ಮೈತ್ರಿ ಅಸ್ತಿತ್ವವೇ ಹಳ್ಳಿಗರಿಗೆ ಗೊತ್ತಿಲ್ಲ

Team Udayavani, Apr 21, 2019, 2:27 PM IST

ಪ್ರಶ್ನೆ: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮುಂದೆ ಮೋದಿ ಅಲೆ ಕೈಹಿಡಿಯುತ್ತಾ ?

ಉತ್ತರ: ಬೆಳಗಾವಿ ಜಿಲ್ಲೆಯಲ್ಲಿ ಅದರಲ್ಲೂ ನಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೈತ್ರಿಯ ವಾತಾವರಣವೇ ಕಾಣುತ್ತಿಲ್ಲ. ಈ ಭಾಗದಲ್ಲಿ ಜೆಡಿಎಸ್‌ ತನ್ನ ಅಸ್ತಿತ್ವವನ್ನೇ ಕಳೆದು ಕೊಂಡಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಇದೆ ಎಂಬುದು ಬಹುತೇಕ ಹಳ್ಳಿಗಳಲ್ಲಿ ಗೊತ್ತೇ ಇಲ್ಲ. ಇಲ್ಲಿ ಏನೇ ಇದ್ದರೂ ಅದು ಮೋದಿ ಅಲೆ ಮಾತ್ರ.

ಪ್ರಶ್ನೆ: ರಾಷ್ಟ್ರೀಯವಾದ, ಸೈನಿಕರ ಸಾಧನೆ ಹೊರತುಪಡಿಸಿ ಸ್ಥಳೀಯವಾಗಿ ನಿಮ್ಮ ಸಾಧನೆ ಏನು..?

ಉತ್ತರ: ಬೆಳಗಾವಿ ನಗರದಲ್ಲಿ ವಾಹನ ಸಂಚಾರ ಸಮಸ್ಯೆಗೆ ಮುಕ್ತಿ ಹಾಡಲು ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮೂರು ರೈಲ್ವೆ ಮೇಲು ಸೇತುವೆಗಳ ನಿರ್ಮಾಣ ಮಾಡಲಾಗಿದೆ. ಇಲ್ಲಿಯ ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳನ್ನು ಹೊರದೇಶಗಳಿಗೆ ರಪ್ತು ಮಾಡಲು ಅನುಕೂಲವಾಗುವಂತೆ ಡಿಐಎಫ್‌ಟಿ ಕೇಂದ್ರ ಸ್ಥಾಪನೆ ಮಾಡಲಾಗಿದೆ. ವಿದ್ಯಾವಂತ ಯುವ ಸಮುದಾಯಕ್ಕೆ ಸಹಾಯವಾಗಲು ಪಾಸ್‌ಪೋರ್ಟ್‌ ಸೇವಾ ಕೇಂದ್ರ ತರಲಾಗಿದೆ. ಬೆಳಗಾವಿ ವಿಮಾನ ನಿಲ್ದಾಣವನ್ನು ಸಂಪೂರ್ಣ ಅಭಿವೃದ್ಧಿಪಡಿಸಿ ಉಡಾನ್‌ ಯೋಜನೆಯಡಿ ಆಯ್ಕೆಯಾಗುವಂತೆ ಮಾಡಲಾಗಿದೆ. ಲೋಂಡಾ- ಮೀರಜ್‌ ದ್ವಿಪಥ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರದಿಂದ ಅನುದಾನ ಮಂಜೂರು ಮಾಡಿಸಲಾಗಿದೆ.

ಪ್ರಶ್ನೆ; ರಾಜ್ಯ ಸರಕಾರದ ಅಬ್ಬರ ಎದುರಿಸಲು ಪ್ರಚಾರದ ವೈಖರಿ ಹಾಗೂ ತಂತ್ರಗಾರಿಕೆ ಹೇಗಿದೆ ?

ಉತ್ತರ: ಕ್ಷೇತ್ರದ ಯಾವ ಭಾಗದಲ್ಲೂ ರಾಜ್ಯ ಸರಕಾರದ ಅಬ್ಬರ ಇಲ್ಲ. ಮೈತ್ರಿ ಸರಕಾರದ ಭರವಸೆಗಳು ಬರೀ ಸುಳ್ಳು ಎಂಬುದು ಜನರಿಗೆ ಗೊತ್ತಾಗಿದೆ. ನಾವು ಮನೆ ಮನೆಗೆ ಹೋಗಿದ್ದೇವೆ. ಜನರಿಗೆ ಮನವಿ ಮಾಡಿದ್ದೇವೆ. ಜನರಿಗೆ ಬಳಿಗೆ ಹೋಗುವುದು. ಅವರ ಬೇಕು ಬೇಡಿಕೆಗಳಿಗೆ ಸ್ಪಂದಿಸುವುದು. ಅವರ ಸ್ಪಂದನೆಯೇ ನಮಗೆ ಶ್ರೀರಕ್ಷೆ. ಕೆಲವು ಕಡೆ ನೀವು ನಮ್ಮ ಹಳ್ಳಿಗೆ ಬಂದೇ ಇಲ್ಲ ಎಂದು ಹೇಳಿದರು. ಅಸಮಾಧಾನ ವ್ಯಕ್ತಪಡಿಸಿದರು. ಆದರೂ ನಿಮಗೆ ಬೆಂಬಲ ನೀಡುತ್ತೇವೆ ಎಂದರು. ಅದೂ ಸಹ ನಮಗೆ ಆಶೀರ್ವಾದವೇ. ಹೀಗಿರುವಾಗ ಈ ಸರಕಾರವನ್ನು ಎದುರಿಸಲು ಹೊಸ ತಂತ್ರಗಾರಿಕೆಯ ಅಗತ್ಯವಿಲ್ಲ.

ಪ್ರಶ್ನೆ: ಪ್ರತ್ಯೇಕ ಲಿಂಗಾಯತ ಧರ್ಮ ಈ ಬಾರಿಯ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆಯೇ ?

ಉತ್ತರ: ಯಾವುದೇ ಕಾರಣಕ್ಕೂ ಇಲ್ಲ. ಭಾರತದಲ್ಲಿ ಹಿಂದೂ ಧರ್ಮ ಬಿಟ್ಟರೆ ಉಳಿದೆಲ್ಲವೂ ಗೌಣ. ನಮ್ಮದು ಅಖಂಡ ಹಿಂದೂ ರಾಷ್ಟ್ರ. ಯಾವುದೇ ಧರ್ಮದ ವಿಷಯ ಅವರವರಿಗೆ ಬಿಟ್ಟಿದ್ದು. ಅದು ಚುನಾವಣೆಯಲ್ಲಿ ಬರುವುದೇ ಇಲ್ಲ.

ಪ್ರಶ್ನೆ; ಕ್ಷೇತ್ರದ ಅಭಿವೃದ್ಧಿ ಬಗ್ಗೆ ನಿಮ್ಮ ನೀಲನಕ್ಷೆ ಏನು ?

ಉತ್ತರ: ಮಹದಾಯಿ ನೀರನ್ನು ತ್ವರಿತವಾಗಿ ತರಬೇಕು ಎಂಬ ಆಲೋಚನೆ ಇದೆ. ಇದರಿಂದ ಸವದತ್ತಿ ಹಾಗೂ ರಾಮದುರ್ಗದ ಜನರಿಗೆ ಬಹಳ ಅನುಕೂಲವಾಗಲಿದೆ. ಇದಲ್ಲದೇ ಬೆಳಗಾವಿ ನಗರಕ್ಕೆ ವರ್ಷದ 12 ತಿಂಗಳೂ ನಿರಂತರವಾಗಿ ನೀರು ಸಿಗುವಂತೆ ಮಾಡಲು ಮಹಾರಾಷ್ಟ್ರದ ತಿಲಾರಿ ಡ್ಯಾಮ್‌ದಿಂದ ನೀರು ತರುವ ಯೋಜನೆ ಇದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಳಗಾವಿ: ಕೆಎಸ್‌ಆರ್‌ಪಿಗೆ ಉನ್ನತ ಪದವಿ ಹೊಂದಿದವರೂ ಸೇರಿಕೊಳ್ಳುತ್ತಿದ್ದಾರೆ. ನೀವು ಕಲಿತ ವಿದ್ಯೆ ವೃತ್ತಿಗೆ ಸಹಾಯವಾಗಲಿದೆ. ಅನೇಕ ಕಾನ್ಸಟೇಬಲ್‌ಗ‌ಳು...

  • ಬೆಳಗಾವಿ: ನಾವು ಸುರಕ್ಷಿತವಾಗಿ ಅಂತರ್ಜಾಲ ಬಳಕೆ ಮಾಡುವ ಜತೆಗೆ ಮಾದಕ ವ್ಯಸನಗಳಿಂದ ದೂರ ಇರಬೇಕು ಎಂದು ಮಕ್ಕಳ ರಕ್ಷಣಾ ಅಧಿಕಾರಿ ಲೋಕೇಶ ಹೇಳಿದರು. ಯುನೈಟೆಡ್‌...

  • ಬೆಳಗಾವಿ: ಶಹಾಪುರದ ನಾಥ ಪೈ ವೃತ್ತದ ಬಳಿಯ ತಂಗುದಾಣ ಮುರಿದು ಬೀಳುವ ಸ್ಥಿತಿಯಲ್ಲಿದ್ದು, ಪ್ರಯಾಣಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಈ ಭಾಗದಲ್ಲಿ ಶಾಲಾ-ಕಾಲೇಜುಗಳಿಗೆ...

  • ಬೆಳಗಾವಿ: ಅನಾರೋಗ್ಯದಿಂದ ಬಳಲುತ್ತಿದ್ದ ಕೆಪಿಸಿಸಿ ಮಾಜಿ ಸದಸ್ಯ  ಶಂಕರ ಮುನವಳ್ಳಿ ಬುಧವಾರ ನಸುಕಿನ ಜಾವ ನಿಧನಹೊಂದಿದ್ದಾರೆ. ಸಾಕಷ್ಟು ಕಾನೂನು ತಿಳುವಳಿಕೆ...

  • ರಾಯಬಾಗ: 2005ರ ಕೃಷ್ಣಾ ನದಿ ಪ್ರವಾಹದಿಂದ ಸಂತ್ರಸ್ತರಾದವರಿಗೆ ಮನೆ ಹಕ್ಕು ಪತ್ರ ನೀಡುವಂತೆ ಹಾಗೂ ಸಂತ್ರಸ್ತರಿಂದ ಹಣ ಪಡೆದ ಗ್ರಾಮ ಲೆಕ್ಕಾಧಿಕಾರಿಯನ್ನು ಸೇವೆಯಿಂದ...

ಹೊಸ ಸೇರ್ಪಡೆ