Udayavni Special

ಬೆಳಗಾವಿ: ಟ್ರ‍್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿಯೇ ಸಾವು

Team Udayavani, Feb 1, 2020, 8:15 PM IST

tractor1

ಬೆಳಗಾವಿ/ಬೈಲಹೊಂಗಲ: ಹತ್ತಿ ಅಂಡಗಿಯನ್ನು ಬೈಲಹೊಂಗಲ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ವಾಪಸ್ಸಾಗುತ್ತಿದ್ದಾಗ ಟ್ರ‍್ಯಾಕ್ಟರ್‌ನ ಟ್ರಾಲಿ ಪಲ್ಟಿಯಾಗಿ ಬಾಲಕ ಸೇರಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದ ಸಮೀಪ ಶುಕ್ರವಾರ ಸಂಜೆ ಸಂಭವಿಸಿದೆ.

ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದ ಕರಿಯಪ್ಪ ಲಕ್ಷಪ್ಪ ನಂದಿ(66) ಹಾಗೂ ಸಂತೋಷ ಮಲ್ಲಪ್ಪ ಮದಲೂರು(17) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪಾಯಪ್ಪ ಸಾತಪ್ಪ ಮರೆನ್ನವರ(40), ಟ್ರ‍್ಯಾಕ್ಟರ್ ಚಾಲಕ ರುದ್ರಪ್ಪ ಈರಪ್ಪ ನಾಗನೂರ(32) ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಣ್ಣಿಕೇರಿಯಿಂದ ಬೈಲಹೊಂಗಲಕ್ಕೆ ಹತ್ತಿ ಅಂಡಗಿಗಳನ್ನು ಮಾರಾಟ ಮಾಡಿ ವಾಪಸ್ಸಾಗುತ್ತಿದ್ದಾಗ ಟ್ರ‍್ಯಾಕ್ಟರ್‌ನಲ್ಲಿ 25-30 ಸಿಮೆಂಟ್ ಇಟ್ಟಿಗೆಗಳನ್ನು ತರುತ್ತಿದ್ದರು. ಬೈಲವಾಡ ಸಮೀಪ ವೇಗವಾಗಿ ಹೊರಟಿದ್ದ ಟ್ರ‍್ಯಾಕ್ಟರ್ ಟ್ರಾಲಿ ಬೇರ್ಪಟ್ಟಿದೆ. ಟ್ರಾಲಿಯಲ್ಲಿ ಕುಳಿತಿದ್ದ ಕರಿಯಪ್ಪ ಹಾಗೂ ಸಂತೋಷ ಕೆಳಕ್ಕೆ ಉರುಳಿದ್ದು, ಇವರ ಮೈಮೇಲೆ ಇಟ್ಟಿಗೆ ತುಂಬಿದ್ದ ಟ್ರಾಲಿ ಬಿದ್ದಿದೆ. ಬಿದ ರಭಸಕ್ಕೆ ಸ್ಥಳದಲ್ಲಿಯೇ ಇವರಿಬ್ಬರೂ ಮೃತಪಟ್ಟಿದ್ದಾರೆ.

ಮುಂದೆ ಕುಳಿತಿದ್ದ ಪಾಯಪ್ಪ ಹಾಗೂ ಚಾಲಕ ರುದ್ರಪ್ಪ ಗಂಭೀರ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಗ್ರಾಮಸ್ಥರು ದೌಡಾಯಿಸಿ ಮೃತದೇಹಗಳನ್ನು ಹೊರ ತೆಗೆದರು.

ಸ್ಥಳಕ್ಕೆ ಬೈಲಹೊಂಗಲ ಸಿಪಿಐ ಮಂಜುನಾಥ ಕುಸುಗಲ್, ಪಿಎಸ್‌ಐ ಎಂ. ಹೂಗಾರ, ಎಎಸ್‌ಐ ಎಂ.ಕೆ. ಜೈನಾರ, ಸಿಬ್ಬಂದಿ ಎಚ್.ಬಿ. ಮಾದೆನ್ನಿ ಸೇರಿದಂತೆ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣ್ಣಿಕೇರಿಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

ರಸ್ತೆ ಅಪಘಾತದಲ್ಲಿ ಇಬ್ಬರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬೈಲವಾಡ ಹಾಗೂ ಹಣ್ಣಿಕೇರಿ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ. ರಸ್ತೆ ಪಕ್ಕದಲ್ಲಿ ಬಿದ್ದ ಟ್ರ‍್ಯಾಕ್ಟರ್ ಕೆಳಗೆ ಸಿಕ್ಕಿ ಹಾಕಿಕೊಂಡಿದ್ದ ಮೃತದೇಹಗಳನ್ನು ಸ್ಥಳೀಯರು ಹೊರಗೆ ತೆಗೆದಿದ್ದಾರೆ. ಕುಟುಂಬಸ್ಥರು, ಸಂಬಧಿಕರ ರೋದನ ಮುಗಿಲು ಮುಟ್ಟಿತ್ತು. ಇನ್ನು ಕೆಲವೇ ಕಿ.ಮೀ. ದಾಟಿ ಬಂದಿದ್ದರೆ ಎಲ್ಲರೂ ಮನೆಗೆ ವಾಪಸ್ಸಾಗುತ್ತಿದ್ದರು ಎಂದು ರೋದಿಸುತ್ತಿರುವ ದೃಶ್ಯ ಮನಕಲಕುವಂತಿತ್ತು.

ಟಾಪ್ ನ್ಯೂಸ್

ಶೀಘ್ರದಲ್ಲೇ ಥಿಯೇಟರ್ ಗಳಲ್ಲಿ ಶೇ.100 ಸೀಟು ಭರ್ತಿಗೆ ಅನುಮತಿ ಸಾಧ್ಯತೆ

ಜಿಲ್ಲಾಸ್ಪತ್ರೆಯಲ್ಲಿ ಅಗ್ನಿ ಅವಘಡ : ಹಸಗೂಸುಗಳನ್ನು ಎತ್ತಿಕೊಂಡು ಹೊರ ಓಡಿ ಬಂದ ಬಾಣಂತಿಯರು

ನಾಡಕಛೇರಿಯ ವಿದ್ಯುತ್ ಸಂಪರ್ಕ ಕಡಿತ : ವಿದ್ಯಾರ್ಥಿಗಳು, ಪಿಂಚಣಿ ಆರ್ಜಿದಾರರ ಪರದಾಟ

ನಾರಾಯಣಪುರ ಸುತ್ತಮುತ್ತ ಧಾರಾಕಾರ ಮಳೆ : ಸೇತುವೆ ಜಲಾವೃತ, ರಸ್ತೆ ಸಂಚಾರ ಬಂದ್

Narendra Giri

ಆತ್ಮಹತ್ಯೆಗೂ ಮೊದಲು ವಿಡಿಯೊ ಮಾಡಿದ್ದರು ಮಹಾಂತ ನರೇಂದ್ರ ಗಿರಿ

ಕೊಹ್ಲಿ ವರ್ಕ್‌ಲೋಡ್‌ ಹೆಚ್ಚಾಯ್ತಾ ? ಕಿವೀಸ್ ಪ್ರವಾಸದಲ್ಲೇ ಸುಳಿವು ನೀಡಿದ್ದರು ವಿರಾಟ್

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 26,115 ಪ್ರಕರಣ ಪತ್ತೆ, 34,469 ಮಂದಿ ಗುಣಮುಖ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶೀಘ್ರದಲ್ಲೇ ಥಿಯೇಟರ್ ಗಳಲ್ಲಿ ಶೇ.100 ಸೀಟು ಭರ್ತಿಗೆ ಅನುಮತಿ ಸಾಧ್ಯತೆ

ಶೀಘ್ರದಲ್ಲೇ ಥಿಯೇಟರ್ ಗಳಲ್ಲಿ ಶೇ.100 ಸೀಟು ಭರ್ತಿಗೆ ಅನುಮತಿ ಸಾಧ್ಯತೆ

ಜಿಲ್ಲಾಸ್ಪತ್ರೆಯಲ್ಲಿ ಅಗ್ನಿ ಅವಘಡ : ಹಸಗೂಸುಗಳನ್ನು ಎತ್ತಿಕೊಂಡು ಹೊರ ಓಡಿ ಬಂದ ಬಾಣಂತಿಯರು

ಜಿಲ್ಲಾಸ್ಪತ್ರೆಯಲ್ಲಿ ಅಗ್ನಿ ಅವಘಡ : ಹಸಗೂಸುಗಳನ್ನು ಎತ್ತಿಕೊಂಡು ಹೊರ ಓಡಿ ಬಂದ ಬಾಣಂತಿಯರು

ನಾಡಕಛೇರಿಯ ವಿದ್ಯುತ್ ಸಂಪರ್ಕ ಕಡಿತ : ವಿದ್ಯಾರ್ಥಿಗಳು, ಪಿಂಚಣಿ ಆರ್ಜಿದಾರರ ಪರದಾಟ

ನಾಡಕಛೇರಿಯ ವಿದ್ಯುತ್ ಸಂಪರ್ಕ ಕಡಿತ : ವಿದ್ಯಾರ್ಥಿಗಳು, ಪಿಂಚಣಿ ಆರ್ಜಿದಾರರ ಪರದಾಟ

ನಾರಾಯಣಪುರ ಸುತ್ತಮುತ್ತ ಧಾರಾಕಾರ ಮಳೆ : ಸೇತುವೆ ಜಲಾವೃತ, ರಸ್ತೆ ಸಂಚಾರ ಬಂದ್

ನಾರಾಯಣಪುರ ಸುತ್ತಮುತ್ತ ಧಾರಾಕಾರ ಮಳೆ : ಸೇತುವೆ ಜಲಾವೃತ, ರಸ್ತೆ ಸಂಚಾರ ಬಂದ್

ರಾಜ್ಯ ಸಚಿವ ಸಂಪುಟ ಸಭೆ: ಸಾರಿಗೆ ನೌಕರರ ಮೇಲಿನ ಪ್ರಕರಣ ಹಿಂದೆಗೆ‌ತ

MUST WATCH

udayavani youtube

ರಷ್ಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ

udayavani youtube

ಅರಮನೆ ಆವರಣದಲ್ಲಿ ಹೆಣ್ಣಾನೆಯ ರಂಪಾಟ, ಆನೆಯನ್ನು ನಿಯಂತ್ರಿಸಿದ ಅಭಿಮನ್ಯು

udayavani youtube

ನಿಮ್ಮ ಅಧಿಕಾರಿಗಳನ್ನು ಸಂಜೆಯೊಳಗೆ ಸಸ್ಪೆಂಡ್ ಮಾಡಿ : ಮಾಜಿ ಸ್ಪೀಕರ್​ ರಮೇಶ್​ ಕುಮಾರ್​

udayavani youtube

48 ಲಕ್ಷ ರೂ.ಗೆ ಗಣಪತಿಯ ‘ಲಡ್ಡು’ ಹರಾಜು

udayavani youtube

ಗಿಫ್ಟ್ ಕೊಡುವ ನೆಪದಲ್ಲಿ ಮಹಿಳಾ ಸಿಬ್ಬಂದಿಗೆ ಮಚ್ಚಿನಿಂದ ಹಲ್ಲೆ

ಹೊಸ ಸೇರ್ಪಡೆ

ಶೀಘ್ರದಲ್ಲೇ ಥಿಯೇಟರ್ ಗಳಲ್ಲಿ ಶೇ.100 ಸೀಟು ಭರ್ತಿಗೆ ಅನುಮತಿ ಸಾಧ್ಯತೆ

ಶೀಘ್ರದಲ್ಲೇ ಥಿಯೇಟರ್ ಗಳಲ್ಲಿ ಶೇ.100 ಸೀಟು ಭರ್ತಿಗೆ ಅನುಮತಿ ಸಾಧ್ಯತೆ

ಜಿಲ್ಲಾಸ್ಪತ್ರೆ ದಲ್ಲಿ ಅಗ್ನಿ ಅವಘಡ: ಹಸಗೂಸುಗಳನ್ನು ಎತ್ತಿಕೊಂಡು ಹೊರಬಂದ ಬಾಣಂತಿಯರು

ಜಿಲ್ಲಾಸ್ಪತ್ರೆ ದಲ್ಲಿ ಅಗ್ನಿ ಅವಘಡ: ಹಸಗೂಸುಗಳನ್ನು ಎತ್ತಿಕೊಂಡು ಹೊರಬಂದ ಬಾಣಂತಿಯರು

ಜಿಲ್ಲಾಸ್ಪತ್ರೆಯಲ್ಲಿ ಅಗ್ನಿ ಅವಘಡ : ಹಸಗೂಸುಗಳನ್ನು ಎತ್ತಿಕೊಂಡು ಹೊರ ಓಡಿ ಬಂದ ಬಾಣಂತಿಯರು

ಜಿಲ್ಲಾಸ್ಪತ್ರೆಯಲ್ಲಿ ಅಗ್ನಿ ಅವಘಡ : ಹಸಗೂಸುಗಳನ್ನು ಎತ್ತಿಕೊಂಡು ಹೊರ ಓಡಿ ಬಂದ ಬಾಣಂತಿಯರು

ನಾಡಕಛೇರಿಯ ವಿದ್ಯುತ್ ಸಂಪರ್ಕ ಕಡಿತ : ವಿದ್ಯಾರ್ಥಿಗಳು, ಪಿಂಚಣಿ ಆರ್ಜಿದಾರರ ಪರದಾಟ

ನಾಡಕಛೇರಿಯ ವಿದ್ಯುತ್ ಸಂಪರ್ಕ ಕಡಿತ : ವಿದ್ಯಾರ್ಥಿಗಳು, ಪಿಂಚಣಿ ಆರ್ಜಿದಾರರ ಪರದಾಟ

ನಾರಾಯಣಪುರ ಸುತ್ತಮುತ್ತ ಧಾರಾಕಾರ ಮಳೆ : ಸೇತುವೆ ಜಲಾವೃತ, ರಸ್ತೆ ಸಂಚಾರ ಬಂದ್

ನಾರಾಯಣಪುರ ಸುತ್ತಮುತ್ತ ಧಾರಾಕಾರ ಮಳೆ : ಸೇತುವೆ ಜಲಾವೃತ, ರಸ್ತೆ ಸಂಚಾರ ಬಂದ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.