Udayavni Special

ಅಥಣಿ: ರಾಯಣ್ಣ ಮೂರ್ತಿ ಸ್ಥಾಪನೆಗೆ ಆಗ್ರಹ


Team Udayavani, Aug 23, 2020, 1:08 PM IST

ಅಥಣಿ: ರಾಯಣ್ಣ ಮೂರ್ತಿ ಸ್ಥಾಪನೆಗೆ ಆಗ್ರಹ

ಅಥಣಿ: ಬೆಳಗಾವಿಯ ಪೀರನವಾಡಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಮೂರ್ತಿ ಮರು ಸ್ಥಾಪನೆಗಾಗಿಪಟ್ಟಣದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ ಹಾಲುಮತ ಸಮಾಜ ವತಿಯಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ನಾಲ್ಕು ದಿನಗಳಲ್ಲಿ ಪುತ್ಥಳಿ ಮರುಸ್ಥಾಪನೆ ಮಾಡದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು. ಸರ್ಕಾರ ಕೂಡಲೇ ಮಧ್ಯಸ್ಥಿಕೆ ವಹಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಸ್ಥಾಪನೆ ಮಾಡಬೇಕು ಎಂದು ಸತ್ಯಪ್ಪ ಬಾಗೆನ್ನವರ ಆಗ್ರಹಿಸಿದರು. ಪ್ರಶಾಂತ ಪೂಜೇರಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ರಾಯಣ್ಣನ ಮೂರ್ತಿ ಸ್ಥಾಪನೆಯ ಭರವಸೆ ಕೊಟ್ಟಿದ್ದಾರೆ. ತಹಶೀಲ್ದಾರ್‌ ಕೂಡಲೇ ಸರ್ಕಾರಕ್ಕೆ ಮನವಿ ಪತ್ರ ರವಾನಿಸಬೇಕು ಎಂದರು.

ಚಿಕ್ಕೋಡಿಯಲ್ಲಿ ತಹಶೀಲ್ದಾರ್‌ಗೆ ಮನವಿ  : ಬೆಳಗಾವಿ ಜಿಲ್ಲೆಯ ಪೀರನವಾಡಿ ಬಳಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಒತ್ತಾಯಿಸಿ ಕರವೇ ಹಾಗೂ ಕುರುಬ ಸಮಾಜ ಬಾಂಧವರು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಆ.15ರಂದು ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಆದರೆ ಅದನ್ನು ಏಕಾಏಕಿ ತೆರವುಗೊಳಿಸಿ ರಾಷ್ಟ್ರಧ್ವಜ ಕೆಳಗೆ ಕೆಡವಿ ಅಪಮಾನ ಮಾಡಲಾಗಿದೆ. ಹೀಗಾಗಿ ರಾಯಣ್ಣ ಮೂರ್ತಿ ಮತ್ತು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದವರ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಈ ವೇಳೆ ಕರವೇ ಜಿಲ್ಲಾ ಸಂಚಾಲಕ ಸಂಜು ಬಡಿಗೇರ, ತಾಲೂಕು ಅಧ್ಯಕ್ಷ ನಾಗೇಶ ಮಾಳಿ, ನ್ಯಾಯವಾದಿ ಎಚ್‌.ಎಸ್‌. ನಸಲಾಪೂರೆ, ಶಿವು ಮರ್ಯಾಯಿ, ಪ್ರತಾಪ ಪಾಟೀಲ, ಕೃಷ್ಣಾ ದೇವಾನಗೋಳ, ರಾಜು ಪೂಜಾರಿ, ರಾಮಚಂದ್ರ ಧನಗರ, ಮಂಜುನಾಥ ಬಾನುಸೆ ಇದ್ದರು.

ರಾಯಣ್ಣ ಪ್ರತಿಮೆ ಮರುಸ್ಥಾಪನೆಗೆ ಆಗ್ರಹ :  ಬೆಳಗಾವಿಯ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವುಗೊಳಿಸಿದ್ದು ಕೂಡಲೇ ಪ್ರತಿಮೆ ಮರು ಸ್ಥಾಪಿಸುವಂತೆ ಒತ್ತಾಯಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ, ಕಾಗವಾಡ ತಾಲೂಕು ಕರ್ನಾಟಕ ಪ್ರದೇಶ ಕುರುಬರ ಸಂಘ, ಕರವೇ (ನಾರಾಯಣ ಶೆಟ್ಟಿ ಮತ್ತು ನಾರಾಯಣಗೌಡ ಬಣ) ಕಾರ್ಯಕರ್ತರು ಕಾಗವಾಡ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡಿದರು. ಘೋಷಣೆ ಕೂಗುತ್ತ ಪಾದಯಾತ್ರೆ ಮೂಲಕ ತಹಶೀಲ್ದಾರ್‌ ಕಚೇರಿವರೆಗೆ ತರಳಿ ಪ್ರಭಾರಿ ತಹಶೀಲ್ದಾರ್‌ ಅಣ್ಣಾಸಾಹೇಬ ಕೋರೆ, ಶಿರಸ್ತೇದಾರ್‌ ಎಂ.ಆರ್‌. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಅಪ್ಪಾಸಾಹೇಬ ಮಳಮಳಶಿ ಮಾತನಾಡಿ, ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವುಗೊಳಿಸಿದ್ದು ಖಂಡನೀಯ. ಬರುವ 8 ದಿನಗಳಲ್ಲಿ ಪ್ರತಿಮೆ ಮರು ಸ್ಥಾಪನೆ ಮಾಡದಿದ್ದರೆ ರಾಜ್ಯಾದ್ಯಂತ ಎಲ್ಲ ಅಭಿಮಾನಿಗಳು ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಜಂಬಗಿ ಮಠದ ಮುಖ್ಯಸ್ಥ ಸುರೇಶ ಮಹಾರಾಜ ಮಾತನಾಡಿ, ಪ್ರತಿಮೆ ತೆರವು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ರಾಯಣ್ಣನಿಗೆ ಅವಮಾನ. ಪ್ರತಿಮೆ ತೆರವುಗೊಳಿಸಿದ ಸ್ಥಳದಲ್ಲಿಯೇ ಪುನರ್‌ ಸ್ಥಾಪಿಸಬೇಕು ಎಂದರು.

ಕರವೇ ಪ್ರವೀಣಕುಮಾರ ಶೆಟ್ಟಿ ಬಣದ ಸಂಚಾಲಕ ಶಿವಾನಂದ ನವಿನಾಳ್‌ ಮಾತನಾಡಿ, ಸಂಗೊಳ್ಳಿ ರಾಯಣ್ಣನನ ಪ್ರತಿಮೆ ತವರು ಜಿಲ್ಲೆಯಲ್ಲಿ ತೆರವುಗೊಳಿಸಿದ್ದು ಖಂಡನೀಯ. 8 ದಿನಗಳಲ್ಲಿ ಅದೇ ಸ್ಥಳದಲ್ಲೇ ಪ್ರತಿಮೆ ಸ್ಥಾಪಿಸದಿದ್ದರೆ ಕಾಗವಾಡದ ಕರವೇ ಎರಡು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಸಂಚಾಲಕ ಸದಾಶಿವ ಪೂಜಾರಿ, ಚಂದ್ರಶೇಖರ ಕುರಿ, ತಾಲೂಕು ನಿರ್ದೇಶಕರಾದ ರಾವಸಾಬ ಜುಗಳೆ, ಸಂತೋಷ ಖನ್ನಿಕೂಡೆ, ರಾಜು ಬಾಗಿ, ಅನಿಲ್‌ ಮಾಲಗಾಂವೆ, ಕರವೇ ಪ್ರವೀಣ ಶೆಟ್ಟಿ ಬಣದ ತಾಲೂಕಾಧ್ಯಕ್ಷ ಚೇತನ ಪಾಟೀಲ, ಉಪಾಧ್ಯಕ್ಷ ರಾಜು ಪಾಟೀಲ, ಕಾರ್ಯದರ್ಶಿ ರೀಷಿ ಬಸ್ತವಾಡೆ, ಸಚಿನ ಕುರುಂದವಾಡೆ, ಶಿವಾನಂದ ನವಿನಾಳ್‌, ನಾರಾಯಣ ಬಣದ ಕರವೇ ಅಧ್ಯಕ್ಷ ಸಿದ್ದು ಒಡೆಯರ, ಉಪಾಧ್ಯಕ್ಷ ಗಣೇಶ ಕೋಳೆಕರ, ಪ್ರವೀಣ ಪಾಟೀಲ, ಫಾರುಕ್‌ ಅಲಾಸಕರ, ಅನಿಲ್‌ ಚಿಕ್ಕಲಗೆ ಇದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

4 ಕೋಟಿ ಮೌಲ್ಯದ ಕೊಕೇನ್‌ ಜಪ್ತಿ

4 ಕೋಟಿ ಮೌಲ್ಯದ ಕೊಕೇನ್‌ ಜಪ್ತಿ

ನೊಯ್ಡಾದಲ್ಲಿ ದೇಶದ ಅತಿದೊಡ್ಡ ಫಿಲಂ ಸಿಟಿ ನಿರ್ಮಾಣ: ಯೋಗಿ

ನೊಯ್ಡಾದಲ್ಲಿ ದೇಶದ ಅತಿದೊಡ್ಡ ಫಿಲಂ ಸಿಟಿ ನಿರ್ಮಾಣ: ಯೋಗಿ

ಉಡುಪಿ: ಬಿರುಸಿನ ಮಳೆ; ಬನ್ನಂಜೆ ಪರಿಸರ ಸಂಪೂರ್ಣ ಜಲಾವೃತ

ಉಡುಪಿ: ಬಿರುಸಿನ ಮಳೆ; ಬನ್ನಂಜೆ ಪರಿಸರ ಸಂಪೂರ್ಣ ಜಲಾವೃತ

ಸೆ. 28ರಿಂದ ಶ್ರೀಕೃಷ್ಣ ಮಠ ಭಕ್ತರಿಗೆ ಮುಕ್ತ; ಮೊದಲ ಹಂತದಲ್ಲಿ ಅಪರಾಹ್ನ 2- 5 ಗಂಟೆ ವರೆಗೆ

ಸೆ. 28ರಿಂದ ಶ್ರೀಕೃಷ್ಣ ಮಠ ಭಕ್ತರಿಗೆ ಮುಕ್ತ; ಮೊದಲ ಹಂತದಲ್ಲಿ ಅಪರಾಹ್ನ 2- 5 ಗಂಟೆ ವರೆಗೆ

IPL ಕಲರವ : ಮೊದಲ ಪಂದ್ಯ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್

IPL ಕಲರವ : ಮೊದಲ ಪಂದ್ಯ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್

ಅಜಿಂಕ್ಯ ರಹಾನೆಗೆ ಆಡುವ ಬಳಗದಲ್ಲಿ ಸ್ಥಾನ ಲಭಿಸೀತೇ?

ಅಜಿಂಕ್ಯ ರಹಾನೆಗೆ ಆಡುವ ಬಳಗದಲ್ಲಿ ಸ್ಥಾನ ಲಭಿಸೀತೇ?

ಮಂಗಳೂರಿನಲ್ಲಿ ಭಾರೀ ಮಳೆ; ಕೆಲವೆಡೆ ಕೃತಕ ನೆರೆ ಸೃಷ್ಟಿ

ಮಂಗಳೂರಿನಲ್ಲಿ ಭಾರೀ ಮಳೆ; ಕೆಲವೆಡೆ ಕೃತಕ ನೆರೆ ಸೃಷ್ಟಿ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಟ್ರ್ಯಾಕ್ಟರ್ ಟಯರ್ ಗಳನ್ನು ಕದಿಯುತ್ತಿದ್ದ 7 ಮಂದಿ ಸೆರೆ ! 4.60 ಲಕ್ಷ ಮೌಲ್ಯದ ಸೊತ್ತು ವಶ

ಟ್ರ್ಯಾಕ್ಟರ್ ಟಯರ್ ಗಳನ್ನು ಕದಿಯುತ್ತಿದ್ದ 7 ಮಂದಿ ಸೆರೆ ! 4.60 ಲಕ್ಷ ಮೌಲ್ಯದ ಸೊತ್ತು ವಶ

ಟೈರ್ ಸ್ಪೋಟಗೊಂಡು ಬೈಕಿಗೆ ಡಿಕ್ಕಿ ಹೊಡೆದ ಆಂಬ್ಯುಲೆನ್ಸ್ :ಕೋವಿಡ್ ರೋಗಿ ಸೇರಿ ಇಬ್ಬರು ಸಾವು

ಟೈರ್ ಸ್ಪೋಟಗೊಂಡು ಬೈಕಿಗೆ ಡಿಕ್ಕಿ ಹೊಡೆದ ಆಂಬ್ಯುಲೆನ್ಸ್ :ಕೋವಿಡ್ ರೋಗಿ ಸೇರಿ ಇಬ್ಬರು ಸಾವು

ಕನ್ನಡ ಮಾಧ್ಯಮದಲ್ಲೇ ಓದಿ ಪಿಎಸ್‌ಐ ಆದ ಗ್ರಾಮೀಣ ಪ್ರತಿಭೆ ಗೀತಾ ರೆಡ್ಡಿ

ಕನ್ನಡ ಮಾಧ್ಯಮದಲ್ಲೇ ಓದಿ ಪಿಎಸ್‌ಐ ಆದ ಗ್ರಾಮೀಣ ಪ್ರತಿಭೆ ಗೀತಾ ರೆಡ್ಡಿ

ಸ್ವಿಚ್ ಆಫ್ ಆಗಿದ್ದ ಮೊಬೈಲ್ ಆನ್ ಆಗುತ್ತಿದ್ದಂತೆ ಮಹಿಳೆಯ ಕೊಲೆ ಪ್ರಕರಣ ಬೆಳಕಿಗೆ ಬಂತು

ಸ್ವಿಚ್ ಆಫ್ ಆಗಿದ್ದ ಮೊಬೈಲ್ ಆನ್ ಆಗುತ್ತಿದ್ದಂತೆ ಮಹಿಳೆಯ ಕೊಲೆ ಪ್ರಕರಣ ಬೆಳಕಿಗೆ ಬಂತು

ಮಲಪ್ರಭಾ, ಘಟಪ್ರಭಾ, ಬಳ್ಳಾರಿ ನಾಲಾ, ಹಿರಣ್ಯಕೇಶಿ ನದಿಪಾತ್ರ ಒತ್ತುವರಿ ಸಮೀಕ್ಷೆ: ಜಾರಕಿಹೊಳಿ

ಮಲಪ್ರಭಾ, ಘಟಪ್ರಭಾ, ಬಳ್ಳಾರಿ ನಾಲಾ, ಹಿರಣ್ಯಕೇಶಿ ನದಿಪಾತ್ರ ಒತ್ತುವರಿ ಸಮೀಕ್ಷೆ: ಜಾರಕಿಹೊಳಿ

MUST WATCH

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!



ಹೊಸ ಸೇರ್ಪಡೆ

ಮಂಗಲಪಾದೆ ಜಿನಬಿಂಬಕ್ಕೆ ಅಪಚಾರ; ಕೇಸು

ಮಂಗಲಪಾದೆ ಜಿನಬಿಂಬಕ್ಕೆ ಅಪಚಾರ; ಕೇಸು

ಮಟ್ಕಾ: ಜಿಲ್ಲೆಯಾದ್ಯಂತ 7 ಮಂದಿ ಮೇಲೆ ಕೇಸು

ಮಟ್ಕಾ: ಜಿಲ್ಲೆಯಾದ್ಯಂತ 7 ಮಂದಿ ಮೇಲೆ ಕೇಸು

4 ಕೋಟಿ ಮೌಲ್ಯದ ಕೊಕೇನ್‌ ಜಪ್ತಿ

4 ಕೋಟಿ ಮೌಲ್ಯದ ಕೊಕೇನ್‌ ಜಪ್ತಿ

ನೊಯ್ಡಾದಲ್ಲಿ ದೇಶದ ಅತಿದೊಡ್ಡ ಫಿಲಂ ಸಿಟಿ ನಿರ್ಮಾಣ: ಯೋಗಿ

ನೊಯ್ಡಾದಲ್ಲಿ ದೇಶದ ಅತಿದೊಡ್ಡ ಫಿಲಂ ಸಿಟಿ ನಿರ್ಮಾಣ: ಯೋಗಿ

ಉಡುಪಿ: ಬಿರುಸಿನ ಮಳೆ; ಬನ್ನಂಜೆ ಪರಿಸರ ಸಂಪೂರ್ಣ ಜಲಾವೃತ

ಉಡುಪಿ: ಬಿರುಸಿನ ಮಳೆ; ಬನ್ನಂಜೆ ಪರಿಸರ ಸಂಪೂರ್ಣ ಜಲಾವೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.