Udayavni Special

ಲಾಕ್‌ಡೌನ್‌ಗೆ ವಿದ್ಯುತ್‌ ಮಗ್ಗಗಳ ಸದ್ದೂ ಸ್ಥಗಿತ

Team Udayavani, May 23, 2021, 6:02 PM IST

22ckd1 (1)

ವರದಿ : ಮಹಾದೇವ ಪೂಜೇರಿ

ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ರಾಜ್ಯದ ಗಡಿ ಹಳ್ಳಿಯಲ್ಲಿಯ ವಿದ್ಯುತ್‌ ಚಾಲಿತ ಮಗ್ಗದ ಕಾರ್ಮಿಕರು ಕೋವಿಡ್‌ -19ರ ಲಾಕ್‌ಡೌನ್‌ ಹೊಡೆತಕ್ಕೆ ನಲುಗಿ ಹೋಗಿದ್ದಾರೆ.

ಕಳೆದ ಎರಡು ತಿಂಗಳಿಂದ ಮಗ್ಗಗಳನ್ನು ಬಂದ್‌ ಮಾಡಿದ್ದು, ಕೆಲಸವಿಲ್ಲದೇ ಉಪಜೀವನ ನಡೆಸಲು ಪರದಾಡುವಂತ ಪರಿಸ್ಥಿತಿ ಎದುರಾಗಿದೆ. ನಿಯೋಜಿತ ಚಿಕ್ಕೋಡಿ ಜಿಲ್ಲೆ ವ್ಯಾಪ್ತಿಯ ಗಡಿ ಭಾಗಕ್ಕೆ ಹೊಂದಿಕೊಂಡಿರುವ ನಿಪ್ಪಾಣಿ ತಾಲೂಕಿನ ಮಾಣಕಾಪೂರ, ಬೋರಗಾಂವ, ಕಾರದಗಾ, ಡೋಣೆವಾಡಿ ಹೀಗೆ ಹತ್ತಾರು ಹಳ್ಳಿಗಳಲ್ಲಿ ಪ್ರತಿನಿತ್ಯ ಸಾವಿರಾರು ಜನರು ವಿದ್ಯುತ್‌ ಚಾಲಿತ ಮಗ್ಗಗಳ ನೇಕಾರಿಕೆಯಲ್ಲಿ ತೊಡಗಿಕೊಂಡು ಜೀವನ ನಡೆಸುತ್ತಿದ್ದರು. ಕೊರೊನಾ ಲಾಕ್‌ಡೌನ್‌ ಪರಿಣಾಮ ವಿದ್ಯುತ್‌ ಚಾಲಿತ ಮಗ್ಗಗಳ ಸದ್ದು ನಿಂತು, ಸಾವಿರಾರು ಕುಟುಂಬಗಳ ಬದುಕು ಮೂರಾಬಟ್ಟೆಯಾಗಿದೆ.

ಒಂದಿಲ್ಲೊಂದು ಸಮಸ್ಯೆಯ ಸುಳಿಯಲ್ಲಿ ಸಿಕ್ಕು ನರಳಾಡುವ ನೇಕಾರರ ಬದುಕು ಕೊರೊನಾ ಲಾಕಡೌನ್‌ದಿಂದ ಅತಂತ್ರವಾಗಿದೆ. ಕಳೆದ ಮೂರು ವರ್ಷದ ಹಿಂದೆ ಮಹಾಪೂರ, ಕಳೆದ ಹಾಗೂ ಈ ವರ್ಷ ಕೋವಿಡ್‌ ಸೋಂಕಿನಿಂದ ಸಂಕಷ್ಟದಲ್ಲಿದ್ದು, ಮುಂದಿನ ಜೀವನ ಹೇಗೆ ಎಂಬ ಆತಂಕದಲ್ಲಿದ್ದಾರೆ.

ಗಡಿಯಲ್ಲಿ ಬಿಗಿ ಭದ್ರತೆ: ಕೊರೊನಾ ಎರಡನೆ ಅಲೆ ವೇಗವಾಗಿ ಹರಡುತ್ತಿರುವ ಪರಿಣಾಮ ಮಹಾರಾಷ್ಟ್ರ ಮತ್ತು ರಾಜ್ಯ ಸರ್ಕಾರ ಲಾಕಡೌನ್‌ ಘೋಷಣೆ ಮಾಡಿವೆ. ಎರಡು ರಾಜ್ಯದ ಗಡಿಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ನೆರೆಯ ಮಹಾರಾಷ್ಟ್ರದ ಇಚಲಕರಂಜಿ, ಕೊಲ್ಲಾಪೂರ, ಸಾಂಗ್ಲೀ ಹೀಗೆ ಅನೇಕ ಕಡೆಗಳಿಂದ ಕಚ್ಚಾ ವಸ್ತು ರಾಜ್ಯಕ್ಕೆ ಬರುತ್ತಿತ್ತು. ಆದರೆ ಕರ್ನಾಟಕಕ್ಕಿಂತ ಒಂದು ತಿಂಗಳು ಮೊದಲೇ ಮಹಾರಾಷ್ಟ್ರ ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿಯಾಗಿದ್ದರಿಂದ ಕಚ್ಚಾ ವಸ್ತು ಸರಬರಾಜು ನಿಂತುಹೋಗಿದೆ. ನಂತರ ರಾಜ್ಯದಲ್ಲಿಯೂ ಲಾಕಡೌನ್‌ ಜಾರಿಯಾಗಿ ಮಗ್ಗಗಳು ಸಂಪೂರ್ಣ ಬಂದ್‌ ಆಗಿವೆ.

ಸಾಲದ ಸುಳಿಯಲ್ಲಿ ನೇಕಾರರು: ಲಕ್ಷಾಂತರ ರೂ. ಸಾಲ ಮಾಡಿ ವಿದ್ಯುತ್‌ ಚಾಲಿತ ಮಗ್ಗಗಳನ್ನು ಸ್ಥಾಪನೆ ಮಾಡಲಾಗಿದೆ. ಕಳೆದ ಮೂರು ವರ್ಷದಿಂದ ಒಂದಿಲ್ಲೊಂದು ಸಂಕಷ್ಟ ಎದುರಾಗಿ ಸಾಲದ ಕಂತು ಕಟ್ಟಲು ಸಾಧ್ಯವಾಗುತ್ತಿಲ್ಲ, ಮಗ್ಗಗಳು ಚಾಲ್ತಿಯಲ್ಲಿದ್ದಿದ್ದರೇ ಸಾಲದ ಕಂತು ತುಂಬಲು ಅನುಕೂಲವಾಗುತ್ತಿತ್ತು. ಸಾಲದ ಹೊರೆ ದಿನೇ ದಿನೇ ಹೆಚ್ಚುತ್ತಿದೆ. ಬಡ್ಡಿ ತುಂಬಲು ಹೆಣಗಾಡಬೇಕಿದೆ ಎನ್ನುತ್ತಾರೆ ನೇಕಾರರು.

ಸರ್ಕಾರ ಸಹಾಯಕ್ಕೆ ಬರಲಿ: ಮೊದಲನೆ ಅಲೆಯಲ್ಲಿ ಕೇಂದ್ರ ಆರ್ಥಿಕ ಸಹಾಯಧನ ಪ್ಯಾಕೇಜ ಘೋಷಣೆ ಮಾಡಿತ್ತು. ಈ ವರ್ಷ ರಾಜ್ಯ ಸರಕಾರ ಕೂಡಾ ಮಾಡಿದೆ. ಆದರೆ ಎರಡೂ ಸರಕಾರಗಳಿಂದ ನೇಕಾರರಿಗೆ ಯಾವುದೇ ಪ್ರಯೋಜನವಾಗಿಲ್ಲ, ಸಂಕಷ್ಟದ ಸುಳಿಯಲ್ಲಿ ಸಿಕ್ಕಾಕ್ಕಿಕೊಂಡು ಒದ್ದಾಡುತ್ತಿರುವ ನೇಕಾರರ ಕುಟುಂಬಗಳ ಆರ್ಥಿಕ ಸಹಾಯಕ್ಕೆ ಸರಕಾರ ಧಾವಿಸಬೇಕಿದೆ. ನೇಕಾರರಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿ ಆರ್ಥಿಕ ಸಹಾಯ ನೀಡುವ ಮೂಲಕ ನೇಕಾರರ ಕುಟುಂಬಗಳ ಆಸರೆಗೆ ಬರಬೇಕೆಂದು ಕಾರದಗಾ ಗ್ರಾಮದ ದಾದಾಸೋ ಮಹಾದೇವ ಕಾಮಕರ ಒತ್ತಾಯಿಸಿದ್ದಾರೆ.

ಟಾಪ್ ನ್ಯೂಸ್

ಚೀನದಿಂದ ಭಾರತಕ್ಕೆ ಸ್ಯಾಮ್ಸಂಗ್‌ ಸ್ಥಳಾಂತರ ಪೂರ್ಣ

ಚೀನದಿಂದ ಭಾರತಕ್ಕೆ ಸ್ಯಾಮ್ಸಂಗ್‌ ಸ್ಥಳಾಂತರ ಪೂರ್ಣ

3ನೇ ಅಲೆ ತಡೆಗೆ 3 ತಿಂಗಳಲ್ಲಿ ಶೇ. 75 ಲಸಿಕೀಕರಣ ಗುರಿ

3ನೇ ಅಲೆ ತಡೆಗೆ 3 ತಿಂಗಳಲ್ಲಿ ಶೇ. 75 ಲಸಿಕೀಕರಣ ಗುರಿ

ಕನ್ನಡಿಗರ ಹೋರಾಟಕ್ಕೆ ಸಂದ ಮನ್ನಣೆ

ಕನ್ನಡಿಗರ ಹೋರಾಟಕ್ಕೆ ಸಂದ ಮನ್ನಣೆ

ನಾಗೋಡಿಯಲ್ಲಿ ಹೆದ್ದಾರಿ ಕುಸಿತ : ವಾಹನ ಸಂಚಾರಕ್ಕೆ ನಿರ್ಬಂಧ

ನಾಗೋಡಿಯಲ್ಲಿ ಹೆದ್ದಾರಿ ಕುಸಿತ : ವಾಹನ ಸಂಚಾರಕ್ಕೆ ನಿರ್ಬಂಧ

ಸಾಧನೆಗೆ ಯೋಗ ಸಹಕಾರಿ: ಡಾ| ಹೆಗ್ಗಡೆ

ಸಾಧನೆಗೆ ಯೋಗ ಸಹಕಾರಿ: ಡಾ| ಹೆಗ್ಗಡೆ

ಒಲಿಂಪಿಕ್ಸ್‌ : ವನಿತಾ ಹಾಕಿಗೆ ರಾಣಿ ರಾಮ್‌ಪಾಲ್‌ ನಾಯಕಿ

ಒಲಿಂಪಿಕ್ಸ್‌ : ವನಿತಾ ಹಾಕಿಗೆ ರಾಣಿ ರಾಮ್‌ಪಾಲ್‌ ನಾಯಕಿ

ಭವಿಷ್ಯದ ಆ್ಯತ್ಲೆಟಿಕ್ಸ್‌ ಟ್ರ್ಯಾಕ್‌ನಲ್ಲಿ ಅವಳಿ ಬೋಲ್ಟ್‌ಗಳ ಓಟ!

ಭವಿಷ್ಯದ ಆ್ಯತ್ಲೆಟಿಕ್ಸ್‌ ಟ್ರ್ಯಾಕ್‌ನಲ್ಲಿ ಅವಳಿ ಬೋಲ್ಟ್‌ಗಳ ಓಟ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3ನೇ ಅಲೆ ತಡೆಗೆ 3 ತಿಂಗಳಲ್ಲಿ ಶೇ. 75 ಲಸಿಕೀಕರಣ ಗುರಿ

3ನೇ ಅಲೆ ತಡೆಗೆ 3 ತಿಂಗಳಲ್ಲಿ ಶೇ. 75 ಲಸಿಕೀಕರಣ ಗುರಿ

ನಾಗೋಡಿಯಲ್ಲಿ ಹೆದ್ದಾರಿ ಕುಸಿತ : ವಾಹನ ಸಂಚಾರಕ್ಕೆ ನಿರ್ಬಂಧ

ನಾಗೋಡಿಯಲ್ಲಿ ಹೆದ್ದಾರಿ ಕುಸಿತ : ವಾಹನ ಸಂಚಾರಕ್ಕೆ ನಿರ್ಬಂಧ

ಸಾಧನೆಗೆ ಯೋಗ ಸಹಕಾರಿ: ಡಾ| ಹೆಗ್ಗಡೆ

ಸಾಧನೆಗೆ ಯೋಗ ಸಹಕಾರಿ: ಡಾ| ಹೆಗ್ಗಡೆ

ನೀರಿನ ಹೊಂಡಕ್ಕೆ ಬಿದ್ದು ಇಬ್ಬರು ವಿದ್ಯಾರ್ಥಿಗಳು ಸಾವು

ನೀರಿನ ಹೊಂಡಕ್ಕೆ ಬಿದ್ದು ಇಬ್ಬರು ವಿದ್ಯಾರ್ಥಿಗಳು ಸಾವು

yoga

ಜೀವನದ ಚೈತನ್ಯಕ್ಕೆ ಸನಾತನ ಯೋಗ ಪೂರಕ

MUST WATCH

udayavani youtube

ಲಾಕ್ ಡೌನ್ ನಲ್ಲಿ ಅಬಕಾರಿ ಇಲಾಖೆಗೆ ಶೇ.10 ರಷ್ಟು ಹೆಚ್ಚು ಲಾಭ

udayavani youtube

ಲಡಾಖ್ ನಲ್ಲಿ ಬರೋಬ್ಬರಿ 18 ಸಾವಿರ ಅಡಿ ಎತ್ತರದ ಚಳಿಯ ನಡುವೆ ಯೋಗಾಭ್ಯಾಸ

udayavani youtube

LOCKDOWN ರಜೆಯ ಸದುಪಯೋಗ SSLC ವಿದ್ಯಾರ್ಥಿನಿಯಿಂದ ಯೋಗ ಪಾಠ

udayavani youtube

ಬಿಜೆಪಿಯಲ್ಲಿ ಅಲ್ಲೊಂದು ಇಲ್ಲೊಂದು ಗೊಂದಲ ಇದ್ದಿದ್ದು ನಿಜ : ಈಶ್ವರಪ್ಪ

udayavani youtube

HATS OFF : ಇದು ಮಣಿಪಾಲ ಐಟಿ ಕಂಪನಿಯ ಪರಸರ ಕಾಳಜಿ

ಹೊಸ ಸೇರ್ಪಡೆ

ಚೀನದಿಂದ ಭಾರತಕ್ಕೆ ಸ್ಯಾಮ್ಸಂಗ್‌ ಸ್ಥಳಾಂತರ ಪೂರ್ಣ

ಚೀನದಿಂದ ಭಾರತಕ್ಕೆ ಸ್ಯಾಮ್ಸಂಗ್‌ ಸ್ಥಳಾಂತರ ಪೂರ್ಣ

3ನೇ ಅಲೆ ತಡೆಗೆ 3 ತಿಂಗಳಲ್ಲಿ ಶೇ. 75 ಲಸಿಕೀಕರಣ ಗುರಿ

3ನೇ ಅಲೆ ತಡೆಗೆ 3 ತಿಂಗಳಲ್ಲಿ ಶೇ. 75 ಲಸಿಕೀಕರಣ ಗುರಿ

ಕನ್ನಡಿಗರ ಹೋರಾಟಕ್ಕೆ ಸಂದ ಮನ್ನಣೆ

ಕನ್ನಡಿಗರ ಹೋರಾಟಕ್ಕೆ ಸಂದ ಮನ್ನಣೆ

ನಾಗೋಡಿಯಲ್ಲಿ ಹೆದ್ದಾರಿ ಕುಸಿತ : ವಾಹನ ಸಂಚಾರಕ್ಕೆ ನಿರ್ಬಂಧ

ನಾಗೋಡಿಯಲ್ಲಿ ಹೆದ್ದಾರಿ ಕುಸಿತ : ವಾಹನ ಸಂಚಾರಕ್ಕೆ ನಿರ್ಬಂಧ

ಸಾಧನೆಗೆ ಯೋಗ ಸಹಕಾರಿ: ಡಾ| ಹೆಗ್ಗಡೆ

ಸಾಧನೆಗೆ ಯೋಗ ಸಹಕಾರಿ: ಡಾ| ಹೆಗ್ಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.