ಅಬಾಜಿ ಮಕ್ಕಳ ಭವಿಷ್ಯ ರೂಪಿಸಿದ ಪಿತಾಮಹ
Team Udayavani, Dec 10, 2019, 3:18 PM IST
ಹಾರೂಗೇರಿ: ಅಬಾಜಿಯವರು ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಬಡ ಹಾಗೂ ಹಿಂದುಳಿದ ವರ್ಗದ ಮಕ್ಕಳಿಗೆ ಶಿಕ್ಷಣವನ್ನು ನೀಡುವುದರ ಮೂಲಕ ಸಹಸ್ರಾರು ಮಕ್ಕಳ ಭವಿಷ್ಯ ರೂಪಿಸಿದ ಪಿತಾಮಹ ಎಂದು ಪ್ರೊ| ಎಸ್.ಕೆ.ಗುರುನಾಥ ಹೇಳಿದರು.
ಇಲ್ಲಿನ ಹಾವಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ಮಾಜಿ ಕಂದಾಯ ಸಚಿವ, ಶಿಕ್ಷಣ ಪ್ರಸಾರಕ ಮಂಡಳದ ಸಂಸ್ಥಾಪಕ ದಿ| ವಸಂತರಾವ್ ಪಾಟೀಲ ಅವರ 7ನೇ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ಸಹಸ್ರಾರು ಮಕ್ಕಳು ವಿದ್ಯೆ ಕಲಿಯಲು ಅಬಾಜಿ ಅವರು ಉಚಿತವಾಗಿ ಹಾಸ್ಟೇಲ್, ಪ್ರಸಾದ ನಿಲಯ ಸ್ಥಾಪಿಸಿ ಉಚಿತ ಶಿಕ್ಷಣ ನೀಡಿದ್ದಾರೆ. ಅಂದು ಅವರು ನೆಟ್ಟ ಸಸಿ ಇಂದು ಹೆಮ್ಮರವಾಗಿ ವಿಶ್ವವಿದ್ಯಾಲಯ ಮಟ್ಟಕ್ಕೆ ಬೆಳೆದು ನಿಂತಿದೆ. ದಿ| ವಸಂತರಾವ್ ಪಾಟೀಲರು ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಚೇತನ ಶಕ್ತಿಯಾಗಿ, ಈ ನಾಡು ಕಂಡ ಧೀಮಂತ ನಾಯಕ ಎಂದರು.
ಪ್ರೊ| ವಿ.ಎ.ಆಲಗೂರೆ ಅಧ್ಯಕ್ಷತೆ ವಹಿಸಿದ್ದರು. ಪ್ರೊ|ಎಚ್.ಎಸ್. ಕುರಿಯವರ, ಪ್ರೊ|ಎಂ.ಜೆ.ರಾಠೊಡ, ಪ್ರೊ|ಎಂ.ಬಿ.ಕಾಂಬಳೆ, ಪ್ರೊ|ಕೆ. ಎಸ್.ಕಾಂಬಳೆ, ಪ್ರೊ| ಟಿ.ಎಸ್ .ಹಿಟ್ಟಣಗಿ, ಪ್ರೊ|ವಿ.ಡಿ.ಜೋಶಿ, ಪ್ರೊ|ಎಸ್.ಬಿ.ನಾಗನೂರ, ಪ್ರೊ|ಎಸ್. ವೈ.ಶಿವಾಪೂರ, ಪ್ರೊ|ಬಿ.ಎಸ್. ಅಥಣಿ, ಪ್ರೊ|ಎ.ಎನ್.ನಾಗನೂರ, ಎ.ಬಿ.ಪಾಟೀಲ, ಡಿ.ಪಿ.ಕಾಪಸಿ ಇತರರು ಇದ್ದರು.
ಪ್ರತಿಭಾ ವಸಂತರಾವ್ ಪಾಟೀಲ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಎಸ್‌ಬಿಡಿ ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯದ ಆಶ್ರಯದಲ್ಲಿ ಶಿಕ್ಷಣ ಪ್ರಸಾರಕ ಮಂಡಳದ ಸಂಸ್ಥಾಪಕ ದಿ| ವಸಂತರಾವ ಪಾಟೀಲ ಅವರ 7ನೇ ಸ್ಮರಣೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಜ್ಞಾನವಾಪಿ ಕೊಠಡಿ ಇದುವೇ! ಶೃಂಗಾರ್ ಕಾಂಪ್ಲೆಕ್ಸ್ನ ಕೆಳಭಾಗದಲ್ಲಿರುವ ಕೋಣೆಯ ಚಿತ್ರ
ಶೋಷಿತ, ನಿರ್ಗತಿಕ ಮಹಿಳೆಯರಿಗೆ “ಸ್ವಾಧಾರ’
ಏಕಸ್ವಾಮ್ಯವು ದೇಶಕ್ಕೆ ಅಪಾಯಕಾರಿ ಎಂದ ಕಾಂಗ್ರೆಸ್ ನಾಯಕ ರಾಹುಲ್ ಹೇಳಿಕೆಗೆ ಬಿಜೆಪಿ ಕೆಂಡ
ದುಬಾೖಯ ಕೈ ತುಂಬಾ ಸಂಬಳದ ಕೆಲಸ ಬಿಟ್ಟು ಕಾಡು ಬೆಳೆದ ಎಂಜಿನಿಯರ್
ಭಾರತದಿಂದ ಗೋಧಿ ರಫ್ತು ನಿಷೇಧ : ವಿಶ್ವ ಆಹಾರ ಮಾರುಕಟ್ಟೆಯಲ್ಲಿ ತಲ್ಲಣ