ಬಸ್‌ ಹಾಯ್ದು ಬಾಲಕ ಸಾವು

•ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ •ರಸ್ತೆ ತಡೆ ನಿರ್ಮಿಸುವಂತೆ ಗ್ರಾಮಸ್ಥರ ಒತ್ತಾಯ

Team Udayavani, Jun 10, 2019, 2:04 PM IST

ಚಿಕ್ಕೋಡಿ: ವೇಗ ತಡೆ ನಿರ್ಮಿಸುವಂತೆ ಒತ್ತಾಯಿಸಿ ಹೆದ್ದಾರಿಯಲ್ಲಿ ಬಾಲಕನ ಶವವಿಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಚಿಕ್ಕೋಡಿ: ಬಸ್‌ ಹಾಯ್ದು ಬಾಲಕನೋರ್ವ ಸ್ಥಳದಲ್ಲಿಯೇ ಮೃತಟ್ಟಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ರಸ್ತೆ ತಡೆ ನಿರ್ಮಿಸುವಂತೆ ರಸ್ತೆಯಲ್ಲೇ ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ರವಿವಾರ ನಡೆದಿದೆ.

ಗೋಕಾಕ ತಾಲೂಕಿನ ಕಲ್ಲೋಳಿ ಗ್ರಾಮದ ಶಾನೂರ ತುಕಾರಾಮ ಉಮರಾಣಿ (10) ಮೃತಪಟ್ಟ ಬಾಲಕ. ಈತನು ಶಾಲೆಯ ರಜೆಗೆಂದು ಅಜ್ಜಿಗೆ ಮನೆಗೆ ಬಂದಿದ್ದನು. ಎರಡು ಮೂರು ದಿನಗಳಲ್ಲಿ ಮರಳಿ ಸ್ವಗ್ರಾಮಕ್ಕೆ ತೆರಳುವಷ್ಟರಲ್ಲಿಯೇ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದು ಕುಟುಂಬಸ್ಥರಲ್ಲಿ ಹಾಗೂ ಗ್ರಾಮಸ್ಥರಲ್ಲಿ ದು:ಖ ಮಡುಗಟ್ಟಿದೆ.

ಉಮರಾಣಿ ಗ್ರಾಮದ ಮಧ್ಯೆ ಹಾದು ಹೋಗಿರುವ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಗೆ ಗ್ರಾಮದ ಹತ್ತಿರ ವೇಗ ತಡೆ ಹಾಕುವಂತೆ ಹಲವು ಬಾರಿ ಮನವಿ ಮಾಡಿದರೂ ಕೂಡಾ ಸರ್ಕಾರ ನಿರ್ಲಕ್ಷ ಮಾಡಿದೆ. ಹೀಗಾಗಿ ಗ್ರಾಮದ ಬಳಿ ವಾಹನಗಳು ಅತಿಯಾದ ವೇಗದಿಂದ ಚಲಿಸುವ ಕಾರಣದಿಂದ ವಾರಕ್ಕೊಮ್ಮೆ ರಸ್ತೆ ಅಪಘಾತ ಸಂಭವಿಸಿ ಪ್ರಾಣ ಹಾನಿಯಾಗುತ್ತಿದೆ. ಆದರೂ ಸರ್ಕಾರ ವೇಗ ತಡೆ ಹಾಕದೇ ಇರುವುದು ದುರ್ದೈವದ ಸಂಗತಿಯಾಗಿದೆ ಎಂದು ಗ್ರಾಮಸ್ಥರು ರಸ್ತೆ ಬಂದ್‌ ಮಾಡಿ ಟೈಯರಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಜಿಪಂ ಸದಸ್ಯ ಪವನ ಕತ್ತಿ, ಮುಖಂಡರಾದ ಮುರಗೇಪ್ಪ ಅಡಿಸೇರಿ, ಲಕ್ಷ್ಮಣ ಪೂಜೇರಿ, ಕಲಗೌಡ ಪಾಟೀಲ, ಧನಪಾಲ ಭೀಮನಾಯಿಕ, ಸಂಜು ಜಿಡ್ಡಿಮನಿ, ಅಜಿತ್‌ ಕಾಂಬಳೆ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು. ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ