರ್ಪಡೆ

ಈ ರಾಶಿಯವರಿಗಿಂದು ಸಾರ್ವಜನಿಕ ಕಾರ್ಯದಲ್ಲಿ ಅವಮಾನ ಅಪಮಾನ ಪ್ರಸಂಗ ಎದುರಾಗಬಹುದು!

ಈ ರಾಶಿಯವರಿಗಿಂದು ಸಾರ್ವಜನಿಕ ಕಾರ್ಯದಲ್ಲಿ ಅವಮಾನ ಅಪಮಾನ ಪ್ರಸಂಗ ಎದುರಾಗಬಹುದು!

ಕರಾವಳಿಯಲ್ಲೂ ಆಕ್ಸಿಜನ್‌ಗೆ ಹೆಚ್ಚಿದ ಬೇಡಿಕೆ!

ಕರಾವಳಿಯಲ್ಲೂ ಆಕ್ಸಿಜನ್‌ಗೆ ಹೆಚ್ಚಿದ ಬೇಡಿಕೆ!

ಲಸಿಕೆ ನೀಡಲು 30,000 ಕೋಟಿ ಬೇಕು

ಲಸಿಕೆ ನೀಡಲು 30,000 ಕೋಟಿ ಬೇಕು

ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತಿದೆ

ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತಿದೆ

ಶೇ.50ರಷ್ಟು ಉಪನ್ಯಾಸಕರ ಹಾಜರಾತಿ ಕಡ್ಡಾಯ

ಶೇ.50ರಷ್ಟು ಉಪನ್ಯಾಸಕರ ಹಾಜರಾತಿ ಕಡ್ಡಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.