
56 ಆಂಬ್ಯುಲೆನ್ಸ್ ಸೇವೆಗೆ ಸನ್ನದ್ಧ
ಹೊಸ ವರ್ಷಾಚರಣೆ ತುರ್ತು ಸಂದರ್ಭ ನಿರ್ವಹಣೆಗೆ 235 ಸಿಬ್ಬಂದಿ
Team Udayavani, Dec 27, 2020, 2:14 PM IST

ತೆಲಸಂಗ: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ. 31 ಮತ್ತು ಜ. 31ರಂದು 108 ಆಂಬ್ಯುಲನ್ಸ್ ಸಿಬ್ಬಂದಿಗೆ ಯಾವುದೇ ಕಾರಣಕ್ಕೂ ರಜೆ ಇಲ್ಲವೆಂದು 108 ಜಿಲ್ಲಾ ವ್ಯವಸ್ಥಾಪಕ ಹರ್ಷಾ ನಾಯಕ ಕಟ್ಟುನಿಟ್ಟು ಆದೇಶ ಹೊರಡಿಸಿದ್ದಾರೆ.
ಹೊಸ ವರ್ಷಾಚರಣೆ ನೆಪದಲ್ಲಿ ಕೆಲವರು ಕುಡಿದು ಕುಪ್ಪಳಿಸಿ ಬೇಕಾಬಿಟ್ಟಿ ಬೈಕ್, ವಾಹನ ಚಲಾಯಿಸಿಅಪಘಾತಕ್ಕೀಡಾಗುವುದು ನಡೆದೇಇದೆ. ಈ ರೀತಿ ಅವಘಡಗಳು ನಡೆದಲ್ಲಿತುರ್ತು ಸೇವೆ ಒದಗಿಸಲು ಜಿಲ್ಲೆಯ108 ಆಂಬ್ಯುಲೆನ್ಸ್ ಸಿಬ್ಬಂದಿಯನ್ನು ಸನ್ನದ್ಧಗೊಳಿಸಿರುವುದರಿಂದ ಎರಡು ದಿನ ಸಾಪ್ತಾಹಿಕ ರಜೆ ಕಡ್ಡಾಯವಾಗಿ ರದ್ದುಗೊಳಿಸಲಾಗಿದೆ.
ಜಿಲ್ಲೆಯಲ್ಲಿ ಅಥಣಿ-7, ಗೋಕಾಕ-8, ರಾಯಬಾಗ-4, ರಾಮದುರ್ಗ-4, ಸವದತ್ತಿ-6, ಬೆಳಗಾವಿ-7, ಖಾನಾಪುರ-4,ಬೈಲಹೊಂಗಲ-5, ಹುಕ್ಕೇರಿ-5, ಚಿಕ್ಕೋಡಿ-6 ಒಟ್ಟು 56 ಆಂಬ್ಯುಲೆನ್ಸ್, 115 ಜನ ಸ್ಟಾಫ್‌ನರ್ಸ್, 120 ಜನ ಚಾಲಕರು, ಎಲ್ಲ ಆಂಬ್ಯುಲೆನ್ಸ್ ಗಳಲ್ಲಿ ಅವಶ್ಯಕ ಇಂಧನ, ಆಮ್ಲಜನಕ,ವೈದ್ಯಕಿಯ ಉಪಕರಣಗಳೊಂದಿಗೆ ನಿತ್ಯದ ಸೇವೆಗಿಂತ ವಿಭಿನ್ನ ಸೇವೆಗೆ ಸಿಬ್ಬಂದಿಯನ್ನು ಸನ್ನದ್ಧಗೊಳಿಸಲಾಗಿದೆ.ಬೆಳಗಾವಿ ಇಎಸ್‌ಐ 1 ಮತ್ತು ಕುಡಚಿಗೆ 1 ಒಟ್ಟು ಎರಡು ಆಂಬ್ಯುಲೆನ್ಸ್‌ಗಳನ್ನುಕೋವಿಡ್‌ಗೆ ಮೀಸಲಿಡಲಾಗಿದ್ದು, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿಶಾಮಕದಳದೊಂದಿಗೆ108 ಸಿಬ್ಬಂದಿ ನಿರಂತರ ಸಂಪರ್ಕದಲ್ಲಿ ಇರಲಿದ್ದಾರೆ.
ವಿಪರ್ಯಾಸವಾದರೂ ಅನಿವಾರ್ಯ! :
ಹೆರಿಗೆ, ಅಪಘಾತ ಸೇರಿದಂತೆ ತುರ್ತು ಸೇವೆಗೆ ಉಚಿತ ಆಂಬ್ಯುಲೆನ್ಸ್‌ಗಳನ್ನು ಸರಕಾರ ನಿಯೋಜಿಸಿದೆ. ದುರ್ದೈವ ಎಂಬಂತೆ ಹೊಸ ವರ್ಷಾಚರಣೆಯ ನೆಪದಲ್ಲಿ ವಿಶೇಷ ಪಾರ್ಟಿಯಲ್ಲಿ ಕುಡಿದು, ಕುಣಿದು, ಮೋಜು ಮಸ್ತಿ ಮಾಡಿ ಮನೆಗೆ ಮರಳುವ ವೇಳೆ ಮದ್ಯದ ಅಮಲಿನಲ್ಲಿ ಜೀವಕ್ಕೆ ಕುತ್ತು ತಂದುಕೊಳ್ಳುವ ಕುಡುಕರ ರಕ್ಷಣೆಗೆ ವಿಶೇಷ ಕಾಳಜಿ ವಹಿಸುವ ಪ್ರಸಂಗ ಎದುರಾಗಿದ್ದು ವಿಪರ್ಯಾಸವಾದರೂ ಅನಿವಾರ್ಯ.
ನಿತ್ಯ ನಮ್ಮ ಸಿಬ್ಬಂದಿ ತುರ್ತು ಸೇವೆ ಒದಗಿಸುತ್ತಲಿದ್ದರೂ ಡಿ.31, ಜ.1 ಈ ಎರಡು ದಿನ ವಿಶೇಷ ನಿಗಾ ಇಡಲಾಗುತ್ತಿದೆ. ಜಿಲ್ಲೆಯಲ್ಲಿ ಸಿಬ್ಬಂದಿಯ ಸಾಪ್ತಾಹಿಕ ರಜೆ ರದ್ದುಗೊಳಿಸಿ ಸೇವೆಗೆ ಸನ್ನದ್ಧಗೊಳಿಸಲಾಗಿದೆಅಪಘಾತ, ಅನಾಹುತಗಳು ನಡೆದು ಆಂಬ್ಯುಲೆನ್ಸ್ ಅವಶ್ಯಕತೆ ಇದ್ದಲ್ಲಿ 108 ಸಹಾಯವಾಣಿಗೆ ಸಾರ್ವಜನಿಕರು ಕರೆ ಮಾಡಬಹುದು. –ಹರ್ಷಾ ನಾಯಕ, 108 ಜಿಲ್ಲಾ ವ್ಯವಸ್ಥಾಪಕ
–ಜಗದೀಶ ಖೋಬ್ರಿ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು
ಹೊಸ ಸೇರ್ಪಡೆ

Gruha Jyoti ಬಾಡಿಗೆದಾರರಿಗೂ ಸಿಗಲಿದೆ ಉಚಿತ ವಿದ್ಯುತ್ ಭಾಗ್ಯ: ಮಾಡಬೇಕಾದ ವಿಧಾನ ಇಲ್ಲಿದೆ

Balasore Train Tragedy ಸಂತ್ರಸ್ತರಿಗೆ ರಿಲಯನ್ಸ್ ಫೌಂಡೇಷನ್ ಹತ್ತು ಅಂಶಗಳ ನೆರವು

Kalaburagi: ತಲ್ವಾರ್ ನಿಂದ ಕೊಚ್ಚಿ ಯುವಕನ ಕೊಲೆ

WTC Final 2023: ತೆಂಡೂಲ್ಕರ್, ದ್ರಾವಿಡ್ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್ ಕೊಹ್ಲಿ

VIDEO: ಅಂತರ್ಜಾತಿ ವಿವಾಹವಾದ ಸಹೋದರಿಯನ್ನು ಗಂಡನ ಮನೆಯಿಂದ ಬಲವಂತವಾಗಿ ಎಳೆದೊಯ್ದ ಸಹೋದರರು