ಗ್ರಾಪಂ ಸಿಬ್ಬಂದಿ ಮೇಲೆ ಹಲ್ಲೆ: ಪ್ರತಿಭಟನೆ

Team Udayavani, Jan 19, 2020, 1:18 PM IST

ಹುಕ್ಕೇರಿ: ತಾಲೂಕಿನ ಎಲಿಮುನ್ನೋಳಿ ಗ್ರಾಪಂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹಾಗೂ ಸಿಬ್ಬಂದಿಗಳ ಮೇಲೆ ನಡೆದ ಹಲ್ಲೆ ಖಂಡಿಸಿ ಆರ್‌ ಡಿಪಿಆರ್‌ ಇಲಾಖೆ ಅಧಿಕಾರಿ ಮತ್ತು ನೌಕರರ ಸಂಘದವರು ಶನಿವಾರ ಪಟ್ಟಣದಲ್ಲಿ ಪ್ರತಿಭಟಿಸಿದರು.

ಇಲ್ಲಿನ ತಾಪಂ ಕಚೇರಿ ಬಳಿ ಜಮಾಯಿಸಿದ ಪಂಚಾಯಿತಿ ನೌಕರರು, ಕೂಡಲೇ ತಪ್ಪಿತಸ್ಥನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ವಿಳಂಬವಾದಲ್ಲಿ ಉಗ್ರ ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು. ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಶಿವನಾಯಿಕ ನಾಯಿಕ, ವಾಟರ್‌ ಮನ್‌ ಮೆಹಬೂಬ ಖಲೀಫ್‌,ಸ್ವಚ್ಛತಾಗಾರ ಥಳೆಪ್ಪ ಹರಿಜನ ಅವರು ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಪಂಚಾಯಿತಿಗೆ ಆಗಮಿಸಿದ ಮಹ್ಮದಯಾಸೀನ್‌ ತಹಶೀಲದಾರ, ಸಿಬ್ಬಂದಿಗಳ ಮೇಲೆ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾನೆ.

ಕಾರಣ ಕೂಡಲೇ ಆರೋಪಿ ಮೇಲೆಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಬಳಿಕ ಎಲಿಮುನ್ನೋಳಿ ಗ್ರಾಪಂ ಆಡಳಿತ ಮಂಡಳಿ ಹಾಗೂ ಸ್ಥಳೀಯ ಪೊಲೀಸ್‌ ಇಲಾಖೆಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಆರ್‌.ಎ.ಚಟ್ನಿ, ಪ್ರದೀಪ ನೇರ್ಲಿ, ಅವಿನಾಶ ಹೊಳೆಪ್ಪಗೋಳ, ಶಂಕರ ಕಾಂಬಳೆ, ಸಂತೋಷ ಕಬ್ಬಗೋಳ, ಶಿವಲಿಂಗ ಢಂಗ, ನಾಗಲಿಂಗ ಮಾಳಗೆ, ಶಂಕರ ಶಿರಗುಪ್ಪಿ, ಮಹಾಂತೇಶ ಬಾದವಾನಮಠ, ಎಸ್‌. ವಿನಯಕುಮಾರ, ಪಿ.ಲಕ್ಷ್ಮೀ ನಾರಾಯಣ, ವಾಸುದೇವ ಎಸ್‌.ವಿ., ಚಂದ್ರಕಾಂತ ನಂದಗಾಂವಿ, ರಾಜು ಢಾಂಗೆ, ಶಶಿಧರ ಬಳ್ಳಾರಿ, ಶೀಲಾ ತಳವಾರ, ಪ್ರಭಾವತಿ ಮುತಾಲಿಕ ದೇಸಾಯಿ, ಶೋಭಾ ಬಡಕುಂದ್ರಿ, ಸಾವಿತ್ರಿ ಬ್ಯಾಕೂಡ, ರಾಜು ಬೆಟಸೂರೆ ಮತ್ತಿತರರು ಪಾಲ್ಗೊಂಡಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ