ರಾಸಾಯನಿಕ ಮುಕ್ತ ಕೃಷಿ ಅಳವಡಿಸಿಕೊಳ್ಳಿ: ಕನ್ಹೇರಿ ಸ್ವಾಮೀಜಿ

ಪ್ಯಾನಪನೇಲಾ ಶುಗರ್ ಉದ್ಘಾಟನೆ ಸಮಾರಂಭ ; ಸಾವಯವ ಕೃಷಿ ಉತ್ಸವ-ದೇಶಿ ತಳಿ ಹಸುಗಳ ಸಂವರ್ಧನೆ ಕಾರ್ಯಕ್ರಮ

Team Udayavani, Aug 11, 2022, 5:05 PM IST

19

ರಾಯಬಾಗ: ಕೃಷಿಯಲ್ಲಿ ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿ ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದೆ. ಇದು ದೇಶಕ್ಕೆ ಮಾರಕವಾಗಿದ್ದು, ಇನ್ನು ಮುಂದೆ ರೈತರು ಗೋ ಕೃಪಾ ಕೃಷಿ ವಿಧಾನ ಅಳವಡಿಸಿಕೊಂಡು ಭೂಮಿ ಸತ್ವವನ್ನು ಹೆಚ್ಚಿಸಿಕೊಳ್ಳಬೇಕು ಹಾಗೂ ರಾಸಾಯನಿಕ ಮುಕ್ತ ಬೆಳೆ ಬೆಳೆಯಬೇಕೆಂದು ಕೊಲ್ಹಾಪೂರ ಕನ್ಹೇರಿ ಸಿದ್ದಗಿರಿ ಸಂಸ್ಥಾನ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀ ಹೇಳಿದರು.

ಬುಧವಾರ ರಾಯಬಾಗ ರೈಲ್ವೆ ಸ್ಟೇಷನ್‌ ರಸ್ತೆಯಲ್ಲಿರುವ ಸ್ಟೇಷನ್‌ ಹಿಲ್‌ದ ಅಭಾಜಿ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಪ್ಯಾನಪನೇಲಾ ಶುಗರ್ ಉದ್ಘಾಟನೆ ಸಮಾರಂಭ ಹಾಗೂ ಸಾವಯವ ಕೃಷಿ ಉತ್ಸವ ಮತ್ತು ದೇಶಿ ತಳಿ ಹಸುಗಳ ಸಂವರ್ಧನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾಗದ ಕಬ್ಬು ಬೆಳೆಯುವ ರೈತರಿಗೆ ಅನುಕೂಲವಾಗುವಂತೆ ವರ್ಷದ 12 ತಿಂಗಳು ನಡೆಯುವ ರಾಸಾಯನಿಕ ಮುಕ್ತ ಬೆಲ್ಲದ ಘಟಕ ಪ್ರಾರಂಭಿಸುತ್ತಿರುವ ವಿವೇಕರಾವ್‌ ಪಾಟೀಲ ಅವರ ಪ್ರಯತ್ನ ಅತ್ಯಂತ ಶ್ಲಾಘನೀಯವಾಗಿದೆ ಎಂದರು.

ವಿಷಯುಕ್ತ ಸಕ್ಕರೆ ಬದಲಾಗಿ ರಾಸಾಯನಿಕ ಮುಕ್ತ ಸಾವಯವ ಬೆಲ್ಲ ತಿನ್ನುವುದರಿಂದ ಮನುಷ್ಯನ ಎಲುವುಗಳು ಗಟ್ಟಿಯಾಗುತ್ತವೆ. ರೈತರು ಸಾವಯವ ಕೃಷಿ ಮಾಡಲು ಹೆಚ್ಚಿನ ಒತ್ತು ನೀಡಬೇಕು. ಜೊತೆಗೆ ಪ್ರತಿಯೊಬ್ಬ ರೈತನ ಮನೆಯಲ್ಲಿ ದೇಶಿ ಹಸು ಇರುವಂತೆ ನೋಡಿಕೊಳ್ಳಬೇಕು. ದೇಶಿ ಹಸುವಿನ ಸಗಣಿ ಮತ್ತು ಗೋಮೂತ್ರವನ್ನು ಮಿಶ್ರಣ ಮಾಡಿ ಭೂಮಿಗೆ ಹಾಕಿದರೆ, ಮಣ್ಣಿನಲ್ಲಿ ಜೀವಸತ್ವಗಳು ಹೆಚ್ಚಾಗಿ, ಮಣ್ಣಿನ ಫಲವತ್ತತೆ ಹೆಚ್ಚುತ್ತದೆ ಎಂದರು.

ನಮ್ಮ ದೇಶ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ದೇಶದ ರೈತರು ಸಾವಯವ ಕೃಷಿ ಮಾಡುವುದರೊಂದಿಗೆ ಸ್ವಾವಲಂಬಿಯಾಗಿ, ಸ್ವಾಭಿಮಾನಿಯಾಗಿ ಬದುಕಬೇಕು. ಇದರಿಂದ ದೇಶದ ಅಭಿವೃದ್ಧಿ ಜೊತೆಗೆ ದೇಶದ ಜನರ ಆರೋಗ್ಯ ಕೂಡ ಉತ್ತಮಗೊಳ್ಳುತ್ತದೆ ಎಂದರು.

ಬೆಳಗಾವಿ ಜಿಲ್ಲಾ ಕೆಎಂಎಫ್‌ ಅಧ್ಯಕ್ಷ ವಿವೇಕರಾವ್‌ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಡಾ| ವರ್ಷಾ ಪಾಟೀಲ, ಕೆಎಂಎಫ್‌ ಎಂಡಿ ಶ್ರೀನಿವಾಸ ಜಿ., ನಿರ್ದೇಶಕರಾದ ಎಸ್‌.ಎಸ್‌.ಮುಗಳಿ, ಅಪ್ಪಾಸಾಬ ಐತವಾಡೆ, ಕಲ್ಲಪ್ಪ ಗಿರಿನ್ನವ್ವರ, ಬಾಬು ಕಟ್ಟಿ, ಮಲ್ಲಪ್ಪ ಪಾಟೀಲ, ಬಾಬುರಾವ ವಾಘಮೋಡೆ, ಬಸಪ್ಪ ನನದಿ, ಎಸ್‌.ಆರ್‌.ಜಯಕುಮಾರ, ವಿ.ಕೆ. ಜೋಶಿ ಹಾಗೂ ಮುತ್ತೇಶ್ವರ ಸ್ವಾಮಿಜಿ, ಶಿವಶಂಕರ ಸ್ವಾಮಿಜಿ, ಶಿವಬಸವ ಸ್ವಾಮೀಜಿ ಇದ್ದರು.

ರೈತರಿಗೆ ಉಚಿತವಾಗಿ ಗೋ ಕೃಪಾಮೃತ ಹಂಚಲಾಯಿತು. ದೇಶಿ ತಳಿ ಹಸು ಮತ್ತು ಹೋರಿಗಳ ಪ್ರದರ್ಶನ ಹಾಗೂ ಸಾವಯವ ಕೃಷಿ ಮತ್ತು ಗೋ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಟಾಪ್ ನ್ಯೂಸ್

ಟಿಯಾಗೋ ಇವಿ ರಿಲೀಸ್‌; ಒಂದು ಬಾರಿ ಚಾರ್ಜ್‌ ಮಾಡಿದರೆ 312 ಕಿಮೀ ಸಂಚಾರ

ಟಿಯಾಗೋ ಇವಿ ರಿಲೀಸ್‌; ಒಂದು ಬಾರಿ ಚಾರ್ಜ್‌ ಮಾಡಿದರೆ 312 ಕಿಮೀ ಸಂಚಾರ

ಹುಬ್ಬಳ್ಳಿ : ಗಂಗಿವಾಳ ಗ್ರಾ.ಪಂ ಸದಸ್ಯನ ಪತ್ನಿ ಆತ್ಮಹತ್ಯೆಗೆ ಶರಣು

ಸಂಬಂಧಿಕರಿಂದಲೇ ಕೊಲೆಯಾಗಿದ್ದ ಗಂಗಿವಾಳ ಗ್ರಾ.ಪಂ ಸದಸ್ಯನ ಪತ್ನಿ ಆತ್ಮಹತ್ಯೆಗೆ ಶರಣು

ಮೊಬೈಲ್‌ ಚಂದಾದಾರರು; ಜಿಯೋ-ಏರ್‌ಟೆಲ್‌ ನಡುವೆ ಸ್ಪರ್ಧೆ

ಮೊಬೈಲ್‌ ಚಂದಾದಾರರು; ಜಿಯೋ-ಏರ್‌ಟೆಲ್‌ ನಡುವೆ ಸ್ಪರ್ಧೆ

ಇದು ಮೆಸ್ಸಿ, ರೊನಾಲ್ಡೊ ಸ್ಟೋರಿ ಅಲ್ಲ…ನಮ್ಮ ಸುನೀಲ್‌ ಚೆಟ್ರಿ ಯಶೋಗಾಥೆ

ಇದು ಮೆಸ್ಸಿ, ರೊನಾಲ್ಡೊ ಸ್ಟೋರಿ ಅಲ್ಲ…ನಮ್ಮ ಸುನೀಲ್‌ ಚೆಟ್ರಿ ಯಶೋಗಾಥೆ

ಟೈಮ್‌ ಮ್ಯಾಗಜಿನ್‌ ಪಟ್ಟಿಯಲ್ಲಿ ಸ್ಥಾನ ಪಡೆದ ಆಕಾಶ್‌ ಅಂಬಾನಿ

ಟೈಮ್‌ ಮ್ಯಾಗಜಿನ್‌ ಪಟ್ಟಿಯಲ್ಲಿ ಸ್ಥಾನ ಪಡೆದ ಆಕಾಶ್‌ ಅಂಬಾನಿ

ಇಂದು ವಿಶ್ವ ಹೃದಯ ದಿನ; ಸ್ವಸ್ಥ ಜೀವನಕ್ಕೆ ಆರೋಗ್ಯವಂತ ಹೃದಯ ಸೋಪಾನ

ಇಂದು ವಿಶ್ವ ಹೃದಯ ದಿನ; ಸ್ವಸ್ಥ ಜೀವನಕ್ಕೆ ಆರೋಗ್ಯವಂತ ಹೃದಯ ಸೋಪಾನ

ಗುರುವಾರದ ರಾಶಿ ಫಲ : ಇಂದು ಈ ರಾಶಿಯವರಿಗೆ ನಿರೀಕ್ಷಿತ ಧನಸಂಪತ್ತು ವೃದ್ಧಿ

ಗುರುವಾರದ ರಾಶಿ ಫಲ : ಇಂದು ಈ ರಾಶಿಯವರಿಗೆ ನಿರೀಕ್ಷಿತ ಧನಸಂಪತ್ತು ವೃದ್ಧಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

ತವಗ ಗ್ರಾಮ ಪಂಚಾಯಿತಿಗೆ ಗಾಂಧಿ ಪುರಸ್ಕಾರ

ಬೆಳಗಾವಿಯಲ್ಲಿ ವಿದ್ಯಾರ್ಥಿಗೆ ಚಾಕು ಇರಿತ : ಸ್ಥಳದಲ್ಲಿ ಬಿಗುವಿನ ವಾತಾವರಣ

ಬೆಳಗಾವಿಯಲ್ಲಿ ವಿದ್ಯಾರ್ಥಿಗೆ ಚಾಕು ಇರಿತ : ಸ್ಥಳದಲ್ಲಿ ಬಿಗುವಿನ ವಾತಾವರಣ

15

ಮಕ್ಕಳನ್ನು ಸಮಾಜದ ಆಸ್ತಿಯಾಗಿಸಿ: ಸತೀಶ

ಭೀಕರ ಅಪಘಾತ: ಎಎಸ್ಐ ಪತ್ನಿ, ಮಗಳು ಸೇರಿ ನಾಲ್ವರು ದುರ್ಮರಣ

ಬೆಳಗಾವಿ: ಭೀಕರ ಅಪಘಾತದಲ್ಲಿ ಎಎಸ್ಐ ಪತ್ನಿ, ಮಗಳು ಸೇರಿ ನಾಲ್ವರು ದುರ್ಮರಣ

8

ನವರಾತ್ರಿ ಉತ್ಸವ ತಂದಿದೆ ನವಚೈತನ್ಯ

MUST WATCH

udayavani youtube

ಮಂಗಳೂರು ಶ್ರೀ ಶಾರದಾ ಮಹೋತ್ಸವ – 100 ವರ್ಷಗಳ ಪಯಣ ಹೇಗಿತ್ತು ?

udayavani youtube

ದಸರಾ ಆನೆಗಳ ತೂಕವನ್ನು ಹೆಚ್ಚಿಸಲು ಏನೆಲ್ಲಾ ತಿನ್ನಿಸುತ್ತಾರೆ ನೋಡಿ !

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

ಹೊಸ ಸೇರ್ಪಡೆ

ಟಿಯಾಗೋ ಇವಿ ರಿಲೀಸ್‌; ಒಂದು ಬಾರಿ ಚಾರ್ಜ್‌ ಮಾಡಿದರೆ 312 ಕಿಮೀ ಸಂಚಾರ

ಟಿಯಾಗೋ ಇವಿ ರಿಲೀಸ್‌; ಒಂದು ಬಾರಿ ಚಾರ್ಜ್‌ ಮಾಡಿದರೆ 312 ಕಿಮೀ ಸಂಚಾರ

ಹುಬ್ಬಳ್ಳಿ : ಗಂಗಿವಾಳ ಗ್ರಾ.ಪಂ ಸದಸ್ಯನ ಪತ್ನಿ ಆತ್ಮಹತ್ಯೆಗೆ ಶರಣು

ಸಂಬಂಧಿಕರಿಂದಲೇ ಕೊಲೆಯಾಗಿದ್ದ ಗಂಗಿವಾಳ ಗ್ರಾ.ಪಂ ಸದಸ್ಯನ ಪತ್ನಿ ಆತ್ಮಹತ್ಯೆಗೆ ಶರಣು

ಮೊಬೈಲ್‌ ಚಂದಾದಾರರು; ಜಿಯೋ-ಏರ್‌ಟೆಲ್‌ ನಡುವೆ ಸ್ಪರ್ಧೆ

ಮೊಬೈಲ್‌ ಚಂದಾದಾರರು; ಜಿಯೋ-ಏರ್‌ಟೆಲ್‌ ನಡುವೆ ಸ್ಪರ್ಧೆ

ಇದು ಮೆಸ್ಸಿ, ರೊನಾಲ್ಡೊ ಸ್ಟೋರಿ ಅಲ್ಲ…ನಮ್ಮ ಸುನೀಲ್‌ ಚೆಟ್ರಿ ಯಶೋಗಾಥೆ

ಇದು ಮೆಸ್ಸಿ, ರೊನಾಲ್ಡೊ ಸ್ಟೋರಿ ಅಲ್ಲ…ನಮ್ಮ ಸುನೀಲ್‌ ಚೆಟ್ರಿ ಯಶೋಗಾಥೆ

ಟೈಮ್‌ ಮ್ಯಾಗಜಿನ್‌ ಪಟ್ಟಿಯಲ್ಲಿ ಸ್ಥಾನ ಪಡೆದ ಆಕಾಶ್‌ ಅಂಬಾನಿ

ಟೈಮ್‌ ಮ್ಯಾಗಜಿನ್‌ ಪಟ್ಟಿಯಲ್ಲಿ ಸ್ಥಾನ ಪಡೆದ ಆಕಾಶ್‌ ಅಂಬಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.