ಮನೆ ಜಿಪಿಎಸ್‌ಗೆ ಲಂಚ-ಪ್ರತಿಭಟನೆ


Team Udayavani, Dec 3, 2020, 2:37 PM IST

ಮನೆ ಜಿಪಿಎಸ್‌ಗೆ ಲಂಚ-ಪ್ರತಿಭಟನೆ

ಗೋಕಾಕ: ಮಳೆ ಹಾಗೂ ಪ್ರವಾಹದಿಂದ ಕುಸಿದ ಮನೆಗಳ ಜಿ.ಪಿ.ಎಸ್‌ ಮಾಡಿ ವರದಿ ಸಲ್ಲಿಸಲು ಜಿ.ಪಂ ಇಂಜಿನಿಯರ್‌ಗಳು ರೈತರಿಂದ ಲಂಚ ಕೇಳಿ, ಅಸಭ್ಯವಾಗಿ ವರ್ತಿಸುತ್ತಿದ್ದಾರೆಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬುಧವಾರ ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ರೈತ ಸಂಘದ ನೂರಾರು ಕಾರ್ಯಕರ್ತರು ಅಸಭ್ಯವಾಗಿ ವರ್ತಿಸಿದ ಜಿ.ಪಂ ಇಂಜಿನಿಯರ್‌ ಪ್ರತಿಭಟನಾ ಸ್ಥಳಕ್ಕೆ ಬಂದು ರೈತರ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದುಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಿ.ಪಂ ಎಇಇ ಉದಯಕುಮಾರ ಕಾಂಬ್ಳೆ ಅವರು, ತಪ್ಪಿತಸ್ಥ ಇಂಜಿನಿಯರ್‌ ಮೇಲೆ ಕ್ರಮ ಕೈಗೊಳ್ಳಲು ಉನ್ನತ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು. ಬಾಕಿ ಉಳಿದ ಎಲ್ಲ ರೈತರ ಬಿದ್ದ ಮನೆಗಳ ಜಿಪಿಎಸ್‌ನ್ನು ಮಾಡಿಕೊಡಲು ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿ ರೈತರ ಕ್ಷಮೆ ಕೇಳಿದ ನಂತರ ರೈತರು ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದು, ತಹಶೀಲ್ದಾರ ಕಚೇರಿಗೆ ತೆರಳಿ ರೈತರೊಂದಿಗೆ ಅಸಭ್ಯವಾಗಿ ವರ್ತಿಸಿ, ಲಂಚ ಕೇಳಿದ ಇಂಜಿನಿಯರ್‌ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ತಹಶೀಲ್ದಾರ ಮುಖಾಂತರ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು.

2019 -20 ನೇ ಸಾಲಿನಲ್ಲಿ ಘಟಪ್ರಭಾ ನದಿಗೆ ಉಂಟಾದ ಪ್ರವಾಹಕ್ಕೆ ನದಿಯ ದಡದ ರೈತರು ತಮ್ಮ ಮನೆ ಕಳೆದುಕೊಂಡು ಗುಡಿ-ಗುಂಡಾರ ಹಾಗೂ ಧರ್ಮಶಾಲೆಗಳಲ್ಲಿ ವಾಸಿಸುತ್ತಿದ್ದಾರೆ. 2 ವರ್ಷಗಳು ಕಳೆದರೂ ಸಹ ಇನ್ನೂವರೆಗೆ ಮನೆ ಕಟ್ಟಲು ಸರಕಾರದಿಂದ ಪರಿಹಾರ ಬಂದಿಲ್ಲ. ಇಂತಹ ಸಂದರ್ಭದಲ್ಲಿ ರೈತರಿಗೆ ಅನುಕೂಲ ಮಾಡಬೇಕಾದ ಜಿ.ಪಂ ಇಂಜಿನಿಯರ್‌ ರೈತರಿಂದ ಮನೆ ಜಿಪಿಎಸ್‌ ಮಾಡಲು ಲಂಚ ಕೇಳುತ್ತಿದ್ದು, ಹಣ ಕೊಡದವರ ಮನೆಗಳನ್ನು ಲಾಗ್‌ ಇನ್‌ ಮಾಡದೆ ಕೈ ಬಿಟ್ಟಿದ್ದಾರೆ. ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಸಂಘಟನೆಯ ರಾಜ್ಯ ಸಂಚಾಲಕ ಗಣೇಶ ಈಳಿಗೇರ, ರಮೇಶ ಬೂದಿಗೊಪ್ಪ, ಮುತ್ತೆಪ್ಪ ಕುರುಬರ,ಶಂಕರ ಹಡಗಿನಾಳ, ಮಹಾವೀರ ದಪ್ಪಾದುಳಿ, ಶಿವಾನಂದ ಇಳಿಗೇರ, ರಾಜು ಜಿಗತಮ್ಮನವರ, ಸಂಜುದೇಮನ್ನವರ, ಆಕಾಶ ಬಂಡಿ, ಮಾರುತಿ ಸನದಿ, ವಿಠಲಮಹಾಕಾಳಿ, ಮಲೀಕ ಬಳಿಗಾರ, ಸಾಗರ ಬಂಡಿ, ಸಿದ್ದಲಿಂಗ ಪೂಜಾರಿ, ಮಲ್ಲಿಕಾರ್ಜುನ ಇಳಿಗೇರ, ದುರ್ಗಪ್ಪ ಬಂಡಿವಡ್ಡರ ಸೇರಿದಂತೆ ಅನೇಕರು ಇದ್ದರು.

ಟಾಪ್ ನ್ಯೂಸ್

Arrest of another youth who had links with suspected militants

ಶಂಕಿತ ಉಗ್ರರ ಸಂಪರ್ಕ ಹೊಂದಿದ್ದ ಮತ್ತೋರ್ವ ಯುವಕನ ಬಂಧನ

ಕಮರಿಗೆ ಬಿದ್ದ ಟೆಂಪೋ ಟ್ರಾವೆಲರ್; ಏಳು ಮಂದಿ ಪ್ರವಾಸಿಗರ ಸಾವು, ಹತ್ತು ಜನರಿಗೆ ಗಾಯ

ಕಮರಿಗೆ ಬಿದ್ದ ಟೆಂಪೋ ಟ್ರಾವೆಲರ್; ಏಳು ಮಂದಿ ಪ್ರವಾಸಿಗರ ಸಾವು, ಹತ್ತು ಜನರಿಗೆ ಗಾಯ

4

ಶಿರಸಿ: ಪೋಕ್ಸೋ ಕಾಯ್ದೆ ಪ್ರಕರಣದಲ್ಲಿನ ಆರೋಪಿ ಬಂಧನ

2

ಕುಣಿಗಲ್: ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು

ಜೂಲನ್‌ ಗೋಸ್ವಾಮಿ: 10,000 ಎಸೆತಗಳನ್ನಿಕ್ಕಿದ ವಿಶ್ವದ ಮೊದಲ ಬೌಲರ್‌ 

ಜೂಲನ್‌ ಗೋಸ್ವಾಮಿ: 10,000 ಎಸೆತಗಳನ್ನಿಕ್ಕಿದ ವಿಶ್ವದ ಮೊದಲ ಬೌಲರ್‌ 

ದೀಪ್ತಿ ಶರ್ಮ ರನೌಟ್‌ ಪ್ರಕರಣ: ನಾವೇನೂ ಅಪರಾಧ ಮಾಡಿಲ್ಲ: ಹರ್ಮನ್‌ಪ್ರೀತ್‌ ಕೌರ್‌

ದೀಪ್ತಿ ಶರ್ಮ ರನೌಟ್‌ ಪ್ರಕರಣ: ನಾವೇನೂ ಅಪರಾಧ ಮಾಡಿಲ್ಲ: ಹರ್ಮನ್‌ಪ್ರೀತ್‌ ಕೌರ್‌

ಕಾಶ್ಮೀರ ಶಾಲೆಗಳಲ್ಲಿ ಭಜನೆ, ಸೂರ್ಯ ನಮಸ್ಕಾರ ನಿಷೇಧಕ್ಕೆ ಒತ್ತಾಯ

ಕಾಶ್ಮೀರ ಶಾಲೆಗಳಲ್ಲಿ ಭಜನೆ, ಸೂರ್ಯ ನಮಸ್ಕಾರ ನಿಷೇಧಕ್ಕೆ ಒತ್ತಾಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

ಮಕ್ಕಳನ್ನು ಸಮಾಜದ ಆಸ್ತಿಯಾಗಿಸಿ: ಸತೀಶ

ಭೀಕರ ಅಪಘಾತ: ಎಎಸ್ಐ ಪತ್ನಿ, ಮಗಳು ಸೇರಿ ನಾಲ್ವರು ದುರ್ಮರಣ

ಬೆಳಗಾವಿ: ಭೀಕರ ಅಪಘಾತದಲ್ಲಿ ಎಎಸ್ಐ ಪತ್ನಿ, ಮಗಳು ಸೇರಿ ನಾಲ್ವರು ದುರ್ಮರಣ

8

ನವರಾತ್ರಿ ಉತ್ಸವ ತಂದಿದೆ ನವಚೈತನ್ಯ

1-ddadasdad

ಉದಯವಾಣಿ ವರದಿಗಾರ ಸಿ.ವೈ.ಮೆಣಸಿನಕಾಯಿ ಅವರಿಗೆ ಕೆಂಪೆಗೌಡ ಸೇವಾರತ್ನ ಪ್ರಶಸ್ತಿ

ಬೆಳಗಾವಿ ಎಸ್ ಪಿ ಹೆಸರಲ್ಲಿ ನಕಲಿ ಖಾತೆ: ಹಣ ಕೇಳುತ್ತಿದ್ದಾರೆ ಖದೀಮರು

ಬೆಳಗಾವಿ ಎಸ್ ಪಿ ಹೆಸರಲ್ಲಿ ನಕಲಿ ಇನ್ಸ್ಟ್ರಾಗ್ರಾಂ ಖಾತೆ: ಹಣ ಕೇಳುತ್ತಿದ್ದಾರೆ ಖದೀಮರು

MUST WATCH

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

udayavani youtube

ದೇವ್ರೇ ನನಗೆ 25 ಕೋಟಿ ಬಹುಮಾನ ಬರಬಾರದಿತ್ತು…

udayavani youtube

ಪತ್ರಿ ವರ್ಷ ಈ ಬೆಣ್ಣೆಹಣ್ಣು ಮರದಲ್ಲಿ 300 ರಿಂದ 400 ಹಣ್ಣುಗಳು ಸಿಗುತ್ತದೆ

udayavani youtube

ಸೆ. 26ರಿಂದ ಅ. 5 ವರೆಗೆ ವೈಭವದ ಉಚ್ಚಿಲ ದಸರಾ

ಹೊಸ ಸೇರ್ಪಡೆ

Arrest of another youth who had links with suspected militants

ಶಂಕಿತ ಉಗ್ರರ ಸಂಪರ್ಕ ಹೊಂದಿದ್ದ ಮತ್ತೋರ್ವ ಯುವಕನ ಬಂಧನ

ಕಮರಿಗೆ ಬಿದ್ದ ಟೆಂಪೋ ಟ್ರಾವೆಲರ್; ಏಳು ಮಂದಿ ಪ್ರವಾಸಿಗರ ಸಾವು, ಹತ್ತು ಜನರಿಗೆ ಗಾಯ

ಕಮರಿಗೆ ಬಿದ್ದ ಟೆಂಪೋ ಟ್ರಾವೆಲರ್; ಏಳು ಮಂದಿ ಪ್ರವಾಸಿಗರ ಸಾವು, ಹತ್ತು ಜನರಿಗೆ ಗಾಯ

4

ಶಿರಸಿ: ಪೋಕ್ಸೋ ಕಾಯ್ದೆ ಪ್ರಕರಣದಲ್ಲಿನ ಆರೋಪಿ ಬಂಧನ

3

ಹುಣಸೂರು: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಲಕ್ಷ್ಮಣತೀರ್ಥ ನದಿಯಲ್ಲಿ ಪತ್ತೆ

2

ಕುಣಿಗಲ್: ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.