Udayavni Special

ಟೀಕೆಗೆ ಅಭಿವೃದ್ಧಿಯೇ ಉತ್ತರ: ಪ್ರಕಾಶ ಹುಕ್ಕೇರಿ


Team Udayavani, Mar 10, 2019, 10:46 AM IST

10-march-15.jpg

ಚಿಕ್ಕೋಡಿ: ನಮ್ಮ ಬಗ್ಗೆ ವಿರೋಧ ಪಕ್ಷದವರು ಎಷ್ಟೇ ಟೀಕಿಸಿದರೂ ನಾನು ಟೀಕೆ ಮಾಡಲು ಹೋಗುವುದಿಲ್ಲ. ಟೀಕೆಗೆ ಅಭಿವೃದ್ಧಿ ಕೆಲಸದ ಮೂಲಕವೇ ಉತ್ತರ ಕೋಡುತ್ತೇನೆ ಎಂದು ಸಂಸದ ಪ್ರಕಾಶ ಹುಕ್ಕೇರಿ ಹೇಳಿದರು. ತಾಲೂಕಿನ ನೇಜ ಗ್ರಾಮದಲ್ಲಿ 2.48 ಕೋಟಿ ವೆಚ್ಚದಲ್ಲಿ ಕೆರೆ ತುಂಬಿಸುವ ಯೋಜನೆ ಹಾಗೂ ನಾಗರಾಳ ಕ್ರಾಸ್‌-ನೇಜ ರಸ್ತೆ ರೂ. 1.50 ಕೋಟಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಾಗರಾಳ ಕೆರೆಗೆ ನೀರು ತುಂಬಿಸುವ ಯೋಜನೆಗೆ ರೂ. 2.48 ಕೋಟಿ ಹಣ ಮಂಜೂರಾಗಿದೆ. ದೂಧಗಂಗಾ ನದಿಯಿಂದ ಸುಮಾರು 7.5 ಕಿಮೀ 12 ಇಂಚಿನ ಪೈಪ್‌ ಲೈನ್‌ ಅಳವಡಿಸಲಾಗುತ್ತಿದೆ. ಈ ಯೋಜನೆ ಅನುಷ್ಠಾನಕ್ಕೆ ವಿರೋಧ ಪಕ್ಷದ ಕೆಲವರು ಅಡ್ಡಿಪಡಿಸಿದ್ದರು. ಇನ್ನು ಮೇಲೆ ಈ ಯೋಜನೆಗೆ ಯಾರೇ ಅಡ್ಡಿಪಡಿಸಿದರೂ ಕೆಲಸ ನಿಲ್ಲುವುದಿಲ್ಲ. ಏಪ್ರಿಲ್‌ 27ರ ಒಳಗಾಗಿ ಕಾಮಗಾರಿ ಮುಕ್ತಾಯವಾಗಿ ಕೆರೆಗೆ ನೀರು ಹರಿಸಲಾಗುತ್ತದೆ ಎಂದರು.

ಜೋಡಕುರಳಿ, ಬಾನಂತಿಕೋಡಿ, ಕಾಡಾಪುರ, ಮಲಿಕವಾಡ, ನೇಜ, ನಾಯಿಂಗ್ಲಜ, ಶಿರಗಾಂವ, ಪಟ್ಟಣಕುಡಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಈಗಾಗಲೇ ಅನುಷ್ಠಾನವಾಗಿವೆ. ವಾಳಕಿ ಕೆರೆ ತುಂಬಿಸುವ ಯೋಜನೆಯೂ ಮಂಜೂರಾತಿ ಹಂತದಲ್ಲಿದ್ದು, ಅದಕ್ಕೂ ಶೀಘ್ರದಲ್ಲಿಯೇ ಮಂಜೂರಿ ಪಡೆದು ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ನೇಜ ಗ್ರಾಮಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಗೆ ಮೂಲ ಸೌಕರ್ಯಗಳನ್ನು ನೀಡಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧೆ ವಿಚಾರವಾಗಿ ಕ್ಷೇತ್ರದ ಎಲ್ಲ ಜನರ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದೇನೆ ಎಂದರು.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಎರಡು ಕೇಂದ್ರೀಯ ವಿದ್ಯಾಲಯ ಮಂಜೂರಾಗಿವೆ. ಒಂದು ಯಶವಂತಪುರ ಮತ್ತೊಂದು ಸದಲಗಾ ಪಟ್ಟಣಕ್ಕೆ ಮಂಜೂರಾಗಿವೆ. ಕೇಂದ್ರೀಯ ವಿದ್ಯಾಲಯಗಳು ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಇವೆ. ಕೇಂದ್ರ ಸರ್ಕಾರದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ನನ್ನ ಪ್ರಯತ್ನದಿಂದ ರಾಜ್ಯದಲ್ಲಿ ಹೋಬಳಿ ಮಟ್ಟದ ಸದಲಗಾ ಪಟ್ಟಣಕ್ಕೆ ಪ್ರಥಮ ಬಾರಿಗೆ ಕೇಂದ್ರೀಯ ವಿದ್ಯಾಲಯ ದೊರೆತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಸುದರ್ಶನ ಖೋತ, ಬಾಬಣ್ಣ ಖೋತ, ವಿ.ಎಸ್‌.ಮಾಂಜ್ರೇಕರ, ಗ್ರಾ.ಪಂ ಅಧ್ಯಕ್ಷೆ ಅಪ್ಪಾಸಾಬ ಸುಟ್ಟಟ್ಟಿ, ಪ್ರಕಾಶ ಮಗದುಮ್ಮ, ಅರುಣ ಬೋನೆ, ಕೆ.ವಿ.ಜೋಶಿ, ಪಿ.ಬಿ.ಪಾಟೀಲ, ರಾಜೀವ ಪಾಟೀಲ, ಸಂತೋಷ ಪಾಟೀಲ, ದಿಲೀಪ ಶಿರಸಟ್ಟಿ, ಶಕೀಲ್‌ ಬೇಗ, ಬಾಳು ಕುರಾಡೆ, ನರು ಮಾಳಿ, ಸುನೀಲ ಚಿಂಚಣೆ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಸಿದ್ದರಾಮಯ್ಯ

ಕುರ್ಚಿ ಉಳಿಸಿಕೊಳ್ಳಲು ಸಿಎಂ ಆರ್ ಎಸ್ಎಸ್ ಹೊಗಳುತ್ತಿದ್ದಾರೆ: ಸಿದ್ದರಾಮಯ್ಯ

ಆಯುಧಪೂಜೆ-ವಿಜಯದಶಮಿ ಎಫೆಕ್ಟ್

ಆಯುಧಪೂಜೆ-ವಿಜಯದಶಮಿ ಎಫೆಕ್ಟ್: ಎರಡೇ ದಿನದಲ್ಲಿ 6,200-6,500 ಟನ್‌ ತ್ಯಾಜ್ಯ ಸೃಷ್ಟಿ

kotigobba 3

ಕೋಟಿಗೊಬ್ಬ-3 ಚಿತ್ರ ವಿಮರ್ಶೆ: ಸತ್ಯ ಶೋಧನೆಯಲ್ಲಿ ದೊರೆತ ಶಿವ ಸಾಂಗತ್ಯ

ಅಲ್ಪಸಂಖ್ಯಾತ ನಾಯಕರ ʼರಾಜಕೀಯ ನರಮೇಧʼಕ್ಕೆ ಯಾರು ಕಾರಣವೆಂದು ಜನರಿಗೆ ಗೊತ್ತಾಗಲಿ: ಎಚ್ ಡಿಕೆ

ಅಲ್ಪಸಂಖ್ಯಾತ ನಾಯಕರ ʼರಾಜಕೀಯ ನರಮೇಧʼಕ್ಕೆ ಯಾರು ಕಾರಣವೆಂದು ಜನರಿಗೆ ಗೊತ್ತಾಗಲಿ: ಎಚ್ ಡಿಕೆ

rahul dravid

ಕೊನೆಗೂ ಫಲ ನೀಡಿತು ಗಂಗೂಲಿ ಪ್ರಯತ್ನ: ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

ಐಪಿಎಲ್ ಟ್ರೋಫಿಯ ಜೊತೆ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ಮಾಹಿ!

ಐಪಿಎಲ್ ಟ್ರೋಫಿಯ ಜೊತೆ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ಮಾಹಿ!

incident held at mangalore

ಮಂಗಳೂರು: ಪಾರ್ಟಿ ಮಾಡಲು ಹೋದ ಗೆಳೆಯರ ನಡುವೆ ಕಿರಿಕ್‌: ಕೊಲೆಯಲ್ಲಿ ಅಂತ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

belagavi news

ಕಾಂಗ್ರೆಸ್‌ ದುಸ್ಥಿತಿ ಅನಾವರಣ: ಅಶ್ವತ್ಥನಾರಾಯಣ

Guest lecturer

ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ನೀಡಿ

Development works

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ghgtyt

ಅಶೋಕ್‌ ಪೂಜಾರಿ ಕಾಂಗ್ರೆಸ್‌ ಸೇರ್ಪಡೆ

xfgdtdr

ಬಿಜೆಪಿಯವರಿಗೆ ಬಿಎಸ್‌ವೈ ಮೇಲೆ ಪ್ರೀತಿ ಉಳಿದಿಲ್ಲ : ಸತೀಶ ಜಾರಕಿಹೊಳಿ

MUST WATCH

udayavani youtube

ಯಾರಿಗೆ ಒಲಿಯುತ್ತೆ IPL ಟ್ರೋಫಿ|UDAYAVANI NEWS BULLETIN|15/10/2021

udayavani youtube

ನವರಾತ್ರಿ ಸಂಭ್ರಮ: ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭಕ್ತರ ದಂಡು

udayavani youtube

ಅಂಬಾರಿ ಹೊರುವ ಅಭಿಮನ್ಯುಗೆ ಮತ್ತು ದಸರಾ ಗಜಪಡೆಗೆ ಬಣ್ಣದ ಅಲಂಕಾರ..

udayavani youtube

ಇದೇ ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಅಂಬಾರಿ‌ಉತ್ಸವ ಮೂರ್ತಿ ಮೆರವಣಿಗೆ…

udayavani youtube

ಮೈಸೂರು ದಸರಾ: ಅಭಿಮನ್ಯು ಕಂಡರೆ ಕಾಡಾನೆಗೆ ಮೈನಡುಕ!

ಹೊಸ ಸೇರ್ಪಡೆ

ಸಿದ್ದರಾಮಯ್ಯ

ಕುರ್ಚಿ ಉಳಿಸಿಕೊಳ್ಳಲು ಸಿಎಂ ಆರ್ ಎಸ್ಎಸ್ ಹೊಗಳುತ್ತಿದ್ದಾರೆ: ಸಿದ್ದರಾಮಯ್ಯ

ಆಯುಧಪೂಜೆ-ವಿಜಯದಶಮಿ ಎಫೆಕ್ಟ್

ಆಯುಧಪೂಜೆ-ವಿಜಯದಶಮಿ ಎಫೆಕ್ಟ್: ಎರಡೇ ದಿನದಲ್ಲಿ 6,200-6,500 ಟನ್‌ ತ್ಯಾಜ್ಯ ಸೃಷ್ಟಿ

5

ಜನರಲ್ಲಿ ಸಾತ್ವಿಕ ಶಕ್ತಿ ಬೆಳೆಸಿ: ಬಬಲಾದ ಶ್ರೀ ಶಿವಮೂರ್ತಿ ಶಿವಾಚಾರ್ಯರು

kotigobba 3

ಕೋಟಿಗೊಬ್ಬ-3 ಚಿತ್ರ ವಿಮರ್ಶೆ: ಸತ್ಯ ಶೋಧನೆಯಲ್ಲಿ ದೊರೆತ ಶಿವ ಸಾಂಗತ್ಯ

4

ಭಕ್ತಿ-ಭಾವದ ಮಧ್ಯೆ ಸಡಗರದ ದಸರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.