ಲಖನ್ ಜಾರಕಿಹೊಳಿ ವಿರುದ್ಧ ಪ್ರತಿಭಟನೆ ನಡೆಸಿದ ಯುವಕ ಧರಿಸಿದ್ದು ಲಖನ್ ಟೀ ಶರ್ಟ್

Team Udayavani, Nov 17, 2019, 5:11 PM IST

ಬೆಳಗಾವಿ: ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಜಾರಕಿಹೊಳಿ ಸಹೋದರರ ವಿರುದ್ಧ ಸ್ಪರ್ಧಿಸುವಂತೆ ಆಗ್ರಹಿಸಿ ಅವರ ನಿವಾಸ ಎದುರು ಪ್ರತಿಭಟನೆ ನಡೆಸುತ್ತಿದ್ದ ಗುಂಪಿನಲ್ಲಿ ಯುವಕನೋರ್ವ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಭಾವಚಿತ್ರವುಳ್ಳ ಟೀ ಶರ್ಟ್ ಧರಿಸಿ ಪಾಲ್ಗೊಂಡಿದ್ದು ಗಮನ ಸೆಳೆಯಿತು.

ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಹಾಗೂ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ವಿರುದ್ಧ ಅಶೋಕ ಪೂಜಾರಿ ಅವರು ಪಕ್ಷೇತರರಾಗಿ ಸ್ಪರ್ಧಿಸಬೇಕು ಎಂದು ಪಟ್ಟು ಹಿಡಿದು ಪೂಜಾರಿ ಬೆಂಬಲಿಗರು ಕುಳಿತಿದ್ದರು. ಪ್ರತಿಭಟನಾಕಾರರ ಗುಂಪಿನಲ್ಲಿ ಕುಳಿತಿದ್ದ ಯುವಕನ ಟೀ ಶರ್ಟ್ ಮೇಲೆ ಲಖನ್ ಜಾರಕಿಹೊಳಿಯ ಭಾವಚಿತ್ರ ಇತ್ತು. ಇದು ಮಾಧ್ಯಮದವರ ಗಮನಕ್ಕೆ ಬರುತ್ತಿದ್ದಂತೆ ಫೋಟೊ ತೆಗೆಯಲು ಮುಂದಾದಾಗ ಯುವಕ ಅಲ್ಲಿಂದ ಜಾಗ ಖಾಲಿಮಾಡಿದ್ದಾನೆ. ಈ ಪ್ರಸಂಗ ಪ್ರತಿಭಟನಾಕಾರರನ್ನು ನಗೆಗಡಲಲ್ಲಿ ತೇಲಿಸಿತು.

ಅಶೋಕ ಪೂಜಾರಿ ನಿವಾಸದ ಎದುರು ಪ್ರತಿಭಟನೆ ನಡೆಸಿದ ಬೆಂಬಲಿಗರು, ಯಾವುದೇ ಕಾರಣಕ್ಕೂ ಜಾರಕಿಹೊಳಿ ಅವರಿಗೆ ಬೆಂಬಲ ಸೂಚಿಸದೇ ಕಣಕ್ಕೆ ಇಳಿಯಬೇಕು. ಪಕ್ಷೇತರರಾಗಿ ಸೋಮವಾರ ನಾಮಪತ್ರ ಸಲ್ಲಿಸುವಂತೆ ಧರಣಿ ನಡೆಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ