Udayavni Special

ರೈತರ ಬದುಕು ಕಸಿದ ಕೊರೊನಾ ಕರ್ಫ್ಯೂ


Team Udayavani, May 1, 2021, 5:27 PM IST

yhjyuy

ವರದಿ : ಭೈರೋಬಾ ಕಾಂಬಳೆ

ಬೆಳಗಾವಿ: ಕಳೆದ ವರ್ಷ ಲಾಕ್‌ಡೌನ್‌ದಿಂದಾಗಿ ತರಕಾರಿ ಬೆಲೆ ಕುಗ್ಗಿ ಸಂಕಷ್ಟಕ್ಕೀಡಾಗಿದ್ದ ರೈತರ ಬದುಕನ್ನು ಈ ವರ್ಷವೂ ಕೊರೊನಾ ಕರ್ಫ್ಯೂ ಕಸಿದುಕೊಂಡಿದೆ. ಇಂಥ ದಯನೀಯ ಸ್ಥಿತಿಯಲ್ಲಿರುವ ರೈತರ ಬದುಕಿಗೆ ಕರ್ಫ್ಯೂ ಕೊಳ್ಳೆ ಇಟ್ಟಿದೆ.

ಹೆಚ್ಚುತ್ತಿರುವ ಕೊರೊನಾ ಸೋಂಕಿತರಿಂದಾಗಿ ಇಡೀ ರಾಜ್ಯದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಸರ್ಕಾರ ಕಳೆದ ಒಂದು ವಾರದಿಂದ ವಿ ಧಿಸಿರುವ ಕೊರೊನಾ ಕರ್ಫ್ಯೂದಿಂದಾಗಿ ರೈತರು ಕಂಗಾಲಾಗಿದ್ದಾರೆ. ದಿಢೀರ್‌ ವಿಧಿ ಸಿರುವ ನಿರ್ಬಂಧದಿಂದಾಗಿ ತೋಟಗಾರಿಕೆ ಬೆಳೆಗಳಾದ ಹೂ, ಹಣ್ಣು, ತರಕಾರಿ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಸತತ ನಷ್ಟ ಅನುಭವಿಸುತ್ತಿರುವ ರೈತರನ್ನು ಈ ವರ್ಷವೂ ಕಂಗಾಲಾಗಿಸಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ)ಯಲ್ಲಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಮಾತ್ರ ಅವಕಾಶ ನೀಡಿದ್ದರಿಂದ ಮಾರಾಟಕ್ಕೆ ಹಾಗೂ ಖರೀದಿಗೆ ಸಮಯವೇ ಇಲ್ಲದಿರುವುದು ರೈತರು, ವರ್ತಕರನ್ನು ಚಿಂತೆಗೀಡು ಮಾಡಿದೆ.

ಬೆಳಗ್ಗೆ ಕೇವಲ ನಾಲ್ಕು ಗಂಟೆ ಅವ ಧಿಗೆ ಮಾತ್ರ ಮಾರಾಟ ಹಾಗೂ ಖರೀದಿಗೆ ಅವಕಾಶ ನೀಡಿದ್ದರಿಂದ ಬಹಳ ತೊಂದರೆ ಆಗುತ್ತಿದೆ. ಕೇವಲ ಚಿಲ್ಲರೆ ವ್ಯಾಪಾರಸ್ಥರು ಮಾತ್ರ ಖರೀದಿಗೆ ಬರುತ್ತಿರುವುದರಿಂದ ಹೋಲ್‌ಸೇಲ್‌ ವ್ಯಾಪಾರಸ್ಥರಿಗೆ ಸಮಯವೇ ಸಿಗುತ್ತಿಲ್ಲ. ಹೀಗಾಗಿ ಬಂದ ಕೃಷಿ ಉತ್ಪನ್ನವೆಲ್ಲ ಮಾರಾಟವಾಗದೇ ಉಳಿಯುತ್ತಿರುವುದು ಮಾರುಕಟ್ಟೆಯಲ್ಲಿ ದೊಡ್ಡ ಸಮಸ್ಯೆ ಆಗಿದೆ. ಗೋವಾ, ಮಹಾರಾಷ್ಟ್ರ, ಹೆ„ದ್ರಾಬಾದ್‌, ಗದಗ, ಶಿವಮೊಗ್ಗ, ಕೊಪ್ಪಳ, ದಾವಣಗೆರೆ ಸೇರಿದಂತೆ ವಿವಿಧ ಕಡೆಗೆ ಬೆಳಗಾವಿ ಮಾರುಕಟ್ಟೆಯಿಂದ ತರಕಾರಿ ಹೋಗುತ್ತದೆ. ಸದ್ಯ ಗೋವಾ, ಮಹಾರಾಷ್ಟ್ರ ಸಂಪೂರ್ಣ ಬಂದ್‌ ಆಗಿದ್ದರಿಂದ ತರಕಾರಿ ಮಾರಾಟ ಮಾಡುವುದಾದರೆ ಎಲ್ಲಿಗೆ ಎಂಬ ಚಿಂತೆ ವರ್ತಕರನ್ನು ಕಾಡಿದರೆ, ಬೆಳೆದ ಕೃಷಿ ಉತ್ಪನ್ನಗಳನ್ನು ಖರೀದಿಸುವವರೇ ಇಲ್ಲದಿದ್ದರೆ ಮಾರಾಟ ಮಾಡುವುದಾದರೂ ಹೇಗೆ ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ. ಹೀಗಾಗಿ ಪ್ರತಿ ನಿತ್ಯ ಟನ್‌ಗಟ್ಟಲೇ ತರಕಾರಿ ಮಾರಾಟವಾಗದೇ ಕೊಳೆಯುತ್ತಿದೆ.

ರೈತರು ಹಳ್ಳಿಯಿಂದ ಮಾರುಕಟ್ಟೆಗೆ ಟೆಂಪೋ, ಟ್ರ್ಯಾಕ್ಟರ್‌, ಟಾಟಾ ಏಸ್‌ ವಾಹನ ತುಂಬಿಕೊಂಡು ತರಕಾರಿ ತರುತ್ತಿದ್ದಾರೆ. ಆದರೆ ದಲ್ಲಾಳಿಗಳು ಖರೀದಿಸಲು ಅಷ್ಟೊಂದು ಉತ್ಸಾಹ ತೋರುತ್ತಿಲ್ಲ. ಬೆಲೆ ಪಾತಾಳಕ್ಕೆ ಕುಸಿದಿದ್ದರಿಂದ ರೈತರು ದಿಕ್ಕು ತೋಚದಂತಾಗಿದ್ದಾರೆ. ಕೋತಂಬರಿ, ಹಸಿ ಮೆಣಸಿನಕಾಯಿ, ಭೇಂಡಿ, ನವಲಕೋಲು, ಫ್ಲಾವರ್‌, ಗಜ್ಜರಿ, ಹೀರೇಕಾಯಿ, ಹಾಗಲಕಾಯಿ, ಬದನೆಕಾಯಿ, ಆಲೂಗಡ್ಡೆ, ಬಿನ್ಸ್‌, ಟೊಮೆಟೋ, ಮೂಲಂಗಿ ಸೇರಿದಂತೆ ಹೀಗೆ ಅನೇಕ ತರಕಾರಿ ದರ ಕುಸಿತಗೊಂಡಿದೆ.

ಟಾಪ್ ನ್ಯೂಸ್

Reliance jio offers discounts to retain users during corona pandemic

ಕೋವಿಡ್ 19 : ಗ್ರಾಹಕ ಸ್ನೇಹಿ ಯೋಜನೆಯೊಂದನ್ನು ಘೋಷಿಸಿದ ಜಿಯೋ

ಕಾಪು ಬಳಿ ಅಪಘಾತಕ್ಕೀಡಾದ ವೆಸೆಲ್ ಟಗ್ :ಇನ್ನೂ ಆರಂಭಗೊಳ್ಳದ ರಕ್ಷಣಾ ಕಾರ್ಯಾಚರಣೆ !

ಕಾಪು ಬಳಿ ಅಪಘಾತಕ್ಕೀಡಾದ ವೆಸೆಲ್ ಟಗ್ :ಇನ್ನೂ ಆರಂಭಗೊಳ್ಳದ ರಕ್ಷಣಾ ಕಾರ್ಯಾಚರಣೆ !

covid effect at chikkamagalore

ಚಿಕ್ಕಮಗಳೂರು : ನಿಯಮ ಉಲ್ಲಂಘಿಸಿ ಅಂತ್ಯಸಂಸ್ಕಾರಕ್ಕೆ ಹೋದವರಿಗೆ ಕೋವಿಡ್ ದೃಢ

cats

ಫೇಸ್ ಬುಕ್ ಸ್ನೇಹಿತನಿಂದ ಹೀನ ಕೃತ್ಯ : ಮಹಿಳೆ ಮೇಲೆ 25 ಕಾಮುಕರಿಂದ ಅತ್ಯಾಚಾರ

cats

ದೆಹಲಿಯಲ್ಲಿ ಮತ್ತೆ ಒಂದು ವಾರ ಲಾಕ್ ಡೌನ್ ಮುಂದುವರಿಕೆ

Untitled-1

ಜೋರಾದ ಗಾಳಿ-ಮಳೆಗೆ ಗೋಡೆ ಕುಸಿದು ಅಜ್ಜಿ-ಮೊಮ್ಮಗ ಸಾವು

ಬದ್ಗದಸ್ದ

ಚಿಕ್ಕಮಗಳೂರಿನಲ್ಲೂ ಆಕ್ಸಿಜನ್ ಬಸ್ ಸೇವೆ ಪ್ರಾರಂಭ : ಡಿಸಿಎಂ ಸವದಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10 Cryogenic Oxygen Tanker

10 ಕ್ರಯೋಜನಿಕ್‌ ಆಮ್ಲಜನಕ ಟ್ಯಾಂಕರ್‌

ಕಾಪು ಬಳಿ ಅಪಘಾತಕ್ಕೀಡಾದ ವೆಸೆಲ್ ಟಗ್ :ಇನ್ನೂ ಆರಂಭಗೊಳ್ಳದ ರಕ್ಷಣಾ ಕಾರ್ಯಾಚರಣೆ !

ಕಾಪು ಬಳಿ ಅಪಘಾತಕ್ಕೀಡಾದ ವೆಸೆಲ್ ಟಗ್ :ಇನ್ನೂ ಆರಂಭಗೊಳ್ಳದ ರಕ್ಷಣಾ ಕಾರ್ಯಾಚರಣೆ !

Prioritize the necessary facilities

ಅಗತ್ಯ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಿ

Is infection spreading from primary contact?

ಪ್ರಾಥಮಿಕ ಸಂಪರ್ಕದಿಂದ ಹರಡುತ್ತಿದೆಯೇ ಸೋಂಕು?

covid effect at chikkamagalore

ಚಿಕ್ಕಮಗಳೂರು : ನಿಯಮ ಉಲ್ಲಂಘಿಸಿ ಅಂತ್ಯಸಂಸ್ಕಾರಕ್ಕೆ ಹೋದವರಿಗೆ ಕೋವಿಡ್ ದೃಢ

MUST WATCH

udayavani youtube

ಪುತ್ತೂರು ಮಹಾಲಿಂಗೇಶ್ವರ ದೇಗುಲದ ಸಭಾಂಗಣ ಸದ್ಯಕ್ಕೆ COVID CARE CENTRE

udayavani youtube

ಕನ್ನಡ ಶಾಲೆಯ ವಿಭಿನ್ನ ಇಂಗ್ಲೀಷ್ ಕ್ಲಾಸ್

udayavani youtube

ದೆಹಲಿಯಲ್ಲಿ ಕೋವಿಡ್ 19 ಲಾಕ್ ಡೌನ್ ಮತ್ತೆ ವಿಸ್ತರಿಸಬೇಡಿ

udayavani youtube

ರಾಯಚೂರು ; ಫುಲ್ ಲಾಕ್ ಡೌನ್ ಹಿನ್ನೆಲೆ ಎಣ್ಣೆ ಖರೀದಿಗೆ ಮುಗಿಬಿದ್ದ ಮದ್ಯಪ್ರಿಯರು

udayavani youtube

Oxygen ನಮಗೆ ಬೇಕಿರುವುದಕ್ಕಿಂತ ಜಾಸ್ತಿನೇ ಇದೆ

ಹೊಸ ಸೇರ್ಪಡೆ

Reliance jio offers discounts to retain users during corona pandemic

ಕೋವಿಡ್ 19 : ಗ್ರಾಹಕ ಸ್ನೇಹಿ ಯೋಜನೆಯೊಂದನ್ನು ಘೋಷಿಸಿದ ಜಿಯೋ

10 Cryogenic Oxygen Tanker

10 ಕ್ರಯೋಜನಿಕ್‌ ಆಮ್ಲಜನಕ ಟ್ಯಾಂಕರ್‌

ಕಾಪು ಬಳಿ ಅಪಘಾತಕ್ಕೀಡಾದ ವೆಸೆಲ್ ಟಗ್ :ಇನ್ನೂ ಆರಂಭಗೊಳ್ಳದ ರಕ್ಷಣಾ ಕಾರ್ಯಾಚರಣೆ !

ಕಾಪು ಬಳಿ ಅಪಘಾತಕ್ಕೀಡಾದ ವೆಸೆಲ್ ಟಗ್ :ಇನ್ನೂ ಆರಂಭಗೊಳ್ಳದ ರಕ್ಷಣಾ ಕಾರ್ಯಾಚರಣೆ !

Prioritize the necessary facilities

ಅಗತ್ಯ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಿ

Is infection spreading from primary contact?

ಪ್ರಾಥಮಿಕ ಸಂಪರ್ಕದಿಂದ ಹರಡುತ್ತಿದೆಯೇ ಸೋಂಕು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.