ಬಿಜೆಪಿ ಹೈಕಮಾಂಡ್ ನಿಂದ ಸಚಿವ ಸ್ಥಾನದ ಭರವಸೆ: ಉಮೇಶ್ ಕತ್ತಿ
Team Udayavani, Aug 24, 2019, 9:30 PM IST
ಬೆಳಗಾವಿ: ಮುಂದಿನ ವಾರದಲ್ಲಿ ಮತ್ತೆ ಸಚಿವ ಸಂಪುಟ ವಿಸ್ತರಣೆ ಆಗುತ್ತೆ. ಬಾಲಚಂದ್ರ ಜಾರಕಿಹೊಳಿ, ಉಮೇಶ್ ಕತ್ತಿಗೆ ಸ್ಥಾನ ಸಿಗುತ್ತೆ.ಸ್ವಲ್ಪ ಕಾಯಿರಿ ಅಂತ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ ಎಂದು ಬಿಜೆಪಿ ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ಎಲ್ಲಾ ಶಾಸಕರು ಸಮಾಧಾನವಾದ ಬಳಿಕ ನಾನು ಹಾಗೂ ಬಾಲಚಂದ್ರ ಸಚಿವರಾಗುತ್ತೇವೆ.ಎಲ್ಲರಿಗೂ ಸಚಿವ ಸ್ಥಾನ ಹಂಚಿಕೆ ಮಾಡಿ ನಮಗೆ ಉಳಿಯದಿದ್ದರೆ ನಾವು ಸಚಿವರಾಗುವುದಿಲ್ಲ ನಮಗೆ ಯಾವುದೇ ಅಸಮಾಧಾನ ಇಲ್ಲ.
ಈ ಹಿಂದೆ ಎಂಟೂವರೆ ವರ್ಷ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ.ಮಂತ್ರಿಯಾಗಬೇಕು ಅಂತಾ ಹಂಬಲವೇನಿಲ್ಲ, ಕೊಟ್ಟರೆ ಜವಾಬ್ದಾರಿಯಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸ.
ಮಂತ್ರಿಸ್ಥಾನ ಸಿಗದಿದ್ದರೆ ನನ್ನ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ.ಎಂದು ಹೇಳಿದರು.
ನಾನು ಮತ್ತು ಸಚಿವ ಲಕ್ಷ್ಮಣ ಸವದಿ ಇಬ್ಬರು ಇಂದು ಭೇಟಿಯಾಗಿಲ್ಲ. ಮಾಧ್ಯಮಗಳು ಸೃಷ್ಟಿಸಿದರೆ ನಾನೇನು ಮಾಡಲು ಆಗುವುದಿಲ್ಲ ಅಂತಹ ವೈರತ್ವ ಯಾರೊಂದಿಗಿಲ್ಲ. ಸಚಿವ ಲಕ್ಷ್ಮಣ ಸವದಿ ದಿನಕ್ಕೆ ಮೂರು ಬಾರಿ ಫೋನ್ ಮಾಡುತ್ತಾರೆ ನಾನು ಸಹ ಅವರಿಗೆ ಕರೆ ಮಾಡುತ್ತೇನೆ. ಮಂತ್ರಿ ಸ್ಥಾನ ಸಿಗದಿದ್ದರೆ ತಿನ್ನಲು ಉನ್ನಲು ನಮಗೆ ತೋಟಗಳಿವೆ ಎಂದರು.