ನೋಟ್ ಬ್ಯಾನ್ ನೆನಪಿಸಿಕೊಂಡು ನೋಟುಗಳ ಮಾಲೆ ಹಾಕಿ ಹುಟ್ಟುಹಬ್ಬ ಆಚರಿಸಿದ ಕುಟುಂಬ

Team Udayavani, Nov 6, 2019, 5:20 PM IST

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರು 500 ಹಾಗೂ 1000 ರೂ. ಮುಖ ಬೆಲೆಯ ನೋಟುಗಳನ್ನು ನವೆಂಬರ್ 8ರಂದು ಬ್ಯಾನ್ ಮಾಡಿರುವುದು ಪ್ರತಿಯೊಬ್ಬರಲ್ಲಿ ನಡುಕ ಶುರುವಾಗುತ್ತದೆ. ಆದರೆ ಇದನ್ನೇ ನೆನಪಿನಲ್ಲಿ ಇಟ್ಟುಕೊಂಡು ಮುಂಬೈ ಮೂಲದ ಮಹಿಳೆಗೆ 100 ರೂ. ನೋಟುಗಳ ಸರಮಾಲೆ ಹಾಕಿ 60ನೇ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಲಾಯಿತು.

ಮುಂಬೈ ಮೂಲದ ಮೀನಾ ಮುಕೇಶ ಬಾಳಿಕ್ ಅವರು ನೆಹರು ನಗರದ ಹೊಟೆಲ್‌ವೊಂದರಲ್ಲಿ ತಮ್ಮ 60ನೇ ಜನ್ಮದಿನವನ್ನು ವಿಶೇಷವಾಗಿ ಆಚರಿಸಿಕೊಂಡರು. ಮುಂಬೈದಿಂದ ಬೆಳಗಾವಿಯ ಅನಗೋಳದಲ್ಲಿರುವ ಹರಿ ಮಂದಿರದ ಶ್ರೀ ಕಲಾವತಿ ಆಯಿ ದರ್ಶನ ಪಡೆದು ಜನ್ಮದಿನ ಆಚರಿಸಿಕೊಂಡರು. ಬುಧವಾರ ಬೆಳಗ್ಗೆ ವಿಶೇಷವಾಗಿ ಆಚರಿಸಿ ಸಿಹಿ ತಿನ್ನಿಸಿ ಸಂಭ್ರಮಿಸಿದರು.

ಮುಂಬೈ ಮೂಲದ ಕುಟುಂಬಸ್ಥರೆಲ್ಲ ಸೇರಿ ಮೀನಾ ಅವರಿಗೆ ಶುಭ ಕೋರಿದರು. 100 ರೂ. ಮುಖ ಬೆಲೆಯ ಅರವತ್ತು ನೋಟುಗಳ ಸರಮಾಲೆ ಮಾಡಿದ್ದ ಸಂಬಂಧಿಕರು ಮೀನಾ ಅವರಿಗೆ ಹಾಕಿ ಸಂಭ್ರಮಿಸಿದರು.
ನವೆಂಬರ್‌ನಲ್ಲಿಯೇ ಪ್ರಧಾನಿ ಮೋದಿ ನೋಟ್ ಬ್ಯಾನ್ ಮಾಡಿದ್ದು ಹಾಗೂ ಮೀನಾ ಅವರ ಜನ್ಮದಿನ ಇದೇ ತಿಂಗಳಿನಲ್ಲಿ ಇರುವುದರಿಂದ ಇದನ್ನು ವಿಶೇಷವಾಗಿ ಆಚರಿಸಿಕೊಂಡರು.

ಅನಗೋಳದ ಕಲಾವತಿ ಆಯಿ ಮಂದಿರಕ್ಕೆ ನಾವು ಆಗಾಗ ಬರುತ್ತಿರುತ್ತೇವೆ. ಬೆಳಗಾವಿಗೂ ನಮಗೂ ಅತ್ಯಂತ ನಿಕಟ ಸಂಬಂಧವಿದೆ. ಕಲಾವತಿ ಆಯಿ ದೇವಿ ದರ್ಶನ ಪಡೆದ ಕೂಡಲೇ ಮೀನಾ ಅವರ ಜನ್ಮದಿನ ಆಚರಿಸುವ ಬಗ್ಗೆ ನಿರ್ಧರಿಸಿ 60 ನೋಟುಗಳ ಸರ ಮಾಡಿ ಅವರಿಗೆ ಕೊಡುಗೆ ನೀಡಲಾಯಿತು ಎಂದು ಇವರ ಸಂಬಂಧಿಕ ಅರವಿಂದ ಅಮೃತೇಶ ತಿಳಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ